ಉಡುಪಿ: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 14ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವವು ಮಾ.10 ಮತ್ತು 11ರಂದು ನಡೆಯಲಿದೆ. ಮಾ.10ರಂದು ಬೆಳಿಗ್ಗೆ 10.00ಕ್ಕೆ ಹಸಿರುವಾಣಿ ಗರೋಡಿ ಪ್ರವೇಶ ಹಾಗೂ ರಾತ್ರಿ 8.00ಕ್ಕೆ ಅಗೇಲ್ ಸೇವೆ ನಡೆಯಲಿದೆ. ಮಾ.11ರಂದು ಬೆಳಿಗ್ಗೆ 6.00ಕ್ಕೆ ಶ್ರೀ ಬೈದೇರುಗಳ ಮತ್ತು ಪರಿವಾರ ದೈವಗಳ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 6.15ಕ್ಕೆ ಶ್ರೀ ಬೈದೇರುಗಳ ನೇಮೋತ್ಸವವು ಜರಗಲಿದ್ದು, ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆContinue reading “ಮಾ.10-11: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವ”
Tag Archives: ಸ್ಥಳೀಯ ಸುದ್ದಿ
ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ: ಪ್ರತಿಷ್ಠಾ ವರ್ಧಂತ್ಯುತ್ಸವ, 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ
ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ್ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಭಜನಾ ಸಂಚಾಲಕ ಮಂಜಪ್ಪ ಸುವರ್ಣ, ಭಜನಾ ಸಹ ಸಂಚಾಲಕರಾದ ಎ.ಮಾಧವ ಪೂಜಾರಿ, ಶಂಕರ ಪೂಜಾರಿ, ಮಹಿಳಾ ಘಟಕದ ಸಂಚಾಲಕಿContinue reading “ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ: ಪ್ರತಿಷ್ಠಾ ವರ್ಧಂತ್ಯುತ್ಸವ, 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ”
ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ
ಉಡುಪಿ: ಶ್ರೀ ಬ್ರಹ್ಮಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 2021-24ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಆಮೀನ್ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರು: ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷರು: ಶಶಿಧರ ಎಂ. ಅಮೀನ್ ವಡಬಾಂಡೇಶ್ವರ ಮತ್ತು ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ: ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ: ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ: ಎ.ಶಿವಕುಮಾರ್ ಅಂಬಲಪಾಡಿ, ಜತೆ ಕಾರ್ಯದರ್ಶಿ: ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಜತೆ ಕೋಶಾಧಿಕಾರಿ: ವಿನಯ್ ಕುಮಾರ್ ಕಲ್ಮಾಡಿ, ಆಡಳಿತContinue reading “ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ”
ಅಲೆವೂರಿನಲ್ಲಿ ಗ್ರಾಮ ಒನ್ ಕೇಂದ್ರ ಕಚೇರಿ ಉದ್ಘಾಟನೆ, ಜಿಲ್ಲೆಗೆ ಮೊದಲ ಇ ಸ್ಟ್ಯಾಂಪ್ ಗ್ರಾಮ ಒನ್ ಅಲೆವೂರು
ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಗ್ರಾಮ ಒನ್ ಕಚೇರಿ ಅಲೆವೂರಿನ ರಾಮಪುರದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರಿಂದ ಉದ್ಘಾಟನೆಗೊಂಡಿತು. ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಗ್ರಾಮ ಒನ್ ನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತ ಗ್ರಾಮೀಣ ಭಾಗದ ಜನರು ನಾಡಕಚೇರಿ ಹಾಗೂ ಬೇರೆ ಕಡೆ ತೆರಳಿದೆ ಗ್ರಾಮದಲ್ಲಿಯೆ ಎಲ್ಲ ಸರಕಾರಿ ಸವಲತ್ತು ನೀಡುವ ಯೋಚನೆಯಿಂದ ಈ ಯೋಜನೆ ಮಾಡಲಾಗಿದ್ದು ಮುಂದೆ ಎಲ್ಲ ಸೇವೆಗಳೂ ಇದರಲ್ಲಿಯೇ ಲಭ್ಯವಾಗಲಿದ್ದು ಜನ ಇದರContinue reading “ಅಲೆವೂರಿನಲ್ಲಿ ಗ್ರಾಮ ಒನ್ ಕೇಂದ್ರ ಕಚೇರಿ ಉದ್ಘಾಟನೆ, ಜಿಲ್ಲೆಗೆ ಮೊದಲ ಇ ಸ್ಟ್ಯಾಂಪ್ ಗ್ರಾಮ ಒನ್ ಅಲೆವೂರು”
ನವೀಕೃತ ಅಂಬಲಪಾಡಿ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ
ಉಡುಪಿ: ಖ್ಯಾತ ವ್ಯಾಯಾಮ ಶಿಕ್ಷಕರಾಗಿದ್ದ ಅಂಬಲಪಾಡಿ ದಿ! ಕುಸ್ತಿ ಐತಪ್ಪ ಸುವರ್ಣರವರಿಂದ ಸ್ಥಾಪಿಸಲ್ಪಟ್ಟಿದ್ದ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ನವೀಕೃತ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಇದರ ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜ.17ರಂದು ಕುತ್ಪಾಡಿ ಕಾನಂಗಿ ಬಾಲಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಸರಳ ರೀತಿಯಲ್ಲಿ ನೆರವೇರಿತು. ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಿದಿಯೂರು ಇವರಿಂದ ಭಜನಾ ಸೇವೆ ನಡೆಯಿತು. ಮಹಾಪೂಜೆಯ ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿContinue reading “ನವೀಕೃತ ಅಂಬಲಪಾಡಿ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ”
ವಿಧಾನ ಪರಿಷತ್ ಚುನಾವಣೆ: ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರ ಮತದಾನ
ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಒಂದಾಗಿ ಸೇರಿ ಡಿ.10 ಶುಕ್ರವಾರ ಬೆಳಿಗ್ಗೆ 11.00 ಗಂಟೆಯೊಳಗೆ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಗ್ರಾಮ ಪಂಚಾಯತ್ ಸದಸ್ಯರಾದ ಶಕುಂತಳ ಶೆಟ್ಟಿ, ಭಾರತಿ ಭಾಸ್ಕರ್, ಪ್ರಮೋದ್ ಸಾಲ್ಯಾನ್, ಶಶಿಧರ್ ಸುವರ್ಣ, ಸುಂದರ ಪೂಜಾರಿ, ಸುಮಂಗಲ, ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುನಿಲ್ ಕಪ್ಪೆಟ್ಟು ಸುಜಾತ ಶೆಟ್ಟಿ, ಕುಸುಮ, ಸುಭಾಷಿನಿ, ಸಬಿತಾ ಮೆಂಡನ್,Continue reading “ವಿಧಾನ ಪರಿಷತ್ ಚುನಾವಣೆ: ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರ ಮತದಾನ“
ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಆಯ್ಕೆ
ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2021-23ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಪುನರಾಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳಾಗಿ, ಎ.ಶಿವಕುಮಾರ್ (ಉಪಾಧ್ಯಕ್ಷರು); ರಾಜೇಶ್ (ಪ್ರಧಾನ ಕಾರ್ಯದರ್ಶಿ); ಮಹೇಂದ್ರ ಕೋಟ್ಯಾನ್ ಮತ್ತು ಅವಿನಾಶ್ ಪೂಜಾರಿ (ಜತೆ ಕಾರ್ಯದರ್ಶಿಗಳು); ದಯಾನಂದ ಎ. (ಕೋಶಾಧಿಕಾರಿ); ಶಿವದಾಸ್ ಪಿ., ಮುದ್ದಣ್ಣ ಪೂಜಾರಿ, ಸುಧಾಕರ ಎ., ರಮೇಶ್ ಕೋಟ್ಯಾನ್, ವಿಜಯಾ ಜಿ. ಬಂಗೇರ, ಗುರುರಾಜ್ ಪೂಜಾರಿ, ಸತೀಶ್ ಜಿ. ಪೂಜಾರಿ, ವಿನಯ್ ಕುಮಾರ್, ಭಾಸ್ಕರ್Continue reading “ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಆಯ್ಕೆ”
