ಫೆಬ್ರವರಿ 03, ಬುಧವಾರ: 2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 20 ಸಲುವ ಪೌಷ ಬಹುಳದಿನ ವಿಶೇಷ :ಪಣಂಬೂರು ರಥನಿತ್ಯ ನಕ್ಷತ್ರ :ಚಿತ್ರಾ 35|| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.31 ಗಂಟೆಸೂರ್ಯೋದಯ :6.59 ಗಂಟೆ

ಮೇಷ

ಪದೋನ್ನತಿಯ ಸಲುವಾಗಿ ಪ್ರಯಾಣದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವ್ಯವಹಾರಗಳಲ್ಲಿ ಶ್ರೇಯಸ್ಸು. ಸಂಗ್ರಹಿಸಿಟ್ಟ ವಸ್ತುಗಳಿಂದ ಧನಲಾಭವಾಗುವ ಸಾಧ್ಯತೆ. ನೌಕರಿಯಲ್ಲಿನ ತೀವ್ರ ಒತ್ತಡದಿಂದಾಗಿ ಬೇಸರ ಉಂಟಾದೀತು.

ವೃಷಭ

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಗೃಹ ನವೀಕರಣ ವಾ ಹೊಸ ಗೃಹ ನಿರ್ಮಾಣ ಯೋಜನೆಯನ್ನು ಕೈಗಿತ್ತಿಕೊಳ್ಳಲಿದ್ದೀರಿ. ನೀರಾವರಿ ಭೂಮಿಯನ್ನು ಖರೀದಿ ಮಾಡುವ ಸಾಧ್ಯತೆ. ಆರೋಗ್ಯದಲ್ಲಿ ಸುಧಾರಣೆ.

ಮಿಥುನ

ಸುವಾರ್ತೆಯನ್ನು ಕೇಳಲಿದ್ದೀರಿ. ಅತಿಯಾದ ಕಾರ್ಯ ಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಉಂಟಾದೀತು. ಮಕ್ಕಳು ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುವುದು.

ಕಟಕ

ಉದ್ಯೋಗ ವ್ಯವಹಾರಗಳ ಪ್ರತಿ ಹೆಜ್ಜೆಯಲ್ಲೂ ಪ್ರಗತಿಯನ್ನು ಕಾಣುವಿರಿ. ರಿಯಲ್ ಎಸ್ಟೇಟ್ ವ್ಯಹಾರದಲ್ಲಿ ಅಧಿಕ ಧನ ಲಾಭ. ಸ್ನೇಹ ಸಂವರ್ತನೆ. ಶತೃಗಳ ಪರಾಜಯ ಸಾಧ್ಯತೆ. ಹೈನುಗಾರಿಕೆಯವರಿಗೆ ವಿಶೇಷ ಶುಭ ಹಾಗೂ ಲಾಭದಲ್ಲಿ ಹೆಚ್ಚಳ.

ಸಿಂಹ

ಸ್ಥಿರಾಸ್ತಿಯನ್ನು ಖರೀದಿಸುವ ಸಾಧ್ಯತೆ ಕಂಡುಬರುವುದು. ನೆರೆಯವರ ವಿರೋಧವನ್ನು ಎದುರಿಸಬೇಕಾದೀತು. ತಂಟೆ ತಕರಾರುಗಳ ತಲೆದೋರುವ ಸಾಧ್ಯತೆ ಇದೆ. ಹಳೆಯ ಸಾಲಗಳು ತೀರುವಳಿಯಿಂದಾಗಿ ನೆಮ್ಮದಿ ಮೂಡಲಿದೆ.

ಕನ್ಯಾ

ಉದ್ಯೋಗ ವ್ಯವಹಾರಗಳು ಸುಗಮವಾಗಿ ಸಾಗಲಿವೆ. ಶುಭವಾರ್ತೆಯೊಂದನ್ನು ಕೇಳಲಿದ್ದೀರಿ. ವಿರೋಧಿಗಳು ದೂರ ಸರಿಯಲಿದ್ದಾರೆ. ಸ್ತಿöçÃಯರಿಗೆ ಉದ್ಯೋಗ ಭಾಗ್ಯ ಕಂಡುಬರುವುದು. ಅಧಿಕಾರ್ಯಗಳ ಔದಾರ್ಯ ಮತ್ತು ಗೌರವ ಲಾಭವಾಗಲಿದೆ.

ತುಲಾ

ಆರ್ಥಿಕ ಬಲವರ್ಧನೆಯಾಗಲಿದೆ. ತಾಂತ್ರಿಕ ಯಂತ್ರೋಪ ಕರಣಗಳನ್ನು ಖರೀದಿಸುವ ಸಾಧ್ಯತೆ. ಅಧಿಕಾರ ವೃದ್ಧಿಯಾಗಲಿದೆ. ವ್ಯವಸಾಯಿಕ ಹಾಗೂ ಗೃಹ ನಿರ್ಮಾಣ ಚ ಟುವಟಿಕೆಗಳು ಚುರುಕುಗೊಳ್ಳಲಿವೆ.

ವೃಶ್ಚಿಕ

ತಾಳ್ಮೆಯಿಂದ ಕಾರ್ಯಾನುಕೂಲ ಒದಗಿಬರಲಿದೆ. ವಿದ್ಯಾರ್ಥಿಗಳಿಗೆ ಉಚ್ಛಶಿಕ್ಷಣ ದಲ್ಲಿ ಅಧ್ಯಯನ ನಿಮಿತ್ತ ಸಂಚಾರ ಮಾಡಬೇಕಾದೀತು. ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ವಸ್ತಾöçಭರಣ ಹಾಗೂ ಆಸ್ತಿ ಖರೀದಿ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಧನು

ಬೌದ್ಧಿಕ ಮಟ್ಟ ಹೆಚ್ಚಲಿದೆ. ಉಚ್ಛ ಶಿಕ್ಷಣದ ಯೋಜನೆ ಕೈಗೂಡಲಿದೆ. ಹುದ್ದೆಯಲ್ಲಿನ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ. ಸಾಹಿತ್ಯ, ಕಲೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶದಿಂದಾಗಿ ಕೀರ್ತಿ ಲಾಭ.

ಮಕರ

ಲೋಹದ ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರಕಲಿದೆ. ಆಯವ್ಯಯಗಳನ್ನು ಮರು ಪರಿಶೀಲನೆ ಮಾಡಬೇಕಾದೀತು. ಬ್ಯಾಂಕ್ ಅಧಿಕಾರಿಗಳಿಂದ ವಂಚನೆಗೊಳಗಾಗುವ ಸಾಧ್ಯತೆ ಕಂಡುಬರುತ್ತಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ವಿರಸ ಸಾಧ್ಯತೆ.

ಕುಂಭ

ಭವ್ಯ ಜೀವನಕ್ಕೆ ನಾಂದಿಯಾಗುವ ಆರ್ಥಿಕ ಸಂಪನ್ಮೂಲವೊAದು ಗೋಚರವಾಗುವ ಸಾಧ್ಯತೆ ಕಂಡುಬರುತ್ತಿದೆ. ನಗರ ಸಭೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಪದೋನ್ನತಿ ವಾ ಅಧಿಕಾರದಲ್ಲಿ ಬದಲಾವಣೆ ಸಾಧ್ಯತೆ.

ಮೀನ

ಸಂಗಾತಿಯ ವಿರೋಧ ಹಾಗೂ ವಿರಸ ಮೂಡುವ ಸಾಧ್ಯತೆ. ಹೊಸ ಹೊಸ ವ್ಯವಹಾರಕ್ಕಾಗಿ ಹಣ ವಿನಿಯೋಗಿಸಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನ ವಿನಿಯೋಗ ಮಾಡುವ ಸಾಧ್ಯತೆ ಕಂಡುಬರುವುದು.

ಜನವರಿ 31,ಭಾನುವಾರ ,2021: ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 17 ಸಲುವ ಪೌಷ ಬಹುಳದಿನ ವಿಶೇಷ :ಸಂಕಷ್ಟಹರ ಚತುರ್ಥಿ (ಚ.ಉ.ಗಂ. 9.03) ತದಿಗೆ 33|| ಗಳಿಗೆನಿತ್ಯ ನಕ್ಷತ್ರ :ಮಖಾ 45||| ಗಳಿಗೆಮಹಾ ನಕ್ಷತ್ರ :ಶ್ರವಣಋತು :ಹೇಮಂತರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.29 ಗಂಟೆಸೂರ್ಯೋದಯ :7.00 ಗಂಟೆ

ಮೇಷ

ಅಧ್ಯಯನ ಹೆಚ್ಚಿನ ಆಸಕ್ತಿ ವಹಿಸುವಿರಿ. ವೃತ್ತಿಯಲ್ಲಿ ಕಿರಿಕರಿಯನ್ನು ಅನುಭವಿಸಬೇಕಾದ ಅನಿವಾರ್ಯತೆ ತಲೆದೋರಲಿದೆ. ಅತಿಯಾದ ಕಾರ್ಯಬಾಹಳ್ಯ ಉಂಟಾಗುವ ಸಾಧ್ಯತೆ. ಕೆಲಸದ ಒತ್ತಡದಿಂದಾಗಿ ದುಗುಡ ಉಂಟಾದೀತು. ಹಿರಿಯರ ಮಾತನ್ನು ಕಡೆಗಣಿಸದಿರುವುದು ಒಳಿತು.

ವೃಷಭ

ಬಹುದಿನಗಳಿಂದ ನೆನೆಗುದಿಗೆ ಬಿದ್ದ ವಿವಾದವೊಂದು ನಿರ್ಣಯ ಕಾಣಲಿದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಉಪಾಧ್ಯಾಯ ವೃತ್ತಿಯಲ್ಲಿರುವವರಿಗೆ ಗೌರವಾದರಗಳು ದೊರೆಯಲಿವೆ. ಕಬ್ಬಿಣ ವಾ ಲೋಹ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ.

ಮಿಥುನ

ವೃತ್ತಿಯಲ್ಲಿ ಯಶಸ್ಸು ಕಾಣಲಿದ್ದೀರಿ. ಆರೋಗ್ಯದ ಬಗ್ಗೆ ಗಮನವಿರಲಿ. ಬಡವರಿಗೆ ಧಾನ್ಯಗಳನ್ನು ದಾನ ಮಾಡುವುದರಿಂದ ಸಂತೃಪ್ತಿಯ ದಿನವಾಗಲಿದೆ. ಪ್ರೇಮ ವಿವಾಹಗಳು ಯಶವನ್ನು ಕಾಣುವವು. ಮಕ್ಕಳಿಂದ ನೆಮ್ಮದಿ. ದೇವತಾರಾಧನೆಯಿಂದ ಯಶಸ್ಸು.

ಕಟಕ

ಕಛೇರಿ ಕೆಲಸಗಳ ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಉದ್ಯೋಗಸ್ಥರಿಗೆ ಹೆಚ್ಚಿನ ಬಿಡುವು ದೊರೆತು ಮಾನಸಿಕ ನೆಮ್ಮದಿ ದೊರಕುವುದು. ದಿನದ ಮಟ್ಟಿಗೆ ಸ್ಪೋಟಕ ವಸ್ತುಗಳಿಂದ ದೂರವಿರುವುದು ಒಳಿತು. ಮಹಿಳೆಯರಿಗೆ ಜವಾಬ್ದಾರಿಯಲ್ಲಿ ಹೆಚ್ಚಳವಾಗಲಿದೆ.

ಸಿಂಹ

ಗೃಹ ನಿರ್ಮಾಣ ವಾ ದುರಸ್ತಿ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಕಾರ್ಯ ನಡೆಸಲಿದ್ದೀರಿ. ದಾಂಪತ್ಯ ಸಮಸ್ಯೆಗಳಿಗೆ ಹಿರಿಯರ ಸಲಹೆಯ ಮೇರೆಗೆ ಉತ್ತಮ ರೀತಿಯ ಪರಿಹಾರ ಕಂಡುಬರಲಿದೆ. ಆಯುಧಗಳನ್ನು ಬಳಸುವಾಗಿ ಎಚ್ಚರಿಕೆ ವಹಿಸುವುದು ಒಳಿತು.

ಕನ್ಯಾ

ಬಡಗಿ ಕೆಲಸ, ಕಬ್ಬಿಣ ಕೆಲಸ ಮುಂತಾದ ಕುಶಲ ಕರ್ಮಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿದೆ. ಸಂಶೋಧನೆಯಲ್ಲಿ ತೊಡಗಿದವರಿಗೆ ಉತ್ತಮ ಮಾರ್ಗದರ್ಶನ ದೊರೆಯುವುದು. ಹೊಸ ಹೊಸ ವಿಷಯಗಳನ್ನು ಕಲೆಹಾಕುವಲ್ಲಿ ನಿರತರಾಗುವುದರಿಂದ ಬರವಣಿಗೆಯಲ್ಲಿ ವಿಳಂಬದ ಸಾಧ್ಯತೆ.

ತುಲಾ

ವ್ಯವಹಾರದಲ್ಲಿ ಉನ್ನತಿಯನ್ನು ಸಾಧಿಸುವಿರಿ. ಹಿತ ಶತ್ರುಗಳಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದ್ದು ಜಾಗರೂಕರಾಗಿರುವುದು ಉತ್ತಮ. ವೈದ್ಯಕೀಯ ಚಿಕಿತ್ಸೆಗಾಗಿ ಅಧಿಕ ಖರ್ಚನ್ನು ಭರಿಸಬೇಕಾದೀತು. ಬಂಧುಗಳ ಆಗಮನ ಸಾಧ್ಯತೆ.

ವೃಶ್ಚಿಕ

ವಿದ್ಯುದುಪಕರಣಗಳ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಏರಿಳಿತ ಸಾಧ್ಯತೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವ ಸಾಧ್ಯತೆ ಇದೆ. ಸ್ವತಂತ್ರ ಉದ್ಯಮದಲ್ಲಿ ಯಶಸ್ಸನ್ನು ಕಾಣುವಿರಿ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರಗಳಿಂದ ಉತ್ತಮ ಆದಾಯ ನಿರೀಕ್ಷಿಸಬಹುದು.

ಧನು

ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿಯಾಗುವ ಸಾಧ್ಯತೆ ಕಂಡುಬರುವುದು. ವಯಕ್ತಿಕ ವಿಷಯಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಸೂಕ್ತ. ಆರೋಗ್ಯದಲ್ಲಿ ವೃದ್ಧಿಯನ್ನು ಕಾಣುವಿರಿ. ಪ್ರಾಪ್ತ ವಯಸ್ಕರಿಗೆ ಸಂತಾನ ಭಾಗ್ಯದ ಯೋಗ ಕಂಡುಬರುತ್ತಿದೆ.

ಮಕರ

ದಿನನಿತ್ಯದ ಕಾರ್ಯ ಚಟುವಟಿಕೆಗಳು ಉತ್ಸಾಹದಿಂದ ಕೂಡಿರುವವು. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸರ್ಕಾರಿ ನೌಕರರಿಗೆ ಕಿರುಕುಳ ಉಂಟಾದೀತು. ಕುಟುಂಬ ಸಮೇತರಾಗಿ ದೂರದೂರಿನಲ್ಲಿರುವ ಕುಲದೇವತಾ ದರ್ಶನದ ಭಾಗ್ಯ ಕಂಡುಬರುವುದು.

ಕುಂಭ

ಹೊಸ ಗೃಹ ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಬಂಧುಗಳೊಂದಿಗಿನ ಬಾಂಧವ್ಯ ಗಟ್ಟಿಗೊಳ್ಳುವುದು. ಆರ್ಥಿಕ ಸಂಪನ್ಮೂಲಗಳು ಕೂಡಿಬರಲಿವೆ. ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಸಾಧ್ಯತೆ ಕಂಡುಬರುವುದು. ಸಹೋದರರ ಸಹಕಾರದಿಂದಾಗಿ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು.

