ಉಡುಪಿ: ಖ್ಯಾತ ವ್ಯಾಯಾಮ ಶಿಕ್ಷಕರಾಗಿದ್ದ ಅಂಬಲಪಾಡಿ ದಿ! ಕುಸ್ತಿ ಐತಪ್ಪ ಸುವರ್ಣರವರಿಂದ ಸ್ಥಾಪಿಸಲ್ಪಟ್ಟಿದ್ದ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ನವೀಕೃತ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಇದರ ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜ.17ರಂದು ಕುತ್ಪಾಡಿ ಕಾನಂಗಿ ಬಾಲಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಸರಳ ರೀತಿಯಲ್ಲಿ ನೆರವೇರಿತು. ಶ್ರೀ ನಾರಾಯಣ ಗುರು ಭಜನಾ ಮಂಡಳಿ ಕಿದಿಯೂರು ಇವರಿಂದ ಭಜನಾ ಸೇವೆ ನಡೆಯಿತು. ಮಹಾಪೂಜೆಯ ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿContinue reading “ನವೀಕೃತ ಅಂಬಲಪಾಡಿ ಶ್ರೀ ರಾಮಾಂಜನೇಯ ಪೂಜಾ ಮಂದಿರ (ವ್ಯಾಯಾಮ ಶಾಲೆ) ಪುನರ್ ಪ್ರತಿಷ್ಠೆ, ಪ್ರವೇಶೋತ್ಸವ”
Tag Archives: ಸ್ಥಳೀಯ ಸುದ್ದಿ
ವಿಧಾನ ಪರಿಷತ್ ಚುನಾವಣೆ: ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರ ಮತದಾನ
ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಒಂದಾಗಿ ಸೇರಿ ಡಿ.10 ಶುಕ್ರವಾರ ಬೆಳಿಗ್ಗೆ 11.00 ಗಂಟೆಯೊಳಗೆ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಗ್ರಾಮ ಪಂಚಾಯತ್ ಸದಸ್ಯರಾದ ಶಕುಂತಳ ಶೆಟ್ಟಿ, ಭಾರತಿ ಭಾಸ್ಕರ್, ಪ್ರಮೋದ್ ಸಾಲ್ಯಾನ್, ಶಶಿಧರ್ ಸುವರ್ಣ, ಸುಂದರ ಪೂಜಾರಿ, ಸುಮಂಗಲ, ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುನಿಲ್ ಕಪ್ಪೆಟ್ಟು ಸುಜಾತ ಶೆಟ್ಟಿ, ಕುಸುಮ, ಸುಭಾಷಿನಿ, ಸಬಿತಾ ಮೆಂಡನ್,Continue reading “ವಿಧಾನ ಪರಿಷತ್ ಚುನಾವಣೆ: ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರ ಮತದಾನ“
ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಆಯ್ಕೆ
ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2021-23ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಪುನರಾಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳಾಗಿ, ಎ.ಶಿವಕುಮಾರ್ (ಉಪಾಧ್ಯಕ್ಷರು); ರಾಜೇಶ್ (ಪ್ರಧಾನ ಕಾರ್ಯದರ್ಶಿ); ಮಹೇಂದ್ರ ಕೋಟ್ಯಾನ್ ಮತ್ತು ಅವಿನಾಶ್ ಪೂಜಾರಿ (ಜತೆ ಕಾರ್ಯದರ್ಶಿಗಳು); ದಯಾನಂದ ಎ. (ಕೋಶಾಧಿಕಾರಿ); ಶಿವದಾಸ್ ಪಿ., ಮುದ್ದಣ್ಣ ಪೂಜಾರಿ, ಸುಧಾಕರ ಎ., ರಮೇಶ್ ಕೋಟ್ಯಾನ್, ವಿಜಯಾ ಜಿ. ಬಂಗೇರ, ಗುರುರಾಜ್ ಪೂಜಾರಿ, ಸತೀಶ್ ಜಿ. ಪೂಜಾರಿ, ವಿನಯ್ ಕುಮಾರ್, ಭಾಸ್ಕರ್Continue reading “ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷರಾಗಿ ಗೋಪಾಲ್ ಸಿ. ಬಂಗೇರ ಪಂದುಬೆಟ್ಟು ಆಯ್ಕೆ”
