ಮಾರ್ಚ್ 01, ಸೋಮವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,
ವಾರ: ಸೋಮವಾರ, ತಿಥಿ: ದ್ವಿತೀಯ ಉಪರಿ ತೃತೀಯ
ನಕ್ಷತ್ರ: ಹಸ್ತಾ ನಕ್ಷತ್ರ, ಉತ್ತರಾಯಣ
ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ.

ರಾಹುಕಾಲ: 8:08 ರಿಂದ 09:37
ಗುಳಿಕಕಾಲ: 2:05 ರಿಂದ 3.34
ಯಮಗಂಡಕಾಲ: 11:6 ರಿಂದ 12: 35

ಮೇಷ

ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ‌. ಸಂತಾನ ಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತು ಹೋದ ಯೋಜನೆಗಳು ಪುನರಾರಂಭಗೊಳ್ಳುವವು.

ವೃಷಭ

ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ನಿರಾಶೆಗೊಳ್ಳುವ ಅವಶ್ಯಕತೆ ಇಲ್ಲ.

ಮಿಥುನ

ನೌಕರರು ಮತ್ತು ಸ್ವಂತ ಉದ್ಯೋಗಿಗಳು ತಪ್ಪು ತಡೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

ಕಟಕ

ಆರ್ಥಿಕ ಅನುಕೂಲ ನಿಮ್ಮನ್ನರಸಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವೆಚ್ಚವನ್ನೂ ಮಾಡುವಿರಿ. ನಿಮ್ಮ ಉತ್ತಮ ನಡವಳಿಕೆಯಿಂದಾಗಿ ಗೌರವಾದರಗಳು ಲಭ್ಯವಾಗುವವು.

ಸಿಂಹ

ಕಣ್ಣು ಅಥವಾ ತಲೆನೋವಿನಿಂದ ಬಳಲುವ ಸಾಧ್ಯತೆ. ಅತಿಯಾದ ವಾದ ವಿವಾದದಿಂದಾಗಿ ವೈರತ್ವ ಬರಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ದಂಡ ತೆರಬೇಕಾದೀತು.

ಕನ್ಯಾ

ನಿಮ್ಮ ಕೆಲಸ–ಕಾರ್ಯಗಳು ಮಂದಗತಿಯಲ್ಲೂ ಪ್ರಗತಿಯನ್ನು ಕಾಣುವುದು. ಉದರ ಸಂಬಂಧಿ ಸಣ್ಣಪುಟ್ಟ ತೊಂದರೆಗಳು ಕಂಡುಬರಬಹುದು. ಹೊಸ ಕಾರ್ಯ ಪ್ರಾರಂಭಿಸದಿರುವುದೇ ಒಳ್ಳೆಯದು.

ತುಲಾ

ಸಂಕಷ್ಟಗಳು ಕಡಿಮೆಯಾಗಿ ಕೆಲಸ–ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆ. ಅನಿರೀಕ್ಷಿತ ಅನಾವಶ್ಯಕ ಖರ್ಚು ಸಂಭವಿಸುವವು. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ

ಆರ್ಥಿಕ ಉನ್ನತಿ ಕಂಡುಬರುವುದು. ಶತ್ರುಗಳ ವಿರುದ್ಧ ಜಯದ ಸವಾರಿ ಮಾಡುವ ಯೋಗವಿದೆ. ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿಯ ಜೀವನ ಕಂಡುಬರುವುದು. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಧನು

ನಿಮ್ಮ ನಿರ್ಣಯಗಳು ಫಲ ನೀಡುವವು. ಆದಾಯದಲ್ಲಿ ಹೆಚ್ಚಳ ಕಂಡು ಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ. ಉದ್ಯೋಗ ಕ್ಷೇತ್ರದಲ್ಲಿ ಗೌರವಾದರ. ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುವಿರಿ.

ಮಕರ

ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿ. ವೃಥಾ ವೈಮನಸ್ಸು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ–ಕಾರ್ಯಗಳಲ್ಲಿ ಉತ್ಸಾಹ.

ಕುಂಭ

ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವ ಸಾಧ್ಯತೆ. ನೌಕರಿಯ ವಿಷಯದಲ್ಲಿ ಉನ್ನತ ಸ್ಥಾನ ಅಥವಾ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು.

ಮೀನ

ಅನಾವಶ್ಯಕ ಖರ್ಚು. ಬಂಧುಗಳ ಭೇಟಿ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು. ಸಂಗಾತಿಯಿಂದ ಉತ್ತಮ ಸಹಕಾರ.

ಫೆಬ್ರವರಿ 28,ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ

ರಾಹುಕಾಲ: 5:03 ರಿಂದ 6 :33
ಗುಳಿಕಕಾಲ: 3:34 ರಿಂದ 5:03
ಯಮಗಂಡಕಾಲ: 12.33 ರಿಂದ 2:05

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ, ತಿಥಿ : ಪಾಡ್ಯ ನಕ್ಷತ್ರ : ಪುಬ್ಬ

ಮೇಷ

ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ. ವಾಹನ ಮಾರಾಟದಿಂದ ಉತ್ತಮ ಲಾಭ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯವಾದೀತು. ಸಮಾಧಾನ ಚಿತ್ತರಾಗಿರಿ.

ವೃಷಭ

ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂ ವಿಸ್ತರಿಸಲು ಅನುಮತಿ ಪಡೆಯಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕ್ಕಳ ವಿಶೇಷ ಸಾಧನೆಯ ಸಾಧ್ಯತೆ ಇದ್ದು ಸಂತಸ ಮೂಡಲಿದೆ.

ಮಿಥುನ

ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ಉತ್ತಮ ಲಾಭ. ಸ್ವಂತ ಉದ್ಯಮ, ಫ್ಯಾಕ್ಟರಿಗಳನ್ನು ನಡೆಸುತ್ತಿರುವವರಿಗೆ ಉತ್ತಮ ಆದಾಯ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ

ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದಾಗಿ ಹೇರಳ ಲಾಭ. ಮಂಗಲಕಾರ್ಯಗಳಲ್ಲಿ ಭಾಗಿ. ತಾಯಿಯ ಆರೋಗ್ಯಕ್ಕಾಗಿ ನುರಿತ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ.

