ದೆಹಲಿ: ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಇಂದು ಸಂಸತ್ತಿನಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರು ಭೇಟಿ ಮಾಡಿದರು. ಸಂಘ ಪರಿವಾರದ ಕಾರ್ಯಕರ್ತ ಶ್ರೀ ಪ್ರವೀಣ್ ನೆಟ್ಟಾರು ಅವರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದುದಕ್ಕೆ ಅವರಿಗೆ ಧನ್ಯವಾದ ತಿಳಿಸಿ, ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದರು.
Tag Archives: ದೇಶ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹಿತ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹಿತ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಸಾಮಾಜಿಕ ಕ್ಷೇತ್ರದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ , ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಕೇರಳದ ಮಾಜಿ ಅಥ್ಲೀಟ್ ಪಿಟಿ ಉಷಾ , ಸಿನಿಮಾ ಕ್ಷೇತ್ರದಿಂದ ಆಂಧ್ರಪ್ರದೇಶದ ವಿ.ವಿಜಯೇಂದ್ರ ಪ್ರಸಾದ್ , ಸಂಗೀತ ಕ್ಷೇತ್ರದಿಂದ ತಮಿಳುನಾಡಿನ ಇಳಯರಾಜ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ದೇಶದಲ್ಲಿ ಎಲ್ಲಾ ಮಾದರಿಯ ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ನಿರ್ಣಯ
ನವದೆಹಲಿ: ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ತೋಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು. ಕೇಂದ್ರ ಸರ್ಕಾರದ ವತಿಯಿಂದ ಎಲ್ಲಾ ಮಾದರಿಯ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆದಿದೆ. ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಭಾರತದಲ್ಲಿ ಎಲ್ಲಾ ಮಾದರಿಯ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡುವ ಸಾಧ್ಯತೆಯಿದೆ. ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕಗಳನ್ನು ಮಂಡಿಸಲಿದ್ದು, ಅದರಲ್ಲಿ ಕ್ಟಿಪ್ಟೋ ಕರೆನ್ಸಿ ಕೂಡ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗಷ್ಟೇ ಕ್ರಿಪ್ತೋಕರೆನ್ಸಿ ಬಗ್ಗೆ ಪ್ರಸ್ತಾಪಿಸಿದ್ದರು, ಇದರContinue reading “ದೇಶದಲ್ಲಿ ಎಲ್ಲಾ ಮಾದರಿಯ ಕ್ರಿಪ್ಟೋ ಕರೆನ್ಸಿ ನಿಷೇಧಕ್ಕೆ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ನಿರ್ಣಯ”
ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ – ಒಲಿಂಪಿಕ್ಸ್ ಕ್ರೀಡಾಪಟುಗಳು ಹೃದಯವನ್ನು ಗೆದ್ದಿದ್ದಾರೆ – ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ, 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ
ನವದೆಹಲಿ: ಇಂದು ಭಾರತದಲ್ಲಿ ಅತಿದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆಯ ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ – ಒಲಿಂಪಿಕ್ಸ್ ಕ್ರೀಡಾಪಟುಗಳು ಹೃದಯವನ್ನು ಗೆದ್ದಿದ್ದಾರೆ – ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ, 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿರಾಜ್ಯದ 13 ಜಿಲ್ಲೆಗಳ 16 ತಾಲೂಕುಗಳುContinue reading “ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ – ಒಲಿಂಪಿಕ್ಸ್ ಕ್ರೀಡಾಪಟುಗಳು ಹೃದಯವನ್ನು ಗೆದ್ದಿದ್ದಾರೆ – ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ, 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ”
ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ
ಡಿಜಿಟಲ್ ಪಾವತಿಗೆ ಇನ್ನಷ್ಟು ಉತ್ತೇಜನ ಕೊಡುವ ಉದ್ದೇಶದಿಂದ ಇ-ರುಪಿ ಸೌಲಭ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಜೆ 4:30ಕ್ಕೆ ಚಾಲನೆ ಕೊಟ್ಟಿದ್ದಾರೆ. ಏನಿದು ಇ-ರುಪಿ ? ನಗದುರಹಿತ ಹಾಗೂ ಸಂಪರ್ಕರಹಿತವಾಗಿ ಡಿಜಿಟಲ್ ಪಾವತಿ ಮಾಡಲು ಇರುವ ವ್ಯವಸ್ಥೆ ಆಗಿರುವ ಇ-ರುಪಿ ಕ್ಯೂಆರ್ ಕೋಡ್ ಹಾಗೂ ಎಸ್‌ಎಂಎಸ್ ಆಧರಿತ ಇ-ವೌಚರ್ ಆಗಿದ್ದು, ಫಲಾನುಭವಿಗಳ ಮೊಬೈಲ್‌ಗಳಿಗೆ ಕಳುಹಿಸಲಾಗುವುದು. ಒಮ್ಮೆ-ಪಾವತಿ ಮಾಡುವ ಈ ಸೌಲಭ್ಯದ ಮುಖಾಂತರ ಕಾರ್ಡ್ ಇಲ್ಲದೆಯೂ ಈ ವೌಚರ್ ಅನ್ನು ಯಾವುದೇ ಕಾರ್ಡ್, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್Continue reading “ಏನಿದು ಇ-ರುಪಿ…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ”
ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಮುಖ್ಯಾಂಶಗಳು
ನವದೆಹಲಿ: ದೇಶದ ಹದಗೆಟ್ಟಿರುವ ಕರೋನವೈರಸ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸೋಮವಾರ, ವೈದ್ಯರೊಂದಿಗಿನ ವರ್ಚುವಲ್ ಸಂವಾದದಲ್ಲಿ ಪಿಎಂ ಮೋದಿ ಅವರು ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ದೊಡ್ಡ ಅಸ್ತ್ರವಾಗಿದೆ ಅಂತ ಹೇಳಿದ್ದರು. ಈ ನಡುವೆ ಮೇ 1 ರಿಂದ ಎಲ್ಲಾ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಂದು, ಪಿಎಂ ಮೋದಿ ಲಸಿಕೆ ತಯಾರಕರೊಂದಿಗೆ ಸಂವಹನ ನಡೆಸಿ ಈ ವೇಳೆಯಲ್ಲಿ ಎಲ್ಲಾ ಭಾರತೀಯರನ್ನು ಕಡಿಮೆContinue reading “ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಮುಖ್ಯಾಂಶಗಳು”
ʼಉತ್ತರಕಾಂಡ್ʼನಲ್ಲಿ ದಿಢೀರ್ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!