ಮೀನ

ವ್ಯವಹಾರದ ಅಭಿವೃದ್ಧಿಗಾಗಿ ಹಣ ವಿನಿಯೋಗ ಮಾಡಲು ಸೂಕ್ತ ದಿನವಾಗಿದೆ. ಸ್ವಂತ ಉದ್ಯಮಿಗಳಿಗೆ ಉತ್ತಮ ಲಾಭದ ನಿರೀಕ್ಷೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ಪ್ರಗತಿಯ ದಿನವಾಗಲಿದೆ. ಬೆಂಕಿಯ ಜೊತೆ ಕೆಲಸ ಮಾಡುವವರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ.

ಜನವರಿ 30, ಶನಿವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ದ್ವಿತೀಯ,
ಶನಿವಾರ, ಮಖ ನಕ್ಷತ್ರ.
ರಾಹುಕಾಲ: 9.42 ರಿಂದ 11:09
ಗುಳಿಕಕಾಲ: 06:49 ರಿಂದ 8:15
ಯಮಗಂಡಕಾಲ: 02:03 ರಿಂದ03:30

ಮೇಷ

ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದೂರಾಲೋಚನೆಯಿಂದ ಕೈಗೊಂಡ ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೇಮವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ.

ವೃಷಭ

ಮಿತ್ರರ ಸಹಾಯದಿಂದಾಗಿ ಧನಾಗಮನ. ಯಾಂತ್ರಿಕ ವಿಷಯ ಪರಿಣತರಿಗೆ ಉತ್ತಮ ಅವಕಾಶ. ಕೌಟುಂಬಿಕ ವಾತಾವರಣ ಸಂತೋಷಕರವಾಗಿ ಮೂಡಿಬರಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ದಂತ ಸಮಸ್ಯೆ ಕಾಣಿಸಿಕೊಂಡೀತು.

ಮಿಥುನ

ದ್ರವ ಪದಾರ್ಥಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಕ್ರೀಡಾಪಟುಗಳಿಗೆ ಆಸಕ್ತರಿಗೆ ಉತ್ಸುಕತೆಯನ್ನೂ ಪ್ರೋತ್ಸಾಹವನ್ನೂ ತಂದುಕೊಡುವ ದಿನವಾಗಿದೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಗುರುದೇವತಾರಾಧನೆ ಸೂಕ್ತ.

ಕಟಕ

ವೃತ್ತಿನಿರತ ಮಹಿಳೆಯರಿಗೆ ಬದಲಾವಣೆಗಳು ಸಂಭವಿಸುವ ಸಾಧ್ಯತೆ. ಆಧ್ಯಾತ್ಮಿಕ ಜೀವನದಲ್ಲಿ ನೆಮ್ಮದಿ. ಪತ್ರಿಕಾರಂಗದಲ್ಲಿರುವವರಿಗೆ ಹೆಚ್ಚಿನ ಕೀರ್ತಿ ತಂದುಕೊಡಲಿದೆ. ಅನಾವಶ್ಯಕ ವ್ಯವಹಾರಗಳಿಗೆ ಕೈ ಹಾಕದಿರಿ.

ಸಿಂಹ

ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹ. ಬಿಡುವಿಲ್ಲದ ಕೆಲಸದಿಂದಾಗಿ ದೇಹಾಯಾಸ. ಕರ್ತವ್ಯ ನಿರ್ವಹಣೆ ನಿಮಿತ್ತ ಸ್ಥಳ ಬದಲಾವಣೆ ಸಾಧ್ಯತೆ. ರಾಜಕೀಯ ರಂಗದವರಿಗೆ ತುರುಸಿನ ಓಡಾಟ ಯಶಸ್ಸು.

ಕನ್ಯಾ

ಮಹಿಳೆಯರ ಮಾನಸಿಕ ಒತ್ತಡಗಳು ಕಡಿಮೆಯಾಗಿ ನಿರಾಳತೆ. ಸಹೋದರರ ಸಹಕಾರದಿಂದಾಗಿ ವೃತ್ತಿಯಲ್ಲಿನ ಸಮಸ್ಯೆಗಳು ಪರಿಹಾರ. ಸೂಕ್ತ ನಿರ್ಣಯದಿಂದಾಗಿ ಗೌರವ ಪ್ರಾಪ್ತಿ. ರಾಜಕೀಯ ಬಿಡುವಿನ ದಿನವಾಗಲಿದೆ.

ತುಲಾ

ವ್ಯವಹಾರಗಳಲ್ಲಿ ಜಾಗೃತೆ ವಹಿಸುವುದು ಉತ್ತಮ. ವಿಶೇಷ ಏರಿಳಿತಗಳು ಕಂಡುಬರಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಗಣ್ಯ ವ್ಯಕ್ತಿಗೊಳೊಬ್ಬರ ಸಂದರ್ಶನ ಸಾಧ್ಯತೆ ಇದೆ.

ವೃಶ್ಚಿಕ

ದಾಯಾದಿಗಳೊಂದಿಗಿನ ಆಸ್ತಿ ವ್ಯವಹಾರಗಳು ಇತ್ಯರ್ಥವಾಗುವ ಸಾಧ್ಯತೆ. ಮಿತ್ರರಿಗಾಗಿ ಮಾಡುವ ಕೆಲಸಗಳಲ್ಲಿ ಯಶಸ್ಸು. ಗೃಹನಿರ್ಮಾಣ ಕಾರ್ಯಗಳು ಯಶಸ್ವಿಯಾಗುವುದು. ವೃತ್ತಿ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿ.

ಧನು

ಋಣ ಪರಿಹಾರದಿಂದಾಗಿ ನಿರಾಳತೆ. ಮಕ್ಕಳಿಂದ ನೆಮ್ಮದಿ. ಆರೋಗ್ಯದಲ್ಲಿ ತೊಂದರೆ. ಆಸ್ತಿ ಖರೀದಿ ಅಥವಾ ಅಭಿವೃದ್ಧಿಯಾಗುವುದು. ಯಾವುದೇ ಕೆಲಸ ಕೈಗೊಳ್ಳುವಾಗ ದುಡುಕು ಸಲ್ಲದು. ಕೌಟುಂಬಿಕ ನೆಮ್ಮದಿ.

ಮಕರ

ದಿನದ ಮಟ್ಟಿಗೆ ಗೆಳೆಯರ ಮಾತನ್ನು ತೂಗಿ ನೋಡುವುದು ಉತ್ತಮ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ. ವಸ್ತ್ರಾಭರಣ ಖರೀದಿಯ ಸಾಧ್ಯತೆ. ದೈನಂದಿನ ಕಾರ್ಯದಲ್ಲಿ ಉತ್ಸುಕತೆ ತುಂಬಿಬರಲಿದೆ.

ಕುಂಭ

ಮಹಿಳೆಯರು ದಿನದ ಮಟ್ಟಿಗೆ ರಾಜಕೀಯ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಬೇಡ. ಜಾಮೀನು ನೀಡದೇ ಇರುವುದು ಉತ್ತಮ. ಹಿರಿಯರ ಸಲಹೆಯಿಂದಾಗಿ ಕೆಲಸ–ಕಾರ್ಯಗಳಲ್ಲಿ ಯಶಸ್ಸು.

ಮೀನ

ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ. ವ್ಯವಹಾರ ಕುಶಲತೆಯಿಂದಾಗಿ ಧನಲಾಭ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಸ್ವಯಂ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ.

ಜನವರಿ 29, ಶುಕ್ರವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹಿಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ ,ಪ್ರಥಮ,
ಶುಕ್ರವಾರ,ಆಶ್ಲೇಷ ನಕ್ಷತ್ರ,
ರಾಹುಕಾಲ 11:09ರಿಂದ 12:36
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 3.30 ರಿಂದ 04:57

ಮೇಷ

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡುವ ಸಾಧ್ಯತೆ. ಸಮಸ್ಯೆಗಳು ಪರಿಹಾರಗೊಳ್ಳುವುದರ ಜೊತೆಗೆ ಸಂತೃಪ್ತಿದಾಯಕ ದಾಂಪತ್ಯ ಜೀವನ ಅನುಭವಿಸಲಿದ್ದೀರಿ.

