Design a site like this with WordPress.com
Get started

ಅಪಪ್ರಚಾರವೇ ಕಾಂಗ್ರೆಸ್ ಜೀವಾಳ: ಕುಯಿಲಾಡಿ ಸುರೇಶ್ ನಾಯಕ್

ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯನ್ವಯ ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನ ಭಾಗ್ಯ ಯೋಜನೆಯನ್ನು ಕಾಂಗ್ರೆಸ್ ತನ್ನದೇ ಸಾಧನೆ ಎಂಬಂತೆ ಬಿಂಬಿಸುತ್ತಿರುವುದು ವಿಷಾದನೀಯ. ಪ್ರತೀ ಕೆ.ಜಿ. ಅಕ್ಕಿಗೆ ರೂ.29 ರಂತೆ ಕೇಂದ್ರ ಸರಕಾರ ಭರಿಸುತ್ತಿದ್ದರೂ, ರಾಜ್ಯದ ಪಾಲು ಕೇವಲ 3 ರೂ. ಭರಿಸಿ ಅನ್ನ ಭಾಗ್ಯ ಯೋಜನೆ ತನ್ನದೇ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ. ಅನ್ನ ಭಾಗ್ಯ ಯೋಜನೆಯನ್ನು ರಾಜ್ಯ ಸರಕಾರ ರದ್ದುಮಾಡುವContinue reading “ಅಪಪ್ರಚಾರವೇ ಕಾಂಗ್ರೆಸ್ ಜೀವಾಳ: ಕುಯಿಲಾಡಿ ಸುರೇಶ್ ನಾಯಕ್”

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತಗಳು ಮತ್ತು ದೂರದರ್ಶಿತ್ವ ಸಾರ್ವಕಾಲಿಕ : ಕುಯಿಲಾಡಿ ಸುರೇಶ್ ನಾಯಕ್

ಸಂವಿಧಾನ ಶಿಲ್ಪಿ ಡಾ! ಬಿ.ಆರ್. ಅಂಬೇಡ್ಕರ್ ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು ಇಂದಿನ ರಾಜಕಾರಿಣಿಗಳಿಗೆ ಮಾದರಿ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಉಡುಪಿ ಜಿಲ್ಲಾ ಬಿಜೆಪಿ ಮತ್ತು ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ! ಬಿ.ಆರ್. ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಬಾContinue reading “ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತಗಳು ಮತ್ತು ದೂರದರ್ಶಿತ್ವ ಸಾರ್ವಕಾಲಿಕ : ಕುಯಿಲಾಡಿ ಸುರೇಶ್ ನಾಯಕ್”

ಕರಾಟೆ ಕಲೆ ಮಾನಸಿಕ, ದೈಹಿಕ ಕ್ಷಮತೆಗೆ ಪೂರಕ : ಡಾ! ನಿ.ಬೀ. ವಿಜಯ ಬಲ್ಲಾಳ್

ಯಾವುದೇ ಸಂಘ ಸಂಸ್ಥೆಗಳ ಸದಸ್ಯರಲ್ಲಿ ನಮ್ಮದು ಎಂಬ ಅಭಿಮಾನ ಬೆಳೆದಾಗ ಆ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯವಾಗುವುದು. ಕರಾಟೆ ಕಲೆ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಆತ್ಮವಿಶ್ವಾಸವನ್ನು ಸದೃಢಗೊಳಿಸುತ್ತದೆ. ವಿದ್ಯಾರ್ಥಿಗಳು ಸಾಧನೆಯ ಉತ್ತುಂಗಕ್ಕೇರಲು ತಂದೆ ತಾಯಿಯ ಪೋತ್ಸಾಹ, ಮಾರ್ಗದರ್ಶನ ಅತೀ ಅಗತ್ಯ. ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸುವ ಜೊತೆಗೆ ಮುಂದಿನ ಸಾಧನೆಗೆ ಸ್ಫೂರ್ತಿ ನೀಡುತ್ತದೆ. ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್ ರವರ ಶಿಸ್ತುಬದ್ಧ ತರಬೇತಿಯಿಂದ ಪಳಗಿರುವ ಕರಾಟೆ ಪಟುಗಳ ಸಾಧನೆ ಅಭಿನಂದನಾರ್ಹ ಎಂದುContinue reading “ಕರಾಟೆ ಕಲೆ ಮಾನಸಿಕ, ದೈಹಿಕ ಕ್ಷಮತೆಗೆ ಪೂರಕ : ಡಾ! ನಿ.ಬೀ. ವಿಜಯ ಬಲ್ಲಾಳ್”

ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಅಂಬಲಪಾಡಿ ಗ್ರಾಮಾಂತರ ಬೂತ್ ಸಂಖ್ಯೆ 178 ರಲ್ಲಿ ಬೂತ್ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಬೂತಿನ ಹಿರಿಯ ಕಾರ್ಯಕರ್ತ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯೋಗೀಶ್ ಶೆಟ್ಟಿ ಪಕ್ಷದ ದ್ವಜಾರೋಹಣವನ್ನು ನೆರವೇರಿಸಿದರು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಪಕ್ಷದ ಹುಟ್ಟು, ಬೆಳವಣಿಗೆ, ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿ ಸದಸ್ಯ ಅನಿಲ್ ರಾಜ್ ಅಂಚನ್, ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಜಿಲ್ಲಾ ಸಮಿತಿ ಸದಸ್ಯ ಹರೀಶ್ ಆಚಾರ್ಯ, ಬಿಜೆಪಿ ಅಂಬಲಪಾಡಿ ಕಡೆಕಾರು ಮಹಾಶಕ್ತಿContinue reading “ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಅಂಬಲಪಾಡಿ ಗ್ರಾಮಾಂತರ ಬೂತ್ ಸಂಖ್ಯೆ 178 ರಲ್ಲಿ ಬೂತ್ ಅಧ್ಯಕ್ಷ ಮಹೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.”

ಹುತಾತ್ಮ ವೀರ ಯೋಧರ ಬಲಿದಾನ ನಿರರ್ಥಕವಾಗದು: ಕುಯಿಲಾಡಿ

ಛತ್ತೀಸ್ ಗಢದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಅಂತಿಮ ನಮನ ನಕ್ಸಲ್ ಪಿಡುಗನ್ನು ಬೇರು ಸಹಿತ ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರ ತ್ಯಾಗ, ಬಲಿದಾನ ನಿರರ್ಥಕವಾಗದು. ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಗೃಹ ಸಚಿವ ಅಮಿತ್ ಷಾ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಜರಗಿಸುವ ಮೂಲಕ ಸೈನಿಕರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಂಕಲ್ಪಗೈದಿದ್ದಾರೆ. ಇಡೀContinue reading “ಹುತಾತ್ಮ ವೀರ ಯೋಧರ ಬಲಿದಾನ ನಿರರ್ಥಕವಾಗದು: ಕುಯಿಲಾಡಿ”

5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯ ಸಾಧನೆ ಅಭಿನಂದನಾರ್ಹ : ಕುಯಿಲಾಡಿ

ವಿಶ್ವದಾದ್ಯಂತ ಕೋವಿಡ್-19 ಲಸಿಕೆಯನ್ನು ರವಾನಿಸಿರುವ ಭಾರತ ಜಾಗತಿಕ ಮನ್ನಣೆ ಪಡೆದಿರುವುದು ಐತಿಹಾಸಿಕ ಸಾಧನೆಯಾಗಿದೆ. ಪ್ರಸಕ್ತ ದೇಶದಾದ್ಯಂತ 5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅದ್ವಿತೀಯ ಸಾಧನೆ ಅಭಿನಂದನಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕೊರೋನಾ ವೈರಸ್ ನ 2ನೇ ಅಲೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ತೋರಿ ಬರುತ್ತಿದ್ದಂತೆಯೇ ಕೇಂದ್ರ ಸರಕಾರ ಇದೀಗ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶContinue reading “5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯ ಸಾಧನೆ ಅಭಿನಂದನಾರ್ಹ : ಕುಯಿಲಾಡಿ”

ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ

ತನ್ನ ಆಡಳಿತಾವಧಿಯಲ್ಲಿ ಸಾಲ ಪಡೆಯುವುದರಲ್ಲಿ ಹಿಂದಿನ ಎಲ್ಲಾ ಮುಖ್ಯ ಮಂತ್ರಿಗಳನ್ನು ಮೀರಿಸಿ ರಾಜ್ಯವನ್ನು ಅತಿ ಹೆಚ್ಚು ಸಾಲದ ಕೂಪಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ. ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ಸದನದಲ್ಲಿ ಪೂರ್ವ ನಿರ್ಧರಿತವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡಿದ್ದು, ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲೂ ಕ್ಷುಲ್ಲಕ ಕಾರಣ ನೀಡಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್ ನContinue reading “ರಾಜ್ಯವನ್ನು ಅತಿ ಹೆಚ್ಚು ಸಾಲಕ್ಕೆ ತಳ್ಳಿದ್ದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನೈತಿಕತೆಯ ಪಾಠ ಅನಗತ್ಯ – ಜಿಲ್ಲಾ ಬಿಜೆಪಿ”

ತೆರಿಗೆ ರಹಿತ ಡಿಸೀಲ್ ಘೋಷಣೆ, ಮೀನುಗಾರ ವರ್ಗದಲ್ಲಿ ಮಂದಹಾಸ – ಕುಯಿಲಾಡಿ ಸುರೇಶ್ ನಾಯಕ್

ರಾಜ್ಯ ಬಜೆಟ್‍ನಲ್ಲಿ ಯಾಂತ್ರೀಕೃತ ದೋಣಿಗಳಿಗೆ ರೂ.1.50 ಲಕ್ಷ ಕಿ.ಲೀ. ಡಿಸೀಲ್ ಮನ್ನಾ, ಮಾರಾಟ ತೆರಿಗೆ ಮರುಪಾವತಿಯ ಬದಲು, ಡಿಸೀಲ್ ಡೆಲಿವರಿ ಕೇಂದ್ರದಲ್ಲಿ ಕರ ರಹಿತ ಡಿಸೀಲ್ ವಿತರಣೆಗೆ ಅನುಮೋದನೆ ನೀಡಿರುವುದು ಕರಾವಳಿಯ ಮೀನುಗಾರ ವರ್ಗದಲ್ಲಿ ಮಂದಹಾಸ ಮೂಡಿಸಿದೆ. ಬಜೆಟ್‍ನಲ್ಲಿ ಸದ್ರಿ ಸೌಲಭ್ಯದ ಘೋಷಣೆಗೈದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ – ಕುಯಿಲಾಡಿ ಸುರೇಶ್ ನಾಯಕ್

ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಲ್ಪಟ್ಟ ಈ ಬಾರಿಯ ರಾಜ್ಯ ಬಜೆಟ್ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಮಹಿಳೆಯರಿಗೆ 6 ತಿಂಗಳ ಹೆಚ್ಚುವರಿ ಹೆರಿಗೆ ರಜೆ, ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ರಿಯಾಯಿತಿ ಪ್ರಯಾಣ, ಎಪಿಎಂಸಿಯಲ್ಲಿ ಮಹಿಳಾ ಮೀಸಲಾತಿ, ಮಹಿಳಾ ಸುರಕ್ಷತೆಗೆ ವಿಶೇಷ ಕ್ರಮ, 2 ಕೋಟಿ ಮಹಿಳೆಯರಿಗೆ ಸ್ವೋಧ್ಯೋಗಕ್ಕಾಗಿ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮುಂತಾದ ಹಲವು ಘೋಷಣೆಗಳೊಂದಿಗೆ ಮಹಿಳಾContinue reading “ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿದ, ಮಹಿಳಾ ಮತ್ತು ರೈತ ಪರ ಬಜೆಟ್ – ಕುಯಿಲಾಡಿ ಸುರೇಶ್ ನಾಯಕ್”

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ

ಉಡುಪಿ ಜಿಲ್ಲಾ ಬಿಜೆಪಿಯಿಂದ ಗೌರವ ಸನ್ಮಾನ ಪ್ರಧಾನಿ ಮೋದಿ ಆಶಯದಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕ್ರೀಡಾಳುಗಳು ಸಾಧನೆಯ ಉತ್ತುಂಗಕ್ಕೇರುವಂತೆ ಶ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 2.50 ಕೋಟಿ ಯುವ ಜನತೆಯ ಸಬಲೀಕರಣದ ಜೊತೆಗೆ ಕ್ರೀಡಾ ಪ್ರತಿಭೆಗಳಿಗೆ ಸದವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ. ಕ್ರೀಡಾ ರಂಗದಲ್ಲಿ ಈಗಾಗಲೇ ವಿಶೇಷ ಸಾಧನೆಗೈಯುತ್ತಿರುವ ಉಡುಪಿ ಜಿಲ್ಲೆಯ ಮೂಲಭೂತ ಆದ್ಯತೆಗಳಿಗೂ ಸಕಾಲಿಕವಾಗಿ ಸ್ಪಂದಿಸಲಾಗುವುದು ಎಂದು ರಾಜ್ಯ ಯೋಜನೆ, ಸಾಂಖ್ಯಿಕ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವContinue reading “ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಸ್ಪಂದನೆ – ಕ್ರೀಡಾ ಸಚಿವ ಡಾ ನಾರಾಯಣ ಗೌಡ”