ಉಡುಪಿ: ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರದ ಬಳಿಯ ನಿವಾಸಿ ದಿ! ತೋಮ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ರಾಧು ಪೂಜಾರ್ತಿ(95 ವರ್ಷ) ಇವರು ಫೆ.27ರಂದು ಸ್ವಗೃಹದಲ್ಲಿ ನಿಧನರಾದರು. ಸುಧೀರ್ಘ ಅವಧಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇವರು ಭಜನಾ ಮಂದಿರದ ವಾರದ ಭಜನಾ ಪೂಜೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಜನಾನುರಾಗಿಯಾಗಿದ್ದರು. ಇವರು ಪುತ್ರ ಟೈಲರ್ ಶಂಕರ ಪೂಜಾರಿ ಸಹಿತ ಇಬ್ಬರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.
Tag Archives: ನಿಧನ
ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಮಾಜಿ ಅಧ್ಯಕ್ಷರಾದ ಜಬ್ಬ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ ನಿಧನ
ಉಡುಪಿ: ‘ಭಜನೆ ಜಬ್ಬಣ್ಣ’ರೆಂದೇ ಪ್ರಖ್ಯಾತರಾಗಿದ್ದ ಜಬ್ಬ ಪೂಜಾರಿ (90 ವರ್ಷ) ಬಂಕೇರಕಟ್ಟ, ಅಂಬಲಪಾಡಿ ಇವರು ಜು.6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ ಪದಾಧಿಕಾರಿಯಾಗಿ, ಭಜನಾ ನಿರ್ವಾಹಕರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ಜಬ್ಬ ಪೂಜಾರಿಯವರು ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಭಜನಾಸಕ್ತರಾಗಿದ್ದ ಜಬ್ಬ ಪೂಜಾರಿಯವರು ಸ್ವತಃContinue reading “ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ಮಾಜಿ ಅಧ್ಯಕ್ಷರಾದ ಜಬ್ಬ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ ನಿಧನ“