Design a site like this with WordPress.com
Get started

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ

ಉಡುಪಿ ಜಿಲ್ಲಾ ಬಿಜೆಪಿಯಿಂದ ಗೌರವ ಸನ್ಮಾನ ಪ್ರಧಾನಿ ಮೋದಿ ಆಶಯದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕ್ರೀಡಾಳುಗಳು ಸಾಧನೆಯ ಉತ್ತುಂಗಕ್ಕೇರುವಂತೆ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 2.50 ಕೋಟಿ ಯುವ ಜನತೆಯ ಸಬಲೀಕರಣದ ಜೊತೆಗೆ ಕ್ರೀಡಾ ಪ್ರತಿಭೆಗಳಿಗೆ ಸದವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ. ಕ್ರೀಡಾ ರಂಗದಲ್ಲಿ ಈಗಾಗಲೇ ವಿಶೇಷ ಸಾಧನೆಗೈಯುತ್ತಿರುವ ಉಡುಪಿ ಜಿಲ್ಲೆಯ ಮೂಲಭೂತ ಆದ್ಯತೆಗಳಿಗೂ ಸಕಾಲಿಕವಾಗಿ ಸ್ಪಂದಿಸಲಾಗುವುದು ಎಂದು ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವContinue reading “ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ”

ಸಂಘಟನಾತ್ಮಕ ಚಟುವಟಿಕೆಗಳಿಗೆ ನಿಗದಿತ ಸಮಯದ ಸ್ಪಂದನೆ ಅಗತ್ಯ – ಕುಯಿಲಾಡಿ

ರಾಜ್ಯದಿಂದ ನಿಯಮಿತವಾಗಿ ಬರುವ ಸೂಚನೆಯಂತೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಅನುಷ್ಠಾನಕ್ಕೆ ಜಿಲ್ಲಾ, ಮೋರ್ಚಾ, ಮಂಡಲ ಸಹಿತ ಎಲ್ಲ ಸ್ತರಗಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ನಿಗದಿತ ಸಮಯದ ಸ್ಪಂದನೆ ಅಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ವಿವಿಧ ಮೋರ್ಚಾಗಳು ಸಂಘಟನಾತ್ಮಕ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳContinue reading “ಸಂಘಟನಾತ್ಮಕ ಚಟುವಟಿಕೆಗಳಿಗೆ ನಿಗದಿತ ಸಮಯದ ಸ್ಪಂದನೆ ಅಗತ್ಯ – ಕುಯಿಲಾಡಿ”

ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣೆ, ಸಮರ್ಪಣಾ ದಿನಾಚರಣೆ

ಉಡುಪಿ: ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲೋರ್ವರಾದ ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಬಲಿದಾನದ ದಿನವನ್ನು ಫೆ.11 ರಂದು ಸಮರ್ಪಣಾ ದಿನವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್ ಬನ್ನಂಜೆ ಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಕೆ.ಉದಯ ಕುಮಾರ್ ಶೆಟ್ಟಿಯವರು ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶಗಳು, ನಿಸ್ವಾರ್ಥ ಮನೋಭಾವದ ಸೇವೆContinue reading “ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣೆ, ಸಮರ್ಪಣಾ ದಿನಾಚರಣೆ”

ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ

ಬಿಜೆಪಿ ಆರ್ಥಿಕ ಪ್ರಕೋಷ್ಠ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ (ರಿ.) ಇದರ ಜಂಟಿ ಆಶ್ರಯದಲ್ಲಿ “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿಗಳು ಫೆ.6 ರಂದು ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರ ಗೋಷ್ಠಿಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.Continue reading “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ”

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ

ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರನ್ನು ಸ್ವಾಗತಿಸಲಾಯಿತು.ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್ ರವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರಾದ ರುಡಾಲ್ಫ್ ಡಿಸೋಜರವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.ರಾಜ್ಯ ಅ.ಸಂ.ಮೋ. ಕಾರ್ಯದರ್ಶಿಯವರಾದ ಸಲೀಂ ಅಂಬಾಗಿಲುರವರು ಅಲ್ಪಸಂಖ್ಯಾತರ ಯೋಜನೆಗಳContinue reading “ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ”

ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ

ಕರ್ನಾಟಕ ಪುರಸಭೆ ಕಾಯ್ದೆ – 1964ರ ಪ್ರಕರಣ11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಉಡುಪಿ ನಗರಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ. ಶ್ರೀ ವಿಜಯ ಕುಂದರ್, ವಡಬಾಂಡೇಶ್ವರ ಮಲ್ಪೆ, ಶ್ರೀ ದೇವದಾಸ್ ವಿ ಶೆಟ್ಟಿಗಾರ್, ಕಿನ್ನಿಮುಲ್ಕಿ, ಶ್ರೀ ದಿನೇಶ್ ಪೈ, ಸುಬ್ರಹ್ಮಣ್ಯನಗರ ಪುತ್ತೂರು, ಶ್ರೀಮತಿ ಸುಬೇದಾ ಪುತ್ತೂರು, ಶ್ರೀಮತಿ ಅರುಣಾ ಎಸ್. ಪೂಜಾರಿ ಶಿವಳ್ಳಿ ಇವರನ್ನು ಉಡುಪಿ ನಗರಸಭೆಗೆ ಸರ್ಕಾರವು ನಾಮನಿರ್ದೇಶನ ಮಾಡಿರುತ್ತದೆ ನಗರ ಸಭೆಗೆ ಸದಸ್ಯರ ನಾಮನಿರ್ದೇಶನ ಮಾಡಿರುವ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್Continue reading “ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ”

ಬಿಜೆಪಿ ಜಿಲ್ಲಾ ಮಟ್ಟದ “ಜನ ಸೇವಕ ಸಮಾವೇಶ” ದ ಪೂರ್ವಭಾವಿ ಸಭೆ

ಜನವರಿ 12, 2021ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಜನ ಸೇವಕ ಸಮಾವೇಶ”ದ ಪೂರ್ವಭಾವಿ ಸಭೆಯು ಉಡುಪಿ ನಗರ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ನಗರ ಬಿಜೆಪಿ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸಮಾವೇಶದContinue reading “ಬಿಜೆಪಿ ಜಿಲ್ಲಾ ಮಟ್ಟದ “ಜನ ಸೇವಕ ಸಮಾವೇಶ” ದ ಪೂರ್ವಭಾವಿ ಸಭೆ”

ಗ್ರಾ.ಪಂ. ಚುನಾವಣಾ ಸೋಲಿನ ಭಯದಿಂದ ಮಾಜಿ ಸಚಿವ ಸೊರಕೆ ಅಪಪ್ರಚಾರ: ಜಿಲ್ಲಾ ಬಿಜೆಪಿ ಖಂಡನೆ

ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಚುನಾವಣೆಗಳ ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಗ್ರಾಮ ಪಂಚಾಯತ್ ಚುನಾವಣಾ ಸೋಲಿನ ಭಯದಿಂದ ಬಿಜೆಪಿ ವಿರುದ್ಧ ಅಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ. ಚುನಾವಣಾ ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸಿಗರಿಗೆ ಅಪಪ್ರಚಾರವೇ ಜೀವಾಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ಮೇಲೆ ಗೂಬೆ ಕೂರಿಸುವ ನಿಟ್ಟಿನಲ್ಲಿ ನೀಡಿರುವ ಹತಾಶ ಮನೋಭಾವದ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ. ಬಿಜೆಪಿContinue reading “ಗ್ರಾ.ಪಂ. ಚುನಾವಣಾ ಸೋಲಿನ ಭಯದಿಂದ ಮಾಜಿ ಸಚಿವ ಸೊರಕೆ ಅಪಪ್ರಚಾರ: ಜಿಲ್ಲಾ ಬಿಜೆಪಿ ಖಂಡನೆ”

ವಿಧಾನ ಪರಿಷತ್ ನಲ್ಲಿ ಗೂಂಡಾಗಿರಿ ಕಾಂಗ್ರೆಸ್ ಅಧಪತನಕ್ಕೆ ನಾಂದಿ: ಕುಯಿಲಾಡಿ

ಗೂಂಡಾ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ರಾಜ್ಯ ವಿಧಾನ ಪರಿಷತ್ ನಲ್ಲಿ ಗೌರವಾನ್ವಿತ ಉಪ ಸಭಾಪತಿಯವರನ್ನು ಪೀಠದಿಂದ ಎಳೆದಾಡಿದ ಫಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕಾಂಗ್ರೆಸ್ ನಾಯಕರ ವ್ಯಕ್ತಿತ್ವವನ್ನು ಬಿಂಬಿಸುವ ಇಂತಹ ಅನಾಗರಿಕ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿಯುತ್ತಿದ್ದ ಕಾಂಗ್ರೆಸ್ ನಾಯಕರು ಸ್ವತಃ ಮೇಲ್ಮನೆ ಉಪ ಸಭಾಪತಿಯ ಸಾಂವಿಧಾನಿಕ ಹುದ್ದೆಗೆ ಅಪಮಾನಗೈದಿದ್ದಾರೆ. ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರContinue reading “ವಿಧಾನ ಪರಿಷತ್ ನಲ್ಲಿ ಗೂಂಡಾಗಿರಿ ಕಾಂಗ್ರೆಸ್ ಅಧಪತನಕ್ಕೆ ನಾಂದಿ: ಕುಯಿಲಾಡಿ”

ಕೌನ್‌‌ಬನೇಗಾ ಕರೋಡ್‌‌‌ಪತಿಗೆ ಆಯ್ಕೆಯಾದ ಉಡುಪಿಯ ಅನಾಮಯ ಯೋಗೇಶ್‌‌‌‌ ದಿವಾಕರ್

ಉಡುಪಿ, ಡಿ.12 : ಇಲ್ಲಿನ ವಿದ್ಯೋದಯ ಪಬ್ಲಿಕ್‌‌ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್‌‌‌‌ ದಿವಾಕರ್‌‌ ಕೌನ್‌ ಬನೇಗಾ ಕರೋಡ್‌‌‌‌ಪತಿಯ ವಿಶೇಷ ಸಂಚಿಕೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಕೆಬಿಸಿಯ ಸ್ಟುಡೆಂಟ್‌ ಸ್ಪೆಷಲ್‌‌‌ ಸಪ್ತಾಹಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ವೇದಾಂತ ಆನ್‌‌ಲೈನ್‌‌‌ ಲರ್ನಿಂಗ್‌‌‌ ಆಪ್‌‌‌ ಅ.5 ರಿಂದ 25ರವರೆಗೆ ಕ್ವಿಝ್‌‌‌‌ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಈ ಕ್ವಿಝ್‌ನಲ್ಲಿ ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಎಂಟು ಮಂದಿ ಫೈನಲಿಸ್ಟ್‌ ವಿದ್ಯಾರ್ಥಿಗಳಲ್ಲಿ ಉಡುಪಿಯ ಅನಾಮಯ ಯೋಗೇಶ್‌Continue reading “ಕೌನ್‌‌ಬನೇಗಾ ಕರೋಡ್‌‌‌ಪತಿಗೆ ಆಯ್ಕೆಯಾದ ಉಡುಪಿಯ ಅನಾಮಯ ಯೋಗೇಶ್‌‌‌‌ ದಿವಾಕರ್”