ವಿಶ್ವದಾದ್ಯಂತ ಕೋವಿಡ್-19 ಲಸಿಕೆಯನ್ನು ರವಾನಿಸಿರುವ ಭಾರತ ಜಾಗತಿಕ ಮನ್ನಣೆ ಪಡೆದಿರುವುದು ಐತಿಹಾಸಿಕ ಸಾಧನೆಯಾಗಿದೆ. ಪ್ರಸಕ್ತ ದೇಶದಾದ್ಯಂತ 5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅದ್ವಿತೀಯ ಸಾಧನೆ ಅಭಿನಂದನಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕೊರೋನಾ ವೈರಸ್ ನ 2ನೇ ಅಲೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ತೋರಿ ಬರುತ್ತಿದ್ದಂತೆಯೇ ಕೇಂದ್ರ ಸರಕಾರ ಇದೀಗ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶContinue reading “5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯ ಸಾಧನೆ ಅಭಿನಂದನಾರ್ಹ : ಕುಯಿಲಾಡಿ”
Tag Archives: ಸ್ಥಳೀಯ ಸುದ್ದಿ
ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ
ತನ್ನ ಆಡಳಿತಾವಧಿಯಲ್ಲಿ ಸಾಲ ಪಡೆಯುವುದರಲ್ಲಿ ಹಿಂದಿನ ಎಲ್ಲಾ ಮುಖ್ಯ ಮಂತ್ರಿಗಳನ್ನು ಮೀರಿಸಿ ರಾಜ್ಯವನ್ನು ಅತಿ ಹೆಚ್ಚು ಸಾಲದ ಕೂಪಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ. ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ಸದನದಲ್ಲಿ ಪೂರ್ವ ನಿರ್ಧರಿತವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡಿದ್ದು, ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲೂ ಕ್ಷುಲ್ಲಕ ಕಾರಣ ನೀಡಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್ ನContinue reading “ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ”
ತೆರಿಗೆ ರಹಿತ ಡಿಸೀಲ್ ಘೋಷಣೆ, ಮೀನುಗಾರ ವರ್ಗದಲ್ಲಿ ಮಂದಹಾಸ – ಕುಯಿಲಾಡಿ ಸುರೇಶ್ ನಾಯಕ್
ರಾಜ್ಯ ಬಜೆಟ್‍ನಲ್ಲಿ ಯಾಂತ್ರೀಕೃತ ದೋಣಿಗಳಿಗೆ ರೂ.1.50 ಲಕ್ಷ ಕಿ.ಲೀ. ಡಿಸೀಲ್ ಮನ್ನಾ, ಮಾರಾಟ ತೆರಿಗೆ ಮರುಪಾವತಿಯ ಬದಲು, ಡಿಸೀಲ್ ಡೆಲಿವರಿ ಕೇಂದ್ರದಲ್ಲಿ ಕರ ರಹಿತ ಡಿಸೀಲ್ ವಿತರಣೆಗೆ ಅನುಮೋದನೆ ನೀಡಿರುವುದು ಕರಾವಳಿಯ ಮೀನುಗಾರ ವರ್ಗದಲ್ಲಿ ಮಂದಹಾಸ ಮೂಡಿಸಿದೆ. ಬಜೆಟ್‍ನಲ್ಲಿ ಸದ್ರಿ ಸೌಲಭ್ಯದ ಘೋಷಣೆಗೈದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.
ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ – ಕುಯಿಲಾಡಿ ಸುರೇಶ್ ನಾಯಕ್
ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಲ್ಪಟ್ಟ ಈ ಬಾರಿಯ ರಾಜ್ಯ ಬಜೆಟ್ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಮಹಿಳೆಯರಿಗೆ 6 ತಿಂಗಳ ಹೆಚ್ಚುವರಿ ಹೆರಿಗೆ ರಜೆ, ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ರಿಯಾಯಿತಿ ಪ್ರಯಾಣ, ಎಪಿಎಂಸಿಯಲ್ಲಿ ಮಹಿಳಾ ಮೀಸಲಾತಿ, ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ, 2 ಕೋಟಿ ಮಹಿಳೆಯರಿಗೆ ಸ್ವೋಧ್ಯೋಗಕ್ಕಾಗಿ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮುಂತಾದ ಹಲವು ಘೋಷಣೆಗಳೊಂದಿಗೆ ಮಹಿಳಾContinue reading “ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ – ಕುಯಿಲಾಡಿ ಸುರೇಶ್ ನಾಯಕ್”
ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ
ಉಡುಪಿ ಜಿಲ್ಲಾ ಬಿಜೆಪಿಯಿಂದ ಗೌರವ ಸನ್ಮಾನ ಪ್ರಧಾನಿ ಮೋದಿ ಆಶಯದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕ್ರೀಡಾಳುಗಳು ಸಾಧನೆಯ ಉತ್ತುಂಗಕ್ಕೇರುವಂತೆ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 2.50 ಕೋಟಿ ಯುವ ಜನತೆಯ ಸಬಲೀಕರಣದ ಜೊತೆಗೆ ಕ್ರೀಡಾ ಪ್ರತಿಭೆಗಳಿಗೆ ಸದವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ. ಕ್ರೀಡಾ ರಂಗದಲ್ಲಿ ಈಗಾಗಲೇ ವಿಶೇಷ ಸಾಧನೆಗೈಯುತ್ತಿರುವ ಉಡುಪಿ ಜಿಲ್ಲೆಯ ಮೂಲಭೂತ ಆದ್ಯತೆಗಳಿಗೂ ಸಕಾಲಿಕವಾಗಿ ಸ್ಪಂದಿಸಲಾಗುವುದು ಎಂದು ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವContinue reading “ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ”
ಸಂಘಟನಾತ್ಮಕ ಚಟುವಟಿಕೆಗಳಿಗೆ ನಿಗದಿತ ಸಮಯದ ಸ್ಪಂದನೆ ಅಗತ್ಯ – ಕುಯಿಲಾಡಿ
ರಾಜ್ಯದಿಂದ ನಿಯಮಿತವಾಗಿ ಬರುವ ಸೂಚನೆಯಂತೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಅನುಷ್ಠಾನಕ್ಕೆ ಜಿಲ್ಲಾ, ಮೋರ್ಚಾ, ಮಂಡಲ ಸಹಿತ ಎಲ್ಲ ಸ್ತರಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ನಿಗದಿತ ಸಮಯದ ಸ್ಪಂದನೆ ಅಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ವಿವಿಧ ಮೋರ್ಚಾಗಳು ಸಂಘಟನಾತ್ಮಕ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳContinue reading “ಸಂಘಟನಾತ್ಮಕ ಚಟುವಟಿಕೆಗಳಿಗೆ ನಿಗದಿತ ಸಮಯದ ಸ್ಪಂದನೆ ಅಗತ್ಯ – ಕುಯಿಲಾಡಿ”
ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣೆ, ಸಮರ್ಪಣಾ ದಿನಾಚರಣೆ
ಉಡುಪಿ: ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲೋರ್ವರಾದ ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನವನ್ನು ಫೆ.11 ರಂದು ಸಮರ್ಪಣಾ ದಿನವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ ಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಕೆ.ಉದಯ ಕುಮಾರ್ ಶೆಟ್ಟಿಯವರು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶಗಳು, ನಿಸ್ವಾರ್ಥ ಮನೋಭಾವದ ಸೇವೆContinue reading “ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣೆ, ಸಮರ್ಪಣಾ ದಿನಾಚರಣೆ”
ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ
ಬಿಜೆಪಿ ಆರ್ಥಿಕ ಪ್ರಕೋಷ್ಠ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ (ರಿ.) ಇದರ ಜಂಟಿ ಆಶ್ರಯದಲ್ಲಿ “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿಗಳು ಫೆ.6 ರಂದು ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರ ಗೋಷ್ಠಿಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.Continue reading “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ”
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ
ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರನ್ನು ಸ್ವಾಗತಿಸಲಾಯಿತು.ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್ ರವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರಾದ ರುಡಾಲ್ಫ್ ಡಿಸೋಜರವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.ರಾಜ್ಯ ಅ.ಸಂ.ಮೋ. ಕಾರ್ಯದರ್ಶಿಯವರಾದ ಸಲೀಂ ಅಂಬಾಗಿಲುರವರು ಅಲ್ಪಸಂಖ್ಯಾತರ ಯೋಜನೆಗಳContinue reading “ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ”
ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ
ಕರ್ನಾಟಕ ಪುರಸಭೆ ಕಾಯ್ದೆ – 1964ರ ಪ್ರಕರಣ11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಉಡುಪಿ ನಗರಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ. ಶ್ರೀ ವಿಜಯ ಕುಂದರ್, ವಡಬಾಂಡೇಶ್ವರ ಮಲ್ಪೆ, ಶ್ರೀ ದೇವದಾಸ್ ವಿ ಶೆಟ್ಟಿಗಾರ್, ಕಿನ್ನಿಮುಲ್ಕಿ, ಶ್ರೀ ದಿನೇಶ್ ಪೈ, ಸುಬ್ರಹ್ಮಣ್ಯನಗರ ಪುತ್ತೂರು, ಶ್ರೀಮತಿ ಸುಬೇದಾ ಪುತ್ತೂರು, ಶ್ರೀಮತಿ ಅರುಣಾ ಎಸ್. ಪೂಜಾರಿ ಶಿವಳ್ಳಿ ಇವರನ್ನು ಉಡುಪಿ ನಗರಸಭೆಗೆ ಸರ್ಕಾರವು ನಾಮನಿರ್ದೇಶನ ಮಾಡಿರುತ್ತದೆ ನಗರ ಸಭೆಗೆ ಸದಸ್ಯರ ನಾಮನಿರ್ದೇಶನ ಮಾಡಿರುವ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್Continue reading “ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ”