ಮಾ.12 : ಕೋಟೇಶ್ವರದಲ್ಲಿ ಜಿಲ್ಲಾ ಮಹಿಳಾ ಸಮಾವೇಶ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ

News By: ಜನತಾಲೋಕವಾಣಿನ್ಯೂಸ್ ಉಡುಪಿ: ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಮಹಿಳಾ ಸಮಾವೇಶವು ಮಾ.12 ರವಿವಾರ ಮಧ್ಯಾಹ್ನ 3.00 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೇಶ್ವರದ ಕುರುಕ್ಷೇತ್ರ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಡಾ! ಪ್ರಮೋದ್ ಸಾವಂತ್ ರವರು ಬೃಹತ್ ಮಹಿಳಾ ಸಮಾವೇಶವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ನಟಿ ಹಾಗೂContinue reading “ಮಾ.12 : ಕೋಟೇಶ್ವರದಲ್ಲಿ ಜಿಲ್ಲಾ ಮಹಿಳಾ ಸಮಾವೇಶ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ”

ಮಾ.19 : ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಡುಪಿಗೆ; ಪ್ರಬುದ್ಧರ ಗೋಷ್ಠಿಯಲ್ಲಿ ಭಾಗಿ : ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್ ಉಡುಪಿ: ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ರವರು ಮಾ.19ರಂದು ಉಡುಪಿ ಜಿಲ್ಲೆಗೆ ಬೇಟಿ ನೀಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಮಾ.19 ರವಿವಾರ ಮಧ್ಯಾಹ್ನ 2.00 ಗಂಟೆಗೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ನಡೆಯಲಿರುವ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿಯ ಕೇಂದ್ರೀಯ ವಿದ್ಯಾಲಯದ ಸ್ವಂತ ಕಟ್ಟಡ 26 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಉಡುಪಿಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಒಂಭತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಕೇಂದ್ರ ಸರಕಾರದ ಶಿಕ್ಷಣ ಮತ್ತು ಕೌಶಲ್ಯ ಇಲಾಖೆ ಸುಮಾರು 26 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ. ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಚಾಲನೆಯಲ್ಲಿತ್ತು. ಉಡುಪಿ ಜಿಲ್ಲೆಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಸಿಬ್ಬಂದಿ ವಸತಿ ಕಟ್ಟಡಗಳ ಅವಶ್ಯಕತೆ ಬಗ್ಗೆ ಕೇಂದ್ರದ ಶಿಕ್ಷಣContinue reading “ಉಡುಪಿಯ ಕೇಂದ್ರೀಯ ವಿದ್ಯಾಲಯದ ಸ್ವಂತ ಕಟ್ಟಡ 26 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ”

ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜು : ಕುಯಿಲಾಡಿ

News By: ಜನತಾಲೋಕವಾಣಿನ್ಯೂಸ್ ಉಡುಪಿ: ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಮಟ್ಟದ *ಯುವ ಸಮಾವೇಶ ಫೆ.27ರಂದು* ಕಾರ್ಕಳದಿಂದ 12,000ಕ್ಕೂ ಮಿಕ್ಕಿ ಬೈಕ್‌ಗಳ ಜಾಥಾ ಮೂಲಕ ಚಾಲನೆಗೊಂಡು ಅಜೆಕಾರಿನಲ್ಲಿ ಯಶಸ್ವಿಯಾಗಿ ನಡೆದಿದೆ. *ಮಾ.12ರಂದು* ಕುಂದಾಪುರದ ನೆಹರೂ ಮೈದಾನದಲ್ಲಿ *ಜಿಲ್ಲಾ ಮಹಿಳಾ ಸಮಾವೇಶ‍* ವನ್ನು ಬೆಳಿಗ್ಗೆ 10.00Continue reading “ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜು : ಕುಯಿಲಾಡಿ”

ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರ:ಬೊಮ್ಮರಬೆಟ್ಟು ಪಂಚಾಯತ್ ಕಾರ್ಯಕರ್ತರ ಸಭೆ

News By: ಜನತಾಲೋಕವಾಣಿನ್ಯೂಸ್ ಕಾಪು: ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಭೆ ಇಂದು ನಡೆಯಿತು. ಬೂತ್ ವಿಜಯ ಅಭಿಯಾನ ಹಾಗೂ ವಿಜಯ ಸಂಕಲ್ಪ ಅಭಿಯಾನದ ಬಗ್ಗೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ರವರು ವರದಿ ಪಡೆದು ಮುಂದೆ ಮಾಡಬೇಕಾದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಿರಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಅವಧಿಯಲ್ಲಿ ಆದ ಸುಮಾರು 19 ಕೋಟಿಯಷ್ಟು ಕಾಮಗಾರಿಗಳ ವಿವರ ನೀಡಿ ಮುಂದೆಯೂ ಗ್ರಾಮದ ಅಭಿವೃದ್ಧಿಗೆ ಬಿಜೆಪಿ ಯನ್ನು ಗೆಲ್ಲಿಸಲು ಕರೆ ನೀಡಿದರು.Continue reading “ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರ:ಬೊಮ್ಮರಬೆಟ್ಟು ಪಂಚಾಯತ್ ಕಾರ್ಯಕರ್ತರ ಸಭೆ

ಮಾ.12 : ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಯಶಸ್ವಿಗೊಳಿಸಲು ವೀಣಾ ಎಸ್. ಶೆಟ್ಟಿ ಕರೆ

News By: ಜನತಾಲೋಕವಾಣಿನ್ಯೂಸ್ ಉಡುಪಿ:ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸೂಚನೆಯಂತೆ ಮಾ.12 ರವಿವಾರ ಮಧ್ಯಾಹ್ನ 3.00 ಗಂಟೆಗೆ ಕುಂದಾಪುರದ ನೆಹರೂ ಮೈದಾನದಲ್ಲಿ ಬೃಹತ್ ಜಿಲ್ಲಾ ಮಹಿಳಾ ಸಮಾವೇಶ ನಡೆಯಲಿದೆ. ಸುಮಾರು 15,000ಕ್ಕೂ ಮಿಕ್ಕಿ ಮಹಿಳೆಯರ ಸಮಾಗಮದೊಂದಿಗೆ ನಡೆಯಲಿರುವ ಈ ಸಮಾವೇಶವನ್ನು ಸಂಘಟಿತ ಪ್ರಯತ್ನದ ಮೂಲಕ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕರೆ ನೀಡಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ಮಹಿಳಾ ಮೋರ್ಚಾದ ಪೂರ್ವಭಾವಿContinue reading “ಮಾ.12 : ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಯಶಸ್ವಿಗೊಳಿಸಲು ವೀಣಾ ಎಸ್. ಶೆಟ್ಟಿ ಕರೆ”

ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ – ಜನ ಬಿಜೆಪಿ ಪರ ಎಂದು ಮತ್ತೆ ಸಾಬೀತು – ಶ್ರೀಕಾಂತ ನಾಯಕ್

ಕಾಪು: ಈಶಾನ್ಯ ರಾಜ್ಯಗಳ ಫಲಿತಾಂಶ ಬಂದಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು ನಾಲ್ಕನೆಯ ರಾಜ್ಯದಲ್ಲಿಯೂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿ ಬಿಟ್ಟರೆ ಬೇರೆ ಕೆಲವು ಪ್ರಾದೇಶಿಕ ಪಕ್ಷಗಳು ಹಲವು ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಕಾಡೆ ಮಲಗಿದೆ. ಕೇವಲ‌ ಹತ್ತು ವರ್ಷಗಳ ಹಿಂದೆ ಈಶಾನ್ಯ ಭಾಗದಲ್ಲಿ ದರ್ಪ ಮೆರೆದು ಜನರನ್ನು ಕತ್ತಲೆಯಲ್ಲಿಟ್ಟು ಅಧಿಕಾರದ ಸವಾರಿ‌ ನಡೆಸಿತ್ತೋ ಇಂದು ಅದರ ಅಡ್ರೆಸ್ ಇಲ್ಲದಂತೆ ಜನ ಮನೆಗೆ ಕಳುಹಿಸಿದ್ದಾರೆ. ಈ ಭಾಗದಲ್ಲಿContinue reading “ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ – ಜನ ಬಿಜೆಪಿ ಪರ ಎಂದು ಮತ್ತೆ ಸಾಬೀತು – ಶ್ರೀಕಾಂತ ನಾಯಕ್”

ಈಶಾನ್ಯ ರಾಜ್ಯಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಕುಯಿಲಾಡಿ ಸುರೇಶ್ ನಾಯಕ್

News By: ಜನತಾಲೋಕವಾಣಿನ್ಯೂಸ್ ಉಡುಪಿ: ಈಶಾನ್ಯ ರಾಜ್ಯಗಳ ಚುನಾವಣೆಯ ಪಲಿತಾಂಶ ಬಿಜೆಪಿಗೆ ಹೊಸ ಚೈತನ್ಯ ತುಂಬಿದೆ. ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮಗದೊಮ್ಮೆ ಸರಕಾರ ರಚಿಸಲಿದೆ. ಮೇಘಾಲಯದಲ್ಲೂ ಪಕ್ಷದ ಶಕ್ತಿ ಹೆಚ್ಚಿದೆ. ಈ ಚುನಾವಣಾ ಫಲಿತಾಂಶ ಕರ್ನಾಟಕದ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗಳಿಸಿದ ಪ್ರಯುಕ್ತ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸಿContinue reading “ಈಶಾನ್ಯ ರಾಜ್ಯಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ: ಕುಯಿಲಾಡಿ ಸುರೇಶ್ ನಾಯಕ್”

ಕಾಪು ವಿಧಾನಸಭಾ ಕ್ಷೇತ್ರ: ಚುನಾವಣಾ ಪೂರ್ವಭಾವಿ ಸಭೆ

News By: ಜನತಾಲೋಕವಾಣಿನ್ಯೂಸ್ ಕಾಪು: ಚುನಾವಣಾ ಪೂರ್ವಭಾವಿಯಾಗಿ ಕಾಪು ಕ್ಷೇತ್ರದಲ್ಲಿ ಎಲ್ಲ ಪದಾಧಿಕಾರಿಗಳ ಸರಣಿ ಸಭೆ ನಡೆಯಿತು. ಪದಾಧಿಕಾರಿಗಳ, ಮೋರ್ಚಗಳ, ಮಹಾಶಕ್ತಿಕೇಂದ್ರಗಳ, ಹಾಗು ಹಲವು ಅಪೇಕ್ಷಿತ ಪದಾಧಿಕಾರಿಗಳ ಸಭೆಗಳು ಪತ್ಯೇಕವಾದ ಅವಧಿಗಳೊಂದಿಗೆ ನಡೆಯಿತು. ಸುಮಾರು ಮುನ್ನೂರರಷ್ಟು ಸಂಖ್ಯೆ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ದ್ರಢ ಸಂಕಲ್ಪ ಹೊತ್ತು ತೆರಳಿದರು. ಈ ಅವಧಿಗಳಲ್ಲಿ ಆಯಾ ಪದಾಧಿಕಾರಿಗಳ ಜವಾಬ್ದಾರಿಗಳು, ಹಾಗೂ ಚುನಾವಣೆ ಗೆಲ್ಲಬೇಕಾದ ಅನಿವಾರ್ಯತೆ ಹಾಗೂ ಕಾರ್ಯಕತಂತ್ರಗಳ ಬಗ್ಗೆ ವಿಮರ್ಶೆ ಹಾಗೂ ಚರ್ಚೆ ನಡೆಯಿತು. ಯಾವುದೇContinue reading “ಕಾಪು ವಿಧಾನಸಭಾ ಕ್ಷೇತ್ರ: ಚುನಾವಣಾ ಪೂರ್ವಭಾವಿ ಸಭೆ”

Design a site like this with WordPress.com
Get started