ಉಡುಪಿ: ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಶ್ರೀ ವಿಠೋಬ ಭಜನಾ ಮಂದಿರದ 66ನೇ ಭಜನಾ ಮಂಗಲೋತ್ಸವದ ಪೂರ್ವಭಾವಿಯಾಗಿ ನಡೆದ ಭಜನಾ ಸಪ್ತಾಹಕ್ಕೆ ಸಂಘದ ಅಧ್ಯಕ್ಷ ಶಿವದಾಸ್ ಪಿ. ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಪಾಧ್ಯಕ್ಷ ಎ.ಮುದ್ದಣ್ಣ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ದಯಾನಂದ ಎ., ಪ್ರಧಾನ ಕಾರ್ಯದರ್ಶಿ ರಾಜೇಶ್, ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ವಿನಯ್ ಕುಮಾರ್, ಗೌರವ ಭಜನಾ ಸಂಚಾಲಕ ಕೆ.ಮಂಜಪ್ಪContinue reading “ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ : 66ನೇ ಭಜನಾ ಮಂಗಲೋತ್ಸವದ ಪೂರ್ವಭಾವಿ ಭಜನಾ ಸಪ್ತಾಹಕ್ಕೆ ಚಾಲನೆ”
Tag Archives: ಸ್ಥಳೀಯ ಸುದ್ದಿ
ಗುಂಡು ಶೆಟ್ಟಿ ಕಪ್ಪೆಟ್ಟು ನಿಧನ
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು (88 ವರ್ಷ) ಅವರು ಡಿ.4ರಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಐದು ದಶಕಗಳಿಂದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಪ್ಪೆಟ್ಟು ಇದರ ಶೆಟ್ಟಿ ಬಾಲೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಗುಂಡು ಶೆಟ್ಟಿ ಕಪ್ಪೆಟ್ಟು ಅವರು ತನ್ನ ನೇರ ನಡೆ-ನುಡಿಗಳಿಂದ ಜನಾನುರಾಗಿಯಾಗಿದ್ದು, ದೈವಾರಾಧನೆ ಸಹಿತ ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರ ಸಹಿತ ಬಂಧುContinue reading “ಗುಂಡು ಶೆಟ್ಟಿ ಕಪ್ಪೆಟ್ಟು ನಿಧನ”
ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಮ್. ಅಮೀನ್ ವಡಬಾಂಡೇಶ್ವರ ಆಯ್ಕೆ
ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 2024-26ನೇ ಸಾಲಿನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಮ್. ಅಮೀನ್ ವಡಭಾoಡೇಶ್ವರ ಇವರು ಡಿ.22ರಂದು ಗರೋಡಿಯ ಪ್ರಾಂಗಣದಲ್ಲಿ ನಡೆದ 2022-24ನೇ ಸಾಲಿನ ಮಹಾಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಅಚ್ಯುತ ಎ. ಅಮೀನ್ ಕಲ್ಮಾಡಿ, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸಿ. ಬಂಗೇರ, ಹರೀಶ್ ಎಮ್.ಕೆ. ಕಲ್ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಜತ್ತನ್ ಮಲ್ಪೆ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿಯಾಗಿ ವಿನಯ ಕುಮಾರ್ ಕಲ್ಮಾಡಿ, ಜೊತೆ ಕೋಶಾಧಿಕಾರಿಯಾಗಿ ಜಯಕರ ಪೂಜಾರಿ ಕೊಡವೂರು ,Continue reading “ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಎಮ್. ಅಮೀನ್ ವಡಬಾಂಡೇಶ್ವರ ಆಯ್ಕೆ”
ಜಲಜ ಪೂಜಾರ್ತಿ, ಬೀಡು ಮಾರ್ಗ, ಅಂಬಲಪಾಡಿ ನಿಧನ
ಅಂಬಲಪಾಡಿ ಗ್ರಾಮದ ಬೀಡು ಮಾರ್ಗ ನಿವಾಸಿ ಶ್ರೀಮತಿ ಜಲಜ ಪೂಜಾರ್ತಿ (74 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಸೆ.9) ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.
ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು ನಿಧನ
ಉಡುಪಿ: ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಹಿರಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು (81 ವರ್ಷ) ಅವರು ಇಂದು ಸೆ.8ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಹಾಬಲ ಪೂಜಾರಿ ಅವರು ಬಸ್ ಮಾಲಕರಾಗಿದ್ದು, ಉಡುಪಿಯ ಹಿರಿಯ ಬಸ್ ಏಜೆಂಟರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಬಂಧು ವರ್ಗ ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರವು ನಾಳೆ ಸೆ.9ರಂದುContinue reading “ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಪಂದುಬೆಟ್ಟು ನಿಧನ”
ಜು.18, ವಾಲ್ಮೀಕಿ ನಿಗಮದ 187 ಕೋಟಿ ರೂ. ದುರುಪಯೋಗ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ – ಉಡುಪಿ ಜಿಲ್ಲೆಯಿಂದ 1,000 ಮಂದಿ ಭಾಗಿ : ದಿನಕರ ಬಾಬು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ನೇತೃತ್ವದಲ್ಲಿ ಜು.18, ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ, ಪಾದಯಾತ್ರೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯಿಂದ 1,000 ಮಂದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ. ಈಗಾಗಲೇ ಸಿಬಿಐ,Continue reading “ಜು.18, ವಾಲ್ಮೀಕಿ ನಿಗಮದ 187 ಕೋಟಿ ರೂ. ದುರುಪಯೋಗ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ – ಉಡುಪಿ ಜಿಲ್ಲೆಯಿಂದ 1,000 ಮಂದಿ ಭಾಗಿ : ದಿನಕರ ಬಾಬು”
‘ಶ್ರೀ ರಾಮನ ಆದರ್ಶವನ್ನು ಮೈಗೂಡಿಸಿಕೊಳ್ಳೋಣ’ : ಡಾ! ನಿ.ಬೀ. ವಿಜಯ ಬಲ್ಲಾಳ್ಅಂಬಲಪಾಡಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ
ಉಡುಪಿ: ಶತಮಾನಗಳ ಹೋರಾಟ, ತ್ಯಾಗ, ಬಲಿದಾನಗಳ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಬಾಲ ರಾಮನಿಗೆ ಪ್ರಾಣ ಪ್ರತಿಷ್ಠೆ ಆಗುವಂತಾಗಿದೆ. ಇದು ದೇಶದ ಶ್ರೇಯಸ್ಸಿನ ಸಂಕೇತವಾಗಿದೆ. ಶ್ರೀ ರಾಮೋತ್ಸವ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯ ನಿರಂತರ ಮನೆ ಮನಗಳಲ್ಲಿ ಶ್ರೀ ರಾಮನ ಆರಾಧನೆ ಮಾಡುವಂತಾಗಲಿ ಎಂದು ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು. ಅವರು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಶ್ರೀContinue reading “‘ಶ್ರೀ ರಾಮನ ಆದರ್ಶವನ್ನು ಮೈಗೂಡಿಸಿಕೊಳ್ಳೋಣ’ : ಡಾ! ನಿ.ಬೀ. ವಿಜಯ ಬಲ್ಲಾಳ್ಅಂಬಲಪಾಡಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ”
ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಅಂಬಲಪಾಡಿ ಸ್ವಯಂ ಸೇವಕರಿಂದ ಸಾಮೂಹಿಕ ಪ್ರಾರ್ಥನೆ, ಮಂತ್ರಾಕ್ಷತೆ ವಿತರಣೆ
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮ ಮಂದಿರದ ಉದ್ಘಾಟನೆಯ ಪ್ರಯುಕ್ತ ಅಂಬಲಪಾಡಿ ನಗರ ಮತ್ತು ಗ್ರಾಮಾಂತರ ಭಾಗದ ರಾಮ ಭಕ್ತ ಸ್ವಯಂ ಸೇವಕರಿಂದ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. 9 ತಂಡಗಳ ನೇತೃತ್ವದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ 9 ತಂಡಗಳ ಪ್ರಮುಖರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.
ಹಿಜಾಬ್ ಆದೇಶ ಹಿಂಪಡೆತ – ಮುಸಲ್ಮಾನರ ತುಷ್ಠೀಕರಣವೇ ಸಿಧ್ದರಾಮಯ್ಯವರ ಏಕೈಕ ಅಜೆಂಡಾ – ಶ್ರೀಕಾಂತ ನಾಯಕ್
ಉಡುಪಿ:ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿಧ್ಧರಾಮಯ್ಯರವರು ಹಿಂದಿನ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತಂತೆ ನೀಡಿದ ಆದೇಶ ಹಿಂಪಡೆಯುವ ಮಾತನ್ನಾಡಿ ತಮ್ಮ ಮುಸ್ಲಿಮರ ತುಷ್ಠೀಕರಣದ ಪರಮಾವಧಿ ತಲುಪುತ್ತಿದ್ದಾರೆ. ಸಿಧ್ಧರಾಮಯ್ಯರವರಿಗೆ ಹಿಂದೂಗಳೆಂದರೆ ಅಸಡ್ಡೆ. ಈ ಹಿಂದೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ, ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಇತ್ಯಾದಿ ಮಾತುಗಳಿಂದ ತನ್ನ ಮುಸ್ಲಿಂ ಪ್ರೀತಿಯನ್ನು ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಅವರ ಉಪಮುಖ್ಯಮಂತ್ರಿಗಳಾದ ಡಿಕೆಶಿಯವರು ದೆ ಆರ್ ಆಲ್ ಮೈ ಬ್ರದರ್ಸ್, ಅವರ ಮೇಲಿನ ಕೋಮು ಗಲಭೆ ಕೇಸುಗಳನ್ನುContinue reading “ಹಿಜಾಬ್ ಆದೇಶ ಹಿಂಪಡೆತ – ಮುಸಲ್ಮಾನರ ತುಷ್ಠೀಕರಣವೇ ಸಿಧ್ದರಾಮಯ್ಯವರ ಏಕೈಕ ಅಜೆಂಡಾ – ಶ್ರೀಕಾಂತ ನಾಯಕ್”
ಬಿಜೆಪಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ವತಿಯಿಂದ ಶ್ರೀ ಶಾರದಾ ಪೂಜೆ ಸಂಪನ್ನ
ಉಡುಪಿ: ನವರಾತ್ರಿ ಉತ್ಸವದ ಪ್ರಯುಕ್ತ ಬಿಜೆಪಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ವತಿಯಿಂದ ಶ್ರೀ ಶಾರದಾ ಪೂಜೆಯು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸಂಪನ್ನಗೊಂಡಿತು. ರಶ್ಮಿ ಭಟ್ ರವರಿಂದ ವೀಣಾ ವಾದನ, ಮಾಯಾ ಕಾಮತ್ ಬಳಗದಿಂದ ಭಜನಾ ಸೇವೆ ನಡೆಯಿತು. ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕ ಯಶ್ಪಾಲ್Continue reading “ಬಿಜೆಪಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ವತಿಯಿಂದ ಶ್ರೀ ಶಾರದಾ ಪೂಜೆ ಸಂಪನ್ನ”