ಸಿಂಹ

ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರ್ಕಾರದ ಕಾಮಗಾರಿಗಳು ದೊರೆತು ಸಂತಸ ನೀಡಲಿದೆ. ಮಂಗಳ ಕಾರ್ಯಗಳಿಗಾಗಿ ಮಕ್ಕಳೊಂದಿಗೆ ಚರ್ಚೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲವಾಗಿದೆ.

ಕನ್ಯಾ

ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದಾಗಿ ಕೃಷಿ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ ದೊರಕಲಿದೆ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ.

ತುಲಾ

ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ನಟ ನಟಿಯರು ಕಲಾವಿದರುಗಳಿಗೆ ಹೆಚ್ಚಿನ ಅವಕಾಶ ದೊರಕುವ ಸಾಧ್ಯತೆ. ವಿವಾಹ ನಿಶ್ಚಯವೇ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.

ವೃಶ್ಚಿಕ

ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ. ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ.

ಧನು

ಸರ್ಕಾರಿ ಕೆಲಸಗಳಲ್ಲಿರುವವರಿಗೆ ಬಡ್ತಿ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ.

ಮಕರ

ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟದಿಂದಾಗಿ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದ್ದೀರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ ದೊರಕಲಿದೆ. ಶುಭಕಾರ್ಯಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಕುಂಭ

ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ವರಮಾನ. ಹೊಸ ಗೃಹ ನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನಕರವಾಗಿ ಕೆಲಸಗಳನ್ನು ನಿರ್ವಹಿಸುವುದರಿಂದ ಒದಗಬಹುದಾದ ತೊಂದರೆಯಿಂದ ಪಾರಾಗಲಿದ್ದೀರಿ.

ಮೀನ

ಕೈಗೊಂಡ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನವ ದಂಪತಿಗಳಿಗೆ ಸಂತಾನ ಭಾಗ್ಯ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ ಕಂಡುಬರುತ್ತಿದೆ

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ

ಉಡುಪಿ ಜಿಲ್ಲಾ ಬಿಜೆಪಿಯಿಂದ ಗೌರವ ಸನ್ಮಾನ

ಪ್ರಧಾನಿ ಮೋದಿ ಆಶಯದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕ್ರೀಡಾಳುಗಳು ಸಾಧನೆಯ ಉತ್ತುಂಗಕ್ಕೇರುವಂತೆ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 2.50 ಕೋಟಿ ಯುವ ಜನತೆಯ ಸಬಲೀಕರಣದ ಜೊತೆಗೆ ಕ್ರೀಡಾ ಪ್ರತಿಭೆಗಳಿಗೆ ಸದವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ. ಕ್ರೀಡಾ ರಂಗದಲ್ಲಿ ಈಗಾಗಲೇ ವಿಶೇಷ ಸಾಧನೆಗೈಯುತ್ತಿರುವ ಉಡುಪಿ ಜಿಲ್ಲೆಯ ಮೂಲಭೂತ ಆದ್ಯತೆಗಳಿಗೂ ಸಕಾಲಿಕವಾಗಿ ಸ್ಪಂದಿಸಲಾಗುವುದು ಎಂದು ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ! ನಾರಾಯಣ ಗೌಡ ಹೇಳಿದರು.

ಅವರು ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಚೇರಿಗೆ ಬೇಟಿ ನೀಡಿ ಪಕ್ಷದ ವತಿಯಿಂದ ನಡೆದ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಉಡುಪಿ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವ ಸತ್ಕಾರ್ಯ ನಡೆದಿದೆ. ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸೂಕ್ತ ನೆರವಿನ ಜೊತೆಗೆ ಜಿಲ್ಲೆಯ ಕ್ರೀಡಾ ಪಟುಗಳ ವಿಕಸನಕ್ಕೆ ಕ್ರೀಡಾ ಇಲಾಖೆಯ ಸ್ಪಂದನೆ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಹಾಗೂ ಬಿಜೆಪಿ ಜಿಲ್ಲಾ, ಮೋರ್ಚಾ, ಮಂಡಲ, ಪ್ರಕೋಷ್ಠಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.

ಫೆಬ್ರವರಿ 27, ಶನಿವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ಪೌರ್ಣಿಮೆ ಪ್ರಥಮ,
ಶನಿವಾರ, ಮಖ ನಕ್ಷತ್ರ/ಪೂರ್ವ ಫಲ್ಗುಣಿ ನಕ್ಷತ್ರ

ರಾಹುಕಾಲ: 09:38 ರಿಂದ 11:07
ಗುಳಿಕಕಾಲ: 6: 40ರಿಂದ 08:09
ಯಮಗಂಡಕಾಲ: 02:05 ರಿಂದ 3.34

ಮೇಷ

ಮಿತ್ರವ್ಯವಹಾರಗಳಲ್ಲಿ ಜಾಗರೂಕರಾಗಿರುವುದ ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಉತ್ತಮ ಶ್ರದ್ಧೆಯಿಂದ ಸಫಲತೆ ಉಂಟಾಗುವುದು.

ವೃಷಭ

ಮಾತೃವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅತ್ಯಗತ್ಯ. ಅನವಶ್ಯಕ ವ್ಯವಹಾರಕ್ಕೆ ತಲೆಹಾಕದಿರುವುದು ಉತ್ತಮ.

ಮಿಥುನ

ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸೋದರರಿಂದ ಸಲಹೆ ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ. ವಿದೇಶದಿಂದ ಪ್ರಮುಖ ಸುದ್ದಿಯೊಂದು ಬರುವ ಸಾಧ್ಯತೆ.

ಕಟಕ

ಕಳೆದುಹೋದ ದಿನಗಳ ಬಗ್ಗೆ ಚಿಂತಿಸುವುದರಿಂದ ಪ್ರಯೋಜನವಿಲ್ಲ. ಹಿರಿಯರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ.

ಸಿಂಹ

ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ ದೊರಕುವುದು. ಆಸ್ತಿ ಅಥವಾ ಚಿನ್ನಾಭರಣ ಖರೀದಿ ಸಾಧ್ಯತೆ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ.

