
ಕೇಂದ್ರ ವಿತ್ತ ಸಚಿವೆ ಮಂಡಿಸಿದ ಕೇoದ್ರ ಬಜೆಟ್ ನೀರಸ ಜಗತ್ತಿಗೆ ‘ಭಾರತ ಒಂದೇ ಭರವಸೆ’ ಎಂಬ ಮಾತಿನಂತೆ ಉತ್ತರದಾಯಿಯಾಗಿ ಮೂಡಿ ಬಂದಿದೆ. ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದ ‘ಅಭಿವೃದ್ಧಿ ಒಂದೇ ಮಂತ್ರ’ ಎಂಬ ದೂರದೃಷ್ಠಿಯ ಬಜೆಟ್ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಫೆಡರಲ್ ಸಿಸ್ಟಮ್‌ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಬಜೆಟ್ ಮಂಡಿಸಲು ನಿಖರವಾದ ದೂರದೃಷ್ಟಿ ಇಟ್ಟುಕೊಂಡ ಸದೃಢ ಸರಕಾರದಿಂದ ಮಾತ್ರ ಸಾಧ್ಯ. 2028-29ನೇ ವರ್ಷಕ್ಕೆ ಪ್ರಪಂಚದ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಬೇಕೆಂದು ಪಣತೊಟ್ಟು, ಆತ್ಮ ನಿರ್ಭರ ಪರಿಕಲ್ಪನೆಯೊoದಿಗೆ ದೇಶದ ರೈತರು, ಸಣ್ಣ ಉದ್ದಿಮೆದಾರರು ಮತ್ತು ಬಡ ಮಧ್ಯಮ ವರ್ಗದವರನ್ನು ಮೇಲೆತ್ತುವ ಉದಾತ್ತ ಯೋಜನೆಯೊಂದಿಗೆ ಮoಡಿಸಿರುವ ಸಂಪೂರ್ಣ ಸ್ವಾವಲಂಬಿ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಆರ್ಥಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಕೆ. ಇವರು ಕೇoದ್ರ ಬಜೆಟನ್ನು ವಿಶ್ಲೇಷಿಸಿ ಮಾಹಿತಿ ನೀಡಿದರು.
*ಬಜೆಟ್ ವಿಶೇಷತೆಗಳು*:
1. ಹೊಸ ಪಾರ್ಲಿಮೆಂಟ್ ಕಟ್ಟಡದಲ್ಲಿ ಮಂಡಿಸಿರುವ ಪ್ರಥಮ ಬಜೆಟ್.
2. ಮೋದಿ ಸರಕಾರದ 2ನೇ ಅವದಿಯ ಕೊನೆಯ ಬಜೆಟ್.
3. ಬಜೆಟ್ ಗಾತ್ರ ರೂ.47.66 ಲಕ್ಷ ಕೋಟಿ.
4. ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆ 5.1% ಮಾತ್ರ.
5. 2023-24 ವರ್ಷದ ಬಜೆಟ್ ಗೆ ಹೋಲಿಸಿದರೆ 9% ಪ್ರಗತಿ.
6. ನಾಲ್ಕು ಪ್ರಮುಖ ಸ್ತರದ ಜನತೆಯನ್ನು ಕೇಂದ್ರೀಕರಿಸಲಾಗಿದೆ:
1. ಗರೀಬ್ (ಬಡವರು)
2. ನಾರಿ (ಮಹಿಳೆಯರು)
3. ಯುವ (ಯುವ ಜನಾಂಗ)
4. ಅನ್ನದಾತ (ರೈತ)
7. ಒಟ್ಟಾರೆ ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದೆ ನೇರವಾಗಿ ದೇಶವನ್ನು ಮೇಲೆತ್ತುವ ಬಜೆಟ್.
*ಬಜೆಟ್‌ಗೆ ಪೂರಕ ಮತ್ತು ಉತ್ತೇಜಿತ ಅಂಶಗಳು*:
ಬಿಜೆಪಿ ಸರಕಾರದ 9 1/2 ವರ್ಷದ ಸಾಧನೆಗಳೇ ಈ ಬಜೆಟ್ ಮಂಡನೆಗೆ ದಾರಿದೀಪ ಮತ್ತು ಮಾನದಂಡ.
1. ದೇಶದ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯೇ ಜರಗುತ್ತಿದೆ. 2023ನೇ ವರ್ಷದಲ್ಲಿ ರೂ.11.760 ಕೋಟಿ ಅಂದರೆ ರೂ.117.60 ಬಿಲಿಯನ್ ಡಿಜಿಟಲ್ ವ್ಯವಹಾರ ಆಗಿದೆ. ಅದೇ 2022ಕ್ಕೆ ರೂ.74 ಬಿಲಿಯನ್ ಇತ್ತು.
2. ಐಎಮ್ಎಫ್ ವರದಿಯಂತೆ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಪ್ರಪಂಚದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮಾತ್ರವಲ್ಲದೆ 2025ನೇ ವರ್ಷಕ್ಕೂ ಅದು ಮುಂದುವರಿಯುತ್ತದೆ.
3. ದೇಶದಲ್ಲಿ ಉಜ್ವಲ ಯೋಜನೆಯಡಿ ಸುಮಾರು 10.15 ಕೋಟಿ ಉಚಿತ ಗ್ಯಾಸ್ ಸಂಪರ್ಕ ಆಗಿದೆ.
4. ದೇಶದಲ್ಲಿ 11.75 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
5. ಸುಮಾರು 48 ಕೋಟಿ ಜನ್‌ಧನ್ ಬ್ಯಾಂಕ್ ಖಾತೆ ತೆರೆಯಲಾಗಿದೆ.
6. ಸುಮಾರು 45 ಕೋಟಿ ಜನತೆಗೆ ಆಯುಷ್ಮಾನ್ ಭಾರತ್ ವಿಮೆ ಪಾವತಿಸಲಾಗಿದೆ.
7. ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಜಿ20 ಸಮ್ಮೇಳನ ನಡೆಸಲಾಗಿದೆ.
8. 80 ಕೋಟಿ ಜನರಿಗೆ ಅನ್ನ ಯೋಜನೆಯಡಿ ಉಚಿತ ಅಕ್ಕಿ ವಿತರಣೆ ಮುಂದುವರಿಸಲಾಗಿದೆ.
9. ಐಎಮ್ಎಫ್ ವರದಿಯಂತೆ ದೇಶದಲ್ಲಿ 23 ಕೋಟಿ ಜನ ಕಡುಬಡತನದ ರೇಖೆಗಿಂತ ಹೊರಬಂದಿದ್ದಾರೆ.
10. ಜಿಎಸ್ಟಿ ಸಂಗ್ರಹ ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿದೆ.
*ಬಜೆಟ್ ಗುರಿ*: ನಾಲ್ಕು ಮುಖ್ಯ ಸ್ತರದ ಜನರನ್ನು ಕೇಂದ್ರಿಕರಿಸಿ ಈ ಬಜೆಟ್ ಮಂಡಿಸಲಾಗಿದೆ.
1. ಗರೀಬ್ (ಬಡವರು)
2. ನಾರಿ (ಮಹಿಳೆಯರು)
3. ಯುವ (ಯುವ ಜನಾಂಗ)
4. ಅನ್ನದಾತ (ರೈತ)
*ಬಡವರಿಗೆ*:
• 78 ಲಕ್ಷ ಮಂದಿ ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಕೊಟ್ಟಿದ್ದು, ಅದನ್ನು ಮುಂದುವರಿಸುವುದು.
• ವಿಶ್ವಕರ್ಮ ಸಾಲ ಯೋಜನೆ ಮುಂದುವರಿಸುವುದು.
• ದಿವ್ಯಾಂಗರಿಗೆ ಸಾಲ ಯೋಜನೆ ಮುಂದುವರಿಸುವುದು.
• ತೃತೀಯ ಲಿoಗಿಗಳಿಗೆ ಸಾಲ ಯೋಜನೆ ಮುಂದುವರಿಸುವುದು.
*ಮಹಿಳೆಯರಿಗೆ*:
• ರೂ.30 ಕೋಟಿ ಮುದ್ರಾ ಸಾಲ ಮಹಿಳೆಯರಿಗೆ ಮೀಸಲು.
• ಲಕ್ಷಪತಿ ಮಹಿಳೆ ಯೋಜನೆ. 1 ಕೋಟಿ ಮಹಿಳೆಯರು ಲಕ್ಷಪತಿಗಳಾಗಿದ್ದಾರೆ.
• 1 ವರ್ಷದ ಒಳಗೆ ಬಡತನ ರೇಖೆಗಿಂತ ಕಡಿಮೆ ಇರುವ 3 ಲಕ್ಷ ಮಹಿಳೆಯರನ್ನು ಲಕ್ಷಪತಿ ಮಾಡುವ ಗುರಿ.
• ಹಳ್ಳಿ ವಸತಿ ಯೋಜನೆಯಲ್ಲಿ 70% ಮಹಿಳೆಯರಿಗೆ ಮೀಸಲು.
*ಯುವಕರಿಗೆ*:
• ಪ್ರಧಾನಮಂತ್ರಿ ಯುವ ಶಾಲೆಗಳು.
• ಯುವಕರಿಗೆ ಸ್ಕಿಲ್ ಇಂಡಿಯಾ ಮಿಷನ್.
. 3000 ಐಟಿಐ ಸ್ಥಾಪಿಸುವ ಗುರಿ.
. 390 ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಗುರಿ.
• ಹಿಂದೆ 20 ರಷ್ಟಿದ್ದ ಚೆಸ್ ಗ್ರಾಂಡ್ ಮಾಸ್ಟರ್ ಈಗ 80ಕ್ಕೆ ಏರಿಕೆ ಆಗಿದೆ.
• ಏಷಿಯನ್ ಗೇಮ್ಸ್ ಮತ್ತು ಒಲಿಂಪಿಕ್ ಗೇಮ್‌ಗೆ ಉತ್ತೇಜನ.
*ಅನ್ನದಾತರಿಗೆ*:
• 11.80 ಕೋಟಿ ಮಂದಿ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯ ವಾರ್ಷಿಕ ರೂ.6,000 ಮುಂದುವರಿಕೆ.
• ಧವಸ ಧಾನ್ಯದಲ್ಲಿ ಆತ್ಮ ನಿರ್ಭರತೆ.
• ನ್ಯಾನೊ ಯೂರಿಯಾದ ಹಾಗೆ ನ್ಯಾನೊ ಡಿಎಪಿ.
• ಹಾಲಿನ ಉತ್ಪತ್ತಿ ಹೆಚ್ಚಿಸಲು ಹಸು ಸಂರಕ್ಷಣೆ ಮಿಸನ್.
ರೈತರ ಉತ್ಪನ್ನದ ಎಮ್ಎಸ್ಪಿ ಹೆಚ್ಚಳ. ಬೆಳೆ ವಿಮೆ ಏರಿಕೆ.
*ಇತರ ಮುಖ್ಯಾಂಶಗಳು*:
1. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಪಿಎಮ್ಎವೈ ಗ್ರಾಮೀಣ ಯೋಜನೆಯಡಿ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡುವುದು.
2. 1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ ತಯಾರಿ ಘಟಕ ಅಳವಡಿಸಿ ತಿಂಗಳಿಗೆ ಉಚಿತ 300 ಯೂನಿಟ್ ವಿದ್ಯುತ್.
3. ಈ ಯೋಜನೆಯಿಂದ ಬಡ ಕುಟುಂಬಕ್ಕೆ ವಾರ್ಷಿಕ ರೂ.15,000 ದಿಂದ ರೂ.18,000 ಉಳಿತಾಯ ಆಗುವಂತೆ ಮಾಡುವುದು.
4. ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಹಣಕಾಸು.
5. ಇನ್ನೂ ಹೆಚ್ಚಿನ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಮಿತಿ ರಚನೆ.
6. 9ರಿಂದ 14 ವರ್ಷದ ಬಾಲಕಿಯರಿಗೆ ಕ್ಯಾನ್ಸರ್ ರೋಗದ ಔಷಧಿ ಉಚಿತ.
7. ಆಯುಷ್ಮಾನ್ ಭಾರತ್ ಯೋಜನೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆರಿಗೆ ವಿಸ್ತರಣೆ.
8. ರಾಷ್ಟ್ರೀಯ ಮತ್ಸ್ಯ ಸಂಪದ ಯೋಜನೆಯಡಿ ರಫ್ತು ಇಮ್ಮಡಿಗೊಳಿಸುವ ಗುರಿ.
9. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್.
10. ರಾಜ್ಯಗಳಿಗೆ 50 ವರ್ಷ ಅವಧಿಯ ಬಡ್ಡಿ ರಹಿತ ಸಾಲ.
11. ಮೂಲ ಸೌಲಭ್ಯಗಳಿಗೆ ರೂ.11,11,111 ಕೋಟಿ ಹಣ ಹೂಡಿಕೆ. ಇದು ಹಿಂದಿನ ವರ್ಷಕ್ಕಿಂತ 11.1% ಹೆಚ್ಚು.
12. ರೈಲ್ವೆಯಲ್ಲಿ 3 ಹೊಸ ಕಾರಿಡಾರ್‌ಗಳ ಸ್ಥಾಪನೆ.
13. 40,000 ರೈಲು ಭೋಗಿಗಳನ್ನು ‘ವಂದೇ ಭಾರತ್’ ರೈಲು ಭೋಗಿಗಳಾಗಿ ಪರಿವರ್ತನೆ ಗುರಿ.
14. 149 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆಯ ಗುರಿ.
15. 517 ಹೊಸ ವಿಮಾನ ದಾರಿಗಳು.
16. 1,000 ಹೊಸ ವಿಮಾನಗಳ ಚಾಲನೆಯ ಗುರಿ.
17. ರಾಜ್ಯಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ.
18. ಲಕ್ಷದ್ವೀಪ ಸಹಿತ ಎಲ್ಲಾ ಪ್ರವಾಸೋದ್ಯಮ ಕೇoದ್ರಗಳ ಅಭಿವೃದ್ಧಿ.
19. ವಿದೇಶಿ ನೇರ ಹೂಡಿಕೆಗೆ ‘ಫಸ್ಟ್ ಡೆವಲಪ್ ಇಂಡಿಯಾ’ ಯೋಜನೆ. ‘ಅಮೃತ ಕಾಲ’ದಿಂದ ‘ಕರ್ತವ್ಯ ಕಾಲ’ ಯೋಜನೆ.
20. ಆದಾಯ ತೆರಿಗೆ ದರ ಹಾಗೂ ಆದಾಯ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
21. 2009-10ರ ವರೆಗೆ ರೂ.25,000/- ವರೆಗಿನ ಆದಾಯ ತೆರಿಗೆ ಬಾಕಿ ಇದ್ದರೆ ಅದನ್ನು ಹಿಂಪಡೆಯಲಾಗುವುದು ಮತ್ತು 2014-15ರವರೆಗೆ ರೂ.10,000 ವರೆಗಿನ ಆದಾಯ ತೆರಿಗೆ ಬಾಕಿ ಇದ್ದರೆ ಅದನ್ನು ಹಿಂಪಡೆಯಲಾಗುವುದು.
ಒಟ್ಟಾರೆಯಾಗಿ ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದೆ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿರುವ ದೂರದರ್ಶಿತ್ವದ ಬಜೆಟ್ ಇದಾಗಿದೆ ಎಂದು ದಿವಾಕರ ಶೆಟ್ಟಿ ಕೆ. ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರಣಂಕಿಲ ಶ್ರೀಶ ನಾಯಕ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.