ಉತ್ತರಕಾಂಡ್: ಉತ್ತರಕಾಂಡ್ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ. ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲContinue reading “ʼಉತ್ತರಕಾಂಡ್ʼನಲ್ಲಿ ದಿಢೀರ್ ಪ್ರವಾಹ: 150 ಜನ ನಾಪತ್ತೆ, ತಪೋವನದಲ್ಲಿ 9-10 ಮೃತದೇಹ ಪತ್ತೆ..!”
ಕೇಂದ್ರ ಸರ್ಕಾರದಿಂದ ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ : 59 ಆ್ಯಪ್ ಗಳಿಗೆ ಶಾಶ್ವತ ನಿಷೇಧ!
ನವದೆಹಲಿ : ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಬಿಗ್ ಶಾಕ್ ನೀಡಿದ್ದು, 59 ಚೀನೀ ಆಪ್ ಗಳನ್ನು ಸರ್ಕಾರ ಶಾಶ್ವತವಾಗಿ ನಿಷೇಧ ಹೇರಲು ಮೋದಿ ಸರ್ಕಾರ ಮುಂದಾಗಿದೆ. ಬೈಟ್ ಡ್ಯಾನ್ಸ್ ನ ಟಿಕ್ ಟೋಕ್, ಬೈಡು, ವೀಚಾಟ್, ಅಲಿಬಾಬಾದ ಯುಸಿ ಬ್ರೌಸರ್, ಶಾಪಿಂಗ್ ಆಪ್ ಕ್ಲಬ್ ಫ್ಯಾಕ್ಟರಿ, ಮಿ ವೀಡಿಯೊ ಕಾಲ್ (Xiaomi) ಮತ್ತು BIGO Live ನಂತಹ ಟಾಪ್ ಆಪ್ ಗಳು ಸೇರಿದಂತೆ 59 ಚೀನಿ ಆ್ಯಪ್ ಗಳನ್ನು ನಿಷೇಧಿಸಲುContinue reading “ಕೇಂದ್ರ ಸರ್ಕಾರದಿಂದ ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ : 59 ಆ್ಯಪ್ ಗಳಿಗೆ ಶಾಶ್ವತ ನಿಷೇಧ!”
ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ
ನವದೆಹಲಿ: ಕನ್ನಡಿಗರಾದ ಡಾ. ಬಿ.ಎಂ. ಹೆಗಡೆ, ಚಂದ್ರಶೇಖರ ಕಂಬಾರ, ಮಂಜಮ್ಮ ಜೋಗತಿ, ಆರ್.ಎಲ್. ಕಷ್ಯಪ್, ಕೆ.ವೈ. ವೆಂಕಟೇಶ್ ಸೇರಿದಂತೆ 119 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರ ನೀಡಲಾಗಿದೆ. 7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಪದ್ಮವಿಭೂಷಣ ಪ್ರಶಸ್ತಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ. ಬೆಳ್ಳಿ ಮೋನಪ್ಪ ಹೆಗಡೆ, ನರೇಂದ್ರ ಸಿಂಗ್ ಸೇರಿದಂತೆ 7 ಮಂದಿಗೆ ಪದ್ಮವಿಭೂಷಣ ನೀಡಲಾಗಿದೆ. ಪದ್ಮಭೂಷಣ ಪ್ರಶಸ್ತಿ ರಾಮ್ ವಿಲಾಸ್Continue reading “ಐವರು ಕನ್ನಡಿಗರು ಸೇರಿ 119 ಮಂದಿಗೆ ಪದ್ಮ ಪ್ರಶಸ್ತಿ”
ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು …
… ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಹೊರಟಿದೆ ಶ್ರೀಕೃಷ್ಣ ನಗರಿ ರಜತಪೀಠಪುರದ ಪವಿತ್ರ ಮೃತ್ತಿಕೆ! ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು ಸೇರಿಸಲು ವಿಶ್ವಹಿಂದುಪರಿಷತ್ ನಿರ್ಧರಿಸಿದೆ .ಅದರಂತೆ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಕೃಷ್ಣನContinue reading “ರಾಮಮಂದಿರ ಭೂಗರ್ಭಕ್ಕೆ ಕೃಷ್ಣ ನಗರಿಯ ಮಣ್ಣು …”