ನಿಧನ : ಶ್ರೀಮತಿ ರಾಧು ಪೂಜಾರ್ತಿ ಅಂಬಲಪಾಡಿ


ಉಡುಪಿ: ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರದ ಬಳಿಯ ನಿವಾಸಿ ದಿ! ತೋಮ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ರಾಧು ಪೂಜಾರ್ತಿ(95 ವರ್ಷ) ಇವರು ಫೆ.27ರಂದು ಸ್ವಗೃಹದಲ್ಲಿ ನಿಧನರಾದರು.

ಸುಧೀರ್ಘ ಅವಧಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇವರು ಭಜನಾ ಮಂದಿರದ ವಾರದ ಭಜನಾ ಪೂಜೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಜನಾನುರಾಗಿಯಾಗಿದ್ದರು.

ಇವರು ಪುತ್ರ ಟೈಲರ್ ಶಂಕರ ಪೂಜಾರಿ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.

Leave a comment

Design a site like this with WordPress.com
Get started