ಅಲೆವೂರು ಒಂದನೇ ವಾರ್ಡ್, ಕಾಪು ಮಂಡಲ ಬಿಜೆಪಿ ಅಧ್ಯಕ್ಷರ ವಾರ್ಡ್ ನಲ್ಲಿ “ಬೂತ್ ವಿಜಯ ಅಭಿಯಾನ” ಕ್ಕೆ ಚಾಲನೆ

News By: ಜನತಾಲೋಕವಾಣಿನ್ಯೂಸ್



ಕಾಪು: ಅಲೆವೂರು ಒಂದನೇ ವಾರ್ಡ್ ನಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಶಕ್ತಿಕೇಂದ್ರ ಉಸ್ತುವಾರಿ ದಿನಕರ್ ಬಾಬು ಚಾಲನೆ ನೀಡಿದರು. ಇಂದಿನಿಂದ ಜ.12 ನೇ ತಾರೀಕಿನವರೆಗೆ ಎಲ್ಲ ಬೂತ್ ಗಳಲ್ಲಿ ಪಕ್ಷ ಹಲವು ಕಾರ್ಯಕ್ರಮಗಳನ್ನು ನೀಡಿದ್ದು ಮುಖ್ಯವಾಗಿ ಬೂತ್ ಸಮಿತಿ ಪರಿಶೀಲನೆ, ಪೇಜ್ ಪ್ರಮುಖ್, ಮನೆ ಮನೆಗಳಿಗೆ ಭೇಟಿ ನೀಡಿ ಪಕ್ಷದ ಧ್ವಜ ಹಾಕಿಸುವುದು, ಬೂತ್ ಸಭೆಗಳನ್ನು ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಿ ನಡೆಸುವುದು. ಈ ಎಲ್ಲ ಕಾರ್ಯಕ್ರಮಗಳನ್ನು ಮಾಡಬೇಕೆನ್ನುವ ಕರೆ ನೀಡಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮಾತನಾಡಿ ಭಾರತದಲ್ಲಿ ಮೋದಿ ಸರಕಾರ ಬಂದಮೇಲೆ ಆಗುತ್ತಿರುವ ಬದಲಾವಣೆಗಳು, ಅಭಿವೃದ್ಧಿ ಹಾಗೂ ಯೋಜನೆಗಳನ್ನು ವಿವರಿಸಿ ಕಾಂಗ್ರೆಸ್ ಸರಕಾರದ ದುರಾಡಳಿವನ್ನು ನೆನಪಿಸಿ ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ ಹಾರಿಸುವಾಗ ಅಲೆವೂರು ಒಂದನೇ ವಾರ್ಡ್ ನ ಗರಿಷ್ಠ ಕೊಡುಗೆಯಾಗಿ ಅತೀ ಹೆಚ್ಚು ಮತಗಳನ್ನು ಬಿಜೆಪಿಗೆ ಬರುವಂತೆ ಶ್ರಮಿಸಲು ಕರೆ ನೀಡಿದರು. ಕೊರಂಗ್ರಪಾಡಿ ಶಕ್ತಿಕೇಂದ್ರ ಪ್ರಮುಖ್ ಆಶಿಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಸೌಮ್ಯ ನಾಯಕ್ ಕಾರ್ಯಕರ್ತರು, ಪದಾಧಿಕಾರಿಗಳು, ಮತದಾರರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started