ಮಂಗಳೂರಿನ ಕುಕ್ಕರ್ ಬಾಂಬ್ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ: ಡಿಕೆ ಶಿವಕುಮಾರ್  ವಿರುಧ್ದ ಕಾಪುವಿನಲ್ಲಿ ಪ್ರತಿಭಟನೆ

News by: ಜನತಾಲೋಕವಾಣಿನ್ಯೂಸ್

ಕಾಪು: ಮಂಗಳೂರಿನ ಕುಕ್ಕರ್ ಬಾಂಬ್ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ  ಡಿಕೆ ಶಿವಕುಮಾರ್ ಇವರ ವಿರುಧ್ದ ಕಾಪುವಿನಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಭದ್ರತಾ ವಿಚಾರಗಳ ಮೇಲೆ ಹೇಳಿಕೆ ಕೊಡುವಾಗ ರಾಜಕೀಯ ಬಿಟ್ಟು ಮಾತನಾಡಲು ಡಿಕೆಶಿಯವರಿಗೆ ಎಚ್ಚರಿಕೆ ನೀಡಲಾಯಿತು. ತುಷ್ಟೀಕರಣ ರಾಜಕಾರಣ ಬಿಟ್ಟು ವಿಷಯಾಧರಿತ ರಾಜಕಾರಣ ಮಾಡಬೇಕು, ಮುಂದೆಯೂ‌ ಇಂತಹ ತುಚ್ಚವಾದ ಹೇಳಿಕೆಗಳು ಬಂದರೆ ಅವರ ಮನೆಯ ಮುಂದೆಯೂ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಲಾಯಿತು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್,  ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ಸುರೇಂದ್ರ ಪಣಿಯೂರು, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರು, ಪ್ರವೀಣ್ ಗುರ್ಮೆ, ಜಿಲ್ಲಾ ಬಿಜೆಪಿ ರೈತ ಮೋರ್ಚ ಅಧ್ಯಕ್ಷರು, ಸಚಿನ್ ಸುವರ್ಣ, ಕಾಪು ಮಂಡಲ ಬಿಜೆಪಿ ಯುವಮೋರ್ಚ ಅಧ್ಯಕ್ಷರು, ಜಿಲ್ಲಾ ಫಲಾನುಭವಿ ಪ್ರಕೋಷ್ಠ ಸಂಚಾಲಕರಾದ ದಿಲ್ಲೇಶ್ ಶೆಟ್ಟಿ ,ಸುಮಾ ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷರು, ಕಾಪು ಮಂಡಲ ಕಾರ್ಯದರ್ಶಿಗಳಾದ ರಾಜೇಶ್ ಕುಂದರ್, ಮಾಲಿನಿ ಶೆಟ್ಟಿ, ಲತಾ ಆಚಾರ್ಯ, ಕಾಪು ಮಂಡಲ ಉಪಾಧ್ಯಕ್ಷರು ಗಳಾದ ಸಂಧ್ಯಾ ಕಾಮತ್, ನವೀನ್ ಎಸ್ ಕೆ, ಚಂದ್ರ ಮಲ್ಲಾರ್,  ಪಲಿಮಾರು ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಪುರಸಭಾ ಸದಸ್ಯರುಗಳಾದ ಅನಿಲ್ ಕುಮಾರ್, ಸುರೇಶ್ ದೇವಾಡಿಗ ಪಕ್ಷದ ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

Leave a comment

Design a site like this with WordPress.com
Get started