ಇನ್ನಂಜೆ ಗ್ರಾಮ ಪಂಚಾಯತ್ – ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರ ಸಭೆ.

ಕಾಪು: ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಂಘಟನಾತ್ಮಕ ಸಭೆ ಆರ್ಯಾಡಿಯಲ್ಲಿ ಶಕ್ತಕೇಂದ್ರ ಪ್ರಮುಖ್ ಪ್ರವೀಣ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿರು. ಬೂತ್ ಸಮಿತಿ, ಶಕ್ತಿ ಕೇಂದ್ರ ಸಮಿತಿ ಪರಾಮರ್ಶೆ ನಡೆಸಲಾಯಿತು. ಪಂಚರತ್ನ ಸಮಿತಿ ಹಾಗು ಪ್ರತೀ ಬೂತ್ ನಲ್ಲಿ ಕೀ ಓಟರ್ಸ್ ಪಟ್ಟಿ ಮಾಡಲಾಯಿತು. ಕಾರ್ಯಕರ್ತರ, ಪಂಚಾಯತ್ ಸದಸ್ಯರುಗಳ ಸಮಸ್ಯೆಗಳನ್ನು ಆಲಿಸಿಲಾಯಿತು.

ಬಳಿಕ ಬೂತ್ ಸಮಿತಿಯ ಜವಾಬ್ದಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ಶಕ್ತಿ ಕೇಂದ್ರ ಪ್ರಮುಖರ ಜವಾಬ್ದಾರಿಗಳ ಬಗ್ಗೆ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮಾಹಿತಿ ನೀಡಿದರು. ಸಭೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಮಂಡಲ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಗಯರುಕ್ರಪಾ ರಾವ್, ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರುಗಳು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started