ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ – ಜನ ಬಿಜೆಪಿ ಪರ ಎಂದು ಮತ್ತೆ ಸಾಬೀತು – ಶ್ರೀಕಾಂತ ನಾಯಕ್

ಕಾಪು: ಈಶಾನ್ಯ ರಾಜ್ಯಗಳ ಫಲಿತಾಂಶ ಬಂದಿದ್ದು ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದ್ದು ನಾಲ್ಕನೆಯ ರಾಜ್ಯದಲ್ಲಿಯೂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಬಿಜೆಪಿ ಬಿಟ್ಟರೆ ಬೇರೆ ಕೆಲವು ಪ್ರಾದೇಶಿಕ ಪಕ್ಷಗಳು ಹಲವು ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಕಾಡೆ ಮಲಗಿದೆ. ಕೇವಲ‌ ಹತ್ತು ವರ್ಷಗಳ ಹಿಂದೆ ಈಶಾನ್ಯ ಭಾಗದಲ್ಲಿ ದರ್ಪ ಮೆರೆದು ಜನರನ್ನು ಕತ್ತಲೆಯಲ್ಲಿಟ್ಟು ಅಧಿಕಾರದ ಸವಾರಿ‌ ನಡೆಸಿತ್ತೋ ಇಂದು ಅದರ ಅಡ್ರೆಸ್ ಇಲ್ಲದಂತೆ ಜನ ಮನೆಗೆ ಕಳುಹಿಸಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಬರಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಭಾವಿಸಿತ್ತೋ ಅಲ್ಲಿ ಇಂದು ಕಮಲ ಅರಳಿದೆ. ಇದು ಜನಸಾಮಾನ್ಯರ ಗೆಲುವು. ಮೋದೀಜಿಯವರು ಜನಪರ ಆಡಳಿತವನ್ನು ಮೆಚ್ಚಿ ಜನತೆ ನೀಡಿದ ಅಧಿಕಾರವಿದು.

ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಕಾಂಗ್ರೆಸ್ ಗೆ ಬರಲಿದೆ.‌ ಈಗಾಗಲೇ ಜನರನ್ನು ಐನೂರು ರೂಪಾಯಿ‌ ಕೊಟ್ಟು ಕರೆಸಿಕೊಳ್ಳಬೇಕು ಎನ್ನುನ ದೌರ್ಭಾಗ್ಯದ ಹೇಳಿಕೆ ನೀಡಿ ಅವರ ಕಾರ್ಯಕ್ರಮಕ್ಕೆ ಹಾಜರಾಗುವವರ ಮರ್ಯಾದೆ ಹರಾಜು ಮಾಡಿದ್ದಾರೆ. ಇನ್ನು ಮುಖ್ಯ ಮಂತ್ರಿ ಗಾದಿಗಾಗಿ ಹೋದಲ್ಲೆಲ್ಲ ಕಾಂಪಿಟೇಶನ್ ತರ ನನಗೇ ಬೇಕು ಎಂದು ಡಿಕೆಶಿ ಮತ್ತು ಸಿಧ್ದರಾಮಯ್ಯ ಜನರಲ್ಲಿ ಹೇಳುತ್ತಿದ್ದು ಜನತೆ ಇವರ ನಾಟಕವನ್ನು ನೋಡಿ ಮರುಕಪಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಡಬಲ್ ಇಂಜಿನ್ ಸರಕಾರ ಉತ್ತಮ ಕೆಲಸ ಕಾರ್ಯಕಗಳನ್ನು ಮಾಡಿದ್ದು, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ ಬರುವುದು ಶತಸಿಧ್ಧ ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Leave a comment

Design a site like this with WordPress.com
Get started