ಕೇಂದ್ರ ಬಜೆಟ್ ದೂರದೃಷ್ಟಿಯ ಅಭಿವೃದ್ಧಿಪರ ಆತ್ಮನಿರ್ಭರ ಬಜೆಟ್: ಜಿಲ್ಲಾ ಬಿಜೆಪಿ

ಉಡುಪಿ: ಕೇಂದ್ರ ಬಜೆಟ್ 2022ರ ವಿಶ್ಲೇಷಣೆಯನ್ನು ಕುರಿತು ಫೆ.12ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ದಿವಾಕರ ಶೆಟ್ಟಿ ನಡೆಸಿಕೊಟ್ಟರು.

ಕೇಂದ್ರ ಸರಕಾರ ಈ ಬಾರಿ ಮಂಡಿಸಿರುವ ಬಜೆಟ್ ದೂರದರ್ಶಿತ್ವವುಳ್ಳ ಅಭಿವೃದ್ಧಿಪರ ಅತ್ಮನಿರ್ಭರ ಬಜೆಟ್ ಆಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2022ನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಯಿತು.

ದೇಶದ ಸ್ವಾತಂತ್ರ್ಯಾ ನಂತರ ಕೇಂದ್ರ ಸರಕಾರ ಮಂಡಿಸಿರುವ ಎಲ್ಲ ಬಜೆಟ್ ಗಳಿಗಿಂತ ಈ ಬಾರಿಯ ಬಜೆಟ್ ವಿಭಿನ್ನವಾಗಿದೆ. ಈ ಬಜೆಟ್ ಯಾವುದೇ ಚುನಾವಣೆ, ವರ್ಗ ಅಥವಾ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಬಜೆಟ್ ಆಗಿರದೆ, ದೇಶದ ಮುಂದಿನ 25 ವರ್ಷಗಳ ಭವಿಷ್ಯದ ದೃಷ್ಠಿಯಿಂದ ಮಂಡಿಸಿರುವ ಬಜೆಟ್ ಆಗಿದೆ.

*ಬಜೆಟ್ ಗೆ ಪೂರಕ ಅಂಶಗಳು*:

ಜ.19ರಂದು ಆರ್.ಬಿ.ಐ. ಸಲ್ಲಿಸಿರುವ ಹಣಕಾಸು ವರದಿ.

ಕೋವಿಡ್ ಸಂದರ್ಭದಲ್ಲಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಹಾಗೂ ಅದರ ಪ್ರಯೋಜನ ದೇಶದ 80 ಕೋಟಿ ಜನತೆಗೆ ತಲುಪಿದ ರೀತಿ.

ಕಳೆದ 2 ವರ್ಷದಲ್ಲಿ ದೇಶವಾಸಿಗಳ ಆರೋಗ್ಯದ ಬಗ್ಗೆ ಲಸಿಕೆ, ಪ್ರಚಾರ ಇತ್ಯಾದಿಗಳಿಗೆ ತಗಲಿದ ವೆಚ್ಚ ಮತ್ತು ಲಸಿಕೆ ವಿತರಣೆಯಲ್ಲಿ 75% ಗುರಿ ತಲುಪಿರುವುದು.

ಡಿ.2021ರ ವರ್ಲ್ಡ್ ಬ್ಯಾಂಕ್ ವರದಿಯಂತೆ ವಿಶ್ವದ ಆರ್ಥಿಕತೆ ಬೆಳವಣಿಗೆ ಯಾದಿಯಲ್ಲಿ ಭಾರತ 8.75% ದರದೊಂದಿಗೆ ಮೊದಲ ಸ್ಥಾನ ಪಡೆದಿರುವುದು.

2021ರಲ್ಲಿ ಹಣದುಬ್ಬರ ಸ್ಥಿತಿಯಲ್ಲಿ ಭಾರತ 6% ದರದೊಂದಿಗೆ ಅಮೇರಿಕಾವನ್ನು ಮೀರಿಸಿರುವುದು.

ಡಿ.2021ರಲ್ಲಿ ದೇಶದ ಆರ್ಥಿಕತೆ ಕೋವಿಡ್ ನ ಮೊದಲು ಅಂದರೆ 2019ಕ್ಕಿಂತ ಮೀರಿ ಬೆಳೆದಿರುವುದು.

ನಿರುದ್ಯೋಗ ದರ ಜನವರಿ 2022ರಲ್ಲಿ 8% ದಿಂದ 9% ದಷ್ಟಿದ್ದು ಕೋವಿಡ್ ಸಂದರ್ಭದಲ್ಲಿ 30% ದಿಂದ 40% ಇತ್ತು. ಈ ಪ್ರಮಾಣ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ 6% ಇದ್ದೇ ಇರುತ್ತದೆ.

ರಾಜ್ಯಗಳ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು.

ಶೇರು ಮಾರುಕಟ್ಟೆ ದಿನದಿಂದ ದಿನಕ್ಕೆ ಏರುತ್ತಿದ್ದು 22% ರಷ್ಟು ಏರಿಕೆ ಕಂಡಿದೆ.