ವೃಷಭ

ಕಳೆದುಹೋದ ವಸ್ತುಗಳು ಪುನಃ ದೊರಕುವ ಸಾಧ್ಯತೆ. ಉದ್ಯೋಗದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಕುಟುಂಬ ಸದಸ್ಯರೊಂದಿಗೆ ದೂರದ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಕೀರ್ತಿ ಸಂಪಾದನೆಯಾಗಲಿದೆ.

ಮಿಥುನ

ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕಾದೀತು. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಅಗತ್ಯ.

ಕಟಕ

ಉದ್ಯೋಗಸ್ಥ ಮಹಿಳೆಯರಿಗೆ ಪ್ರಶಂಸೆ. ಗೃಹ ಸಮಸ್ಯೆಗಳಿಗೆ ಪರಿಹಾರ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಗಾತಿ ಲಭ್ಯವಾಗುವ ಸಾಧ್ಯತೆ.

ಸಿಂಹ

ಉದ್ಯೋಗರಂಗದಲ್ಲಿ ಮೇಲಧಿಕಾರಿಗಳಿಂದ ಹೆಚ್ಚಿನ ಪ್ರೋತ್ಸಾಹ-ಸಹಕಾರ ದೊರಕಲಿದೆ. ವೃತ್ತಿಯಲ್ಲಿನ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.

ಕನ್ಯಾ

ಸರ್ಕಾರದಿಂದ ಸಹಾಯಧನ ದೊರಕುವ ಸಾಧ್ಯತೆ. ಹಿರಿಯರ ಸಲಹೆಯಿಂದಾಗಿ ವ್ಯವಹಾರದಲ್ಲಿ ಉತ್ತಮ ಫಲಿತಾಂಶ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಮಹಿಳಾ ರಾಜಕಾರಣಿಗಳಿಗೆ ಯಶಸ್ಸು.

ತುಲಾ

ಗೃಹನಿರ್ಮಾಣ ಕಾರ್ಯಗಳನ್ನು ಮುಂದೂಡಬೇಕಾದ ಪರಿಸ್ಥಿತಿ. ವಿದೇಶ ಪ್ರಯಾಣದ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ದೊರಕಲಿದೆ. ಉನ್ನತ ಅಧ್ಯಯನದಲ್ಲಿ ಆಸಕ್ತಿ ಮೂಡಿ ಪ್ರಗತಿ ಹೊಂದುವಿರಿ. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ

ಸಾಮಾಜಿಕ ಗೌರವ ಪ್ರಾಪ್ತಿ. ಕೃಷಿಯಿಂದ ಧನಲಾಭ. ಆರೋಗ್ಯದ ವಿಚಾರದಲ್ಲಿ ಏರುಪೇರು. ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು. ಮಿತ್ರರ ಸಹಕಾರದಿಂದ ಕೆಲಸ–ಕಾರ್ಯಗಳು ಸರಾಗವಾಗಲಿವೆ.

ಧನು

ಸ್ವಂತ ಉದ್ಯಮದಲ್ಲಿರುವವರಿಗೆ ಹೆಚ್ಚಿನ ಯಶಸ್ಸು. ಕೃಷಿಯಲ್ಲಿ ಬಿಡುವಿಲ್ಲದ ಕೆಲಸವಾದರೂ ಧನಧಾನ್ಯಭಿವೃದ್ಧಿಯಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಯಾಗಲಿದೆ. ಪ್ರಯಾಣದಿಂದ ಅಧಿಕ ಖರ್ಚು.

ಮಕರ

ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು. ಗೃಹಿಣಿಯರ ಅತ್ಯುತ್ಸಾಹ ಅವಘಡಕ್ಕೆ ಕಾರಣವಾದೀತು. ಆರ್ಥಿಕ ಸಮಸ್ಯೆ ಪರಿಹಾರವಾಗಿ ಋಣುಬಾಧೆಯಿಂದ ಮುಕ್ತರಾಗುವ ಸಾಧ್ಯತೆ ಕಂಡುಬರುತ್ತಿದೆ

ಕುಂಭ

ಹೊಸ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ನ್ಯಾಯಾಲಯದ ಕಟ್ಟಳೆಗಳಲ್ಲಿ ಜಯ. ದೇವತಾ ದರ್ಶನದಿಂದ ನೆಮ್ಮದಿ.

ಮೀನ

ನೂತನ ಗೃಹನಿರ್ಮಾಣದ ಚಿಂತನೆ ನಡೆಸಲಿದ್ದೀರಿ. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪದೋನ್ನತಿ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ದೊರಕಲಿದೆ. ರಹಸ್ಯ ವಿಚಾರವನ್ನು ಕಾಪಾಡಿಕೊಳ್ಳುವುದು ಉತ್ತಮ.

ಜನವರಿ 28, ಗುರುವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ವಾರ: ಗುರುವಾರ, ಪುಷ್ಯ ನಕ್ಷತ್ರ

ರಾಹುಕಾಲ: 02:03 ರಿಂದ 3:30
ಗುಳಿಕಕಾಲ: 9:42 ರಿಂದ 11: 09
ಯಮಗಂಡಕಾಲ: 06:49 8:15

ಮೇಷ

ವೈಯಕ್ತಿಕ ವ್ಯವಹಾರಗಳಲ್ಲಿ ಪ್ರಗತಿ. ಆದಾಯದಲ್ಲಿ ನಿಶ್ಚಿತತೆ. ಕ್ರೀಡಾಪಟುಗಳಿಗೆ ಸಾಧನೆಗೈಯುವ ದಿನವಾಗಲಿದೆ. ಕುಲದೇವತಾ ದರ್ಶನ ಭಾಗ್ಯ. ಮನೆಯಲ್ಲಿ ಅತಿಥಿ ಸತ್ಕಾರದಂತಹ ಸಂಭ್ರಮ ನಡೆಯಲಿದೆ.

ವೃಷಭ

ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ ಸಾಧ್ಯತೆ. ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. ಮಕ್ಕಳಿಗೆ ಅನಿರೀಕ್ಷಿತವಾಗಿ ಹೊಸ ಉದ್ಯೋಗ ದೊರಕುವುದು ಅಥವಾ ಉದ್ಯೋಗದಲ್ಲಿ ಪಲ್ಲಟವಾಗುವ ಸಾಧ್ಯತೆ.

ಮಿಥುನ

ಉದ್ದು, ರಾಗಿ ಮುಂತಾದ ಬೆಳೆಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಕಬ್ಬಿಣ ಮುಂತಾದ ಕಪ್ಪುಲೋಹಗಳ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ಕುದುರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸಿನ ದಿನವಾಗಿದೆ.

ಕಟಕ

ಶುಭಕಾರ್ಯಗಳ ಬಗ್ಗೆ ಎಲ್ಲರೊಡನೆ ಸುದೀರ್ಘ ಚರ್ಚೆ ಮಾಡುವ ಸಾಧ್ಯತೆ. ಕಲಾಕೃತಿಗಳ ಮಾರಾಟಗಾರರಿಗೆ ವ್ಯವಹಾರದಲ್ಲಿ ಲಾಭ. ಸಂಗಾತಿಯೊಂದಿಗೆ ವಿನಾಕಾರಣ ವಾದ, ವಿವಾದಗಳು ಎದುರಾಗುವ ಸಾಧ್ಯತೆ.

ಸಿಂಹ

ಹಣಕಾಸಿನ ವಿಷಯದಲ್ಲಿ ಜಿಗುಟುತನ ತೋರುವುದು ಉತ್ತಮ. ಆತ್ಮೀಯ ಬಂಧುಗಳ ಆಗಮನ ಸಾಧ್ಯತೆ. ದೇಹಾರೋಗ್ಯದಲ್ಲಿ ಉತ್ತಮ ಸುಧಾರಣೆ. ಗೃಹನಿರ್ಮಾಣ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ.

ಕನ್ಯಾ

ಲೇವಾದೇವಿ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಸಾಧಾರಣ ಲಾಭ. ಭೂ ಸಂಬಂಧಿ ವ್ಯವಹಾರಗಳಿಗೆ ಸರ್ಕಾರಿ ವಲಯದಿಂದ ಉತ್ತಮ ಸಹಕಾರ ದೊರಕಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ.

ತುಲಾ

ಅತಿಯಾದ ಆಯಾಸ ಹಾಗೂ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಯ. ಮಕ್ಕಳೊಂದಿಗೆ ವಿನಾಕಾರಣ ಬಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ. ಸಂಗಾತಿಯ ಸಹಕಾರದಿಂದಾಗಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ.

ವೃಶ್ಚಿಕ

ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ, ಗೌರವಗಳು ದೊರಕುವ ಸಾಧ್ಯತೆ. ಗೃಹಾಲಂಕಾರ ವಸ್ತುಗಳನ್ನು ಖರೀದಿಸಲಿದ್ದೀರಿ. ಬಂಧುಗಳ ಸಂಭ್ರಮದಲ್ಲಿ ಭಾಗವಹಿಸಿ ಸಂತಸ.

ಧನು

ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಗೌರವ ಆದರಗಳು ಹೆಚ್ಚಲಿವೆ. ಪ್ರಶಸ್ತಿ, ಪುರಸ್ಕಾರಗಳ ಯೋಗ. ಉದ್ಯೋಗಸ್ಥರಿಗೆ ವರ್ಗಾವಣೆ ಬಗ್ಗೆ ಪ್ರಯತ್ನಿಸಲು ಉತ್ತಮ ದಿನವಾಗಿ ಪರಿಣಮಿಸಲಿದೆ.

ಮಕರ

ಗೃಹನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ಹೊಂದಾಣಿಕೆಯಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದವರಿಗೆ ಗೌರವ ಪ್ರಾಪ್ತಿ. ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗಲಿವೆ.

ಕುಂಭ

ನ್ಯಾಯಾಲಯಗಳಲ್ಲಿನ ಮೊಕದ್ದಮೆಗಳು ನಿಮ್ಮ ಪರವಾಗಿ ತಿರುಗುವ ಸಾಧ್ಯತೆ ಎದ್ದು ಕಾಣುತ್ತಿದೆ. ವೈದ್ಯಕೀಯ ನೆರವಿಗಾಗಿ ಖರ್ಚು ಮಾಡಬೇಕಾದೀತು. ದೂರದ ಪ್ರಯಾಣದಿಂದ ಸಂಕಷ್ಟ.

ಮೀನ

ರಾಜಕೀಯದಲ್ಲಿರುವವರಿಗೆ ದುಗುಡ ದುಮ್ಮಾನಗಳು ಎದುರಾಗುವ ಸಾಧ್ಯತೆ. ಹಿಂಬಾಲಕರಿಂದಲೇ ಮೋಸ ಹೋಗುವ ಸಾಧ್ಯತೆ. ಆಸ್ತಿ ಸಂಪಾದನೆಯಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯದ ಬಗ್ಗೆ ಗಮನ ಅಗತ್ಯ.

ಜನವರಿ 27, ಬುಧವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಬುಧವಾರ,
ತಿಥಿ: ಚತುರ್ದಶಿ,
ನಕ್ಷತ: ಪುನರ್ವಸು,
ರಾಹುಕಾಲ: 4.48 ರಿಂದ 6.13
ಗುಳಿಕಕಾಲ: 3.22 ರಿಂದ 4.48
ಯಮಗಂಡಕಾಲ: 12.31 ರಿಂದ 1.57

ಮೇಷ

ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ಸಕಾಲಿಕ ನೆರವು ನೀಡುವುದರಿಂದ ಮನ್ನಣೆ, ಗೌರವಗಳನ್ನು ಹೊಂದುವ ಸಾಧ್ಯತೆ ಇದೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು.

ವೃಷಭ

ವಿವಾಹ ನಿಷ್ಕರ್ಷೆಯ ವಿಷಯದಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹನಿರ್ಮಾಣ ವಿಷಯದಲ್ಲಿ ನೆಮ್ಮದಿ.

ಮಿಥುನ

ಒಂದು ಪ್ರಮುಖವಾದ ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ ನಿಮ್ಮದಾಗಲಿದೆ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ.

ಕಟಕ

ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಗೆ ಅಗತ್ಯ. ಪ್ರೀತಿಪಾತ್ರರೊಂದಿಗಿನ ಒಡನಾಟದಿಂದಾಗಿ ಸಂಬಂಧ ಗಟ್ಟಿಯಾಗಲಿದೆ.

ಸಿಂಹ

ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಅಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

ಕನ್ಯಾ

ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ.

ತುಲಾ

ನೌಕರಸ್ಥರಿಗೆ ಮುಂಬಡ್ತಿ ಅಥವಾ ಉದ್ಯೋಗದಲ್ಲಿಯ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ‌. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ ತಲೆದೋರುವ ಸಾಧ್ಯತೆ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ. ‌

ವೃಶ್ಚಿಕ

ಹೂಡಿಕೆ ಮಾಡುವ ವಿಷಯಗಳಲ್ಲಿ ಬಹಳ ಮಹತ್ವದ್ದಾದುದರಿಂದ ಎಚ್ಚರಿಕೆ ಅಗತ್ಯ. ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ.

ಧನು

ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ–ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು.

ಮಕರ

ಸಹೋದ್ಯೋಗಿಗಳಿಂದ ಅಥವಾ ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸುವುದು ಅವಶ್ಯಕ. ದೇವೀ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳು ಈಡೇರುವ ಸಾಧ್ಯತೆ.

ಕುಂಭ

ವಿವಾಹಾಕಾಂಕ್ಷಿಗಳಿಗೆ ಅನೇಕ ಸಾಧ್ಯತೆಗಳು ತೆರೆದುಕೊಳ್ಳಲಿದ್ದು ಸರಿಯಾದ ಆಯ್ಕೆಯಿಂದಾಗಿ ಉತ್ತಮ ಸಂಗಾತಿಯನ್ನು ದಕ್ಕಿಸಿಕೊಳ್ಳಬಹುದು. ಗೃಹಬಳಕೆ ವಸ್ತುಗಳ ವ್ಯವಹಾರಸ್ಥರಿಗೆ ಅತ್ಯುತ್ತಮ ಲಾಭ ತಂದುಕೊಡುವ ದಿನ.

ಮೀನ

ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಬಹಳ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.

ಕೇಂದ್ರ ಸರ್ಕಾರದಿಂದ ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ : 59 ಆ್ಯಪ್ ಗಳಿಗೆ ಶಾಶ್ವತ ನಿಷೇಧ!

ನವದೆಹಲಿ : ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, 59 ಚೀನೀ ಆಪ್ ಗಳನ್ನು ಸರ್ಕಾರ ಶಾಶ್ವತವಾಗಿ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ.

ಬೈಟ್ ಡ್ಯಾನ್ಸ್ ನ ಟಿಕ್ ಟೋಕ್, ಬೈಡು, ವೀಚಾಟ್, ಅಲಿಬಾಬಾದ ಯುಸಿ ಬ್ರೌಸರ್, ಶಾಪಿಂಗ್ ಆಪ್ ಕ್ಲಬ್ ಫ್ಯಾಕ್ಟರಿ, ಮಿ ವೀಡಿಯೊ ಕಾಲ್ (Xiaomi) ಮತ್ತು BIGO Live ನಂತಹ ಟಾಪ್ ಆಪ್ ಗಳು ಸೇರಿದಂತೆ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್ ಟಾಕ್ ಸೇರಿ 59 ಶಾಶ್ವತ ನಿಷೇಧ ಹೇರಲು ನೋಟಿಸ್ ನೀಡಿದೆ. ವಿಶೇಷವಾಗಿ ಭಾರತೀಯ ನಾಗರಿಕರು ಮತ್ತು ವ್ಯವಹಾರಗಳ ದತ್ತಾಂಶವನ್ನು ಚೀನಾ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಭಾರತ ಕಳೆದ ವರ್ಷ ಜೂನ್ ಅಂತ್ಯದಿಂದ ಇಲ್ಲಿಯವರೆಗೆ ಒಟ್ಟು 267 ಆ್ಯಪ್ ಗಳನ್ನು ನಿಷೇಧಿಸಿತ್ತು.

ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ

ನವದೆಹಲಿ: ಕನ್ನಡಿಗರಾದ ಡಾ. ಬಿ.ಎಂ. ಹೆಗಡೆ, ಚಂದ್ರಶೇಖರ ಕಂಬಾರ, ಮಂಜಮ್ಮ ಜೋಗತಿ, ಆರ್.ಎಲ್. ಕಷ್ಯಪ್, ಕೆ.ವೈ. ವೆಂಕಟೇಶ್ ಸೇರಿದಂತೆ 119 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ.

7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಪದ್ಮವಿಭೂಷಣ ಪ್ರಶಸ್ತಿ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ಬೆಳ್ಳಿ ಮೋನಪ್ಪ ಹೆಗಡೆ, ನರೇಂದ್ರ ಸಿಂಗ್ ಸೇರಿದಂತೆ 7 ಮಂದಿಗೆ ಪದ್ಮವಿಭೂಷಣ ನೀಡಲಾಗಿದೆ.

ಪದ್ಮಭೂಷಣ ಪ್ರಶಸ್ತಿ

ರಾಮ್ ವಿಲಾಸ್ ಪಾಸ್ವಾನ್, ಸುಮಿತ್ರಾ ಮಹಾಜನ್, ಚಂದ್ರಶೇಖರ ಕಂಬಾರ ಸೇರಿದಂತೆ 10 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಶ್ರೀ ಪ್ರಶಸ್ತಿ

ಬಿ. ಮಂಜಮ್ಮ ಜೋಗತಿ, ಆರ್.ಎಲ್. ಕಷ್ಯಪ್ ಸೇರಿದಂತೆ 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

Here’s the full list:
Padma Shri awards list

  1. Shri Gulfam Ahmed
  2. Ms. P. Anitha
  3. Shri Rama Swamy Annavarapu
  4. Shri Subbu Arumugam
  5. Shri Prakasarao Asavadi
  6. Ms. Bhuri Bai
  7. Shri Radhe Shyam Barle
  8. Shri Dharma Narayan Barma
  9. Ms. Lakhimi Baruah
  10. Shri Biren Kumar Basak
  11. Ms. Rajni Bector
  12. Shri Peter Brook
  13. Ms. Sangkhumi Bualchhuak
  14. Shri Gopiram Bargayn Burabhakat
  15. Ms. Bijoya Chakravarty
  16. Shri Sujit Chattopadhyay
  17. Shri Jagdish Chaudhary (Posthumous)
  18. Shri Tsultrim Chonjo
  19. Ms. Mouma Das
  20. Shri Srikant Datar
  21. Shri Narayan Debnath
  22. Ms. Chutni Devi
  23. Ms. Dulari Devi
  24. Ms. Radhe Devi
  25. Ms. Shanti Devi
  26. Shri Wayan Dibia
  27. Shri Dadudan Gadhavi
  28. Shri Parshuram Atmaram Gangavane
  29. Shri Jai Bhagwan Goyal
  30. Shri Jagadish Chandra Halder
  31. Shri Mangal Singh Hazowary
  32. Ms. Anshu Jamsenpa
  33. Ms. Purnamasi Jani
  34. Matha B. Manjamma Jogati
  35. Shri Damodaran Kaithapram
  36. Shri Namdeo C Kamble
  37. Shri Maheshbhai & Shri Nareshbhai Kanodia (Duo) (Posthumous)
  38. Shri Rajat Kumar Kar
  39. Shri Rangasami Lakshminarayana Kashyap
  40. Ms. Prakash Kaur
  41. Shri Nicholas Kazanas
  42. Shri K Kesavasamy Art
  43. Shri Ghulam Rasool Khan
  44. Shri Lakha Khan
  45. Ms. Sanjida Khatun
  46. Shri Vinayak Vishnu
  47. Ms. Niru Kumar
  48. Ms. Lajwanti
  49. Shri Rattan Lal
  50. Shri Ali Manikfan
  51. Shri Ramachandra Manjhi
  52. Shri Dulal Manki
  53. Shri Nanadro B Marak
  54. Shri Rewben Mashangva
  55. Shri Chandrakant Mehta
  56. Dr. Rattan Lal Mittal
  57. Shri Madhavan Nambiar
  58. Shri Shyam Sundar Paliwal
  59. Dr. Chandrakant Sambhaji Pandav
  1. Dr. J N Pande (Posthumous)
  2. Shri Solomon Pappaiah
  3. Ms. Pappammal
  4. Dr. Krishna Mohan Pathi
  5. Ms. Jaswantiben Jamnadas Popat
  6. Shri Girish Prabhune
  7. Shri Nanda Prusty
  8. Shri K K Ramachandra
  9. Shri Balan Putheri
  10. Ms. Birubala Rabha
  11. Shri Kanaka Raju
  12. Ms. Bombay Jayashri
  13. Shri Satyaram Reang Art Tripura
  14. Dr. Dhananjay Diwakar Sagdeo
  15. Shri Ashok Kumar Sahu
  16. Dr. Bhupendra Kumar Singh
  17. Ms. Sindhutai Sapkal
  18. Shri Chaman Lal Sapru (Posthumous)
  19. Shri Roman Sarmah
  20. Shri Imran Shah
  21. Shri Prem Chand Sharma
  22. Shri Arjun Singh Shekhawat
  23. Shri Ram Yatna Shukla
  24. Shri Jitender Singh Shunty
  25. Shri Kartar Paras Ram Singh
  26. Shri Kartar Singh
  27. Dr. Dilip Kumar Singh
  28. Shri Chandra Shekhar Singh
  29. Ms. Sudha Hari Narayan Singh
  30. Shri Virender Singh
  31. Ms. Mridula Sinha (Posthumous)
  32. Shri K C Sivasankar (Posthumous)
  33. Guru Maa Kamali Soren
  34. Shri Marachi Subburaman
  35. Shri P Subramanian(Posthumous)
  36. Ms. Nidumolu Sumathi
  37. Shri Kapil Tiwari
  38. Father Vallés
  39. Dr. Thiruvengadam Veeraraghavan
  40. Shri Sridhar Vembu
  41. Shri K Y Venkatesh
  42. Ms. Usha Yadav
  43. Col Quazi Sajjad Ali Zahir
    Padma Bhushan awards list
  44. Ms. Krishnan Nair Shantakumari Chithra
  45. Shri Tarun Gogoi (Posthumous)
  46. Shri Chandrashekhar Kambara
  47. Ms. Sumitra Mahajan
  48. Shri Nripendra Misra
  49. Shri Ram Vilas Paswan (Posthumous)
  50. Shri Keshubhai Patel (Posthumous)
  51. Shri Kalbe Sadiq (Posthumous)
  52. Shri Rajnikant Devidas Shroff
  53. Shri Tarlochan Singh
    Padma Vibhushan awards list
  54. Shri Shinzo Abe
  55. Shri S P Balasubramaniam (Posthumous)
  56. Dr. Belle Monappa Hegde Medicine
  57. Shri Narinder Singh Kapany (Posthumous)
  58. Maulana Wahiduddin Khan
  59. Shri B. B. Lal
  60. Shri Sudarshan Sahoo

ಜನವರಿ 26, ಮಂಗಳವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ: ಆರಿದ್ರ, ಯೋಗ: ವೈದೃತಿ,
ಕರಣ : ಕೌಲವ,
ರಾಹುಕಾಲ: 3.30 ರಿಂದ 4.57
ಗುಳಿಕ ಕಾಲ: 12.36 ರಿಂದ 2.03
ಯಮಗಂಡಕಾಲ: 9.42 ರಿಂದ 11.09

ಮೇಷ

ಸಂಶೋಧನಾ ನಿರತರಿಗೆ ಹೊಸದೊಂದ ಅಚ್ಚರಿಯ ಫಲಿತಾಂಶ ದೊರಕಲಿದೆ. ಹೊಸ ಹುದ್ದೆಯೊಂದನ್ನು ಅಲಂಕರಿಸುವ ಸಾಧ್ಯತೆ. ಉನ್ನತ ಹುದ್ದೆಯಲ್ಲಿರುವವರು ದೇಶದ ಬಗ್ಗೆ ವಿಶೇಷ ಚಿಂತನೆ ನಡೆಸಲಿದ್ದೀರಿ. ಅನೇಕ ದಿನಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಉಣ್ಣುವ ಅವಕಾಶ ಒದಗಿಬರಲಿದೆ. ಗೃಹಾಲಂಕಾರ ಉದ್ಯಮದಲ್ಲಿ ತೊಡಗಿದವರಿಗೆ ಲಾಭದ ನಿರೀಕ್ಷೆ.

ವೃಷಭ

ಭೂಮಿಗೆ ಸಂಬAಧಿಸಿದ ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಭೂಮಿ ವಾ ನಿವೇಶನ ಖರೀದಿಯ ಸಾಧ್ಯತೆ ಕಂಡುಬರುವುದು. ಜನ ಸಮೂಹಕ್ಕೆ ಸಂದೇಶ ನೀಡಲಿದ್ದೀರಿ. ಭೂಮಿಯನ್ನು ಕೊಡುಕೊಳ್ಳುವ ವ್ಯವಹಾರದಿಂದ ಅಧಿಕ ಲಾಭ. ವಿದ್ಯಾರ್ಥಿಗಳಿಗೆ ಕಠಿಣ ಸಮಸ್ಯೆ ಯನ್ನು ಗೆಲ್ಲವ ಅವಕಾಶ.

ಮಿಥುನ

ಸ್ವತ್ತು ವಿವಾದಗಳಲ್ಲಿ ಬಂಧುಗಳೊಡನೆ ಸೌಹಾರ್ದ ಮಾತುಕತೆ ನಡೆಸುವುದ ರಿಂದ ಉತ್ತಮ ಫಲಿತಾಂಶ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಂದೇಶ. ದೇಶದ ರಕ್ಷಣೆಗೆ ಪಣತೊಡುವ ಕಾಲ ಎದುರಾಗಲಿದೆ. ಪದೋನ್ನತಿ ವಾ ಉದ್ಯೋಗದಲ್ಲಿನ ಬದಲಾವಣೆ ಸಾಧ್ಯತೆ ಕಂಡುಬರಲಿದೆ

ಕಟಕ

ಸತ್ಕಾರ್ಯಗಳಿಗೆ ಸಹಾಯ ಕೋರಿ ಬರುವವರಿಗೆ ಸಾಧ್ಯವಾದ ಸಹಾಯ ಮಾಡುವ ಅವಕಾಶ ದೊರಕಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಂಡುಬರಲಿದೆ. ಅಪೂರ್ವ ಕ್ಷಣವೊಂದನ್ನು ಕಾಣಲಿದ್ದೀರಿ. ಯಶಸ್ಸಿನ ಹೆಮ್ಮೆ ಅತಿಯಾಗದಿರಲಿ.

ಸಿಂಹ

ಸಂಗಾತಿಯ ಕಡೆಯ ಬಂಧುಗಳ ಆಗಮನದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳ ವಿವಾಹ ವಿಷಯದಲ್ಲಿ ಹೊಸ ತಿರುವು ಕಂಡುಬAದು ಮಾನಸಿಕ ನೆಮ್ಮದಿ ದೊರೆಯಲಿದೆ. ಹಣಕಾಸಿನ ಸಮಸ್ಯೆಗಳೂ ಪರಿಹಾರವಾಗಲಿವೆ.

ಕನ್ಯಾ

ಪ್ರಮುಖ ಕಾರ್ಯವೊಂದಕ್ಕೆ ಬಂದ ಅಡಚಣೆಯನ್ನು ನಿವಾರಿಸುವ ಜವಾಬ್ದಾರಿ ನಿಮ್ಮಮೇಲಿದೆ. ಶುಭ ಕಾರ್ಯಮಾಡಿದ ಪುಣ್ಯಕ್ಕೆ ಭಾಜನರಾಗುವ ಯೋಗ. ಸಹೋದರಿಯರ ವಿಶ್ವಾಸಕ್ಕೆ ಪಾತ್ರರಾಗುವಿರಿ. ಮನೆಯವರೆಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ

ಆಮದು ರಫ್ತು ವ್ಯವಹಾರದಲ್ಲಿನ ಕಾನೂನು ತೊಡಕುಗಳು ನಿವಾರಣೆಯಾಗಲಿದೆ. ವ್ಯವಹಾರದಲ್ಲಿ ಹೆಚ್ಚಳವುಂಟಾಗಿ ಲಾಭದತ್ತ ದಾಪುಗಾಲು. ರಕ್ಷಣಾ ಕಾರ್ಯದಲ್ಲಿರುವವರಿಗೆ ಎಲ್ಲಿಲ್ಲದ ತುರುಸು. ವಾಹನ ಖರೀದಿಗೆ ಕೆಲವು ದಿನಗಳ ಮುಂದೂಡಿಕೆ ಉತ್ತಮವಾಗಲಿದೆ. ದೇವತಾದರ್ಶನ ಸಾಧ್ಯತೆ.

ವೃಶ್ಚಿಕ

ನಿಮ್ಮ ಒಳ್ಳೆಯ ತನ ದುರುಪಯೋಗವಾಗುವ ಸಾಧ್ಯತೆ ಇದ್ದು ಎಚ್ಚರಿಕೆ ಅಗತ್ಯ. ಹಣ ಅಥವಾ ಸಂಪನ್ಮೂಲಗಳು ನಿಮ್ಮನ್ನು ಅರಸಿ ಬರುವ ಸಾಧ್ಯತೆ. ಗೌರವಾದರಗಳಿಗೆ ಪಾತ್ರರಾಗಲಿದ್ದೀರಿ. ಉತ್ತಮ ಆರೋಗ್ಯದೊಂದಿಗೆ ಸಾಂಸಾರಿಕ ನೆಮ್ಮದಿ. ಮನೆಯವರ ಮಾತಿಗೆ ಮನ್ನಣೆ ಇರಲಿ.

ಧನು

ವಿವಾಹ ಸಂಬAಧಿತ ಮಾತುಕತೆಗಳು ಒಂದು ನಿರ್ಧಿಷ್ಟ ಹಂತ ತಲುಪಿ ನಿರಾಳವಾಗಲಿದೆ. ಮಕ್ಕಳ ವಿದ್ಯಾಭ್ಯಾಸವು ಉತ್ತಮ ರೀತಿಯಲ್ಲಿ ಸಾಗಿ ಪ್ರಗತಿಯನ್ನು ಕಾಣುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ನಿಮ್ಮ ಇಚ್ಛೆಗಳು ನೆರವೇರಿ ಮಾನಸಿಕ ನೆಮ್ಮದಿ ಮೂಡಲಿದೆ

ಮಕರ

ಹೊಸ ಮನೆ ನಿರ್ಮಾಣದ ವಿಷಯದಲ್ಲಿ ಆಗಮಿತ ಬಂಧುಗಳೊAದಿಗೆ ಸಮಾಲೋಚನೆ ನಡೆಸಲಿದ್ದೀರಿ. ದೂರದ ಪ್ರಯಾಣ ದಿನದ ಮಟ್ಟಿಗೆ ಬೇಡ. ಸಾರ್ವಜನಿಕವಾಗಿ ನಿಮ್ಮನ್ನು ಗುರುತಿಸಿಕೊಳ್ಳುವ ಅವಕಾಶ. ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ.

ಕುಂಭ

ಹೊಸ ಜೀವನಶೈಲಿಗೆ ಒಗ್ಗಿಕೊಳ್ಳುವಿರಿ. ಅನಿರೀಕ್ಷಿತ ಮೂಲಗಳಿಂದ ಧನಾಗಮನವಾಗಲಿದೆ. ಸಾರ್ವಜನಕ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗಿಯಾಗುವ ಸಾಧ್ಯತೆ. ಬರಹಗಾರರಿಗೆ ಮುದ್ರಣ ಉದ್ಯಮಿಗಳಿಗೆ ಉತ್ತೇಜನ ದೊರಕಲಿದೆ. ರಾಜಕಾರಣಿಗಳಿಗೆ ಕಠಿಣ ಸವಾಲನ್ನು ಎದುರಿಸುವ ಸಾಧ್ಯತೆ ಕಂಡುಬರಲಿದೆ.

ಮೀನ

ಗುರುದೇವತಾರಾಧನೆಯಿಂದ ದಿನದಾರಂಭ ಮಾಡುವುದರಿಂದಾಗಿ ಆಯ್ದ ಕಾರ್ಯಗಳು ಸಫಲಗೊಳ್ಳುವವು. ರಾಜಕಾರಣಿಗಳಿಗೆ ಬಿಡುವಿಲ್ಲದ ಕಾರ್ಯಕ್ರಮಗಳು. ಜನಮನ್ನಣೆಗೆ ಪಾತ್ರರಾಗಲಿದ್ದೀರಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಗಳು ಕಂಡುಬರುವವು. ಕಲಾವಿದರಿಗೆ ಉತ್ತಮ ಅವಕಾಶಗಳು ನಿಚ್ಚಳವಾಗಿವೆ.

ಜನವರಿ 25,ಸೋಮವಾರ, 2021 : ಇಂದಿನ ರಾಶಿಭವಿಷ್ಯ

ಪಂಚಾಂಗ
ರಾಹುಕಾಲ:8.16 ರಿಂದ 9.42
ಗುಳಿಕಕಾಲ:2.02 ರಿಂದ 3.28
ಯಮಗಂಡಕಾಲ:11.09 ರಿಂದ 12.35

ಸೋಮವಾರ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ,

ಮೇಷ

ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ.

ವೃಷಭ

ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಂಸಾರ ಸಮೇತ ವಿಹಾರಾರ್ಥ ಪ್ರವಾಸ ಕೈಗೊಳ್ಳುವಿರಿ. ದೇವತಾ ದರ್ಶನವನ್ನೂ ಮಾಡುವ ಸಾಧ್ಯತೆ. ಎಲ್ಲವನ್ನೂ ಮರೆತು ನೆಮ್ಮದಿ ಮೂಡಲಿದೆ.

ಮಿಥುನ

ರಾಜಕೀಯದಲ್ಲಿರುವ ಮಹಿಳೆಯರಿಗೆ ಸಂಕಷ್ಟಗಳು ಎದುರಾಗಲಿವೆ. ಗೆಳೆಯರ, ಸಂಬಂಧಿಕರ ಸಹಕಾರದಿಂದ ಕಾರ್ಯಸಿದ್ಧಿ. ವಿವಾಹಾಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ ಕಂಡುಬರುತ್ತಿದೆ.

ಕಟಕ

ಸಮಾಜದ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ಅತಿಯಾದ ಸಂತೋಷದಿಂದಾಗಿ ನಡೆ, ನುಡಿಯಲ್ಲಿ ಹಿಡಿತ ತಪ್ಪದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ನಿಮ್ಮ ಬಹುದಿನದ ಬೇಡಿಕೆಯೊಂದು ನೆರವೇರಲಿದೆ.

ಸಿಂಹ

ನಿಮ್ಮ ಶ್ರಮದಿಂದಾಗಿ ಹೆಚ್ಚಿನ ಆದಾಯ ದೊರಕಿ ಸಂತಸ. ಎದುರಾದ ಸಂಕಷ್ಟ, ಭಯಗಳನ್ನು ಧೈರ್ಯವಾಗಿ ಎದುರಿಸಿ ಯಶಸ್ಸು. ಉನ್ನತ ಹುದ್ದೆಯಲ್ಲಿರುವವರು ಯಾವುದೇ ಆಮಿಷಗಳಿಗೆ ಒಳಗಾಗದೆ ಕಾರ್ಯನಿರ್ವಹಿಸಿ

ಕನ್ಯಾ

ಮನೆಯ ಅನುಕೂಲಕ್ಕಾಗಿ ಹೆಚ್ಚಿನ ವೆಚ್ಚ ಭರಿಸಲಿದ್ದೀರಿ. ಅಧಿಕಾರ ಲಾಲಸೆಯಿಂದ ಎಚ್ಚರ ತಪ್ಪಿ ನಡೆಯುವ ಸಾಧ್ಯತೆ. ಕೃಷಿ ಕಾರ್ಮಿಕರಿಗೆ ಅಡೆತಡೆಗಳು ಕಂಡುಬರುತ್ತಿದೆ. ಮಂಗಳಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ.

ತುಲಾ

ನಿಮ್ಮ ಅದೃಷ್ಟ ಉತ್ತಮವಾಗಿದ್ದು ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸಲಿದ್ದೀರಿ. ಚಿನ್ನ ಖರೀದಿಗೆ ಮುಂದಾಗುವ ಸಾಧ್ಯತೆ ಕಂಡುಬರುತ್ತಿದೆ. ವ್ಯವಹಾರದಲ್ಲಿ ಉತ್ತಮ ಸಲಹೆ ಸಹಕಾರಗಳು ದೊರೆಯಲಿವೆ.

ವೃಶ್ಚಿಕ

ಬಂಧುಗಳ ನಡುವೆ ಇರುಸು–ಮುರುಸು ಉಂಟಾಗುವ ಸಾಧ್ಯತೆ. ನಿಮ್ಮ ಮಾತುಗಳಿಂದ ಇತರರನ್ನು ಆಕರ್ಷಿಸಿ ಛಾಪು ಮೂಡಿಸಲಿದ್ದೀರಿ. ಸಾಮರಸ್ಯವನ್ನು ಮೂಡಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ.

ಧನು

ಸುತ್ತಮುತ್ತಲಿನ ಜನರೊಂದಿಗೆ ಹೊಂದಾಣಿಕೆಯಿಂದ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವಿರಿ. ಸಮಾಧಾನದ ನಡೆಯಿಂದಾಗಿ ಗಮನ ಸೆಳೆಯಲಿದ್ದೀರಿ. ಹೊರಗಿನವರ ವದಂತಿಗಳಿಗೆ ಕಿವಿಕೊಡದಿರಿ.

ಮಕರ

ಉದ್ಯಮದಲ್ಲಿ ಹೂಡಿಕೆಯ ವಿಚಾರವಾಗಿ ಹೆಚ್ಚಿನ ಗಮನವಹಿಸಿ. ನಂಬಿ ಮೋಸ ಹೋಗುವ ಮುನ್ನ ಮತ್ತೊಮ್ಮೆ ಯೋಚಿಸಿ. ಸಾಮಾಜಿಕ ಕಾರ್ಯಕ್ಕೆ ಆಹ್ವಾನ ಸ್ವೀಕರಿಸುವಿರಿ. ಆರೋಗ್ಯದಲ್ಲಿ ತೊಂದರೆ.

ಕುಂಭ

ಆರ್ಥಿಕ ಏಳಿಗೆಗಾಗಿ ಸ್ನೇಹಿತರೊಂದಿಗೆ ಹೊಸದೊಂದು ಯೋಜನೆಯನ್ನು ಕೈಗೊಳ್ಳುವಿರಿ. ಅಪೇಕ್ಷಿತ ಯೋಜನೆಯಲ್ಲಿ ಯಶಸ್ಸನ್ನೂ ಕಾಣುವಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಏರುಪೇರು ಸಾಧ್ಯತೆ.

ಮೀನ

ನೌಕರಸ್ಥರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಸಾಧ್ಯತೆ. ಸಹೋದ್ಯೋಗಿಗಳ ಮೇಲಾಟವನ್ನು ಎದುರಿಸುವ ಸಲುವಾಗಿ ತಾಳ್ಮೆ ವಹಿಸುವುದು ಒಳಿತು. ದಿನದ ಮಟ್ಟಿಗೆ ಪ್ರಯಾಣ ಮುಂದೂಡುವುದು ಸೂಕ್ತ.

Design a site like this with WordPress.com
Get started