ಆದಿಉಡುಪಿಯಲ್ಲಿ ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ನೂತನ ಶಾಖೆ ಉದ್ಘಾಟನೆ
ಉಡುಪಿ:ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ., ಬ್ರಹ್ಮಾವರ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ನ.7ರಂದು ಆದಿಉಡುಪಿಯ ಜೈ ಜವಾನ್ ರೋಡ್ ನಲ್ಲಿರುವ ವೀರ ಭವನ ಕಟ್ಟಡದಲ್ಲಿ ನಡೆಯಿತು. ಹಿರಿಯ ಲೆಕ್ಕ ಪರಿಶೋಧಕ ಸಿಎ. ದೇವ್ ಆನಂದ್ ಅವರು ಜ್ಯೋತಿ ಬೆಳಗಿಸಿ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ವಿವಿದೋದ್ಧೇಶ ಸಹಕಾರ ಸಂಘ (ರಿ.) ಅಧ್ಯಕ್ಷ ಕೆ.ಸುಭಾಷ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮಶಿವ, ಸಿಎ. ರೇಖಾ ದೇವಾನಂದ್, ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ.Continue reading “ಆದಿಉಡುಪಿಯಲ್ಲಿ ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ನೂತನ ಶಾಖೆ ಉದ್ಘಾಟನೆ”
ಅಲೆವೂರು ಕರ್ವಾಲು ನಮ್ಮೂರ ಕನ್ನಡ ಶಾಲಾ ಉತ್ಸವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ
ಶ್ರೀ ವಿಷ್ಣು ಸ್ನೇಹ ಬಳಗ ಕರ್ವಾಲು ಇದರ ವತಿಯಿಂದ ಕರ್ವಾಲಿನ ಸರಕಾರಿ ಶಾಲೆಯಲ್ಲಿ *ನಮ್ಮೂರ ಕನ್ನಡ ಶಾಲಾ ಉತ್ಸವ* ಎನ್ನುವ ಹೆಸರಿನಲ್ಲಿ ವಿಶಿಷ್ಠವಾಗಿ ಆಚರಿಸಲಾಯಿತು. ಬೆಳಿಗ್ಗಿನಿಂದ ಸಂಜೆಯತನಕ ಊರಿನವರು ಹಾಗೂ ಶಾಲಾ ಪಕ್ಕದ ಊರಿನ ಶಾಲಾಭಿಮಾನಿಗಳು ಒಟ್ಟು ಸೇರಿ ಶಾಲಾ ಸ್ವಚ್ಚತಾ ಕಾರ್ಯಕ್ರಮ, ಹೂದೋಟ, ಪೌಷ್ಟಿಕ ತೋಟ, ಬಣ್ಣ ಬಳಿಯುವುದು ಇತ್ಯಾದಿ ಕೆಲಸಗಳನ್ನು ಶ್ರಮದಾನ ಮೂಲಕ ನಡೆಸಿದರು. ಸಭಾ ಕಾರ್ಯಕ್ರಮ ನಡೆಸಿ ಕನ್ನಡ ತಾಯಿಗೆ ಹಾಗೂ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಲಾಯಿತು. ಭಾರತ 105 ಕೋಟಿ ವ್ಯಾಕ್ಸಿನ್ ನೀಡಿContinue reading “ಅಲೆವೂರು ಕರ್ವಾಲು ನಮ್ಮೂರ ಕನ್ನಡ ಶಾಲಾ ಉತ್ಸವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ”
ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ
ಕನ್ನಡ ಶಾಲೆಗಳು ನಿಧಾನವಾಗಿ ಹೇಗೆ ಅಂತ್ಯಗೊಳ್ಳುತ್ತಿವೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದಕ್ಕೆ ಸೆಡ್ಡು ಹೊಡೆದು ನಮ್ಮ ಊರಿನ ಶಾಲೆ ಮುಚ್ಚಬಾರದು ಅದು ನಮ್ಮೂರ ಹೆಮ್ಮೆ ಎಂದು ಕಳೆದ ಐದು ವರ್ಷಗಳಿಂದ ಶಾಲಾ ದತ್ತು ಸ್ವೀಕಾರ ಎನ್ನುವ ಕಾರ್ಯಕ್ರಮ ನಡೆಸಿ ಮುಚ್ಚುವ ಹಂತದಲ್ಲಿದ್ದ ಅಲೆವೂರು ಕರ್ವಾಲಿನ ಸರಕಾರಿ ಕನ್ನಡ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಅಲೆವೂರು ಕರ್ವಾಲಿನ ಹೆಮ್ಮೆಯ ಸಂಸ್ಥೆ ಶ್ರೀ ವಿಷ್ಣು ಸ್ನೇಹ ಬಳಗ ಇದೀಗ ಮತ್ತೊಂದು ನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದೇ *ನಮ್ಮೂರ ಶಾಲಾContinue reading “ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ”