Design a site like this with WordPress.com
Get started

ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ದೇಶ ವಿರೋಧಿ ಕಾಂಗ್ರೆಸ್ ಟೂಲ್ ಕಿಟ್ ಕುಕೃತ್ಯ ಬಹಿರಂಗಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಬಿದ್ದಿದೆ. ಇಡೀ ದೇಶವು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ದುರ್ಲಾಭ ಪಡೆದು ದೇಶದ ವಿರುದ್ಧ ಅವಮಾನಕರ ಸನ್ನಿವೇಶವನ್ನು ಸೃಷ್ಟಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ದೇಶದಲ್ಲಿನ ಸಾವು ನೋವುಗಳ ವೈಭವೀಕರಣದ ಜೊತೆಗೆ ಉತ್ತರಾಖಂಡದ ಕುಂಭ ಮೇಳದ ಕುರಿತು ಸೂಪರ್ ಸ್ಪ್ರೆಡರ್ ಎಂದು ಬಿಂಬಿಸಿರುವುದು, ಆಸ್ಪತ್ರೆಗಳಲ್ಲಿಹಾಸಿಗೆಗಳ ಕೃತಕ ಕೊರತೆContinue reading “ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ”

ಕೋವಿಡ್ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಪಂದನೆ ಅಭಿನಂದನೀಯ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ರಾಜ್ಯದಾದ್ಯಂತ ಕೋವಿಡ್-19 2ನೇ ಅಲೆಯ ಸಂಕಷ್ಟಕ್ಕೆ ಒಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು ಹಾಗೂ ಹಲವು ವೃತ್ತಿ ನಿರತ ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದಿಂದ ರೂ.1,250 ಕೋಟಿಗೂ ಹೆಚ್ಚಿನ ಮೌಲ್ಯದ ಆರ್ಥಿಕ ಪರಿಹಾರ ಘೋಷಣೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆ ರಾಜ್ಯ ಸರಕಾರದ ಈ ಆರ್ಥಿಕ ನೆರವಿನ ಪ್ಯಾಕೇಜ್‍ನಿಂದ ರೈತರು ಮತ್ತು ಅಸಂಘಟಿತ ವಲಯಗಳ ಶ್ರಮಿಕರಿಗೆ ಪ್ರಯೋಜನವಾಗಲಿದೆ. ಇದರ ಜೊತೆಗೆContinue reading “ಕೋವಿಡ್ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಪಂದನೆ ಅಭಿನಂದನೀಯ : ಕುಯಿಲಾಡಿ ಸುರೇಶ್ ನಾಯಕ್”

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಸಂಬಂಧ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನಲ್ಲಿ ಗ್ರಾಮಸ್ಥರು, ಭೂ ಮಾಲಕರು ಮತ್ತು ಸ್ಥಳೀಯ ಪ್ರಮುಖರೊಂದಿಗೆ ಶಾಸಕ ಕೆ.ರಘುಪತಿ ಭಟ್ ಭೂಮಿ ಪೂಜೆ ನೆರವೇರಿಸಿ ಹಡಿಲು ಕೃಷಿ ಭೂಮಿಯ ಉಳುಮೆಗೆ ಚಾಲನೆ ನೀಡಿದರು. ಬಳಿಕ ಹಡಿಲು ಭೂಮಿಯ ಸುತ್ತಮುತ್ತಲಿನ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಗದ್ದೆಗಳ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ತೋಡುಗಳನ್ನು ಪುನಶ್ಚೇತನಗೊಳಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷContinue reading “ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.”

ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ

ಉಡುಪಿ ಕ್ಷೇತ್ರದ ಸದ್ಭಕ್ತರೆಲ್ಲಾ ಸೇರಿ ಕೊರೋನಾ ಮುಕ್ತ ಭಾರತ, ಸುಖೀ ಸಮೃದ್ಧ ಸುಭಿಕ್ಷ ಶಾಂತಿಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕ ಕ್ಷೇಮಕ್ಕಾಗಿ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಯವರಿಗೆ ಕೊರೋನಾ ಸಂಕಷ್ಟದ ಹೋರಾಟದಲ್ಲಿ ಅದ್ಭುತ ಯಶಸ್ಸು ಸಿಗಲೆಂದು ಪ್ರಾರ್ಥಿಸಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆಯನ್ನು ಸಲ್ಲಿಸಿದರು. ಪೂಜ್ಯ ಪಲಿಮಾರು ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥContinue reading “ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ”

ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಸಂಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೂಂಡಾಗಿರಿ, ದಾಂಧಲೆ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ ಬರೆದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಪ.ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ. ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ, ಗೂಂಡಾಗಿರಿ ಪ್ರತಿಭಟಿಸಿ, ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಪ್ಪತೈದು ವರ್ಷಗಳ ಪರ್ಯಂತ ಒಂದೇ ಮುಖ್ಯಮಂತ್ರಿಯನ್ನು ಮುಂದುವರಿಸಿಕೊಂಡು ಬಂದು ಕಮ್ಯುನಿಷ್ಟ್ ರಾಜ್ಯವೆನಿಸಿಕೊಂಡಿದ್ದರೂContinue reading “ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ”