ಆದಿಉಡುಪಿಯಲ್ಲಿ ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ನೂತನ ಶಾಖೆ ಉದ್ಘಾಟನೆ
ಉಡುಪಿ:ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ., ಬ್ರಹ್ಮಾವರ ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ನ.7ರಂದು ಆದಿಉಡುಪಿಯ ಜೈ ಜವಾನ್ ರೋಡ್ ನಲ್ಲಿರುವ ವೀರ ಭವನ ಕಟ್ಟಡದಲ್ಲಿ ನಡೆಯಿತು. ಹಿರಿಯ ಲೆಕ್ಕ ಪರಿಶೋಧಕ ಸಿಎ. ದೇವ್ ಆನಂದ್ ಅವರು ಜ್ಯೋತಿ ಬೆಳಗಿಸಿ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ವಿವಿದೋದ್ಧೇಶ ಸಹಕಾರ ಸಂಘ (ರಿ.) ಅಧ್ಯಕ್ಷ ಕೆ.ಸುಭಾಷ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮಶಿವ, ಸಿಎ. ರೇಖಾ ದೇವಾನಂದ್, ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ.Continue reading “ಆದಿಉಡುಪಿಯಲ್ಲಿ ಫ್ಲೆಕ್ಸಿಬಿಜ್ ಅಕೌಂಟಿಂಗ್ ಸರ್ವಿಸಸ್ ಪ್ರೈ.ಲಿ. ಇದರ ನೂತನ ಶಾಖೆ ಉದ್ಘಾಟನೆ”
ಅಲೆವೂರು ಕರ್ವಾಲು ನಮ್ಮೂರ ಕನ್ನಡ ಶಾಲಾ ಉತ್ಸವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ
ಶ್ರೀ ವಿಷ್ಣು ಸ್ನೇಹ ಬಳಗ ಕರ್ವಾಲು ಇದರ ವತಿಯಿಂದ ಕರ್ವಾಲಿನ ಸರಕಾರಿ ಶಾಲೆಯಲ್ಲಿ *ನಮ್ಮೂರ ಕನ್ನಡ ಶಾಲಾ ಉತ್ಸವ* ಎನ್ನುವ ಹೆಸರಿನಲ್ಲಿ ವಿಶಿಷ್ಠವಾಗಿ ಆಚರಿಸಲಾಯಿತು. ಬೆಳಿಗ್ಗಿನಿಂದ ಸಂಜೆಯತನಕ ಊರಿನವರು ಹಾಗೂ ಶಾಲಾ ಪಕ್ಕದ ಊರಿನ ಶಾಲಾಭಿಮಾನಿಗಳು ಒಟ್ಟು ಸೇರಿ ಶಾಲಾ ಸ್ವಚ್ಚತಾ ಕಾರ್ಯಕ್ರಮ, ಹೂದೋಟ, ಪೌಷ್ಟಿಕ ತೋಟ, ಬಣ್ಣ ಬಳಿಯುವುದು ಇತ್ಯಾದಿ ಕೆಲಸಗಳನ್ನು ಶ್ರಮದಾನ ಮೂಲಕ ನಡೆಸಿದರು. ಸಭಾ ಕಾರ್ಯಕ್ರಮ ನಡೆಸಿ ಕನ್ನಡ ತಾಯಿಗೆ ಹಾಗೂ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಲಾಯಿತು. ಭಾರತ 105 ಕೋಟಿ ವ್ಯಾಕ್ಸಿನ್ ನೀಡಿContinue reading “ಅಲೆವೂರು ಕರ್ವಾಲು ನಮ್ಮೂರ ಕನ್ನಡ ಶಾಲಾ ಉತ್ಸವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ”
ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ
ಕನ್ನಡ ಶಾಲೆಗಳು ನಿಧಾನವಾಗಿ ಹೇಗೆ ಅಂತ್ಯಗೊಳ್ಳುತ್ತಿವೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದಕ್ಕೆ ಸೆಡ್ಡು ಹೊಡೆದು ನಮ್ಮ ಊರಿನ ಶಾಲೆ ಮುಚ್ಚಬಾರದು ಅದು ನಮ್ಮೂರ ಹೆಮ್ಮೆ ಎಂದು ಕಳೆದ ಐದು ವರ್ಷಗಳಿಂದ ಶಾಲಾ ದತ್ತು ಸ್ವೀಕಾರ ಎನ್ನುವ ಕಾರ್ಯಕ್ರಮ ನಡೆಸಿ ಮುಚ್ಚುವ ಹಂತದಲ್ಲಿದ್ದ ಅಲೆವೂರು ಕರ್ವಾಲಿನ ಸರಕಾರಿ ಕನ್ನಡ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಅಲೆವೂರು ಕರ್ವಾಲಿನ ಹೆಮ್ಮೆಯ ಸಂಸ್ಥೆ ಶ್ರೀ ವಿಷ್ಣು ಸ್ನೇಹ ಬಳಗ ಇದೀಗ ಮತ್ತೊಂದು ನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದೇ *ನಮ್ಮೂರ ಶಾಲಾContinue reading “ಅಲೆವೂರು ಕರ್ವಾಲು ಹೀಗೊಂದು ಕನ್ನಡ ಶಾಲೆ ಉಳಿಸಿ ಅಭಿಯಾನ”
ಕಾಪು ಮಂಡಲ – ಪದಾಧಿಕಾರಿಗಳ ಸಭೆ
ಕಾಪು: ಬಿಜೆಪಿ ಕಚೇರಿಯಲ್ಲಿ ಮಂಡಲ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಮೋರ್ಚ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರ ಹಾಗೂ ಶಕ್ತಿಕೇಂದ್ರ ಪದಾಧಿಕಾರಿಗಳ ಸಭೆ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪದಾಧಿಕಾರಿಗಳಿಗೆ ಪಕ್ಷ ನೂತನವಾಗಿ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿ ಎಲ್ಲ ಬೂತ್ ಗಳಲ್ಲಿಯೂ ಕಾರ್ಯಕ್ರಮ ನಡೆಯುವಂತಹ ಶಕ್ತಿಕೇಂದ್ರ ಮಹಾಶಕ್ತಿಕೇಂದ್ರ ಪದಾಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದರು. ಕಾಪು ಕ್ಷೇತ್ರ ಶಾಸಕರಾದ ಲಾಲಾಜಿಯವರು, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿಗಳನ್ನು ನೆನಪಿಸಿದರು.Continue reading “ಕಾಪು ಮಂಡಲ – ಪದಾಧಿಕಾರಿಗಳ ಸಭೆ”
ಭಾರತೀಯ ಜನತಾ ಪಾರ್ಟಿ ಕಾಪು ಹಾಗೂ ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಅಲೆವೂರು ಸಂತೆಯಲ್ಲಿ ಬಟ್ಟೆ ಚೀಲ ವಿತರಣೆ
ಅಲೆವೂರು ಸಂತೆಯಲ್ಲಿ ಇಂದು ಬಿಜೆಪಿ ಕಾಪು ಮಂಡಲ ಹಾಗೂ ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಅಲೆವೂರು ಜೋಡುರಸ್ತೆ ಬಳಿ ಸಂತೆಯಲ್ಲಿ ಮೋದೀಜಿ ಜನ್ಮದಿನದ ಅಂಗವಾಗಿ *ಸೇವೆ ಮತ್ತು ಸಮರ್ಪಣೆ* ಕಾರ್ಯಕ್ರಮದ ಅಂಗವಾಗಿ ಬಟ್ಟೆ ಚೀಲ ವಿತರಿಸಿ ಗ್ರಾಹಕರಿಗೆ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಾಪು ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಉದ್ಯಾವರ ಬಿಜೆಪಿ ಯುವಮೋರ್ಚ ಮಾಹಾಶಕ್ತಿಕೇಂದ್ರದ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ನಿಕಟಪೂರ್ವ ತಾಲೂಕುContinue reading “ಭಾರತೀಯ ಜನತಾ ಪಾರ್ಟಿ ಕಾಪು ಹಾಗೂ ಕಾಪು ಬಿಜೆಪಿ ಯುವಮೋರ್ಚ ವತಿಯಿಂದ ಅಲೆವೂರು ಸಂತೆಯಲ್ಲಿ ಬಟ್ಟೆ ಚೀಲ ವಿತರಣೆ”
“ಸೇವೆ ಮತ್ತು ಸಮರ್ಪಣೆ” ಅಭಿಯಾನದ ಅಂಗವಾಗಿ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಅಂಗವಾಗಿ ಬಟ್ಟೆ ಚೀಲಗಳ ಸಾರ್ವಜನಿಕರಿಗೆ ವಿತರಣೆ
ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜಿ ಯವರ 71ನೇ ಜನ್ಮದಿನದ ಪ್ರಯುಕ್ತ “ಸೇವೆ ಮತ್ತು ಸಮರ್ಪಣೆ” ಅಭಿಯಾನದ ಅಂಗವಾಗಿ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಅಂಗವಾಗಿ ಬಟ್ಟೆ ಚೀಲ ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಕಾಂತ್ ನಾಯಕ್ ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಸಂತೋಷ ಕುಮಾರ್ ಮೂಡುಬೆಳ್ಳೆ ಕಾಪು ಮಂಡಲ ಪ್ರಧಾನContinue reading ““ಸೇವೆ ಮತ್ತು ಸಮರ್ಪಣೆ” ಅಭಿಯಾನದ ಅಂಗವಾಗಿ ಕಾಪು ಸಂತೆಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಜಾಗೃತಿ ಅಂಗವಾಗಿ ಬಟ್ಟೆ ಚೀಲಗಳ ಸಾರ್ವಜನಿಕರಿಗೆ ವಿತರಣೆ”
ಅಲೆವೂರಿನಲ್ಲಿ ಬಿಜೆಪಿ ವತಿಯಿಂದ ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಉಡುಪಿ:ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಜಯಂತಿ ಅಂಗವಾಗಿ ಅಲೆವೂರು ಪಂಚಾಯತ್ ವ್ಯಾಪ್ತಿಯ 9 ಬಸ್ ನಿಲ್ದಾಣಗಳನ್ನು, ಕರ್ವಾಲು, ಕೆಮ್ತೂರು, ಮಾರ್ಪಳ್ಳಿ, ಮಣಿಪಾಲ ರಸ್ತೆ ಬಳಿ ಒಟ್ಟು 4 ಕಡೆ ಸ್ವಚ್ಚತಾ ಕಾರ್ಯಕ್ರಮಗಳನ್ನು, ಒಬ್ಬ ನೇಕಾರರಿಗೆ ಸನ್ಮಾನ, 2 ಶಕ್ತಿಕೇಂದ್ರಗಳಲ್ಲಿ ಈ ಮಹಾನ್ ಪುರುಷರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಹಾಗೂ ಸಭಾ ಕಾರ್ಯಕ್ರಮನಡೆಸಿ ಅವರ ಚಿಂತನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ನೇತ್ರತ್ವವನ್ನು ಶಕ್ತಿಕೇಂದ್ರ ಪ್ರಮುಖರಾದ ಶೇಖರ ಆಚಾರ್ಯ ಹಾಗೂ ಆಶಿಶ್ ಶೆಟ್ಟಿ ವಹಿಸಿದ್ದರು. ಪಂಚಾಯತ್ ಸದಸ್ಯರಾದ ಶಾಂತContinue reading “ಅಲೆವೂರಿನಲ್ಲಿ ಬಿಜೆಪಿ ವತಿಯಿಂದ ಅರ್ಥಪೂರ್ಣವಾಗಿ ಗಾಂಧೀ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ”