Design a site like this with WordPress.com
Get started

ರಾಜ್ಯದಲ್ಲಿ ‘ಬ್ರಿಟನ್ ವೈರಸ್’ ಹೆಚ್ಚಳ ಹಿನ್ನಲೆ : ವೈರಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ‘ಮತ್ತೆ ಲಾಕ್ ಡೌನ್’ ಸುಳಿವು ನೀಡಿದ ಸಚಿವರು

ಬೆಂಗಳೂರು : ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚು ಹೆಚ್ಚು ಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಕರ್ಪ್ಯೂ ಜಾರಿಗೊಳಿಸುವಂತ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಇದರ ಮಧ್ಯೆ ಕಂದಾಯ ಸಚಿವ ಆರ್.ಅಶೋಕ್ ಅವರು, ಬ್ರಿಟನ್ ರೂಪಾಂತರ ವೈರಸ್ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದರಿಂದ ಸಂಪೂರ್ಣ ಲಾಕ್ ಡೌನ್ ಜಾರಿಯ ಅಗತ್ಯವಿಲ್ಲ. ಆದ್ರೇ, ಸೋಂಕಿನ ಪ್ರಕರಣಗಳು ಪತ್ತೆಯಾಗಿರುವಂತ ಜಿಲ್ಲೆಗಳಲ್ಲಿ ಮಾತ್ರವೇ ಲಾಕ್ ಡೌನ್ ಜಾರಿಗೊಳಿಸಿದ್ರೆ ಉತ್ತಮ ಎನ್ನಲಾಗುತ್ತಿದೆ. ಆ ಬಗ್ಗೆ ಸಿಎಂ ಜೊತೆಗೆContinue reading “ರಾಜ್ಯದಲ್ಲಿ ‘ಬ್ರಿಟನ್ ವೈರಸ್’ ಹೆಚ್ಚಳ ಹಿನ್ನಲೆ : ವೈರಸ್ ಹೆಚ್ಚಿರುವ ಜಿಲ್ಲೆಗಳಲ್ಲಿ ‘ಮತ್ತೆ ಲಾಕ್ ಡೌನ್’ ಸುಳಿವು ನೀಡಿದ ಸಚಿವರು”

ರಾಜಧಾನಿಗೆ ಕಾಲಿಟ್ಟ `ರೂಪಾಂತರಿ’ ಕೊರೊನಾ ವೈರಸ್ : ಬೆಂಗಳೂರಿನ ‘ಮೂವರಿಗೆ ಸೋಂಕು’ ದೃಢ

ಬೆಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರು ಹಾಗೂ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನ ಉತ್ತರಹಳ್ಳಿ ಹಾಗೂ ರಾಜಾಜಿನಗರದ ಒಟ್ಟು ಮೂವರಿಗೆ ಸೋಂಕು ದೃಢಪಟ್ಟಿದೆ. ಇನ್ನು ಇವರಲ್ಲಿ ಇಬ್ಬರು ತಾಯಿ ಮಗಳು ಅಂತಾContinue reading “ರಾಜಧಾನಿಗೆ ಕಾಲಿಟ್ಟ `ರೂಪಾಂತರಿ’ ಕೊರೊನಾ ವೈರಸ್ : ಬೆಂಗಳೂರಿನ ‘ಮೂವರಿಗೆ ಸೋಂಕು’ ದೃಢ”

ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!

ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ನಡೆದ ಎಳೆದಾಟ, ನೂಕಾಟ ಪ್ರಕರಣದಿಂದ ಸಾಕಷ್ಟು ಮನನೊಂದಿದ್ದ ವಿಧಾನಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಎಸ್‌ಎಲ್‌ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್‌ ಬಾರದ ಕಾರಣ ಗನ್‌ಮ್ಯಾನ್‌, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ನಂತರ ಅವರ ಮೃತದೇಹ ಕಡೂರು ತಾಲೂಕಿನ ಗುಣಸಾಗರದ ಮಂಕೇನಹಳ್ಳಿ ರೈಲ್ವೇ ಟ್ರ್ಯಾಕ್‌ ಬಳಿ ಪತ್ತೆಯಾಗಿದೆ. ಸಂಜೆContinue reading “ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!”

ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಬೆಂಗಳೂರು: ಇತ್ತೀಚಿಗೆ ಭಾರಿ ಸುದ್ದಿಯಾದ ರೂಪಾಂತರ ಕೊರೋನಾ 2ನೇ ಅಲೆ ವೈರಸ್ ಇದೀಗ ಬ್ರಿಟನ್ ನಿಂದ ವಿಶ್ವದ ಬೇರೆ ಬೇರೆ ದೇಶಗಳಿಗೂ ಆತಂಕವನ್ನುಂಟು ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಗೆ ರಾಜ್ಯ ಸರ್ಕಾರ ಅಸ್ತು ಎಂದಿತು ಇದೀಗ ರಾಜ್ಯ ಸರ್ಕಾರದ ನೈಟ್ ನೈಟ್ ಕರ್ಫ್ಯೂ ಚಿಂತನೆ ವಿಫಲವಾಗಿದ್ದು, ಹಲವೆಡೆ ಈ ವಿಚಾರವಾಗಿ ಪರವಿರೋಧ ಚರ್ಚೆಗಳು ನಡೆದು ಜನಾಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಿ ಇಂದಿನಿಂದ ನಡೆಯಬೇಕಾಗಿದ್ದ ನೈಟ್ ಕರ್ಫ್ಯೂ ಹಿಂಪಡೆದಿದೆ. ಸಾರ್ವಜನಿಕರುContinue reading “ರಾತ್ರಿ ಕರ್ಫ್ಯೂ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ”

ರೂಪಾಂತರಿತ ಕೊರೋನಾ ಎಫೆಕ್ಟ್: ನಾಳೆಯಿಂದ ರಾತ್ರಿ ಪ್ರತಿಬಂಧಕಾಜ್ಞೆ ಜಾರಿ

ಬೆಂಗಳೂರು: ಬ್ರಿಟನ್ ಮೂಲದಿಂದ ಮತ್ತೆ ವೈರಸ್ ಹರಡುವ ಬೀತಿಯಿಂದ ದೇಶದ ಕೆಲವು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೂ ನೈಟ್ ಕರ್ಫ್ಯೂ ಮಾಡಲು ಮುಂದಾಗಿದ್ದು ಈ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ರಾತ್ರಿ 11ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಮಾಡಲು ಸರಕಾರ ತೀರ್ಮಾನ ಮಾಡಿದ್ದು ಈ ನೀತಿಯು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಹಗಲಲ್ಲಿ ಬಹಳಷ್ಟು ಜನಸಂಚಾರ ಇರುವುದರಿಂದ ಈ ವ್ಯವಸ್ಥೆಯು ದಾರಿContinue reading “ರೂಪಾಂತರಿತ ಕೊರೋನಾ ಎಫೆಕ್ಟ್: ನಾಳೆಯಿಂದ ರಾತ್ರಿ ಪ್ರತಿಬಂಧಕಾಜ್ಞೆ ಜಾರಿ”

ಕೋವಿಡ್19 ‘ತಾಂತ್ರಿಕ ಸಲಹಾ ಸಮಿತಿ’ ಸಭೆ ಮುಕ್ತಾಯ : ರಾಜ್ಯದಲ್ಲಿ ಮತ್ತೆ ‘ರಾತ್ರಿ ಕರ್ಫ್ಯೂ’ ಜಾರಿಯಾಗಲಿದೆಯೇ?

ಬೆಂಗಳೂರು : ಯುಕೆ ಕೋವಿಡ್ ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಕೈಗೊಳ್ಳಬಹುದಾದಂತ ಕ್ರಮಗಳ ಕುರಿತಂತೆ, ಇಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಕ್ಕೆ ಬರಲಾಗಿದ್ದು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವಂತ ಸಚಿವರು, ತಾಂತ್ರಿಕ ಸಲಹಾ ಸಮಿತಿಯ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಾಗುತ್ತಾ ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ.Continue reading “ಕೋವಿಡ್19 ‘ತಾಂತ್ರಿಕ ಸಲಹಾ ಸಮಿತಿ’ ಸಭೆ ಮುಕ್ತಾಯ : ರಾಜ್ಯದಲ್ಲಿ ಮತ್ತೆ ‘ರಾತ್ರಿ ಕರ್ಫ್ಯೂ’ ಜಾರಿಯಾಗಲಿದೆಯೇ?”

ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನಿಷೇಧಿಸಿದ ರಾಜ್ಯಸರಕಾರ!

ಬೆಂಗಳೂರು: ಕೋವಿಡ್‌-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೋವಿಡ್‌-19ರ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆ ಮತ್ತು ಅಂಗಡಿ ಮಳಿಗೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಗರಿಷ್ಠContinue reading “ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನಿಷೇಧಿಸಿದ ರಾಜ್ಯಸರಕಾರ!”