ಅಂಬಲಪಾಡಿ: ಹಡಿಲು ಭೂಮಿ ಕೃಷಿಗೆ ಕೆ.ರಾಘವೇಂದ್ರ ಕಿಣಿ ಚಾಲನೆ

ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಉಡುಪಿ ಇದರ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಕೇದಾರೋತ್ಥಾನ ಟ್ರಸ್ಟಿನ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರದ ಬಳಿ ಸುರೇಶ್ ಶೆಟ್ಟಿಯವರ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು ಅಂಬಲಪಾಡಿContinue reading “ಅಂಬಲಪಾಡಿ: ಹಡಿಲು ಭೂಮಿ ಕೃಷಿಗೆ ಕೆ.ರಾಘವೇಂದ್ರ ಕಿಣಿ ಚಾಲನೆ”

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ, ಮಾಜಿ ನಗರಸಭಾ ಸದಸ್ಯ ತೋನ್ಸೆ ದೇವದಾಸ್ ಪೈ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ

ಉಡುಪಿ ಕಲ್ಸಂಕದ ಭಾರತ್ ಪ್ರೆಸ್ ಮಾಲಿಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ತೋನ್ಸೆ ದೇವದಾಸ್ ಪೈ ಇಂದು (ಎ.29) ಮಧ್ಯಾಹ್ನ 3.15ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು. ತೋನ್ಸೆ ದೇವದಾಸ್ ಪೈ ಉಡುಪಿ ನಗರಸಭೆಗೆ ಜನಸಂಘದಿಂದ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ನಗರಸಭಾ ಸದಸ್ಯರು. ಅಪ್ರತಿಮ ದೈವ ಭಕ್ತರಾಗಿದ್ದ ಅವರು ಉಡುಪಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಾರಂಭಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲದೆ ಮೊದಲ ವರ್ಷದContinue reading “ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ, ಮಾಜಿ ನಗರಸಭಾ ಸದಸ್ಯ ತೋನ್ಸೆ ದೇವದಾಸ್ ಪೈ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸಂತಾಪ”

ಜಿಲ್ಲೆಯಲ್ಲಿ ‘ಸೇವಾ ಹೀ ಸಂಘಟನ್’ ಅಭಿಯಾನ-2ರ ಪರಿಣಾಮಕಾರಿ ಅನುಷ್ಠಾನ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ದೇಶದಾದ್ಯಂತ ಕೊರೋನಾ ಸಾಂಕ್ರಾಮಿಕ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಿರ್ದೇಶನದಂತೆ ಸೇವಾ ಹೀ ಸಂಘಟನ್ ಅಭಿಯಾನ-2 ನ್ನು ಉಡುಪಿ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕೋವಿಡ್-2.0 ಸಹಾಯವಾಣಿ ಜನತೆಯ ಕೋವಿಡ್ ಸಂಬಂಧಿತ ಸಂಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಎ.27 ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಕೋವಿಡ್-2.0 ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದರು.Continue reading “ಜಿಲ್ಲೆಯಲ್ಲಿ ‘ಸೇವಾ ಹೀ ಸಂಘಟನ್’ ಅಭಿಯಾನ-2ರ ಪರಿಣಾಮಕಾರಿ ಅನುಷ್ಠಾನ : ಕುಯಿಲಾಡಿ ಸುರೇಶ್ ನಾಯಕ್”

ಅಂಬಲಪಾಡಿ ವಾರ್ಡಿನಲ್ಲಿ ಹಡಿಲು ಭೂಮಿ ಕೃಷಿ : ಪೂರ್ವಭಾವಿ ಸಭೆ

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರ ಕನಸಿನ ಯೋಜನೆಯಂತೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡ್ 1 ಮತ್ತು 2ರ ಪರಿಮಿತಿಯಲ್ಲಿ ಸುಮಾರು 25 ಎಕ್ರೆಗೂ ಮಿಕ್ಕಿ ಹಡಿಲು ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ಬಗ್ಗೆ ಅಂಬಲಪಾಡಿ ವಾರ್ಡ್ ಜನಪ್ರತಿನಿಧಿಗಳ, ಪ್ರಮುಖರ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಅಂಬಲಪಾಡಿ ಯೋಗೀಶ್ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು. ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯContinue reading “ಅಂಬಲಪಾಡಿ ವಾರ್ಡಿನಲ್ಲಿ ಹಡಿಲು ಭೂಮಿ ಕೃಷಿ : ಪೂರ್ವಭಾವಿ ಸಭೆ”

ಬಿಜೆಪಿ ಜಿಲ್ಲಾ ಹಿಂ.ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆ : ಹಿಂದುಳಿದ ವರ್ಗಗಳಿಂದ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ

ಬಿಜೆಪಿಯ ವಿವಿಧ ಮೋರ್ಚಾಗಳು ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪಕ್ಷದ ಒಂದು ಬಲಿಷ್ಠ ಅಂಗವಾಗಿದ್ದು ಪಕ್ಷಕ್ಕೆ ಶಕ್ತಿ ತುಂಬುವಲ್ಲಿ ಕಾರ್ಯೋನ್ಮುಖವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸೌಲಭ್ಯವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ ಹಿಂ.ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಮೋರ್ಚಾ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮುಂಬರಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡುವ ಜೊತೆಗೆ ಚುನಾವಣೆಯ ಭರ್ಜರಿ ಗೆಲುವಿಗೆ ಕಂಕಣಬದ್ಧರಾಗಬೇಕುContinue reading “ಬಿಜೆಪಿ ಜಿಲ್ಲಾ ಹಿಂ.ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆ : ಹಿಂದುಳಿದ ವರ್ಗಗಳಿಂದ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ”