
ಕಾಪು: ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಪಡುಬಿದ್ರೆ ಉದಯಾದ್ರಿಯಲ್ಲಿ ಶಕ್ತಿಕೇಂದ್ರ ಪ್ರಮುಖ್ ಗಾಯತ್ರಿ ಪ್ರಭು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಬೂತ್ ಸಮಿತಿ, ಶಕ್ತಿ ಕೇಂದ್ರ ಸಮಿತಿ ಪರಾಮರ್ಶೆ ನಡೆಸಲಾಯಿತು. ಪಂಚರತ್ನ ಸಮಿತಿ ಹಾಗು ಪ್ರತೀ ಬೂತ್ ನಲ್ಲಿ ಕೀ ಓಟರ್ಸ್ ಪಟ್ಟಿ ಮಾಡಲಾಯಿತು. ಕಾರ್ಯಕರ್ತರ, ಪಂಚಾಯತ್ ಸದಸ್ಯರುಗಳ ಸಮಸ್ಯೆಗಳನ್ನು ಆಲಿಸಿಲಾಯಿತು.
ಬಳಿಕ ಬೂತ್ ಸಮಿತಿಯ ಜವಾಬ್ದಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ಶಕ್ತಿ ಕೇಂದ್ರ ಪ್ರಮುಖರ ಜವಾಬ್ದಾರಿಗಳ ಬಗ್ಗೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮಾಹಿತಿ ನೀಡಿದರು. ಸಭೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಬಾಲಕ್ರಷ್ಣ ದೇವಾಡಿಗ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖರಾದ ಶಶಿಕಾಂತ ಪಡುಬಿದ್ರೆ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಂಚಾಯತ್ ಸದಸ್ಯರುಗಳು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.