
ಕಾಪು: ಉದ್ಯಾವರ ಗರಡಿ ರಸ್ತೆಯ ಸಮೀಪದ ನಮ್ಮ ಕಾರ್ಯಕರ್ತರಾಗಿರುವ ರಕ್ಷಿತ್ ಕೋಟ್ಯಾನ್ ರವರ ಮನೆಗೆ ನುಗ್ಗಿ ಧಾಂಧಲೆ ನಡೆಸಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು ಖಂಡನೀಯ. ಈ ಕುರಿತಂತೆ ಪೋಲೀಸರು ಮೂರು ಜನರನ್ನು ಬಂಧಿಸಿದ್ದು ಇದರ ಮಾಸ್ಟರ್ ಮೈಂಡ್ ಉದ್ಯಾವರದ ಕಾಂಗ್ರೆಸ್ ಕಾರ್ಯಕರ್ತ ಎನ್ನುವ ಬಗ್ಗೆ ಬಂಧಿತರು ಹೇಳಿಕೆ ಕೊಟ್ಟಿದ್ದು ಪೋಲೀಸರು ಈ ಕೂಡಲೇ ಅವರನ್ನು ಬಂಧಿಸಬೇಕು. ಇಂತಹ ಗೂಂಡಾಗಿರಿಗಳಿಂದ ನಮ್ಮ ಕಾರ್ಯಕರ್ತರನ್ನು ಬೆದರಿಸಬಹುದು ಎಂದು ಕಾಂಗ್ರೆಸ್ ಅಂದುಕೊಂಡರೆ ಅದು ಅವರ ಭ್ರಮೆ. ತಪ್ಪಿತಸ್ಥ ಯಾರೇ ಇರಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ತೀವ್ರವಾದ ಪ್ರತಿಭಟನೆ ನಡೆಸಬೇಕಾದೀತು ಎಂದು ಕಾಫು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.