Design a site like this with WordPress.com
Get started

ಸೋಮವಾರದಿಂದ ಬಸ್ ಸಂಚಾರ ಆರಂಭ, ಹೋಟೆಲ್ ಸೇರಿ ಎಲ್ಲಾ ಅಂಗಡಿ ಓಪನ್

ಬೆಂಗಳೂರು: ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇಕಡ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ ಶೇ.5-10 % ಇದ್ದು, ಮೈಸೂರಿನಲ್ಲಿ ಶೇ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಈ ಪಾಸಿಟಿವಿಟಿ ದರದ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗಳನ್ನು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ಕೆಳಕಂಡಂತೆ ತೀರ್ಮಾನಿಸಲಾಗಿದೆ. ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವContinue reading “ಸೋಮವಾರದಿಂದ ಬಸ್ ಸಂಚಾರ ಆರಂಭ, ಹೋಟೆಲ್ ಸೇರಿ ಎಲ್ಲಾ ಅಂಗಡಿ ಓಪನ್”

ಬಿಜೆಪಿ ಸೇವಾ ಕಾರ್ಯಗಳೇ ವಿರೋಧಿಗಳ ಟೀಕೆಗೆ ಸೂಕ್ತ ಉತ್ತರ – ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ಕೋವಿಡ್ ಸಂಕಷ್ಟದಲ್ಲಿರುವ ಜನತೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ರೂ.1,250 ಕೋಟಿ ಮತ್ತು ರೂ.500 ಕೋಟಿಗಳ 2 ಪ್ಯಾಕೇಜ್‍ಗಳ ಘೋಷಣೆಯ ಜೊತೆಗೆ ಕೋವಿಡ್‍ನಿಂದಮೃತಪಟ್ಟ ಸದಸ್ಯರ ಬಡ ಕುಟುಂಬಕ್ಕೆ ತಲಾ ರೂ.1 ಲಕ್ಷ ಪರಿಹಾರ ನೀಡುವ ಬಗ್ಗೆ ರೂ.300 ಕೋಟಿಗಳನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ. ಬಿಜೆಪಿ ಸೇವಾ ಕಾರ್ಯಗಳೇ ವಿರೋಧ ಪಕ್ಷಗಳ ಟೀಕೆಗಳಿಗೆ ಸಮರ್ಪಕವಾದ ಉತ್ತರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಅವರು ರಾಜ್ಯ ಬಿಜೆಪಿಯ ಸೂಚನೆಯಂತೆ ಸೇವಾ ಹೀContinue reading “ಬಿಜೆಪಿ ಸೇವಾ ಕಾರ್ಯಗಳೇ ವಿರೋಧಿಗಳ ಟೀಕೆಗೆ ಸೂಕ್ತ ಉತ್ತರ – ಕುಯಿಲಾಡಿ ಸುರೇಶ್ ನಾಯಕ್”

ಬಿಜೆಪಿ ಮುಖಂಡ, ಸಾಮಾಜಿಕ ಕಾರ್ಯಕರ್ತ ಶಿರ್ವದ ಸುನೀಲ್ ಕಬ್ರಾಲ್ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ

ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ, ಇತ್ತೀಚೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಪಕ್ಷಕ್ಕಾಗಿ ದುಡಿದ ಶಿರ್ವದ ಸುನೀಲ್ ಕಬ್ರಾಲ್ ರವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬದ ಸದಸ್ಯರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ: ಕುಯಿಲಾಡಿ ಸುರೇಶ್ ನಾಯಕ್

ಸದಾ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ದೇಶ, ಧರ್ಮವನ್ನು ಒಡೆಯುವ ಕೀಳು ರಾಜಕೀಯದಲ್ಲಿ ನಿರತವಾಗಿರುವ ಕಾಂಗ್ರೆಸ್ ತನ್ನ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಸದಾ ಅಪಪ್ರಚಾರ ಮತ್ತು ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ದೇಶದ ಏಕತೆಗೆ ಧಕ್ಕೆ ತರುವಂತಹ ಹೀನ ಕೃತ್ಯದಲ್ಲಿ ತೊಡಗಿರುವುದು ಶೋಚನೀಯ. ಒಂದೇ ಕುಟುಂಬದContinue reading “ಕಾಂಗ್ರೆಸ್ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದ ಹೊರ ಬರಲಿ: ಕುಯಿಲಾಡಿ ಸುರೇಶ್ ನಾಯಕ್”

ಕಾಂಗ್ರೆಸ್ ಅಪಪ್ರಚಾರದ ಪ್ರತಿಭಟನೆ ಟೂಲ್‌ಕಿಟ್‌ ಮುಂದುವರಿದ ಭಾಗದಂತಿದೆ : ಜಿಲ್ಲಾ ಬಿಜೆಪಿ ಖಂಡನೆ

ಉಡುಪಿ : ಕೊರೋನಾ ಸಂಕಷ್ಟದಿಂದ ವಿಶ್ವವೇ ಕಂಗೆಟ್ಟಿದ್ದರೂ ಪ್ರಧಾನಿ ಮೋದಿ ಸಮರ್ಥ ನೇತ್ವದಲ್ಲಿ ದೇಶದಾದ್ಯಂತ ಕೊರೋನಾ ನಿಯಂತ್ರಣದಲ್ಲಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ನಡೆಗಳನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ಕಾಂಗ್ರೆಸ್, ಕೋವಿಡ್ ಲಸಿಕೆಯಿಂದ ಪ್ರಾರಂಭಗೊಂಡು ಎಲ್ಲ ವಿಚಾರಗಳಲ್ಲೂ ಅಪಪ್ರಚಾರದಲ್ಲಿ ತೊಡಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ, ನಾಯಕತ್ವದ ಕೊರತೆಯಿಂದ ಸೊರಗಿರುವ ಕಾಂಗ್ರೆಸ್ ಇದೀಗ ಪೆಟ್ರೋಲ್ ಬೆಲೆ ಏರಿಕೆಯ ನೆಪವೊಡ್ಡಿ ಪೆಟ್ರೋಲ್ ಬಂಕ್‌ಗಳ ಎದುರು ನಾಟಕೀಯ ಪ್ರತಿಭಟನೆಗೈದು ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನತೆಯ ದಾರಿ ತಪ್ಪಿಸುವ ಪ್ರಯತ್ನದಲ್ಲಿContinue reading “ಕಾಂಗ್ರೆಸ್ ಅಪಪ್ರಚಾರದ ಪ್ರತಿಭಟನೆ ಟೂಲ್‌ಕಿಟ್‌ ಮುಂದುವರಿದ ಭಾಗದಂತಿದೆ : ಜಿಲ್ಲಾ ಬಿಜೆಪಿ ಖಂಡನೆ”

ಕಿದಿಯೂರು ಗ್ರಾಮ : 5 ಎಕರೆ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

“ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 35 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದ್ದು, ಇಂದು ದಿನಾಂಕ 15-06-2021 ರಂದು ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿದಿಯೂರು ಸಂಕೇಶ ವಿಠೋಬ ಭಜನಾ ಮಂಡಳಿಯ ಎದುರು 5 ಎಕರೆ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.* *ಹರಿಯಪ್ಪ ಕೋಟ್ಯಾನ್ ಮತ್ಸ್ಯೋದ್ಯಮಿಗಳು ಇವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನುContinue reading “ಕಿದಿಯೂರು ಗ್ರಾಮ : 5 ಎಕರೆ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ”

ರಾಷ್ಟ್ರೀಯ ಹೆದ್ದಾರಿ 66ಗೆ (NH-66) ಕಟಪಾಡಿಯಲ್ಲಿ 22.72 ಕೋಟಿ ರೂಗಳ ವೆಚ್ಚದಲ್ಲಿ ಓವರ್ ಪಾಸ್ (Over Pass) ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಿದ ಕೇಂದ್ರ ಸರಕಾರ. – ಶೋಭಾ ಕರಂದ್ಲಾಜೆ, ಸಂಸದೆ

ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ (NH-66), ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಪ್ರದೇಶದಲ್ಲಿ ಅಂಡರ್ ಪಾಸಿನ ಅವಶ್ಯಕತೆಯಿದೆ ಎಂದು ಕ್ಷೇತ್ರದ ಜನತೆ ಹಲವಾರು ವರುಷಗಳಿಂದ ಬೇಡಿಕೆಯಿಟ್ಟಿದ್ದರು. ಹಲವಾರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿ ಕಟಪಾಡಿ ನಗರ ಪ್ರದೇಶವಾಗಿದ್ದು, ಹೆಚ್ಚಿನ ಜನ ಸಂಚಾರವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ‘ಅಂಡರ್ ಪಾಸಿನ/ಓವರ್ ಪಾಸ್’ ಅನಿವಾರ್ಯತೆಯಿದೆ ಎಂದು ಮನದಟ್ಟು ಮಾಡಲಾಗಿತ್ತು. ಕ್ಷೇತ್ರದ ಜನರ ಅಪೇಕ್ಷೆಯಂತೆ, ಕೇಂದ್ರ ಸರಕಾರ ಕಟಪಾಡಿಯಲ್ಲಿ ಅಂಡರ್ ಪಾಸಿನ ಬದಲು,Continue reading “ರಾಷ್ಟ್ರೀಯ ಹೆದ್ದಾರಿ 66ಗೆ (NH-66) ಕಟಪಾಡಿಯಲ್ಲಿ 22.72 ಕೋಟಿ ರೂಗಳ ವೆಚ್ಚದಲ್ಲಿ ಓವರ್ ಪಾಸ್ (Over Pass) ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಿದ ಕೇಂದ್ರ ಸರಕಾರ. – ಶೋಭಾ ಕರಂದ್ಲಾಜೆ, ಸಂಸದೆ”

ಕಾಂಗ್ರೆಸ್ ಮುಖಂಡರು ಕಾಶ್ಮೀರಿ ಪಂಡಿತರ ಬಲಿದಾನವನ್ನು ಮರೆತಿದ್ದಾರೆ: ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕ್ಲಬ್ ಹೌಸ್ ಆಪ್ ಮೂಲಕ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದೇಶವಿರೋಧಿ ಮನಸ್ಥಿತಿಯ ನಿದರ್ಶನವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಪ್ರತಿಷ್ಠೆ ಮಣ್ಣು ಪಾಲುContinue reading ಕಾಂಗ್ರೆಸ್ ಮುಖಂಡರು ಕಾಶ್ಮೀರಿ ಪಂಡಿತರ ಬಲಿದಾನವನ್ನು ಮರೆತಿದ್ದಾರೆ: ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ: ಡಾ! ನಿ.ಬೀ. ವಿಜಯ ಬಲ್ಲಾಳ್

ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರಿಗೆ ಕಿಟ್ ವಿತರಣೆ: ಇಡೀ ವಿಶ್ವವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಈ ಕಾಲ ಘಟ್ಟದಲ್ಲಿ ಅನೇಕ ಸಂಘ- ಸಂಸ್ಥೆಗಳು, ದಾನಿಗಳು ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಪ್ರಶಂಸನೀಯ. ಕೋವಿಡ್ ನಿಯಮ ಪಾಲನೆಯ ಜೊತೆಗೆ ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು. ಅವರು ಬುಡೋಕಾನ್ ಕರಾಟೆ ಅಂಡ್Continue reading “ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ: ಡಾ! ನಿ.ಬೀ. ವಿಜಯ ಬಲ್ಲಾಳ್”

ಹಡಿಲು ಭೂಮಿ ಕೃಷಿ ಅಭಿಯಾನ ಒಂದು ಆಂದೋಲನವಾಗಿ ಮಾರ್ಪಾಡಾಗಿದೆ : ಶಾಸಕ ಕೆ.ರಘುಪತಿ ಭಟ್

ಅಂಬಲಪಾಡಿ ಗ್ರಾಮದಲ್ಲಿ 20 ಎಕ್ರೆ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ: ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಬಿಟ್ಟಿರುವ ಕೃಷಿ ಭೂಮಿಗಳಲ್ಲಿ ಕೃಷಿ ಮಾಡುವ ಸಂಕಲ್ಪದೊಂದಿಗೆ ಆರಂಭಿಸಿರುವ “ಹಡಿಲು ಭೂಮಿ ಕೃಷಿ ಅಭಿಯಾನ” ಇಂದು ಬೃಹತ್ ಆಂದೋಲನವಾಗಿ ಮಾರ್ಪಾಡಾಗಿದೆ. ಕ್ಷೇತ್ರದ ವಾರ್ಡ್ ವಾರ್ಡ್ ಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಜನಪ್ರತಿನಿಧಿಗಳು, ಯುವಕರು, ಕೃಷಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅತ್ಯಂತ ಕ್ರಿಯಾಶೀಲತೆಯಿಂದ ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಈ ಆಂದೋಲನದ ಫಲಶ್ರುತಿ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್Continue reading “ಹಡಿಲು ಭೂಮಿ ಕೃಷಿ ಅಭಿಯಾನ ಒಂದು ಆಂದೋಲನವಾಗಿ ಮಾರ್ಪಾಡಾಗಿದೆ : ಶಾಸಕ ಕೆ.ರಘುಪತಿ ಭಟ್”