ಕಾಂಗ್ರೆಸ್ ನವರದು ಬಯಲು ನಾಟಕ : ಆರೋಗ್ಯ ಸಚಿವ ಡಾ! ಕೆ.ಸುಧಾಕರ್ ಲೇವಡಿ 75 ವರ್ಷ ರಾಷ್ಟ್ರಧ್ವಜವನ್ನೇ ಮರೆತಿದ್ದವರು ಈಗ ಬೀದಿ ಬೀದಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ

ಚಿಕ್ಕಬಳ್ಳಾಪುರ : ಕಳೆದ 75 ವರ್ಷದಲ್ಲಿ ಭಾವುಟಗಳನ್ನೇ ಮರೆತಿದ್ದವರು, ರಾಷ್ಟ್ರಧ್ವಜವನ್ನೇ ಮರೆತಿದ್ದವರು ಪ್ರಧಾನಿಯವರು ಹರ್ ಘರ್ ತಿರಂಗ ಘೋಷಣೆ ನಂತರ ಬೆಂಗಳೂರಿನ ಬೀದಿಗಳಲ್ಲಿ ಧ್ವಜ ಹಿಡಿದು ಪಾದಯಾತ್ರೆ ಮಾಡಿರುವುದು ಬಯಲು ನಾಟಕವಲ್ಲವೇ ಎಂದು ಆರೋಗ್ಯ ಸಚಿವ ಡಾ! ಕೆ. ಸುಧಾಕರ್ ಪ್ರಶ್ನಿಸಿದ್ದಾರೆ. ಹರ್ ಘರ್ ತಿರಂಗ ಎಂಬುದು ನಾಟಕ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಯಲು ನಾಟಕ ಮಾಡುತ್ತಿರುವ ಕಾಂಗ್ರೆಸ್ ಗೆ ಕಳೆದ 75 ವರ್ಷದಲ್ಲಿ ರಾಷ್ಟ್ರಧ್ವಜ ನೆನಪಿತ್ತೇ? ಈಗContinue reading “ಕಾಂಗ್ರೆಸ್ ನವರದು ಬಯಲು ನಾಟಕ : ಆರೋಗ್ಯ ಸಚಿವ ಡಾ! ಕೆ.ಸುಧಾಕರ್ ಲೇವಡಿ 75 ವರ್ಷ ರಾಷ್ಟ್ರಧ್ವಜವನ್ನೇ ಮರೆತಿದ್ದವರು ಈಗ ಬೀದಿ ಬೀದಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ”

ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಲು ಎನ್. ರವಿಕುಮಾರ್ ಆಗ್ರಹ

ಬೆಂಗಳೂರು: ನೂಪುರ್ ಶರ್ಮರ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಭಯಾನಕ, ಭೀಭತ್ಸ, ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕುರಿ, ಕೋಳಿ ಹತ್ಯೆಗಿಂತ ಭೀಕರವಾಗಿ ಹತ್ಯೆ ನಡೆದಿದೆ. ಇದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು. ಬೆಂಗಳೂರಿನ ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಡಿಯೋ ಮಾಡಿContinue reading “ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಲು ಎನ್. ರವಿಕುಮಾರ್ ಆಗ್ರಹ”

ರಾಜ್ಯಸಭಾ ಸದಸ್ಯ, ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನ

ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ನಿವಾಸದಲ್ಲಿ ಯೋಗ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. , ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪಕ್ಷಬೇಧ ಮರೆತು ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ್ದರು. ಕೇಂದ್ರದ ಮಾಜಿ ಸಚಿವರಾದ ಎಂ ವೀರಪ್ಪ ಮೊಯ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್,Continue reading “ರಾಜ್ಯಸಭಾ ಸದಸ್ಯ, ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನ”

ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್‌ ರಾಜೀನಾಮೆ

Breaking News : ಗಾಂಧೀನಗರ: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಸಂಗತಿಯನ್ನು ಘೋಷಿಸಿದರು. ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ಐದು ವರ್ಷಗಳ ಕಾಲ ರಾಜ್ಯದ ಸೇವೆ ಮಾಡಲು ಪಕ್ಷ ನನಗೆ ಅವಕಾಶ ನೀಡಲಾಗಿದೆ. ನನ್ನ ಪಕ್ಷ ಏನು ಹೇಳಿದರೂ ಅದನ್ನು ನಾನು ಮಾಡುತ್ತೇನೆ ಎಂದು ರೂಪಾನಿ ಸುದ್ದಿಗಾರರಿಗೆ ತಿಳಿಸಿದರು.Continue reading “ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ದಿಢೀರ್‌ ರಾಜೀನಾಮೆ”

ಬಿಜೆಪಿ ಹಾಗೂ ಮೋದಿ ಬೆಂಬಲಿಸಲು ಇಷ್ಟು ವಿಷಯಗಳು ಸಾಕಲ್ಲವೆ

ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಹೆಚ್ಚಾಯಿತೆಂದು ವಾದಿಸುವವರೆ, ಒಂದು‌ ಮನೆಯಲ್ಲಿ ಕನಿಷ್ಠ ನಾಲ್ಕು‌ ಜನರಿದ್ದರೆ ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಉಚಿತವಾಗಿ ದೊರೆಯುತ್ತದೆ. ಒಂದು ವ್ಯಾಕ್ಸಿನ್ ಗೆ ಕನಿಷ್ಠ 780 ರೂಪಾಯಿ ಇದೆ. ನಾಲ್ಕು ಜನರಿಗೆ ಎಂಟು ವ್ಯಾಕ್ಸಿನ್ ಗೆ ಸುಮಾರು 6240 ರೂಪಾಯಿ ಆಗುತ್ತದೆ. ಪೆಟ್ರೋಲ್ ಗ್ಯಾಸ್ ಬೆಲೆ ಕಡಿಮೆ ಮಾಡಿ ಇದನ್ನು ಮನೆಯವರಿಂದಲೇ ಭರಿಸುವಂತಿದ್ದರೆ ಬಡವರಿಗೆ ವ್ಯಾಕ್ಸಿನ್ ‌ಪಡೆಯುವುದು ಸಾಧ್ಯವಿತ್ತೇ? ಕಿಸಾನ್ ಸಮ್ಮಾನ್ ಮೂಲಕ ಪ್ರತೀ ರೈತರ ಕುಟುಂಬಕ್ಕೆ ಕನಿಷ್ಠ 6000 ರೂಪಾಯಿ‌ ಮೋದಿContinue reading “ಬಿಜೆಪಿ ಹಾಗೂ ಮೋದಿ ಬೆಂಬಲಿಸಲು ಇಷ್ಟು ವಿಷಯಗಳು ಸಾಕಲ್ಲವೆ”

ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ

ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐವರ ಹೆಸರನ್ನು ಶಿಫಾರಸು ಮಾಡಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನೆರವಾಗಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ ಮತ್ತು ತಳವಾರ್ ಸಾಬಣ್ಣ ಅವರ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದContinue reading “ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ”

Create your website with WordPress.com
Get started