ಸಾರಿಗೆ ಸಂಧಾನ ಸಭೆ ಸಕ್ಸಸ್, ಮೂರು ದಿನಗಳ ಮುಷ್ಕರ ವಾಪಸ್ , ಇಂದು ರಾತ್ರಿಯಿಂದಲೇ ಬಸ್‌ ಸಂಚಾರ ಆರಂಭ

ಬೆಂಗಳೂರು: ಧರಣಿ ನಿರತ ಸಾರಿಗೆ ನೌಕರರ ಜೊತೆಗೆ ಇಂದು ನಡೆದ ಸಭೆ ಯಶಸ್ಸು ಕಂಡಿದ್ದು, ಕಳೆದ ಮೂರು ದಿವಸದಿಂದ ನಡೆಸುತ್ತಿದ್ದ ರಾಜ್ಯ ವ್ಯಾಪ್ತಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಈ ನಡುವೆ ಇಂದು ಸಂಜೆಯಿಂದಲೇ ಬಸ್‌ ಸಂಚಾರ ಶುರುವಾಗಲಿದೆ ಎನ್ನಲಾಗಿದೆ. ಇಂದು ಸಾರಿಗೆ ಸಚಿವ ಸವದಿ, ಕಂದಾಯ ಸಚಿವ ಆಶೋಕ್‌, ಬಸವರಾಜ್‌ ಬೊಮ್ಮಾಯಿವರಿದ್ದ ಸಭೆಯಲ್ಲಿ ನೌಕರರ ಮುಖಂಡರು ಮುಷ್ಕರ ವಾಪಸ್​ ಪಡೆಯಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಮಾಡಬೇಕು ಎನ್ನುವ ಬೇಡಿಕೆಯನ್ನುContinue reading “ಸಾರಿಗೆ ಸಂಧಾನ ಸಭೆ ಸಕ್ಸಸ್, ಮೂರು ದಿನಗಳ ಮುಷ್ಕರ ವಾಪಸ್ , ಇಂದು ರಾತ್ರಿಯಿಂದಲೇ ಬಸ್‌ ಸಂಚಾರ ಆರಂಭ”

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಇಲ್ಲಿವೆ ಕಾಯ್ದೆಯಲ್ಲಿರುವ 25 ಅಂಶಗಳು

ಬೆಂಗಳೂರು, (ಡಿ.09): ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಇಂದು (ಬುಧವಾರ) ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ.  ಇನ್ನು ಈ ವಿಧೇಯಕದಲ್ಲಿ ಕಠಿಣ ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ.  ಬಳಿಕ ಗೋ ಹತ್ಯೆ, ಗೋಮಾಂಸ ಮಾರಾಟ ಕ್ರಿಮಿನಲ್ ಅಪರಾಧವಾಗಲಿದ್ದು, ದಂಡ ಸಹಿತ ಜೈಲು ಶಿಕ್ಷೆ ಗ್ಯಾರಂಟಿ. ಇನ್ನು ಈ  ಗೋ ಹತ್ಯೆ ನಿಷೇಧ  ಕಾಯ್ದೆಯಲ್ಲಿ 25 ಕಠಿಣ ನಿಯಮಗಳಿದ್ದು, ಅವು ಈ ಕೆಳಗಿನಂತಿವೆ ನೋಡಿ. ಪ್ರಸ್ತಾವಿತ ಕಾಯ್ದೆಯಲ್ಲಿರುವ  ಅಂಶಗಳು1.Continue reading “ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್: ಇಲ್ಲಿವೆ ಕಾಯ್ದೆಯಲ್ಲಿರುವ 25 ಅಂಶಗಳು”

ಉಡುಪಿ ಜಿಲ್ಲಾಸ್ಪತ್ರೆ ಸೀಲ್ ಡೌನ್: ವೈದ್ಯರು ,ನರ್ಸ್ ಸೇರಿ 14 ಮಂದಿಗೆ ವೈರಲ್ ಕೊರೋನಾ ಸೋಂಕು

ಉಡುಪಿ: ಅಜ್ಜರಕಾಡು ಸರಕಾರಿ ಆಸ್ಪತ್ರೆಗೂ ಕೊರೊನಾ ಬಾಧೆ ಪ್ರಾರಂಭವಾಗಿದ್ದು, ವೈದ್ಯರು, ರೋಗಿಗಳು ಸೇರಿದಂತೆ ಒಟ್ಟು 14 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಗ್ಯಾಂಗ್ರಿನ್‌‌ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ಮಾದರಿ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿದ್ದು, ಈತನ ವಾರ್ಡ್‌‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್‌‌‌ ಸೇರಿದಂತೆ ವಾರ್ಡ್‌‌ನಲ್ಲಿ ಸ್ವಚ್ಛತಾ ಕೆಲಸContinue reading “ಉಡುಪಿ ಜಿಲ್ಲಾಸ್ಪತ್ರೆ ಸೀಲ್ ಡೌನ್: ವೈದ್ಯರು ,ನರ್ಸ್ ಸೇರಿ 14 ಮಂದಿಗೆ ವೈರಲ್ ಕೊರೋನಾ ಸೋಂಕು”