ಕನ್ಯಾ

ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ನೆರೆಹೊರೆಯವರೊಂದಿಗೆ ಕಲಹ; ಸಮಾಧಾನದ ನಡವಳಿಕೆ ಅಗತ್ಯ. ಮಕ್ಕಳಿಂದ ನೆಮ್ಮದಿ. ವಿವಾಹಾಕಾಂಕ್ಷಿಗಳಿಗೆ ವಿವಾಹ ಯೋಗ

ತುಲಾ

ಮನೆಯಲ್ಲಿ ನೆಮ್ಮದಿಯ ವಾತಾವರಣ. ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು ಮತ್ತು ಪ್ರಶಂಸೆ ಪ್ರಾಪ್ತಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ.

ವೃಶ್ಚಿಕ

ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿಯನ್ನು ಕಾಣುವಿರಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು. ಸಹೋದರರಿಂದ ಸಹಕಾರ.

ಧನು

ದೀರ್ಘಕಾಲಿಕ ಅನಾರೋಗ್ಯದಿಂದ ಮುಕ್ತರಾಗುವಿರಿ. ಪ್ರಾಪ್ತವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ತೊಡಕುಂಟಾಗುವ ಸಾಧ್ಯತೆ. ಮಕ್ಕಳಿಂದ ಶುಭ ವಾರ್ತೆ.

ಮಕರ

ಭೂ ವ್ಯವಹಾರಗಳಿಂದ ಲಾಭ. ಗುರುದೇವತಾ ದರ್ಶನ ಯೋಗಪ್ರಾಪ್ತಿ. ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು ನೆಮ್ಮದಿಯ ಜೀವನಕ್ಕೆ ನಾಂದಿಯಾಗುವುದು.

ಕುಂಭ

ನಿರೀಕ್ಷಿತ ಮೂಲಗಳಿಂದ ಧನಾಗಮನ. ವೃತ್ತಿ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಮಹಿಳೆಯರಿಗೆ ಕಲಾವಿದರುಗಳಿಗೆ ಉತ್ತಮ ಅವಕಾಶ ದೊರೆತು ಗೌರವಾದರಗಳು ಪ್ರಾಪ್ತವಾಗುವವು. ‌

ಮೀನ

ದೂರದ ಪ್ರಯಾಣ ಯೋಗ. ವಾಹನ ಖರೀದಿ ಸಾಧ್ಯತೆ. ನ್ಯಾಯಾಲಯದಲ್ಲಿ ಜಯ. ಚಿನ್ನ ಮುಂತಾದ ಹಳದಿ ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭದ ನಿರೀಕ್ಷೆ. ಕುಟುಂಬ ಸದಸ್ಯರಿಂದ ಹೊಸ ಕೆಲಸ ಕಾರ್ಯಗಳಿಗೆ ಉತ್ತಮ ಸಹಕಾರ.

ಫೆಬ್ರವರಿ 26, ಶುಕ್ರವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,ಶಿಶಿರ ಋತು,
ಮಾಘಮಾಸ, ಶುಕ್ಲಪಕ್ಷ,
ಚತುರ್ದಶಿ / ಪೌರ್ಣಿಮೆ, ಶುಕ್ರವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ,

ರಾಹುಕಾಲ: 11: 7ರಿಂದ 12: 36
ಗುಳಿಕಕಾಲ: 08:0 9 ರಿಂದ 09:38
ಯಮಗಂಡಕಾಲ: 3.34 ರಿಂದ 05:03

ಮೇಷ

ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಮನಸ್ಸಿಗೆ ನೆಮ್ಮದಿ ನೀಡುವ ಹೊಸ ಮಾರ್ಗವೊಂದು ಗೋಚರ. ವ್ಯಾಪಾರಸ್ಥರಿಗೆ ಗಣನೀಯ ಲಾಭ. ಮನೆಮಂದಿಯೊಂದಿಗೆ ಪ್ರವಾಸ ಮಾಡುವ ಸಯೋಗ

ವೃಷಭ

ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಅಂತಹ ವಿಷಯಗಳಲ್ಲಿ ಅತ್ಯುತ್ಸಾಹ ಸಲ್ಲ. ಮನೆಯವರೊಂದಿಗೆ ದೂರದ ಪ್ರಯಾಣ. ದೇವತಾ ದರ್ಶನ ಭಾಗ್ಯ ಕಂಡುಬರುತ್ತಿದೆ. ಆರೋಗ್ಯದಲ್ಲಿ ವೃದ್ಧಿ

ಮಿಥುನ

ನಿಮ್ಮ ವಿರುದ್ಧ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆಯಿದ್ದು, ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಗ್ಧತೆ ಕಾಪಾಡುವುದು ಒಳ್ಳೆಯದು. ಸಮಾಧಾನ ನಿಮ್ಮ ನೆರವಿಗೆ ಬರುವುದು.

ಕಟಕ

ಸಾಲಕೊಟ್ಟವರು ಯಡೆಬಿಡದೆ ಮರುಪಾವತಿಗಾಗಿ ತಗಾದೆ ಹೂಡಬಹುದು. ದ್ವೇಷಕ್ಕೆ ಮುಂದಾಗದೇ ಉಪಾಯದಿಂದ ಪಾರಾಗುವ ಬಗ್ಗೆ ಯೋಚಿಸಿ. ಸಂಗಾತಿಯೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಣಯ ಕೈಗೊಳ್ಳಿ.

ಸಿಂಹ

ಗುಂಪುಗಾರಿಕೆಯಿಂದಾಗಿ ಧನ ಮಾನಗಳ ಹಾನಿ ಸಂಭವ. ಅನ್ಯರ ಮೇಲೆ ಸಂಶಯ ಒಳ್ಳೆಯದಲ್ಲ. ದೂರದಲ್ಲಿರುವ ಮಕ್ಕಳ ಆಗಮನ ಸಾಧ್ಯತೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ.

ಕನ್ಯಾ

ನಿಮ್ಮ ಇಂದಿನ ಅನಿವಾರ್ಯವಲ್ಲದ ಕೆಲಸ ಕಾರ್ಯಗಳನ್ನು ಮುಂದೂಡುವುದು ಉತ್ತಮ. ದೂರದ ಪ್ರಯಾಣ ಖಂಡಿತ ಬೇಡ. ಮಕ್ಕಳಿಂದ ಮನಸ್ಸಿಗೆ ಸಂತಸ. ಮಡದಿ ನಿಮ್ಮ ಚಿಂತೆಗಳನ್ನು ದೂರಮಾಡಲಿದ್ದಾಳೆ.

ತುಲಾ

ಗೆಳೆಯರೊಂದಿಗೆ ಸಮಾಲೋಚನೆಯ ಸಾಧ್ಯತೆ. ಕೆಲಸಕಾರ್ಯಗಳಲ್ಲಿ ನಿಮ್ಮ ಸ್ವಭಾವದಿಂದಾಗಿ ಹಿನ್ನಡೆ. ದೃಢನಿರ್ಧಾರದಿಂದ ವ್ಯವಹರಿಸಿ. ಹಿರಿಯರ ಬೆಂಬಲದಿಂದಾಗಿ ಯಶಸ್ಸನ್ನು ಕಾಣುವಿರಿ

ವೃಶ್ಚಿಕ

ಬೇರೆಯವರ ಥಳುಕು ಬಳುಕಿನ ಮಾತಿಗೆ ಮರುಳಾಗಿ ಮೋಸಹೋಗುವ ಸಾಧ್ಯತೆ. ಹಿರಿಯರ ಹಿತನುಡಿಗಳನ್ನು ಮನ್ನಿಸಿ ಅವರ ಆರೋಗ್ಯದ ಕಡೆಗೆ ಗಮನ ವಹಿಸಿ. ದಿನದ ಮಟ್ಟಿಗೆ ದೂರದ ಪ್ರಯಾಣ ಬೇಡ.

ಧನು

ಕೆಲವರೊಂದಿಗೆ ಅತಿಯಾದ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಗುರು ವೃಂದದವರಿಂದ ಸೂಕ್ತ ಮಾರ್ಗದರ್ಶನ.

ಮಕರ

ಮನಸ್ಸಿನಲ್ಲಿ ಹರಿಯುತ್ತಿರುವ ಪ್ರೀತಿ ಪ್ರೇಮಗಳ ಹುಚ್ಚು ಹೊಳೆಗೆ ಲಗಾಮು ಹಾಕಿಕೊಳ್ಳಿ. ಸ್ನೇಹದ ವಿಷಯದಲ್ಲಿ ಎಡವಿ ಬೀಳುವ ಸಾಧ್ಯತೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹರಿಸುವಾಗ ಎಚ್ಚರವಿರಲಿ

ಕುಂಭ

ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಲಾಭ ಪಡೆಯುವವರ ವಿಷಯದಲ್ಲಿ ಎಚ್ಚರದಿಂದಿರುವುದು ಒಳಿತು. ಬಾಲ ಬಡುಕರನ್ನು ದಿನದಮಟ್ಟಿಗೆ ದೂರವಿಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

ಮೀನ

ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ. ಅಂತಹ ಸಂದರ್ಭಗಳನ್ನು ಮುಂದೂಡುವುದೇ ಲೇಸು. ವಾಹನ ಖರೀದಿಯ ಯೋಗ. ಯಂತ್ರೋಪಕರಣಗಳ ವ್ಯವಹಾರದಲ್ಲಿ ಅಧಿಕ ಲಾಭದ ನಿರೀಕ್ಷೆ.

ಸಂಘಟನಾತ್ಮಕ ಚಟುವಟಿಕೆಗಳಿಗೆ ನಿಗದಿತ ಸಮಯದ ಸ್ಪಂದನೆ ಅಗತ್ಯ – ಕುಯಿಲಾಡಿ

ರಾಜ್ಯದಿಂದ ನಿಯಮಿತವಾಗಿ ಬರುವ ಸೂಚನೆಯಂತೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಅನುಷ್ಠಾನಕ್ಕೆ ಜಿಲ್ಲಾ, ಮೋರ್ಚಾ, ಮಂಡಲ ಸಹಿತ ಎಲ್ಲ ಸ್ತರಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ನಿಗದಿತ ಸಮಯದ ಸ್ಪಂದನೆ ಅಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲಾ ಮಟ್ಟದ ವಿವಿಧ ಮೋರ್ಚಾಗಳು ಸಂಘಟನಾತ್ಮಕ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ವತಿಯಿಂದ ಫೆ.25ರಂದು ಜಿಲ್ಲಾ ಕಾರ್ಯ ತಂಡದ ಸಹಾಲ್ ಕಾರ್ಯಕ್ರಮ ಹಾಗೂ ಫೆ.26 ಮತ್ತು 27ರಂದು ಮಂಡಲವಾರು ಪ್ರಶಿಕ್ಷಣ ವರ್ಗ ನಡೆಯಲಿದೆ. ಜಿಲ್ಲಾ ಮತ್ತು ಮಂಡಲಗಳ ಕ್ರೀಡಾ ಕೂಟವು ಮಾ.26 ಮತ್ತು 27ರಂದು ನಡೆಯಲಿದೆ. ಕೇಂದ್ರ ಸರಕಾರ ನೀಡಿರುವ ಆತ್ಮ ನಿರ್ಭರ ಬಜೆಟ್‍ನ ಉತ್ತಮ ಅಂಶಗಳನ್ನು ಜನತೆಗೆ ತಲುಪಿಸುವ ಕಾರ್ಯ ನಡೆಯಬೇಕಿದೆ. ನೂತನ ಕೃಷಿ ಕಾಯ್ದೆಯನ್ನು ಬೆಂಬಲಿಸಿ ಪಕ್ಷದ ವತಿಯಿಂದ ಬೈಂದೂರಿನಿಂದ ಉಡುಪಿಯ ತನಕ ರೈತಪರ ಪಾದಯಾತ್ರೆ ನಡೆಯಲಿದೆ. ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪೂರ್ಣ ಪ್ರಮಾಣದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂಬರಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಗದೊಮ್ಮೆ ಜಿಲ್ಲೆಯಾದ್ಯಂತ ಬಿಜೆಪಿ ಭರ್ಜರಿ ವಿಜಯ ದಾಖಲಿಸುವಂತೆ ಬದ್ಧತೆಯಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸಾಧನೆ ಶ್ಲಾಘನೀಯ. ಅಯೋಧ್ಯೆಯ ಶ್ರೀ ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನದಲ್ಲಿ ಉಡುಪಿ ಜಿಲ್ಲೆ ಮಂಗಳೂರು ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಪಕ್ಷದ ಸಂಘಟನಾತ್ಮಕ ಸೂತ್ರದಲ್ಲಿ ಯಾವುದೇ ರಾಜಿ ಇಲ್ಲ. ಇದರಿಂದಾಗಿ ಬಿಜೆಪಿ ಇತರ ರಾಜಕೀಯ ಪಕ್ಷಗಳಿಗಿಂತ ಬಿನ್ನವಾಗಿದೆ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸಮಯದ ಇತಿಮಿತಿಯೊಳಗೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಮುಂದಿನ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತ್ರತ ವಿವರ ಮಂಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿಯನ್ನು ಮೆಚ್ಚಿ ಜೆಡಿಎಸ್ ಮುಖಂಡ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ಕಾಂಗ್ರೆಸ್ ಮುಖಂಡ, ಕಾಂಗ್ರೆಸ್ ಬೆಂಬಲಿತ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ಇವರು ಪಕ್ಷದ ಮುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾತ್ಮಕ ಪ್ರಕೋಷ್ಠಗಳಾದ ಮಾಧ್ಯಮ, ಸಾಮಾಜಿಕ ಜಾಲತಾಣ, ಪ್ರಶಿಕ್ಷಣ ಮತ್ತು ಪ್ರಕಾಶನ ಪ್ರಕೋಷ್ಠಗಳ ಸಂಚಾಲಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.

ಫೆಬ್ರವರಿ 25, ಗುರುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಮಾಘಮಾಸ,
ಶುಕ್ಲಪಕ್ಷ, ತ್ರಯೋದಶಿ/ಚತುರ್ದಶಿ,
ಗುರುವಾರ

ರಾಹುಕಾಲ 02:05 ರಿಂದ 3.34
ಗುಳಿಕಕಾಲ 09:38 ರಿಂದ 11:07
ಯಮಗಂಡಕಾಲ 6.41 ರಿಂದ 08:09

ಮೇಷ

ಹಣಕಾಸಿನ ವಿಷಯಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಪ್ರಗತಿ ಉಂಟಾಗುವುದು. ಕುಟುಂಬದಲ್ಲಿ ಸೌಹಾರ್ದ. ಸೋದರರಿಂದ ಸಹಕಾರ ಮಕ್ಕಳ ಅಭಿವೃದ್ಧಿಯಿಂದಾಗಿ ಸಂತೃಪ್ತಿ.

ವೃಷಭ

ವೈಯಕ್ತಿಕ ತೊಂದರೆಯಿಂದ ಮುಕ್ತರಾಗುವಿರಿ. ಸಮಸ್ಯೆಗಳು ಪರಿಹಾರ ಕಾಣುವವು. ಸ್ಥಿರಾಸ್ತಿ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಯ.

ಮಿಥುನ

ಹೊಸ ಯೋಜನೆಗಳಿಗೆ ಉತ್ಸಾಹ ಮೂಡುವುದು. ಶುಭಕಾರ್ಯಗಳ ಸಂಕಲ್ಪ ಈಡೇರಿ ಸಂತಸ. ತೃಪ್ತಿದಾಯಕ ಕೌಟುಂಬಿಕ ಜೀವನ. ಮಹಿಳೆಯರಿಗೆ ಗೌರವ ಪ್ರಾಪ್ತಿ.

ಕಟಕ

ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ ಸಾಧ್ಯತೆ. ಕುಟುಂಬದ ಹಿರಿಯರ ಮನೋಭಿಲಾಷೆಗಳು ಈಡೇರುವವು. ಆರ್ಥಿಕ ಸಂಪನ್ಮೂಲಗಳ ಅಭಿವೃದ್ಧಿಯಿಂದಾಗಿ ಸಂತೃಪ್ತಿ.

ಸಿಂಹ

ವೈಯುಕ್ತಿಕ ಜೀವನದಲ್ಲಿ ಅಭಿವೃದ್ಧಿ. ಸಾಮಾಜಿಕ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಧಾನ್ಯಾಭಿವೃದ್ಧಿ. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ. ಸಂಗಾತಿಯಿಂದ ಸಂತಸದ ಸುದ್ದಿ.

ಕನ್ಯಾ

ಪರಸ್ಪರ ಭಿನ್ನಾಭಿಪ್ರಾಯಗಳು ಪರಿಹಾರವಾಗಿ ಸುಖದಾಂಪತ್ಯ ಜೀವನಕ್ಕೆ ನಾಂದಿ. ಶುಭ ಸಮಾರಂಭಗಳಲ್ಲಿ ಭಾಗಿ. ಕೆಲಸ ಕಾರ್ಯಗಳಲ್ಲಿ ಆತುರ ಬೇಡ. ವ್ಯವಹಾರದಲ್ಲಿ ಆರ್ಥಿಕ ನಷ್ಟ ಸಾಧ್ಯತೆ.

ತುಲಾ

ಸರ್ಕಾರಿ ನೌಕರಿಯಲ್ಲಿರುವವರಿಗೆ ಅನುಕೂಲ. ಹೊಸ ಯೋಜನೆಯನ್ನು ನಿರೂಪಿಸುವಲ್ಲಿ ಯಶಸ್ಸು. ಅನಾವಶ್ಯಕ ವ್ಯವಹಾರಗಳಲ್ಲಿ ತಲೆ ಹಾಕದಿರಿ. ಮಾತೃವರ್ಗದವರಿಂದ ಸಹಕಾರ.

ವೃಶ್ಚಿಕ

ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಪ್ರಗತಿ. ಮಾತಿನಿಂದ ಗೌರವ ಪ್ರಾಪ್ತಿ. ಸರ್ಕಾರದಿಂದಾಗುವ ಕೆಲಸ ಕಾರ್ಯಗಳು ಸುಗಮ. ಉದ್ಯೋಗ ನಿಮಿತ್ತ ದೂರ ಪ್ರಯಾಣ ಯೋಗ.

ಧನು

ಸಾಮಾಜಿಕ ಕಾರ್ಯಕರ್ತರಿಗೆ ಇರಿಸುಮುರಿಸು ಸಾಧ್ಯತೆ. ಮನೆಯಲ್ಲಿ ವಸ್ತ್ರಾಭರಣ ಖರೀದಿ ಸಾಧ್ಯತೆ. ಶತ್ರುಬಾಧೆ ಉಲ್ಬಣ. ವಿದ್ಯಾಭ್ಯಾಸಕ್ಕಾಗಿ ದೂರಪ್ರಯಾಣ. ಆರೋಗ್ಯದ ಬಗ್ಗೆ ಎಚ್ಚರ.

ಮಕರ

ದೂರ ಪ್ರಯಾಣದಲ್ಲಿ ಧನ ನಷ್ಟವಾಗುವುದು. ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿ. ಪ್ರಿಯ ವ್ಯಕ್ತಿಗಳ ಆಗಮನ. ಮಕ್ಕಳ ಶ್ರೇಯೋಭಿವೃದ್ಧಿಯಿಂದಾಗಿ ಮಾನಸಿಕ ತೃಪ್ತಿ

ಕುಂಭ

ಇಂದಿನ ಮಟ್ಟಿಗೆ ದೂರದ ಪ್ರಯಾಣಗಳನ್ನು ಮುಂದೂಡುವುದು ಸೂಕ್ತ. ಸಂಗಾತಿಯ ಸಹಕಾರದಿಂದಾಗಿ ಸಾಂಸಾರಿಕ ನೆಮ್ಮದಿ. ಅಪೇಕ್ಷಿತರಿಗೆ ವಿವಾಹ ಸಂಬಂಧಗಳು ಕೂಡಿಬರಲಿವೆ.

ಮೀನ

ಅನಾವಶ್ಯಕ ಮಾತುಗಳಿಂದಾಗಿ ನಿಷ್ಟೂರಕ್ಕೊಳಗಾಗುವ ಸಾಧ್ಯತೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ. ಇಷ್ಟದೇವತಾ ದರ್ಶನದಿಂದ ನೆಮ್ಮದಿ.

ಫೆಬ್ರವರಿ 24, ಬುಧವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ
ಉತ್ತರಾಯಣ, ಶ್ರೀ ಶಾರ್ವರಿ ನಾಮ ಸಂವತ್ಸರ,
ಮಾಘ ಮಾಸ, ಶುಕ್ಲ ಪಕ್ಷ, ಶಿಶಿರ ಋತು,
ತಿಥಿ: ದ್ವಾದಶಿ,
ನಕ್ಷತ್ರ: ಪುನರ್ವಸು,
ವಾರ: ಬುಧವಾರ ರಾಹುಕಾಲ: 12.37 ರಿಂದ 2.06
ಗುಳಿಕಕಾಲ: 11.09 ರಿಂದ 12.37
ಯಮಗಂಡಕಾಲ: 8.12 ರಿಂದ 9.40

ಮೇಷ: ವಾಸ ಗೃಹದಲ್ಲಿ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಯತ್ನ ಕಾರ್ಯವಿಳಂಬ, ನೌಕರಿಯಲ್ಲಿ ಬಡ್ತಿ.

ವೃಷಭ: ಕುಟುಂಬ ಸೌಖ್ಯ, ಬಂಧು ಮಿತ್ರರ ಬೇಟಿ, ಆರೋಗ್ಯದಲ್ಲಿ ಏರುಪೇರು, ಸಂತಾನ ಪ್ರಾಪ್ತಿ, ಮಾನನಷ್ಟ.

ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖ ಭೋಜನ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ.

ಕಟಕ: ಈ ದಿನದ ಕೆಲಸಗಳಲ್ಲಿ ಲಾಭ, ಚಂಚಲ ಮನಸ್ಸು, ಮನಸ್ಥಾಪ, ಷೇರು ವ್ಯವಹಾರಗಳಲ್ಲಿ ಲಾಭ.

ಸಿಂಹ: ಅಧಿಕಾರಿಗಳಲ್ಲಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ, ಋಣಭಾದೆ, ದಾಂಪತ್ಯದಲ್ಲಿ ಪ್ರೀತಿ, ಹಿತಶತ್ರುಗಳಿಂದ ತೊಂದರೆ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ, ಮನಸ್ಸಿಗೆ ಚಿಂತೆ.

ತುಲಾ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಖರೀದಿ ಅವಕಾಶ.

ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖ ಭೋಜನ, ದೂರ ಪ್ರಯಾಣ.

ಧನಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ ಭೋಜನ, ಮನ ಶಾಂತಿ, ಮಹಿಳೆಯರಿಗೆ ಶುಭ.

ಮಕರ: ಹಿರಿಯರಿಗೆ ಗೌರವ, ಕಾರ್ಯಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಅನಾರೋಗ್ಯ.

ಕುಂಭ: ವಿರೋಧಿಗಳಿಂದ ಸಹಾಯ, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ, ಕಲಾಕಾರರಿಗೆ ಒಳ್ಳೆಯ ಸಮಯ.

ಮೀನ: ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಕೆಟ್ಟ ಆಲೋಚನೆಗಳನ್ನು ಕೈ ಬಿಡಿ, ತಾಳ್ಮೆ ಅಗತ್ಯ.

ಸುಳ್ಳು ಸುದ್ದಿ ಹರಡುವುದರಲ್ಲಿ ಸಿದ್ಧರಾಮಯ್ಯ ಎತ್ತಿದ ಕೈ : ಜಿಲ್ಲಾ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಜನಪರ ಆಡಳಿತ ಹಾಗೂ ವಿನೂತನ ಯೋಜನೆಗಳಿಂದ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದಿನದಿಂದ ದಿನಕ್ಕೆ ಕಾಂಗ್ರೆಸ್ ಅಧಪತನವನ್ನು ಕಂಡು ಹತಾಶೆಯ ಮನೋಭಾವದಿಂದ ಕಂಡ ಕಂಡಲ್ಲಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರು ಎನಿಸಿಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಹೇಳಿದೆ.

ರೈತರ ಆದಾಯ ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತಸ್ನೇಹಿ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಶ್ರಮಿಸಿದರೆ, ಕಾಂಗ್ರೆಸ್ ತನ್ನ ದೇಶ ವಿರೋಧಿ ನಡೆಯಿಂದ ರೈತರ ದಾರಿ ತಪ್ಪಿಸುವ ದುಷ್ಕೃತ್ಯದಲ್ಲಿ ನಿರತವಾಗಿದೆ. ನೈಜ ರೈತರಿಗೆ ಕೃಷಿ ಕಾಯ್ದೆಯ ಪರಿಣಾಮವಾಗಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ದೊರೆಯುವ ಜೊತೆಗೆ ನೇರ ಮಾರುಕಟ್ಟೆ, ಬೆಂಬಲ ಬೆಲೆ ಇತ್ಯಾದಿ ಸೌಲಭ್ಯಗಳಿಂದ ಅನುಕೂಲವಾಗಿದೆ. ದೇಶದ ರಾಜಧಾನಿಯಲ್ಲಿ ರೈತ ಪ್ರತಿಭಟನೆಯ ಹೆಸರಲ್ಲಿ ಮಧ್ಯವರ್ತಿಗಳು, ನಕಲಿ ರೈತರು ಕೂಡಾ ಸೇರಿಕೊಂಡು ಯಾವ ರೀತಿಯ ದುಸ್ಸಾಹಸ ಮೆರೆದಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ.

ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಿದ್ದು ಪ್ರಸ್ತುತ ನಡೆಸುತ್ತಿರುವ ಜನಧ್ವನಿ ಪಾದಯಾತ್ರೆ ಪಕ್ಷದ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟವಷ್ಟೇ. ರಾಜ್ಯದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ನೀಡಿದ್ದ ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೊರೋನಾ ಸಮರ್ಥ ನಿರ್ವಹಣೆಯ ಜೊತೆಗೆ ರೈತಪರ ಕೃಷಿ ಕಾಯ್ದೆ ಜಾರಿಗೊಂಡಿದೆ. ಭ್ರಷ್ಠಾಚಾರ ಹಗರಣಗಳ ಕೂಪದಲ್ಲಿ ಮಿಂದೆದ್ದಿರುವ ಕಾಂಗ್ರೆಸ್ ವಿನಾಕಾರಣ ಬಿಜೆಪಿ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವುದು ಆ ಪಕ್ಷದ ನಾಯಕರ ಹಳೇ ಚಾಳಿಯಾಗಿದೆ.

ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಂಡಿದ್ದು ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ಕೇಂದ್ರ ಸರಕಾರ ಭರಿಸುತ್ತಿದ್ದು ರಾಜ್ಯದ ಪಾಲು ರೂ.3 ಮಾತ್ರ. ಆದಾಗ್ಯೂ ಅನ್ನಭಾಗ್ಯ ಯೋಜನೆಯ ಪುಕ್ಕಟೆ ಪ್ರಚಾರ ಪಡೆದದ್ದು ಮಾತ್ರ ಮಾಜಿ ಸಿ.ಎಂ. ಸಿದ್ಧರಾಮಯ್ಯ. ದೇಶದ ಪ್ರಧಾನಿಗೆ ಗೌರವ ಕೊಡಲಾಗದ ವಿರೋಧಿಗಳು ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದೆ ತೇಜೋವಧೆಯ ವಿಫಲ ಯತ್ನದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ.

ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಗುಣವಾಗಿ ದೇಶದ ಕೋಟ್ಯಾಂತರ ಜನತೆಯ ಶೃದ್ಧಾ ಕೇಂದ್ರವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ವಿಚಾರದಲ್ಲೂ ಸಿದ್ಧರಾಮಯ್ಯ ಅಪಸ್ವರ ಎತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ. ಅಧಿಕಾರ ಮತ್ತು ಸ್ವಯಂ ಸ್ವಾರ್ಥ ಸಾಧನೆಗಾಗಿ ಧರ್ಮ ಜಾತಿಗಳ ನಡುವೆ ಕಂದಕ ಸೃಷ್ಠಿಸಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ಧರಾಮಯ್ಯ ನವರಿಂದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹಾಗೂ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ23, ಮಂಗಳವಾರ , 2021 ; ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ದಿನಾಂಕ :Tuesday, 23 Feb 2021. ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 11 ಸಲುವ ಮಾಘ ಶುದ್ಧ ಏಕಾದಶಿ 28 ಗಳಿಗೆದಿನ ವಿಶೇಷ :ಸರ್ವೈಕಾದಶಿನಿತ್ಯ ನಕ್ಷತ್ರ :ಆರ್ದ್ರಾ 14 ಗಳಿಗೆಮಹಾ ನಕ್ಷತ್ರ :ಶತಭಿಷಾಋತು :ಶಿಶಿರರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.36 ಗಂಟೆಸೂರ್ಯೋದಯ :6.53 ಗಂಟೆ

ಮೇಷ

ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿಯಾಗಿ ಲಾಭ ದೊರಕಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಆರೋಗ್ಯದಲ್ಲಿ ಸುಧಾರಣೆ.

ವೃಷಭ

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲ ನೀಡುವುದರೊಂದಿಗೆ ಹಣಕಾಸಿನ ಅನುಕೂಲತೆಗಳು ದೊರಕಲಿದೆ. ಶುಭದ ಆಶಾಕಿರಣ ಮೂಡಿಬರಲಿದೆ. ಬಂಧುಗಳಿಂದ ಉತ್ತಮ ಸಹಕಾರ ದೊರಕಲಿದೆ.

