ಶಿಕ್ಷಕ ಪ್ರಶಸ್ತಿ ತಡೆ ಪ್ರಕರಣ: ಶಾಸಕರ ಸಹಿತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು ಖಂಡನೀಯ

ಉಡುಪಿ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಡೆಹಿಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಮಣಿಪಾಲದಲ್ಲಿ ನಡೆದ ಪ್ರತಿಭಟನೆ ಸಂಬಂಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸಹಿತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಂ. ಸುವರ್ಣ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುವುದು ಹಕ್ಕು. ಸರ್ಕಾರ ಸಂವಿಧಾನ ದತ್ತ ಹಕ್ಕನ್ನು ‌ಮೊಟಕುಗೊಳಿಸಲು ಯತ್ನಿಸುತ್ತಿದೆ. ಸರ್ಕಾರವೇ ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಶಿಕ್ಷಕರಿಗಾದ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಪ್ರತಿಭಟಿಸಿರುವ ವಿರುದ್ಧ ಕ್ರಮContinue reading “ಶಿಕ್ಷಕ ಪ್ರಶಸ್ತಿ ತಡೆ ಪ್ರಕರಣ: ಶಾಸಕರ ಸಹಿತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು ಖಂಡನೀಯ”

ಜಲಜ ಪೂಜಾರ್ತಿ, ಬೀಡು ಮಾರ್ಗ, ಅಂಬಲಪಾಡಿ ನಿಧನ

ಅಂಬಲಪಾಡಿ ಗ್ರಾಮದ ಬೀಡು ಮಾರ್ಗ ನಿವಾಸಿ ಶ್ರೀಮತಿ ಜಲಜ ಪೂಜಾರ್ತಿ (74 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಸೆ.9) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.

Design a site like this with WordPress.com
Get started