Design a site like this with WordPress.com
Get started

ಅಮೆರಿಕದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ.. ಇಂದು ಬೈಡನ್ – ಹ್ಯಾರಿಸ್ ಜತೆ ನಮೋ ಚರ್ಚೆ

ಅಮೆರಿಕದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ, ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆಂಡ್ರೂಸ್ ಜಂಟಿ ಏರ್‌ಫೋರ್ಸ್ ಬೇಸ್ನಲ್ಲಿ ಅವರಿಗೆ ಬೈಡನ್ ಆಡಳಿತ ಅದ್ಧೂರಿ ಸ್ವಾಗತ ಕೋರಿದೆ.

ಏರ್ ಇಂಡಿಯಾ ಒನ್‌ನಲ್ಲಿ ಪಯಣ

ಏರ್ ಇಂಡಿಯಾ ಒನ್ ಎಂದು ಕರೆಯಲಾಗುವ ‘ಬೋಯಿಂಗ್ 777 ವಿವಿಐಪಿ’ ವಿಮಾನದಲ್ಲಿ ಮೋದಿ ತಮ್ಮ ತಂಡದೊಂದಿಗೆ ಅಮೆರಿಕಕ್ಕೆ ತೆರಳಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಈ ವಿಶೇಷ ವಿಮಾನವನ್ನು ಬಳಸಲಾಗುತ್ತದೆ. ರಾಷ್ಟ್ರ ಪ್ರಮುಖರ ರಕ್ಷಣೆಗೆ ಅಗತ್ಯವಾದ ವಿಶೇಷ ಭದ್ರತಾ ಕ್ರಮಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಅಂದಾಜು 8,400 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನವನ್ನು ಮಾರ್ಪಾಡು ಮಾಡಲಾಗಿದೆ.

ಪ್ರಧಾನಿ ಮೋದಿ ವೇಳಾಪಟ್ಟಿ (ಭಾರತೀಯ ಕಾಲಮಾನ ಪ್ರಕಾರ)

ಗುರುವಾರ
1. ವಾಷಿಂಗ್ಟನ್‌ಗೆ ನಸುಕಿನ 3.30ಕ್ಕೆ ಆಗಮನ

2. ಸಂಜೆ 7.15ರಿಂದ ಕ್ವಾಲ್ಕಾಮ್ ಆಪಲ್, ಅಡೋಬ್, ಫಸ್ಟ್ ಸೋಲಾರ್, ಜನರಲ್ ಆಟಾಮಿಕ್ಸ್, ಬ್ಲಾಯಕ್ ಸ್ಟೋನ್, ಇನ್ನಿತರ ಕಂಪನಿಗಳ ಸಿಇಒಗಳ ಜತೆ ಸರಣಿ ಸಭೆ.

3. ರಾತ್ರಿ 11ಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆ ದ್ವಿಪಕ್ಷೀಯ ಚರ್ಚೆ.

ಶುಕ್ರವಾರ:

• ಮಧ್ಯಾಹ್ನ 12.45- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಭೇಟಿ

• ಮಧ್ಯಾಹ್ನ 3- ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಜತೆ

ಚರ್ಚೆ

• ರಾತ್ರಿ 8.30- ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ದ್ವೀಪಕ್ಷೀಯ ಮಾತುಕತೆ, • ರಾತ್ರಿ 11.30- ಕ್ವಾಡ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗಿ.

ಶನಿವಾರ

• ಸಂಜೆ 7.30- ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ 76ನೇ ಮಹಾಧಿವೇಶನದಲ್ಲಿ ಭಾಷಣ

• ರಾತ್ರಿ 9.15- ಭಾರತಕ್ಕೆ ಮರಳಿ ಪಯಣ

.

ಭಾನುವಾರ ಬೆಳಗ್ಗೆ 11.30ಕ್ಕೆ ನವದೆಹಲಿಗೆ ಆಗಮನವಾಷಿಂಗ್ಟನ್(ಅಮೆರಿಕ): ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬುಧವಾರ ಅಮೆರಿಕಕ್ಕೆ ಭೇಟಿ ನೀಡಿದ್ದು, ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ, ಕ್ವಾಡ್ ಶೃಂಗಸಭೆ ಮತ್ತು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಅಮೆರಿಕದ ಜನರಲ್ ಅಸೆಂಬ್ಲಿಯ 76 ನೇ ಅಧಿವೇಶನದಲ್ಲಿಯೂ ನಮೋ ಭಾಗವಹಿಸಿ ಮಾತನಾಡಲಿದ್ದಾರೆ.

ಆಂಡ್ರೂಸ್ ಜಂಟಿ ಏರ್‌ಫೋರ್ಸ್ ಬೇಸ್ನಲ್ಲಿ ಪ್ರಧಾನಿ ಮೋದಿ ಅವರನ್ನು ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಸ್ವಾಗತಿಸಿದರು. ಈ ವೇಳೆ ಭಾರಿ ಮಳೆ ಸುರಿಯುತ್ತಿದ್ದರೂ, ಮೋದಿಯನ್ನು ಸ್ವಾಗತಿಸಲು ಭಾರತೀಯ ಅಮೆರಿಕನ್ನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರತ್ತ ಕೈ ಬೀಸಿ, ಭಾರತೀಯರ ಕೈ ಕುಲುಕಿ ನಮೋ ಮುಂದೆ ಸಾಗಿದರು.2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಏಳನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಭಾರತ – ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಜಪಾನ್ – ಆಸ್ಟ್ರೇಲಿಯಾದೊಂದಿಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಎಂದು ಮೋದಿ ಹೇಳಿದ್ದಾರೆ.ಸೆಪ್ಟೆಂಬರ್ 24 ರಂದು ಮೋದಿ-ಬೈಡನ್ ಅವರ ಮೊದಲ ದ್ವಿಪಕ್ಷೀಯ ಸಭೆ ಶ್ವೇತಭವನದಲ್ಲಿ ನಡೆಯಲಿದೆ. ಬಳಿಕ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಹಾಗೂ ಮೋದಿ, ಬೈಡನ್ ಸಮ್ಮುಖದಲ್ಲಿ ಕ್ವಾಡ್ ನಾಯಕರ ಶೃಂಗಸಭೆ ಶ್ವೇತಭವನದಲ್ಲಿ ನಡೆಯಲಿದೆ.ಇದನ್ನೂ ಓದಿ: ಇಂದಿನಿಂದ ಮೂರು ದಿನ ಮೋದಿ ಅಮೆರಿಕ ಪ್ರವಾಸ.. ದೆಹಲಿಯಿಂದ ವಿಮಾನವೇರಿದ ಪ್ರಧಾನಿ
2021 ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾದ ಬಳಿಕ ಬೈಡನ್ ಹಾಗೂ ಪ್ರಧಾನಿ ಮೋದಿ ಅನೇಕ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಏಪ್ರಿಲ್ 26 ರಂದು ಅವರು ಕೊನೆ ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದರು.ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಂದು ಪ್ರಧಾನಿ ಮೋದಿ ಜತೆ ಮಾತನಾಡಲಿದ್ದಾರೆ. ಈ ಹಿಂದೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೂರವಾಣಿ ಮೂಲಕ ಉಭಯ ನಾಯಕರು ಮಾತನಾಡಿದ್ರು.ನನ್ನ ಭೇಟಿಯ ಸಮಯದಲ್ಲಿ, ಬೈಡನ್ರೊಂದಿಗೆ ಭಾರತ- ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಪರಿಶೀಲಿಸುತ್ತೇನೆ. ಪರಸ್ಪರ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಹೇಳಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: