ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಫ್ಟರ್ ದುರಂತ ಸ್ಥಳದಲ್ಲಿ 7 ಮೃತದೇಹಗಳು ಪತ್ತೆಯಾಗಿದ್ದು, ಮೂರು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೆಲ್ಲಿಂಗ್ಟನ್ ನಲ್ಲಿರುವ ಸೇನಾ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಬಿಪಿನ್ ರಾವತ್ ದಂಪತಿ ಸೇರಿದಂತೆ ನಾಲ್ವರು ಅಧಿಕಾರಿಗಳು ಹಾಗೂ 14 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಸೇನಾ ಹೆಲಿಕಾಫ್ಟರ್ ದುರಂತಕ್ಕೆ ಹವಾಮಾನ ವೈಪರಿತ್ಯ ಕಾರಣ ಎಂದು ಶಂಕಿಸಲಾಗಿದ್ದು, ಬಿಪಿನ್ ರಾವತ್ ಸೇರಿದಂತೆ ನಾಲ್ವರು ಅಧಿಕಾರಿಗಳು ಗಾಯಗೊಂಡಿದ್ದು, ವೆಲ್ಲಿಂಗ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ.Continue reading “ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ…!”
Tag Archives: ರಾಷ್ಟ್ರೀಯ ಸುದ್ದಿಗಳು
ಭಾರತಕ್ಕೆ ಬೆಳ್ಳಿ ಪದಕ ತಂದ ಮೀರಾಬಾಯಿ
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಮೀರಾಬಾಯಿ ಚಾನು ದಾಖಲೆ ಬರೆದಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಮೀರಾಬಾಯಿ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಎತ್ತಿದರೆ, ಕ್ಲೀನ್ ಮತ್ತು ಜರ್ಕ್ನಲ್ಲಿ 115 ಕೆಜಿ ಎತ್ತಿದ್ದಾರೆ. ಇದರೊಂದಿಗೆ ಅವರು ಒಟ್ಟು 202 ಕೆ.ಜಿ.ಗಳನ್ನು ಎತ್ತಿದರು. ಚಾನುಗೆ ಮೊದಲು, ಸಿಡ್ನಿ ಒಲಿಂಪಿಕ್ಸ್ 2000ರಲ್ಲಿ ಕರ್ಣಂ ಮಲ್ಲೇಶ್ವರಿ, ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿContinue reading “ಭಾರತಕ್ಕೆ ಬೆಳ್ಳಿ ಪದಕ ತಂದ ಮೀರಾಬಾಯಿ”
ಎಲ್ಲರಿಗೂ ಉಚಿತ ಲಸಿಕೆ, ದೀಪಾವಳಿ ವರೆಗೆ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ
ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮತ್ತೊಮ್ಮೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮಲ್ಲಿ ಅನೇಕರು ಪರಿವಾರದವರನ್ನು ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಕೊರೋನಾದಂತಹ ಮಹಾಮಾರಿಯನ್ನು ಎಂದೂ ನೋಡಿರಲಿಲ್ಲ. ಎರಡನೆಯ ಅಲೆ ವಿರುದ್ಧ ಹೋರಾಡುತ್ತಿದ್ದೇವೆ. ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಸಮರೋಪಾದಿಯಲ್ಲಿ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಜನ ಸಂಕಷ್ಟ ಎದುರಿಸಿದ್ದಾರೆ. ಜೊತೆಗೆ ಸೋಂಕು ಹೊಡೆದೋಡಿಸಲು ಹೋರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಇಡೀ ಜಗತ್ತನ್ನೇ ಕೊರೋನಾ ಸೋಂಕು ಕಂಗೆಡಿಸಿದೆ. ಭಾರತ ತನ್ನContinue reading “ಎಲ್ಲರಿಗೂ ಉಚಿತ ಲಸಿಕೆ, ದೀಪಾವಳಿ ವರೆಗೆ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ“
ಅನಾಥ ಮಕ್ಕಳ ನೆರವಿಗೆ ನಿಂತ ಮೋದಿ ಸರ್ಕಾರ, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಜಾರಿ
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗಲು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ವಿಶೇಷ ಯೋಜನೆ ಘೋಷಿಸಿದೆ. ಅನಾಥರಾದ ಮಕ್ಕಳಿಗೆ 18 ವರ್ಷ ತುಂಬಿದ ಕೂಡಲೇ 10 ಲಕ್ಷ ರೂಪಾಯಿ ಮೀಸಲು ನಿಧಿಯಿಂದ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಮಕ್ಕಳು 23 ವರ್ಷಕ್ಕೆ ಕಾಲಿಟ್ಟಾಗ ಉನ್ನತ ಶಿಕ್ಷಣ ಮತ್ತಿತರ ಖರ್ಚಿಗೆ 10 ಲಕ್ಷ ರೂಪಾಯಿ ನಗದು ನೆರವು ನೀಡಲಾಗುವುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ, ಖಾಸಗಿ ಶಾಲೆಗಳಲ್ಲಿContinue reading “ಅನಾಥ ಮಕ್ಕಳ ನೆರವಿಗೆ ನಿಂತ ಮೋದಿ ಸರ್ಕಾರ, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಜಾರಿ”
ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ
ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು. ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90 ರಷ್ಟು ಪಿಂಚಣಿ ರೂಪದಲ್ಲಿ ನೀಡಲಾಗುವುದು. ಕಳೆದ ವರ್ಷ ಮಾರ್ಚ್ 24 ರಿಂದ ಅನ್ವಯವಾಗುವಂತೆ ನಿಯಮ ಜಾರಿಗೆ ಬರಲಿದ್ದು, 2022 ರ ಮಾರ್ಚ್ 24 ರContinue reading “ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ”