ಬುಡೋಕಾನ್‌ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಟೀಮ್ ಚಾಂಪಿಯನ್ಶಿಪ್ ಪ್ರಶಸ್ತಿ

News by: ಜನತಾಲೋಕವಾಣಿನ್ಯೂಸ್

ಉಡುಪಿ: ಕೊಡಗಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಸರ್ಧಾ ಕೂಟದಲ್ಲಿ ಉಡುಪಿಯ ಪ್ರತಿಷ್ಠಿತ ಸಂಸ್ಥೆ ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ವಿಧ್ಯಾರ್ಥಿಗಳು ಭಾಗವಹಿಸಿ 41 ಚಿನ್ನ, 30 ಬೆಳ್ಳಿ, 19 ಕಂಚಿನ ಪದಕಗಳನ್ನು ಪಡೆದು ಟೀಮ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಪ್ರಶಸ್ತಿ ವಿಜೇತ ವಿಧ್ಯಾರ್ಥಿಗಳಿಗೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಅಂಬಲಪಾಡಿ ದೇವಳದಲ್ಲಿ ಆಶೀರ್ವದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ‌ ಶಿವಕುಮಾರ್ ಅಂಬಲಪಾಡಿ, ಬುಡೋಕಾನ್ ಕರಾಟೆ ಆಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಮುಖ್ಯ ಶಿಕ್ಷಕ ರೆಂಶಿ ವಾಮನ್ ಪಾಲನ್, ಕಾರ್ಯದರ್ಶಿ ಸೆನ್ಸೈ ಮೇಘಾ, ಕೋಶಾಧಿಕಾರಿ ಸೆನ್ಸೈ ಚೈತನ್ಯ ಹಾಗೂ ಕಪ್ಪು ಪಟ್ಟಿ ಕರಾಟೆ ವಿದ್ಯಾರ್ಥಿಗಳಾದ ನಿಶಾಂತ್, ರಾಹಿಲ್, ಕಾರ್ತಿಕ್, ಅರ್ಮಾನ್, ರಿಶಾಲ್ ಉಪಸ್ಥಿತರಿದ್ದರು.

Leave a comment

Design a site like this with WordPress.com
Get started