ಶ್ರೀ ಕ್ಷೇತ್ರ ಶೀರೂರು ಮೂಲ ಮಠದಲ್ಲಿ ನಡಯಲಿರುವ ಶ್ರೀರಾಮ ತಾರಕ ಮಹಾಮಂಡಲ ಪೂಜೆಯ ಹಿರಿಯಡ್ಕ ವಲಯದ   ಸಭೆ‌


ಉಡುಪಿ: ಶೀರೂರು ಮೂಲ ಮಠ ಹಿರಿಯಡ್ಕದಲ್ಲಿ ಡಿ. 14 ಮತ್ತು 15 ರಂದು ನಡೆಯಲಿರುವ ಶ್ರೀರಾಮ ತಾರಕ ಮಹಾ ಮಂಡಲ ಪೂಜೆ, ಶ್ರೀರಾಮ ತಾರಕ ಯಾಗ, ಮನ್ಯುಸ್ತುತಿ ಯಾಗ, ವಾಯುಸ್ತುತಿ ಯಾಗ ಹಾಗೂ ದತ್ತಾತ್ರೇಯ ಯಾಗ ಪ್ರಯುಕ್ತ ಪೂರ್ವಭಾವಿ ಸಭೆ ಹಿರಿಯಡ್ಕ ಸುರಭಿ ಸಭಾಭವನಲ್ಲಿ ನಡೆಯಿತು.‌ ಸಭೆಯಲ್ಲಿ ಯಾಗದ ಉದ್ದೇಶ ಹಾಗೂ ಶೀರೂರು ಮಠದಲ್ಲಿ ಮಾಡುವ ಸಂಕಲ್ಪದ ಉದ್ದೇಶ ಶೀರೂರಿಗೂ ಅಯೋಧ್ಯೆಗೂ ಇರುವ ಸಂಬಂಧಗಳ ಬಗ್ಗೆ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಭಟ್ ವಿವರಿಸಿದರು. ಸಂಚಾಲಕರಾದ ಶ್ರೀಕಾಂತ ನಾಯಕ್ ಕಾರ್ಯಕ್ರಮದ ಸ್ವರೂಪ ಹಾಗೂ ಮನೆ ಮನೆ ಗಳಿಗೂ ಹೇಗೆ ಈ ಕಾರ್ಯಕ್ರಮವನ್ನು ಮುಟ್ಟಿಸಬೇಕು ಹಾಗೂ ಹಿಂದೂ ಸಮಾಜ ಜಾತಿ ಮತ ಮರೆತು ರಾಮನ ಕಾರ್ಯದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಸಮಿತಿಯ ಅಧ್ಯಕ್ಷರೂ ಶಾಸಕರೂ ಆದ ಗುರ್ಮೆ ಸುರೇಶ್ ಶೆಟ್ಟಿ ಯವರು ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ತಿಳಿಸಿ ಎಲ್ಲ ಹಿಂದೂ ಬಾಂಧವರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಸಮಿತಿಯ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸರೋಜ ನಾಯಕ್ ಪ್ರಾರ್ಥನೆಗೈದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಹಿರೇಬೆಟ್ಟು, ಶೇಖರ್ ಶೆಟ್ಟಿ ಹಿರಿಯಡ್ಕ, ಸಂಘಟನಾ ಕಾರ್ಯದರ್ಶಿ ಜಿತೇಶ್ ಉಡುಪಿ, ಕೋಶಾಧಿಕಾರಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು. ತುಕಾರಾಮ್ ನಾಯಕ್ ಹಾಗೂ ಶ್ರೀಕಾಂತ ಕಾಮತ್ ಯಾಗದ ಬಗ್ಗೆ ತನ್ನ ಅನಿಸಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೆಲ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಅಧ್ಯಕ್ಷರಾಗಿ ಜಿಯಾನಂದ ಹೆಗ್ಡೆ, ಕಾರ್ಯಾಧ್ಯಕ್ಷರಾಗಿ ದಿಲ್ಲೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಉದಯ ಶೆಟ್ಟಿ ಬೊಮ್ಮರಬೆಟ್ಟು ಹಾಗು ತುಕಾರಾಮ ನಾಯಕ್ ಪೆರ್ಡೂರು ಇವರ ಜವಾಬ್ದಾರಿಯನ್ನು ಸಮಿತಿಯ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಇವರಿಂದ ಘೋಷಿಸಲಾಯಿತು.

Leave a comment

Design a site like this with WordPress.com
Get started