Design a site like this with WordPress.com
Get started

ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ

ಉಡುಪಿ: ಇತ್ತೀಚೆಗೆ ನಡೆದ ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ, ಈ ಕ್ರಿಕೆಟ್ ಪಂದ್ಯಾಟದಿಂದ ಉಳಿಕೆಯಾದ ಮೊತ್ತ ಸುಮಾರು ರೂ.63 ಸಾವಿರವನ್ನು ಶಾಲಾ ಮುಖ್ಯೋಪಾಧ್ಯಾಯರ ಉಪಸ್ಥಿತಿಯಲ್ಲಿ ಶಾಲೆಯನ್ನು ದತ್ತು ಪಡೆದ ಶ್ರೀ ವಿಷ್ಣು ಸ್ನೇಹ ಬಳಗ ಸಂಸ್ಥೆಗೆ ನೀಡಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಶ್ರೀಮತಿ‌ ಸವಿತಾರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುರೇಶ್ ನಾಯಕ್, ರಮೇಶ್ ಕಾಮತ್,Continue reading “ಆರ್ ಎಸ್ ಬಿ ಫ್ರೆಂಡ್ಸ್ ನೇತ್ರತ್ವದ ವಿಷ್ಣು ಟ್ರೋಫಿಯಲ್ಲಿ ಉಳಿದ ಹಣವನ್ನು ಕರ್ವಾಲು ಸರಕಾರಿ ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ನೀಡಿದ ಸಂಸ್ಥೆ”

ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್

ಕಾಪು: ಕಾಪು ಬಿಜೆಪಿ ಮಹಿಳಾಮೋರ್ಚವತಿಯಿಂದ ಇಂದು ಕುರ್ಕಾಲು ಗಿರಿನಗರ ಬಳಿಯ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ್ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ರಾಜ್ಯ ಮಹಿಳಾಮೋರ್ಚ ಪ್ರಧಾನಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ ನೇತ್ರತ್ವದಲ್ಲಿ ಕಾಪು ಮಂಡಲ ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂಧಿಯಿಂದ ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ಗರ್ಭಿಣಿ ಯುವತಿ ಮಾಳವಿಕಾ ಇವರಿಗೆ ಸೀಮಂತ ಬಡಿಸುವ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ನಡಿಯಿತು.Continue reading “ಸಾಮಾಜಿಕ ನ್ಯಾಯ ಸಪ್ತಾಹಧ ಅಂಗವಾಗಿ ಅರ್ಥಪೂರ್ಣ ಪೋಷಣ್ ಅಭಿಯಾನ್”

ಕಾಪು ಮಂಡಲ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ

ಕಾಪು: ಕಾಪು ಮಂಡಲ ರೈತ ಮೋರ್ಚ ದ ಕಾರ್ಯಕಾರಿಣಿ ಹಾಗೂ ಜಿಲ್ಲಾ ರೈತ ಮೋರ್ಚ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ ಇನ್ನಂಜೆ ಪಂಚಾಯತ್ ವ್ಯಾಪ್ತಿಯ ಪಾಂಗಳ ಜನಾರ್ದನ ದೇವಸ್ಥಾನ ಬಳಿ ನಡೆಯಿತು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಪು ಮಂಡಲ ರೈತಮೋರ್ಚ ಅಧ್ಯಕ್ಷರಾದ ಗುರುನಂದನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತಮೋರ್ಚ ಅಧ್ಯಕ್ಷರಾದ ಪ್ರವೀಣ್ ಗುರ್ಮೆ, ಶಿವಕುಮಾರ್, ರಾಘವೇಂದ್ರ ಉಪ್ಪೂರು, ಮಲ್ಲಿಕಾ ಆಚಾರ್ಯContinue reading “ಕಾಪು ಮಂಡಲ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ಕಿಸಾನ್ ಸಮ್ಮಾನ್ ಮಾಹಿತಿ”

ಬಿಲ್ಲವ ಸೇವಾ ಸಂಘ ಅಂಬಲಪಾಡಿ: ಉಚಿತ ಯೋಗ ಶಿಕ್ಷಣ ಶಿಬಿರ ಉದ್ಘಾಟನೆ

ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ, ನೇತ್ರಾವತಿ ವಲಯ ಉಡುಪಿ ಜಿಲ್ಲೆ ಇದರ ವತಿಯಿಂದ ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಆಶ್ರಯದಲ್ಲಿ ಆರೋಗ್ಯ ಸಂರಕ್ಷಣೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ರವರು ಯೋಗ ಶಿಕ್ಷಣ ತರಬೇತಿ ಶಿಬಿರವನ್ನು ಜ್ಯೋತಿContinue reading “ಬಿಲ್ಲವ ಸೇವಾ ಸಂಘ ಅಂಬಲಪಾಡಿ: ಉಚಿತ ಯೋಗ ಶಿಕ್ಷಣ ಶಿಬಿರ ಉದ್ಘಾಟನೆ”

ಆತ್ರಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ‘ಇಂಗ್ಲಿಷ್ ಪರ್ವ’ ವಿಶಿಷ್ಠ ಕಾರ್ಯಕ್ರಮ

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇದರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ ‘ಇಂಗ್ಲಿಷ್ ಪರ್ವ’ ಎಂಬ ವಿಶಿಷ್ಟ ಕಾರ್ಯಕ್ರಮವು ಎ.10ರಂದು ಶಾಲಾ ವಠಾರದಲ್ಲಿ ನಡೆಯಿತು. ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಪೋಟಿಯ ನಡುವೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಳಿವು ಉಳಿವಿನ ನಿರ್ಣಾಯಕ ಹಂತದ ನಡುವೆ ಕನ್ನಡ ಮಾಧ್ಯಮವನ್ನು ಉಳಿಸುವ ಸಲುವಾಗಿ ಈ ಮಾದರಿ ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿಯವರ ನೇತೃತ್ವದಲ್ಲಿ ಸಹ ಶಿಕ್ಷಕರ ಸಹಯೋಗದೊಂದಿಗೆ ಜರಗಿತು. ಇಂಗ್ಲಿಷ್ ಭಾಷಾ ಶಿಕ್ಷಕಿ ಶಬನಾ ಪರ್ವೀನ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆContinue reading “ಆತ್ರಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ‘ಇಂಗ್ಲಿಷ್ ಪರ್ವ’ ವಿಶಿಷ್ಠ ಕಾರ್ಯಕ್ರಮ”

ಅಂಬಲಪಾಡಿ ಬೂತ್ 178ರಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ

ಉಡುಪಿ: ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ಅಂಬಲಪಾಡಿ ಬೂತ್ ಸಂಖ್ಯೆ 178ರಲ್ಲಿ ಬೂತ್ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿಯವರ ಮನೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪಕ್ಷದ ಹುಟ್ಟು ಬೆಳವಣಿಗೆ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪಂಚಾಯತ್ ರಾಜ್ ಪ್ರಕೋಷ್ಠ ಸಮಿತಿ ಸದಸ್ಯ ಹರೀಶ್ ಆಚಾರ್ಯ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ,Continue reading “ಅಂಬಲಪಾಡಿ ಬೂತ್ 178ರಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ”

ಮಾ.10-11: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವ

ಉಡುಪಿ: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 14ನೇ ವರ್ಷದ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವವು ಮಾ.10 ಮತ್ತು 11ರಂದು ನಡೆಯಲಿದೆ. ಮಾ.10ರಂದು ಬೆಳಿಗ್ಗೆ 10.00ಕ್ಕೆ ಹಸಿರುವಾಣಿ ಗರೋಡಿ ಪ್ರವೇಶ ಹಾಗೂ ರಾತ್ರಿ 8.00ಕ್ಕೆ ಅಗೇಲ್ ಸೇವೆ ನಡೆಯಲಿದೆ. ಮಾ.11ರಂದು ಬೆಳಿಗ್ಗೆ 6.00ಕ್ಕೆ ಶ್ರೀ ಬೈದೇರುಗಳ ಮತ್ತು ಪರಿವಾರ ದೈವಗಳ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 6.15ಕ್ಕೆ ಶ್ರೀ ಬೈದೇರುಗಳ ನೇಮೋತ್ಸವವು ಜರಗಲಿದ್ದು, ರಾತ್ರಿ 8.30ಕ್ಕೆ ಅನ್ನ ಸಂತರ್ಪಣೆContinue reading “ಮಾ.10-11: ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಪುನರ್ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಕಾಲಾವಧಿ ನೇಮೋತ್ಸವ”

ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ: ಪ್ರತಿಷ್ಠಾ ವರ್ಧಂತ್ಯುತ್ಸವ, 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ

ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ್ ಎ., ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್, ಅವಿನಾಶ್ ಪೂಜಾರಿ, ಭಜನಾ ಸಂಚಾಲಕ ಮಂಜಪ್ಪ ಸುವರ್ಣ, ಭಜನಾ ಸಹ ಸಂಚಾಲಕರಾದ ಎ.ಮಾಧವ ಪೂಜಾರಿ, ಶಂಕರ ಪೂಜಾರಿ, ಮಹಿಳಾ ಘಟಕದ ಸಂಚಾಲಕಿContinue reading “ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ: ಪ್ರತಿಷ್ಠಾ ವರ್ಧಂತ್ಯುತ್ಸವ, 62ನೇ ವಾರ್ಷಿಕ ಭಜನಾ ಮಂಗಲೋತ್ಸವಕ್ಕೆ ಚಾಲನೆ”

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ

ಉಡುಪಿ: ಶ್ರೀ ಬ್ರಹ್ಮಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ 2021-24ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಆಮೀನ್ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರು: ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷರು: ಶಶಿಧರ ಎಂ. ಅಮೀನ್ ವಡಬಾಂಡೇಶ್ವರ ಮತ್ತು ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ: ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ: ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ: ಎ.ಶಿವಕುಮಾರ್ ಅಂಬಲಪಾಡಿ, ಜತೆ ಕಾರ್ಯದರ್ಶಿ: ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಜತೆ ಕೋಶಾಧಿಕಾರಿ: ವಿನಯ್ ಕುಮಾರ್ ಕಲ್ಮಾಡಿ, ಆಡಳಿತContinue reading “ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ(ರಿ.) ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ”

ಅಲೆವೂರಿನಲ್ಲಿ ಗ್ರಾಮ ಒನ್ ಕೇಂದ್ರ ಕಚೇರಿ ಉದ್ಘಾಟನೆ, ಜಿಲ್ಲೆಗೆ ಮೊದಲ ಇ ಸ್ಟ್ಯಾಂಪ್ ಗ್ರಾಮ ಒನ್ ಅಲೆವೂರು

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಗ್ರಾಮ ಒನ್ ಕಚೇರಿ ಅಲೆವೂರಿನ ರಾಮಪುರದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರಿಂದ ಉದ್ಘಾಟನೆಗೊಂಡಿತು. ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಗ್ರಾಮ ಒನ್ ನ ಮಹತ್ವದ ಬಗ್ಗೆ ಮಾಹಿತಿ ನೀಡುತ್ತ ಗ್ರಾಮೀಣ ಭಾಗದ ಜನರು ನಾಡಕಚೇರಿ ಹಾಗೂ ಬೇರೆ ಕಡೆ ತೆರಳಿದೆ ಗ್ರಾಮದಲ್ಲಿಯೆ ಎಲ್ಲ ಸರಕಾರಿ ಸವಲತ್ತು ನೀಡುವ ಯೋಚನೆಯಿಂದ ಈ ಯೋಜನೆ ಮಾಡಲಾಗಿದ್ದು ಮುಂದೆ ಎಲ್ಲ ಸೇವೆಗಳೂ ಇದರಲ್ಲಿಯೇ ಲಭ್ಯವಾಗಲಿದ್ದು ಜನ ಇದರContinue reading “ಅಲೆವೂರಿನಲ್ಲಿ ಗ್ರಾಮ ಒನ್ ಕೇಂದ್ರ ಕಚೇರಿ ಉದ್ಘಾಟನೆ, ಜಿಲ್ಲೆಗೆ ಮೊದಲ ಇ ಸ್ಟ್ಯಾಂಪ್ ಗ್ರಾಮ ಒನ್ ಅಲೆವೂರು”