ಮಿಥುನ

ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ನಿರೀಕ್ಷಿಸಬಹುದು. ಭವಿಷ್ಯಕ್ಕೆ ಸಂಬಂಧಿಸಿದ ಹಲವಾರು ಉತ್ತಮ ಮಾರ್ಗಗಳು ಗೋಚರವಾಗಲಿವೆ. ದೀರ್ಘಕಾಲದಿಂದ ಚಿಂತಿಸುತ್ತಿರುವ ಕಾರ್ಯವೊಂದು ಕಾರ್ಯರೂಪಕ್ಕೆ ಬರಲಿದೆ. ಸಮಾಧನ ಚಿತ್ತದಿಂದ ವ್ಯವಹರಿಸುವುದು ಉತ್ತಮ.

ಕಟಕ

ಬ್ಯಾಂಕ್, ಸಹಕಾರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಉತ್ತಮ ಸಹಕಾರ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಶಂಸೆಗಳು ನಿಮ್ಮ ಪಾಲಿಗೆ ಬರಲಿವೆ. ಮಹಿಳೆಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯದ ಸಾಧ್ಯತೆ.

ಸಿಂಹ

ಹೊಸದಾಗಿ ಆರಂಭಿಸುವ ಕೆಲಸ ಕಾರ್ಯಗಳು ನಿರ್ವಿಘ್ನದಾಯಕವಾಗಿ ನಡೆಯಲಿದ್ದು ಉತ್ತಮ ಫಲಿತಾಂಶ ನೀಡಲಿದೆ. ವಿದ್ಯಾರ್ಥಿಗಳಿಗೆ ಅದೃಷ್ಟ ಒಲಿದು ಬರಲಿದೆ. ಮನೋರಂಜನೆಗಾಗಿ ಹೆಚ್ಚಿನವೆಚ್ಚ ಭರಿಸಬೇಕಾದೀತು.

ಕನ್ಯಾ

ವ್ಯಾಪಾರದಲ್ಲಿ ಲಾಭ ಹೊಂದಲಿದ್ದೀರಿ. ಮನಸ್ಸಿಗೆ ನೆಮ್ಮದಿ. ಕೆಲಸ ಕಾರ್ಯಗಳಲ್ಲಿ ಮುನ್ನಡೆ ಹಾಗೂ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಸಂಪನ್ಮೂಲಗಳನ್ನು ಹುಡುಕುವ ಭರದಲ್ಲಿ ಎಚ್ಚರಿಕೆಯ ನಡೆ ಅಗತ್ಯ.

ತುಲಾ

ನಿಮ್ಮ ಪಾಲಿನ ಕೆಲಸ ಕಾರ್ಯಗಳು ಸರಾಗವಾಗಿ ನಿರ್ವಹಣೆಯಾಗಲಿದೆ. ದೂರದೂರುಗಳಿಗೆ ಪ್ರಯಾಣ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ. ಮಕ್ಕಳ ನಡವಳಿಕೆಗಳ ಬಗ್ಗೆ ಗಮನ ಅಗತ್ಯ ಎನಿಸುತ್ತಿದೆ.

ವೃಶ್ಚಿಕ

ಆರ್ಥಿಕ ಸ್ಥಿರತೆಯಿಂದಾಗಿ ನೆಮ್ಮದಿ. ನೆರೆಹೊರೆಯವರೊಂದಿಗೆ ಮಧುರ ಬಾಂಧವ್ಯ. ವಿದೇಶದಲ್ಲಿರುವ ಕುಟುಂಬದಿಂದ ಸುವಾರ್ತೆ. ಮಾತೃವರ್ಗದವರ ಸಮಾಗಮ.

ಧನು

ವೈವಾಹಿಕ ವ್ಯವಹಾರಗಳಲ್ಲಿ ಬಂಧು ಮನ್ನಣೆ ದೊರಕಲಿದೆ. ವೈಯಕ್ತಿಕ ಬದುಕಿನಲ್ಲಿ ಹಿತಕರ ಬದಲಾವಣೆ ಕಂಡುಬರಲಿದೆ. ಸಾಮಾಜಿಕ ಬದುಕು ಸರಾಗ. ವಿದ್ಯಾರ್ಥಿಗಳಿಗೆ ಹುಮ್ಮಸ್ಸು ತರುವಂತಹ ವಾತಾವರಣ ಮೂಡಲಿದೆ.

ಮಕರ

ಉದ್ಯೋಗದಲ್ಲಿ ಒಳ್ಳೆಯ ಹೆಸರು. ದೂರದ ಊರಿಗೆ ವರ್ಗಾವಣೆ ಸಾಧ್ಯತೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಕೊಳ್ಳುವಿರಿ.

ಕುಂಭ

ರಚನಾತ್ಮಕ ಕಾರ್ಯಕ್ರಮಗಳಿಗೆ ವೆಚ್ಚ ಭರಿಸಬೇಕಾದೀತು. ಅಣ್ಣನ ಸಹಕಾರದಿಂದ ನೆಮ್ಮದಿ ಹೊಂದಲಿದ್ದೀರಿ. ಸ್ವತ್ತು ವ್ಯವಹಾರಗಳ ಬಗ್ಗೆ ಸೋದರರೊಡನೆ ಚರ್ಚೆ ಮಾಡಲಿದ್ದೀರಿ. ಕುಟುಂಬದಲ್ಲಿ ಆರೋಗ್ಯಕರ ಬದಲಾವಣೆ.

ಮೀನ

ಪುತ್ರ ಸಮಸ್ಯೆ ಪರಿಹಾರ ಮಾನಸಿಕ ಶಾಂತಿ ದೊರಕಲಿದೆ. ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮಹಿಳೆಯರ ಮಾನಸಿಕ ನೆಮ್ಮದಿ ಕದಡುವ ಪ್ರಸಂಗ ಎದುರಾದೀತು.

Design a site like this with WordPress.com
Get started