ವಾಟ್ಸ್ ಆ್ಯಪ್ ಹೇಗೆ ದುಡ್ಡು ಮಾಡುತ್ತೆ ಅಂತ ನಿಮ್ಗೆ ಗೊತ್ತಾ?

ವಾಟ್ಸ್ಆ್ಯಪ್ ಅತ್ಯಂತ ವೇಗವಾಗಿ ಸಂದೇಶ ರವಾನೆ ಮಾಡುತ್ತದೆ. ವಾಟ್ಸ್ಆ್ಯಪ್ ಬಳಕೆ ಇಲ್ಲದೆ ಸಾಧ್ಯವೇ ಇಲ್ಲ ಎಂಬುವಷ್ಟರಮಟ್ಟಿಗೆ ಅದು ನಮ್ಮ ಮೇಲೆ ಪ್ರಭಾವ ಬೀರಿದೆ. ಆದರೆ,‌ನಾವು ಈ ಆ್ಯಪ್ ನಲ್ಲಿ ಜಾಹಿರಾತು ಕಾಣಲ್ಲ….! ಹಾಗಾದ್ರೆ ವಾಟ್ಸಪ್ ಗೆ ದುಡ್ಡು ಹೇಗೆ ಬರುತ್ತೆ? ಆರಂಭದಲ್ಲಿ ವಾರ್ಷಿಕ ಶುಲ್ಕ ಪಾವತಿ ವಿಧಾನವಿತ್ತು. ಆದರೆ , ಫೇಸ್ ಬುಕ್ ಖರೀದಿ ಮಾಡಿದ ಬಳಿಕ ಅದೂ ಸಹ ಇಲ್ಲ…!ವಾಟ್ಸ್ಆ್ಯಪ್ ಅನ್ನು ಫೇಸ್ ಬುಕ್ ಕೊಂಡಿದ್ದು19 ಬಿಲಿಯನ್ ಡಾಲರ್ ಗೆ. ಇಷ್ಟೊಂದು ದೊಡ್ಡಮೊತ್ತಕ್ಕೆ ಕೊಂಡಿದೆ ಅಂದ್ರೆContinue reading “ವಾಟ್ಸ್ ಆ್ಯಪ್ ಹೇಗೆ ದುಡ್ಡು ಮಾಡುತ್ತೆ ಅಂತ ನಿಮ್ಗೆ ಗೊತ್ತಾ?”

ಮಾರಕ ‘ಕೊರೊನಾ’ ಸೋಂಕಿಗೆ ‘TV-5’ ಪತ್ರಕರ್ತ ಸಾವು

   ಕಿಲ್ಲರ್ ಕೊರೊನಾ ಸೋಂಕಿಗೆ ತೆಲುಗಿನ ಸುದ್ದಿವಾಹಿನಿ ಟಿವಿ 5 ಪತ್ರಕರ್ತ ದಾರುಣವಾಗಿ ಸಾವನ್ನಪ್ಪಿದ ಘಟನೆ ಹೈದರಾಬಾದ್ ನಲ್ಲಿ ಇಂದು  ನಡೆದಿದೆ. ಕೊರೊನಾ ಶಂಕೆ ಹಿನ್ನೆಲೆ ಪತ್ರಕರ್ತ ಮನೋಜ್ ಕುಮಾರ್ ಅವರನ್ನು ಹೈದರಾಬಾದ್ ನ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ನಿನ್ನೆಯಷ್ಟೇ ಅವರ ಸ್ವಾಬ್ ಮಾದರಿಯ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು, ಒಂದೇ ದಿನದ ಅಂತರದಲ್ಲಿ ಮನೋಜ್ ಕುಮಾರ್ ಬಲಿಯಾಗಿದ್ದಾರೆ. ಇವರು ಬೆಲ್ಯಾಟರಲ್ ನ್ಯುಮೋನಿಯಾ ಮತ್ತು ಕೋವಿಡ್ 19 ನಿಂದ ಸಾವನ್ನಪ್ಪಿದ್ದಾರೆ ಎಂದು ಹೈದರಾಬಾದ್Continue reading “ಮಾರಕ ‘ಕೊರೊನಾ’ ಸೋಂಕಿಗೆ ‘TV-5’ ಪತ್ರಕರ್ತ ಸಾವು”

ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್

 ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಶಿಕ್ಷಕರು ಜೂ.8 ರಿಂದ ಶಾಲಾ ಕಛೇರಿಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ. ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಜೂ.8ರಂದು ಶಾಲೆಗೆ ಹಾಜರಾಗಿ ಶಾಲೆ ಪುನರಾರಂಭದ ಕುರಿತು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು,  ಹಾಗೆಯೇ ರಾಜ್ಯಾದ್ಯಂತ ದೂರದ ಊರುಗಳಿಂದ ಬರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಜೂನ್ 8ರಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ.

ಜೂನ್ 07: ಇಂದು ಸಿಟಿಬಸ್ ಸಂಚಾರ ಸ್ಥಗಿತ

ಜನ ಸಂಚಾರ ವಿರಳ ಹಿನ್ನೆಲೆ ಉಡುಪಿ: ನಗರದಲ್ಲಿ ಜನ ಸಂಚಾರ ವಿರಳ ಹಿನ್ನೆಲೆಯಲ್ಲಿ ಜೂನ್ 7 ರಂದು ಸಿಟಿಬಸ್ ಸಂಚಾರ ಸ್ಥಗಿತಕ್ಕೆ ಬಸ್ ಮಾಲಕರು ನಿರ್ಧರಿಸಿದ್ದಾರೆ. ಕಳೆದ ಭಾನುವಾರವೂ ಸಿಟಿಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು, ಆದ್ದರಿಂದ ಇಂದು( ಜೂನ್ 7 ರಂದು) ನಗರದಲ್ಲಿ ಸಂಚರಿಸುವ 23 ಬಸ್‌ಗಳು ರಸ್ತೆಗೆ ಇಳಿಯುದಿಲ್ಲ ಎಂದು ಬಸ್ ಮಾಲಕರ ಸಂಘದ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಸಿಟಿ ಬಸ್ ಶೇ.15 ರಷ್ಟು ಟಿಕೆಟ್ ದರ ಏರಿಸಿ ನಗರದಲ್ಲಿContinue reading “ಜೂನ್ 07: ಇಂದು ಸಿಟಿಬಸ್ ಸಂಚಾರ ಸ್ಥಗಿತ”

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ….

ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆContinue reading “ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ….”

ಜೂನ್ 07,2020 ಭಾನುವಾರ ಇಂದಿನ ರಾಶಿ ಫಲ

ಮೇಷ ಮನೆಯಲ್ಲಿ ಅತ್ಯಂತ ಗಡಿಬಿಡಿಯ ದಿನವಾಗುವ ಸಾಧ್ಯತೆ. ತಾಳ್ಮೆ ಕಳೆದುಕೊಳ್ಳದಿರುವುದು ಒಳಿತು. ಮಕ್ಕಳ ವಿಚಾರದಲ್ಲಿ ಅತ್ಯಂತ ವಿವೇಕಯುತವಾಗಿ ವ್ಯವಹರಿಸಿದಲ್ಲಿ ಹಿರಿತನಕ್ಕೊಂದು ಗೌರವ ಪಡೆಯುವಿರಿ. ವೃಷಭ ನಿಮ್ಮ ಬೇಜವಾಬ್ದಾರಿತನದಿಂದಾಗಿ ವ್ಯವಹಾರದಲ್ಲಿ ಕುಂಠಿತವಾಗುವ ಸಾಧ್ಯತೆ. ಆದಾಯದಲ್ಲಿಯೂ ಸ್ವಲ್ಪಮಟ್ಟಿನ ಹಿನ್ನಡೆ. ವಾಹನ ವ್ಯವಹಾರದಲ್ಲಿರುವವರಿಗೆ ಆದಾಯದಲ್ಲಿ ಚೇತರಿಕೆಯಾಗಲಿದೆ. ಮಿಥುನ ನಿಮ್ಮ ಕಾರ್ಯದಕ್ಷತೆಯಿಂದಾಗಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ಒಟ್ಟಾರೆ ಸಂತಸದ ದಿನವಾಗಿಲಿದೆ. ಕಟಕ ಬಹುದಿನಗಳ ಕನಸಿನ ಯೋಜನೆಯೊಂದು ಸುಲಭವಾಗಿ ಕೈಗೂಡುವ ಸಾಧ್ಯತೆ ಕಂಡುಬರುತ್ತಿದೆ. ಅನಿರೀಕ್ಷಿತ ದೂರ ಪ್ರಯಾಣದContinue reading “ಜೂನ್ 07,2020 ಭಾನುವಾರ ಇಂದಿನ ರಾಶಿ ಫಲ”

ಕರಾವಳಿ ತತ್ತರ: ರಾಜ್ಯದಲ್ಲಿ ಇಂದು ಕೂಡಾ ಕೊರೋನಾ ಸುನಾಮಿ

ಬೆಂಗಳೂರು: ರಾಜ್ಯಾದ್ಯಂತ ಮಹಾಮಾರಿ ವೈರಲ್ ವೈರಸ್ ಮತ್ತೆ ಕರುನಾಡನ್ನು ಕಾಡುತ್ತಿದ್ದು ಇಂದು378 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಕಡಲತಡಿಯ ಉಡುಪಿ ದಕ್ಷಿಣಕನ್ನಡದಲ್ಲೂ ಮಹಾಮಾರಿ ವೈರಸ್ ನ ಅಲೆಗಳು ಬೀಸಿದ್ದು ಕರಾವಳಿಗರನ್ನು ಕಂಗೆಡಿಸಿದೆ.ಯಾದಗಿರಿ,ಕಲಬುರ್ಗಿ, ಬೆಂಗಳೂರಿನಲ್ಲೂ ಮಹಾಮಾರಿ ರುದ್ರನರ್ತನ ತಾಂಡವಾಡುತ್ತಿದ್ದು ರಾಜ್ಯಾದ್ಯಂತ ಐದು ಸಾವಿರದ ಗಡಿದಾಟಿ ಮುನ್ನುಗಿದೆ. ಕರ್ನಾಟಕದಲ್ಲಿ ಇಂದು378ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ 378ಸೋಂಕಿತರ ಪೈಕಿ 341ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಬಂದವರಾಗಿರುತ್ತಾರೆ ಬೀದರ್ ಹಾಗೂ ವಿಜಯಪುರದಲ್ಲಿ ಕೊರೋನಾ ಮಾಹಾಮಾರಿಗೆ ಇಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆContinue reading “ಕರಾವಳಿ ತತ್ತರ: ರಾಜ್ಯದಲ್ಲಿ ಇಂದು ಕೂಡಾ ಕೊರೋನಾ ಸುನಾಮಿ”

ಮುಂಬೈನಿಂದ ಬಂದ ಯುವತಿಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್

ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿ ಏಳು ದಿನದ ಕ್ವಾರಂಟೈನ್ ಮುಗಿಸಿ ಉದ್ಯಾವರದ ತನ್ನ ಮನೆಗೆ ಬಂದಿದ್ದ 26 ವರ್ಷದ ಮಹಿಳೆಗೆ ಇದೀಗ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಹಾಗಾಗಿ ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಉದ್ಯಾವರದ ಕಲಾಯಿಬೈಲಿನ ವಿವಾಹಿತ ಮಹಿಳೆ ಸರಕಾರಿ ಆದೇಶದ 7 ದಿನದ ಕ್ವಾರಂಟೈನ್ ಮುಗಿಸಿ, ಉದ್ಯಾವರದ ತನ್ನ ಮನೆಗೆ ಆಗಮಿಸಿದ್ದರು. ಆದರೆ ಇದೀಗ ಆ ಮಹಿಳೆಯಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದ್ದು, ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಉದ್ಯಾವರContinue reading “ಮುಂಬೈನಿಂದ ಬಂದ ಯುವತಿಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್”

ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ 66 ಮತ್ತು 169ಎ ನಲ್ಲಿ , ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸದOತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಳೆಗಾಲದಲ್ಲಿ ರಾಷ್ಟಿಯ ಹೆದ್ದಾರಿ 66 ರಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವ ಸಾದ್ಯತೆಗಳಿದ್ದು, ಅಂತಹ ಸ್ಥಳಗಳನ್ನು ಕೂಡಲೇ ಗುರುತಿಸಿ ಹೆದ್ದಾರಿಯಲ್ಲಿ ನೀರುContinue reading “ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್”

ಕೊರೋನಾ ವಾರಿಯರ್ಸ್ಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರಿಗೆ KMF ಕಿಟ್ ವಿತರಣೆ

ಕೋರೋನಾ ಎಂಬ ಮಹಾಮಾರಿ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ಸ್ಥಿತಿಯ ಬಗ್ಗೆ ಹಾಗೂ ಹೊಂ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಕೋರೋನ ವೈರಸ್ ಸಾಮೂಹಿಕವಾಗಿ ಹರಡು ವುದನ್ನು ತಡೆಗಟ್ಟುವಿಕೆಯಲ್ಲಿ ಇವರ ಪಾತ್ರ ಅವಿಸ್ಮರಣೀಯ. ಇವರ ಈ ಸೇವೆಯನ್ನು ಮನಗಂಡು K.M.F ಮಂಗಳೂರು ಇವರ ವತಿಯಿಂದ ಸುಮಾರು 2600 ನಂದಿನಿ ಉತ್ಪನ್ನಗಳ ವಿಶೇಷ ಕಿಟ್Continue reading “ಕೊರೋನಾ ವಾರಿಯರ್ಸ್ಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರಿಗೆ KMF ಕಿಟ್ ವಿತರಣೆ”

Design a site like this with WordPress.com
Get started