ಬಿಜೆಪಿ ಕಾಪು ಮಂಡಲ: ಸೇವೆ ಮತ್ತು ಸಮರ್ಪಣ ಅಭಿಯಾನ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಶಿರ್ವ ಜೀವನ ಜ್ಯೋತಿ ಆಶ್ರಮಕ್ಕೆ ಹಣ್ಣು ಹಂಪಲು, ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾಪು ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ ಮಾಂಬೆಟ್ಟು, ಉಪಾಧ್ಯಕ್ಷ ಎಂ.ಚಂದ್ರಶೇಖರ್ ಕೋಟ್ಯಾನ್, ಕಾರ್ಯದರ್ಶಿಗಳಾದ ಮಾಲಿನಿ ಇನ್ನಂಜೆ, ಲತಾ ಆಚಾರ್ಯ, ಪೂರ್ಣಿಮಾ ಚಂದ್ರಶೇಖರ್, ರಾಜೇಶ್ ಕುಂದರ್, ಮಾಜಿ ಕಾಪು ತಾಲೂಕು ಪಂಚಾಯತ್Continue reading “ಬಿಜೆಪಿ ಕಾಪು ಮಂಡಲ: ಸೇವೆ ಮತ್ತು ಸಮರ್ಪಣ ಅಭಿಯಾನ”

ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಯಶಸ್ವಿಗೊಳಿಸೋಣ: ಮಹೇಶ್ ಠಾಕೂರ್

ಉಡುಪಿ:ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವಾದ ಸೆ.17ರಿಂದ ಮೊದಲ್ಗೊಂಡು ಅವರು ಚುನಾಯಿತ ಸರಕಾರದ ನೇತೃತ್ವ ವಹಿಸಿ 20 ವರ್ಷಗಳನ್ನು ಪೂರೈಸುವ ದಿನವಾದ ಅ.7ರ ವರೆಗೆ ಜಿಲ್ಲಾ ಬಿಜೆಪಿಯಿಂದ ಉಡುಪಿ ಜಿಲ್ಲೆಯಾದ್ಯಂತ 20 ದಿನಗಳ ಪರ್ಯಂತ ನಡೆಯುವ ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸೇರಿ ಯಶಸ್ವಿಗೊಳಿಸೋಣ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಕರೆ ನೀಡಿದರು. ಅವರು ಬಿಜೆಪಿ ಉಡುಪಿ ನಗರ ಮಂಡಲದ ಆಶ್ರಯದಲ್ಲಿ ಸೆ.21ರಂದುContinue reading “ಸೇವೆ ಮತ್ತು ಸಮರ್ಪಣ ಅಭಿಯಾನವನ್ನು ಯಶಸ್ವಿಗೊಳಿಸೋಣ: ಮಹೇಶ್ ಠಾಕೂರ್”

ಮೋದೀಜೀ ಜನ್ಮದಿನಾಚರಣೆ ಯಂದು ಸಾರ್ವಜನಿಕರಿಗೆ ಉಚಿತ ಆಟೋ ಸೇವೆ

ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಚಂದ್ರ ಮಲ್ಲಾರ್ ಇವರು ಮೋದೀಜಿ ಜನ್ಮದಿನದಂದು ಪ್ರತೀ ವರ್ಷ 5 ಕಿಮೀ ವ್ಯಾಪ್ತಿಯಲ್ಲಿ ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದು ನಿನ್ನೆಯ ದಿನ ಬೆಳಿಗ್ಗೆ ಅದರ ಚಾಲನಾ ಕಾರ್ಯಕ್ರಮ‌ನಡೆಸಲಾಯಿತು. ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿಯ ಆದರ್ಶ ವ್ಯಕ್ತಿತ್ವ ಕೊಂಡಾಡಿ ಚಂದ್ರ ಮಲ್ಲಾರ್ ನೀಡುತ್ತಿರುವ ಉಚಿತ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿದ್ದು ನಾವೆಲ್ಲರೂ ಯಾವುದಾದರೊಂದು ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿ ಮೋದೀಜಿಗೆ ಶುಭಕೋರಬೇಕು ಎಂದರು. ಈ ಸಂದರ್ಭದಲ್ಲಿ ಕಾಪುContinue reading “ಮೋದೀಜೀ ಜನ್ಮದಿನಾಚರಣೆ ಯಂದು ಸಾರ್ವಜನಿಕರಿಗೆ ಉಚಿತ ಆಟೋ ಸೇವೆ”

ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ, ಆರೋಗ್ಯ ಮಾಹಿತಿ ಶಿಬಿರ

ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಎಮ್ ಸಿ ಮಣಿಪಾಲ ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ ಹಾಗೂ ಆರೋಗ್ಯ ಮಾಹಿತಿ ಶಿಬಿರದಲ್ಲಿ ಕೆ ಎಮ್ ಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ಉಚಿತವಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವಾ ಕಾರ್ಯ ಶ್ಲಾಘನೀಯ. ಆರೋಗ್ಯ ಕ್ಷೇತ್ರದಲ್ಲಿ ಇವರು ನೀಡುತ್ತಿರುವ ಕೊಡುಗೆ ಅಪಾರ. ಇಂದು ಸರಕಾದ ಎಲ್ಲ ಸವಲತ್ತುಗಳನ್ನು, ಯೋಜನೆಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒದಗಿಸುವಲ್ಲಿ ಮತ್ತು ಮಕ್ಕಳಿಗೆ ಪ್ರಾರಂಭದಲ್ಲಿ ಉತ್ತಮ ಸಂಸ್ಕಾರವನ್ನು ನೀಡುತ್ತಿರುವContinue reading “ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ, ಆರೋಗ್ಯ ಮಾಹಿತಿ ಶಿಬಿರ”

ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಜನ್ಮದಿನಾಚರಣೆ

ಕಾಪು: ಇನ್ನಂಜೆ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ, ಮೋದಿಜಿ ಜನ್ಮದಿನಾಚರಣೆಯಿಂದ ಅಕ್ಟೋಬರ್ 7ರವರೆಗೆ ನಡೆಯುವ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ನಂಜೆ ಪೇಟೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಆರಂಭ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ರವರು ಕಾರ್ಯಕ್ರಮದ ಬಗ್ಗೆ ಮತ್ತು ಮೋದಿಜಿ ಅವರ ಸಾಧನೆಯ ಬಗ್ಗೆ ವಿವರವಾಗಿ ಪ್ರಾಸ್ತಾವಿಕ ಮಾತನಾಡಿ ಮೋದಿಜಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಧನ್ಯವಾದಗೈದರು. ನಂತರ ಇನ್ನಂಜೆ ಪಂಚಾಯತ್ ನಲ್ಲಿ ಎಸ್ ಆರ್ ಎಲ್ ಎಮ್Continue reading “ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಜನ್ಮದಿನಾಚರಣೆ”

ಬಿಜೆಪಿ ಉದ್ಯಾವರ ಮಹಾಶಕ್ತಿಕೇಂದ್ರ ನಾಮಫಲಕ ಸಮಾವೇಶ

ಉದ್ಯಾವರ ಬಿಜೆಪಿ ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ನಾಮಫಲಕ ಸಮಾವೇಶವು ಇಂದು ಉದ್ಯಾವರ ಸೌಂದರ್ಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ರವಿ ಕೋಟ್ಯಾನ್ ರವರು ವಹಿಸಿದ್ದರು. ಕಾಪು ಕ್ಷೇತ್ರಧ್ಯಕ್ಷರಾದ ಶ್ರೀಕಾಂತ್ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬೂತ್ ಅಧ್ಯಕ್ಷರ ಜವಾಬ್ದಾರಿ ಮತ್ತು ಪಕ್ಷ ಸಂಘಟನೆಯ ಬಗ್ಗೆ ಹೆಚ್ಚಿನ ಒತ್ತುಕೊಡುವಂತೆ ತಿಳಿಸಿದರು.ರಾಜ್ಯಕಾರ್ಯಕಾರಿಣಿಯ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆಯವರು ಎಲ್ಲಾ ಬೂತ್ ಅಧ್ಯಕ್ಷರುಗಳಿಗೆ ನಾಮಫಲಕವನ್ನು ನೀಡಿ ಶುಭ ಹಾರೈಸಿದರು. ಸಭೆಯಲ್ಲಿ ಇಂದು ನಿಧನರಾದ ರಾಜ್ಯContinue reading “ಬಿಜೆಪಿ ಉದ್ಯಾವರ ಮಹಾಶಕ್ತಿಕೇಂದ್ರ ನಾಮಫಲಕ ಸಮಾವೇಶ”

ಆಸ್ಕರ್ ನಿಧನಕ್ಕೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಸಂತಾಪ

ಕಾಂಗ್ರೆಸ್ ನಾಯಕ ಸರಳ ಸಜ್ಜನ ರಾಜಕಾರಣಿ ಮಾಜಿ ಕೇಂದ್ರ ಸಚಿವರಾಗಿರುವ ಒಸ್ಕರ್ ಫೆರ್ನಾಂಡಿಸ್ ಅವರು ಇಂದು ವಿಧಿವಶರಾದರು.ಅವರ ಆತ್ಮಕ್ಕೆ ಚಿರಶಾಂತಿ ಸದ್ಗತಿ ದೊರೆಯಲೆಂದು ಬಿಜೆಪಿ ಮಹಾ ಶಕ್ತಿ ಕೇಂದ್ರದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಅದ್ಯಕ್ಷ ಶ್ರೀಕಾಂತ್ ನಾಯಕ್ .ಸುರೇಶ್ ಶೆಟ್ಟಿ ಗುರ್ಮೆ ,ಶಿಲ್ಪಾ ಜಿ ಸುವರ್ಣ, ನಯನ ಗಣೇಶ್ ,ರಾಧಾಕೃಷ್ಣ ಬೋಳ್ಜೆ,ವಿಜಯ ಕುಮಾರ್ ಉದ್ಯಾವರ,ರವಿ ಕೋಟ್ಯಾನ್ ಪಡುಕರೆ,ರಾಜೇಶ್ ಕುಂದರ್,ಸಚಿನ್ ಪೀತ್ರೋಡಿ, ಸಚಿನ್ ಬೊಳ್ಜೆ,ಸತೀಶ್ ಬಿರಪಾಡಿ ಉದ್ಯಾವರ ಗ್ರಾಮ ಪಂಚಾಯತ್Continue reading “ಆಸ್ಕರ್ ನಿಧನಕ್ಕೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಸಂತಾಪ”

ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಕುಯಿಲಾಡಿ ಸಂತಾಪ

ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ರವರ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯೋಗಾಭ್ಯಾಸದಲ್ಲಿ ವಿಶೇಷ ಪರಿಜ್ಞಾನ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಫೆರ್ನಾಂಡಿಸ್ ರವರು ಸ್ನೇಹಜೀವಿಯಾಗಿದ್ದರು. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೆರ್ಣಂಕಿಲದಲ್ಲಿ ಜನಜಾಗ್ರತಿ‌ ಸಮಿತಿ ಉದ್ಘಾಟನೆ

ಸಂಘಟನೆ ಮುಖಾಂತರ ಜಾಗ್ರತ ಸಮಾಜ – ಶ್ರೀಕಾಂತ ನಾಯಕ್ ಪೆರ್ಣಂಕಿಲದಲ್ಲಿ ನೂತನವಾಗಿ ಜನಜಾಗ್ರತಿ‌ ಸಮಿತಿ ಉದ್ಘಾಟನಾ ಕಾರ್ಯಕ್ರಮ‌ ನಡೆಯಿತು. ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಹಾಗೂ ಕೊಡಿಬೆಟ್ಟು ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು ಜಂಟಿಯಾಗಿ‌ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಶ್ರೀಕಾಂತ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿ ಜಾಗ್ರತ ಸಮಾಜ ನಿರ್ಮಾಣಕ್ಕೆ ಇಂತಹ ಸಂಸ್ಥೆಗಳ ಅಗತ್ಯವಿದೆ, ಸಮಾಜದ ಎಲ್ಲ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಲ್ಲಿ ಊರಿನ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದರು. ಪ್ರಸ್ತಾವನೆ ಮಾಡಿದContinue reading “ಪೆರ್ಣಂಕಿಲದಲ್ಲಿ ಜನಜಾಗ್ರತಿ‌ ಸಮಿತಿ ಉದ್ಘಾಟನೆ”

ಇಂದ್ರಾಳಿಯಲ್ಲಿ ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್ ಇದರ ನೂತನ ತರಬೇತಿ ಕೇಂದ್ರ ಉದ್ಘಾಟನೆ

ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ನೂತನ ತರಬೇತಿ ಕೇಂದ್ರವು ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು. ಬುಡೊಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ರೆಂಷಿ ವಾಮನ್ ಪಾಲನ್ ಸಂಸ್ಥೆಯ ಪರಿಚಯವನ್ನು ನೀಡಿ ಕರಾಟೆ ಕಲೆಯ ಮಹತ್ವವನ್ನು ವಿವರಿಸಿದರು. ಇಂದ್ರಾಳಿಯ ನೂತನ ಕರಾಟೆ ತರಗತಿ ಕೇಂದ್ರವನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ, ಪ್ರಸಕ್ತ ದಿನಗಳಲ್ಲಿ ಕರಾಟೆContinue reading “ಇಂದ್ರಾಳಿಯಲ್ಲಿ ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್ ಇದರ ನೂತನ ತರಬೇತಿ ಕೇಂದ್ರ ಉದ್ಘಾಟನೆ”

Design a site like this with WordPress.com
Get started