ದೇಶದ ವಿದೇಶಿ ವಿನಿಮಯ ನಿಧಿ 13 ರಿಂದ 17 ತಿಂಗಳಿಗಾಗುವಷ್ಟು ಅಂದರೆ 634 ಬಿಲಿಯನ್ ಡಾಲರ್ ಆಗಿದೆ. ಇದು ಸರ್ವಕಾಲಿಕ ಹೆಚ್ಚಳ.

ದೇಶದ ಅಭಿವೃದ್ಧಿಗೆ ಇಷ್ಟೆಲ್ಲಾ ಪೂರಕ ಅಂಶಗಳು ಇರುವಾಗ ಈ ಬಾರಿ ಅದಕ್ಕೆ ವೇಗ ಕೊಡುವ ಬಜೆಟ್ ಮಂಡಿಸಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ 2025ರ ವೇಳೆಗೆ 5 ಟ್ರಿಲಿಯನ್ ತಲುಪಬಹುದು ಎಂಬ ಲೆಕ್ಕಾಚಾರ. ಚುನಾವಣಾ ಅಥವಾ ಇನ್ನಿತರ ಆಕರ್ಷಣೆಗಾಗಿ ಬಜೆಟ್ ಮಾಡಿದಾಗ ಆರ್ಥಿಕತೆ ಹಳಿ ತಪ್ಪುವ ಸಾಧ್ಯತೆಯೇ ಹೆಚ್ಚು.

*ಬಜೆಟ್ ಮುಖ್ಯಾಂಶಗಳು:*

ಕಳೆದ ವರ್ಷಕ್ಕಿಂತ ಬಂಡವಾಳ ವೆಚ್ಚ 35.4% ಹೆಚ್ಚಳ, ಅಂದರೆ ಸುಮಾರು 7.5 ಲಕ್ಷ ಕೋಟಿ

ನದಿ ಜೋಡಣೆಗೆ 45,605 ಕೋಟಿ

ಎಮ್ಎಸ್ಎಮ್ಇ ಗೆ 5 ಲಕ್ಷ ಕೋಟಿ, ಇಸಿಎಲ್ಜಿ ಸ್ಕೀಮ್ ನಲ್ಲಿ 1 ವರ್ಷ ವಿಸ್ತರಣೆ

ಎಲ್ಐಸಿ ಖಾಸಗೀಕರಣ

2023ರ ಒಳಗೆ 5ಜಿ ಟೆಂಡರ್

68% ಸ್ವದೇಶಿ ನಿರ್ಮಿತ ಮಿಲಿಟರಿ ಸಂಬಂಧಿತ ಖರೀದಿ

ಒನ್ ನೇಷನ್ ಒನ್ ರಿಜಿಸ್ಟ್ರೇಷನ್

ದೇಶದ ಗಡಿಗಳ ಮತ್ತು ಹಳ್ಳಿಗಳ ಅಭಿವೃದ್ಧಿ

ದೇಶದ 1,05,000 ಅಂಚೆ ಕಛೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ತರುವುದು

ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್

ಇ-ಪಾಸ್ಪೋರ್ಟ್

ಪಟ್ಟಣಗಳ ಅಭಿವೃದ್ಧಿ

1,486 ಕಾನೂನುಗಳನ್ನು ತೆಗೆಯಲಾಗಿದೆ

ಸಿಂಗಲ್ ವಿಂಡೋ ಅಪ್ರೋವಲ್ – ಗ್ರೀನ್ ಸಿಪಿಸಿ

ಕೃಷಿಗೆ ಡ್ರೋನ್ ಶಕ್ತಿ

ಆರ್ ಬಿ ಐ ನಿಂದ ಸ್ವಂತ ಡಿಜಿಟಲ್ ರೂಪಾಯಿ, ವರ್ಗಾಯಿಸಲ್ಪಡುವ ವ್ಯವಸ್ಥೆಯೊಂದಿಗೆ.

ಹಳ್ಳಿಯ ವಿಧ್ಯಾರ್ಥಿಗಳಿಗಾಗಿ 200 ಟಿ.ವಿ. ಚಾನೆಲ್

ಆದಾಯ ತೆರಿಗೆ ಪರಿವರ್ತಿತ ರಿಟರ್ನ್

ಅತ್ಮನಿರ್ಭರ ಭಾರತ ಪರಿಕಲ್ಪನೆಯಡಿ 60 ಲಕ್ಷ ಉದ್ಯೋಗ ಸೃಷ್ಠಿಯ ಗುರಿ

ಈ ಎಲ್ಲಾ ಪ್ರಮುಖ ಅಂಶಗಳು ಈ ಬಾರಿಯ ಕೇಂದ್ರ ಬಜೆಟ್ ದೂರದರ್ಶಿತ್ವದ ಅಭಿವೃದ್ಧಿ ಪರ ಆತ್ಮನಿರ್ಭರ ಬಜೆಟ್ ಎಂಬುದಕ್ಕೆ ಪುಷ್ಠಿನೀಡಿದೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗೂ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಉಪಸ್ಥಿತರಿದ್ದರು.

Leave a comment

Design a site like this with WordPress.com
Get started