Design a site like this with WordPress.com
Get started

ಉಡುಪಿ: ಕೋವಿಡ್ ರೂಪಾಂತರಿ ತಳಿ “ಒಮಿಕ್ರಾನ್” ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಕೆಲವು ದೇಶಗಳಲ್ಲಿ ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪ್ರಸರಣದ ಆತಂಕ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ಸರ್ವೇಕ್ಷಣ ಚಟುವಟಿಕೆಗಳನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ದೈನಂದಿನ ಕೋವಿಡ್ ಪರೀಕ್ಷೆಯ ಗುರಿಯನ್ನು ಹೆಚ್ಚಿಸಿ ಕರ್ನಾಟಕ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದರಂತ ಜಿಲ್ಲೆಯಲ್ಲಿ ಕೋವಿಡ್ ನ ಹೊಸ ರೂಪಾಂತರಿ ಪ್ರಸರಣ ತಡೆಗೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಡಿಸಿ ಕೂರ್ಮಾರಾವ್Continue reading “ಉಡುಪಿ: ಕೋವಿಡ್ ರೂಪಾಂತರಿ ತಳಿ “ಒಮಿಕ್ರಾನ್” ತಡೆಗೆ ಜಿಲ್ಲೆಯಲ್ಲಿ ಸಕಲ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಕೂರ್ಮಾರಾವ್”

ಜಿಲ್ಲಾ ಎಸ್.ಸಿ. ಮೋರ್ಚಾದಿಂದ ಸಂವಿಧಾನ ದಿನ ಆಚರಣೆ

ಉಡುಪಿ: ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ನ.26ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ ವಹಿಸಿದ್ದರು. ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಕರ್ನಾಟಕ ಸರಕಾರದ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿContinue reading “ಜಿಲ್ಲಾ ಎಸ್.ಸಿ. ಮೋರ್ಚಾದಿಂದ ಸಂವಿಧಾನ ದಿನ ಆಚರಣೆ”

ಕೃಷಿ ಕಾಯ್ದೆ ಹಿಂತೆಗೆತ ಪ್ರಧಾನಿ ಮೋದಿ ಜಾಣ ನಡೆ : ಜಿಲ್ಲಾ ಬಿಜೆಪಿ

ಉಡುಪಿ: ದೇಶದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ರೈತಪರ ಕೇಂದ್ರ ಕೃಷಿ ಕಾಯ್ದೆಯನ್ನು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಯ ಹಿತಾಸಕ್ತಿಯಿಂದ ಹಿಂಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಜಾಣ ನಡೆ ಪ್ರಶಂಸನೀಯ ಎಂದು ಜಿಲ್ಲಾ ಬಿಜೆಪಿ ಹೇಳಿದೆ. ಕಾಂಗ್ರೆಸ್ ಬೆಂಬಲದಿಂದ ರಾಕೇಶ್ ಟಿಕಾಯತ್ ನಂತಹ ನಕಲಿ ರೈತ ನಾಯಕರು ಐಶಾರಾಮಿ ವ್ಯವಸ್ಥೆಗಳೊಂದಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನೈಜ ರೈತರ ಹಿತವನ್ನು ಕಡೆಗಣಿಸಿ ಮಧ್ಯವರ್ತಿಗಳ ಹಿತಾಸಕ್ತಿಗಾಗಿ ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ವರ್ಷಕ್ಕೂ ಮಿಕ್ಕಿ ಅವಧಿಯಲ್ಲಿContinue reading “ಕೃಷಿ ಕಾಯ್ದೆ ಹಿಂತೆಗೆತ ಪ್ರಧಾನಿ ಮೋದಿ ಜಾಣ ನಡೆ : ಜಿಲ್ಲಾ ಬಿಜೆಪಿ”

ಮಿನಿ ಸಮರದಲ್ಲಿ ಬಿಜೆಪಿ ಬೆಂಬಲಿಸಿ – ಶೋಭಾ ಕರಂದ್ಲಾಜೆ

ಉಡುಪಿಯಲ್ಲಿ ನಡೆದ ಯಶಸ್ವೀ ಜನ ಸ್ವರಾಜ್ ಸಮಾವೇಶ ಡಿ.10ರ ವಿಧಾನ ಪರಿಷತ್ ಚುನಾವಣೆ ರಾಜ್ಯದ ಮಿನಿ ಸಮರ. ಇದರಲ್ಲಿ ವಿಧಾನ ಪರಿಷತ್ತಿನ ಸಭಾ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು. ಉಡುಪಿಯ ಪುರಭವನದಲ್ಲಿ ನ.19 ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಸರಕಾರದ ಯಾವುದೇContinue reading “ಮಿನಿ ಸಮರದಲ್ಲಿ ಬಿಜೆಪಿ ಬೆಂಬಲಿಸಿ – ಶೋಭಾ ಕರಂದ್ಲಾಜೆ”

ಜನ ಸ್ವರಾಜ್ ಸಮಾವೇಶ ಯಶಸ್ಸಿಗೊಳಿಸಿ; ಬಿಜೆಪಿ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತ: ಶಾಸಕ ರಘುಪತಿ ಭಟ್ ಕರೆ

ರಾಜ್ಯ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನ.19ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಪುರ ಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲಾ ಬಿಜೆಪಿ ಬೆಂಬಲಿತ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವ ಜೊತೆಗೆ ಡಿ.10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಭರ್ಜರಿ ಅಂತರದ ವಿಜಯ ದಾಖಲಿಸುವಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಕರೆ ನೀಡಿದರು. ಅವರುContinue reading “ಜನ ಸ್ವರಾಜ್ ಸಮಾವೇಶ ಯಶಸ್ಸಿಗೊಳಿಸಿ; ಬಿಜೆಪಿ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತ: ಶಾಸಕ ರಘುಪತಿ ಭಟ್ ಕರೆ”

ನ.19ರ ಜನ ಸ್ವರಾಜ್ ಸಮಾವೇಶ ಯಶಸ್ವಿಗೊಳಿಸಿ: ಕುಯಿಲಾಡಿ ಕರೆ

ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನ.19ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶಕ್ಕೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳ ಬಿಜೆಪಿ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಪ್ರಮುಖ ಅಪೇಕ್ಷಿತರಾಗಿದ್ದು, ಕಡ್ಡಾಯವಾಗಿ ಭಾಗವಹಿಸಿ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ಪಕ್ಷ ನಿಷ್ಠೆ ಮತ್ತು ಬದ್ಧತೆಗೆ ಸಾಕ್ಷಿಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್Continue reading “ನ.19ರ ಜನ ಸ್ವರಾಜ್ ಸಮಾವೇಶ ಯಶಸ್ವಿಗೊಳಿಸಿ: ಕುಯಿಲಾಡಿ ಕರೆ”

ಬಿಜೆಪಿ ಮತ ಮಾರಾಟಕ್ಕಿಲ್ಲ; ಗೆಲುವು ನಿಶ್ಚಿತ : ಕುಯಿಲಾಡಿ ಸುರೇಶ್ ನಾಯಕ್

ರಾಜ್ಯ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ನ.19ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶ ಹಾಗೂ ಚುನಾವಣಾ ಪೂರ್ವಸಿದ್ಧತೆಯ ಬಗ್ಗೆ ಸಮಾಲೋಚನಾ ಸಭೆಗಳನ್ನು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ನ.17ರಂದು ಬಿಜೆಪಿ ಉಡುಪಿ ನಗರ ವತಿಯಿಂದ ನಗರ ಉಪಾಧ್ಯಕ್ಷ ವೆಂಕಟರಮಣContinue reading “ಬಿಜೆಪಿ ಮತ ಮಾರಾಟಕ್ಕಿಲ್ಲ; ಗೆಲುವು ನಿಶ್ಚಿತ : ಕುಯಿಲಾಡಿ ಸುರೇಶ್ ನಾಯಕ್”

ನ.19 ಶುಕ್ರವಾರ ಬೆಳಿಗ್ಗೆ 11.00ಕ್ಕೆ ಉಡುಪಿಯಲ್ಲಿ ಜನಸ್ವರಾಜ್ ಸಮಾವೇಶ

ಉಡುಪಿ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿ ಮತ ಚಲಾಯಿಸಲಿರುವ ವಿಧಾನ ಪರಿಷತ್ ಚುನಾವಣೆಯು ಡಿ.10ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನ.19 ಶುಕ್ರವಾರ ಬೆಳಿಗ್ಗೆ ಗಂಟೆ 11.00ಕ್ಕೆ “ಜನಸ್ವರಾಜ್ ಸಮಾವೇಶ”ವು ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಅವರು ನ.15ರಂದು ಹೋಟೆಲ್ ಕಿದಿಯೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದContinue reading “ನ.19 ಶುಕ್ರವಾರ ಬೆಳಿಗ್ಗೆ 11.00ಕ್ಕೆ ಉಡುಪಿಯಲ್ಲಿ ಜನಸ್ವರಾಜ್ ಸಮಾವೇಶ”

ನ.19ರಂದು ಉಡುಪಿಯಲ್ಲಿ ಜನಸ್ವರಾಜ್ ಸಮಾವೇಶ : ಕುಯಿಲಾಡಿ ಸುರೇಶ್ ನಾಯಕ್

ರಾಜ್ಯ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಜನಸ್ವರಾಜ್ ಸಮಾವೇಶವು ನ.19 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ನಡೆಯಲಿರುವ ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣContinue reading “ನ.19ರಂದು ಉಡುಪಿಯಲ್ಲಿ ಜನಸ್ವರಾಜ್ ಸಮಾವೇಶ : ಕುಯಿಲಾಡಿ ಸುರೇಶ್ ನಾಯಕ್”

ಬಿಜೆಪಿ ಜಿಲ್ಲಾ ವಾರ್ತಾ ಸಂಚಯ ತಂಡದೊಂದಿಗೆ ರಾಜ್ಯ ಬಿಜೆಪಿ ಧ್ಯೇಯ ಕಮಲ ತಂಡದ ಸಭೆ

ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಮತ್ತು ಪ್ರಮುಖ ವಿಚಾರಗಳ ಹೂರಣ ಬಿಜೆಪಿ ಜಿಲ್ಲಾ ವಾರ್ತಾ ಸಂಚಯ ತಂಡದ ಜೊತೆ ರಾಜ್ಯ ಬಿಜೆಪಿ ಧ್ಯೇಯ ಕಮಲ ಮಾಸ ಪತ್ರಿಕೆ ತಂಡದ ಸಭೆಯು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಬಿಜೆಪಿ ರಾಜ್ಯ ಪ್ರಕಾಶನ ಪ್ರಕೋಷ್ಠದ ಸಂಚಾಲಕರು ಮತ್ತು ರಾಜ್ಯ ಧ್ಯೇಯ ಕಮಲ ಮಾಸಪತ್ರಿಕೆ ಸಂಪಾದಕ ಬಿದರೆ ಪ್ರಕಾಶ್ ರವರು ಧ್ಯೇಯ ಕಮಲ, ಕಮಲ ಪುಷ್ಪ ಹಾಗೂ ಜಿಲ್ಲಾ ವಾರ್ತಾ ಸಂಚಯContinue reading “ಬಿಜೆಪಿ ಜಿಲ್ಲಾ ವಾರ್ತಾ ಸಂಚಯ ತಂಡದೊಂದಿಗೆ ರಾಜ್ಯ ಬಿಜೆಪಿ ಧ್ಯೇಯ ಕಮಲ ತಂಡದ ಸಭೆ”