Design a site like this with WordPress.com
Get started

ಇಂದಿನ ಔಷಧೀಯ ಸಸ್ಯದ ಪರಿಚಯ : ಆಡುಸೋಗೆ

ಆಡುಮುಟ್ಟದ ಗಿಡ ಎಂದೇ ಖ್ಯಾತಿಯಾಗಿರುವ ಆಡುಸೋಗೆ ಸೊಪ್ಪಿನಲ್ಲಿವೆ ಹುಳುಕಡ್ಡಿ, ಅಸ್ತಮ ಹೀಗೆ ಹಲವು ರೋಗಗಳಿಗೆ ರಾಮಬಾಣವಾಗಿದೆ..! ಹೌದು ನಿಮ್ಮ ಹತ್ತಿರದಲ್ಲೇ ಸಿಗುವಂತಹ ಈ ಗಿಡದಲ್ಲಿ ಹಲವು ರೋಗಗಳನ್ನು ಹೋಗಲಾಡಿಸುವಂತಹ ಗುಣವನ್ನು ಹೊಂದಿದೆ ಹಾಗಿದ್ರೆ ಬನ್ನಿ ಈ ಗಿಡದಿಂದ ಯಾವ ಯಾವ ಖಾಯಿಲೆಗಳನ್ನು ಹೋಗಲಾಡಿಸಬಹುದು ಅನ್ನೋದು ಇಲ್ಲಿದೆ ನೋಡಿ. ದಮ್ಮು ನಿವಾರಣೆಗೆ: ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದುContinue reading “ಇಂದಿನ ಔಷಧೀಯ ಸಸ್ಯದ ಪರಿಚಯ : ಆಡುಸೋಗೆ”

ಇಂದಿನ ಔಷಧೀಯ ಸಸ್ಯ ಪರಿಚಯ : ನೆಗ್ಗಿಲುಮುಳ್ಳಿನ ಗಿಡ

ತ್ರಿಕಂಟಕ ಗೊಕ್ಷುರ, ಸಣ್ಣ ನೆಗ್ಗಿಲು, ಆನೆ ನೆಗ್ಗಿಲು, ನೆರಂಜಿಮುಳ್ಳು, ಶದಂಷ್ಠ, ಸ್ವಾದಕಂಟಕ, ಗೋಕಂಟಕ, ಕಂಠತಿಕ್ತಕ, ಪಲ್ಲೇರು ಮುಕ್ಕ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹೊಲ, ತೋಟಗಳ ಬದಿಗಳ ಮೇಲೆ, ಪಾಳು ಭೂಮಿ, ಬೀಳು ಭೂಮಿ, ಹಾದಿಬೀದಿಗಳ ಪಕ್ಕ ಕಳೆಯಂತೆ, ನೆಲದ ಮೇಲೆ ಹಬ್ಬಿ ಬೆಳೆಯುತ್ತೆ.ಸಣ್ಣ ನೆಗ್ಗಿಳಿನ ಎಲೆಗಳು ಕಡಲೆ ಗಿಡದ ಎಲೆಗಳನ್ನು ಹೋಲುತ್ತೆ, ಆನೆ ನೆಗ್ಗಿಲು ದೊಡ್ಡದಾದ ಕಾಯಿ, ಉದ್ದ ಹಾಗು ಕಠೋರ ಮುಳ್ಳಿನಿಂದ ಕೂಡಿದ್ದು, ಎಲೆಗಳು ಅಗಲವಾಗಿದ್ದು, ಪಾಲಕ್ ಸೊಪ್ಪಿನ ಎಲೆಗಳನ್ನು ಹೋಲುತ್ತೆ.ಸಣ್ಣ ನೆಗ್ಗಿಲಿನ ಹೂವುಗಳು ಹಳದಿContinue reading “ಇಂದಿನ ಔಷಧೀಯ ಸಸ್ಯ ಪರಿಚಯ : ನೆಗ್ಗಿಲುಮುಳ್ಳಿನ ಗಿಡ”

ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ

ಯವಾನಿ (ಓಮು ಕಾಳು) ಬ್ರಹ್ಮದರ್ಭ ಉಗ್ರಬಂಧ ಅಗ್ನಿವರ್ಧಕ ಅಜಮೋದಾ ಅಜಮೂಲ ತೀವ್ರಗಂಧ ವಾತಾರಿ ಶೂಲಹಂತ್ರಿ ವಾಮು ಓಮಮು ಓಮಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಭಾರತೀಯ ಆಯುರ್ವೇದ ಯುನಾನಿ ಹಾಗೂ ನಾಟಿ ವೈದ್ಯ ಪದ್ಧತಿಯಲ್ಲಿ ಓಮುಕಾಳು ಔಷಧೀಯನ್ನಾಗಿ,ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬಂದಿದ್ದಾರೆ.ಉತ್ತರ ಭಾರತದಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಯಥೇಚ್ಛವಾಗಿ ಬೆಳೆಯುತ್ತಾರೆ.1ರಿಂದ 2 ಅಡಿ ಬೆಳೆಯುವ ಇದು ಫಲವತ್ತಾದ ಭೂಮಿಯಲ್ಲಿ 3 ಅಡಿವರಿಗೂ ಬೆಳೆಯುತ್ತೆ.50 ಗ್ರಾಂ ಒಮುಕಾಳನ್ನು ಹುರಿದು ಚೂರ್ಣ ಮಾಡಿಕೊಂಡು,100 ಗ್ರಾಂ ಬೆಲ್ಲವನ್ನು ತೆಗೆದುಕೊಂಡು, ಎರಡನ್ನು ಚೆನ್ನಾಗಿ ಮಿಶ್ರಣಮಾಡಿ,Continue reading “ಇಂದಿನ ಔಷಧೀಯ ಸಸ್ಯ ಪರಿಚಯ: ಅಜವಾನ”

ಇಂದಿನ ಔಷಧೀಯ ಸಸ್ಯದ ಪರಿಚಯ: ಮಧುನಾಶಿನಿ

ಮೇಷಶೃಂಗೀ (ಮಧುನಾಶಿನಿ) ಮಧುನಾಸಿನಿ,ಕಡಸಿಗೆ ಸೊಪ್ಪು, ಪೊಡಪತ್ರಿ, ಪುಟ್ಟಭದ್ರ, ಗುಣಮಾರ,ಅಜಶೃಂಗಿ, ಸರ್ಪದಾರಿಷ್ಟಿಕಂ, ಗ್ರಿಹಿದ್ರುಮ, ಸಿರಿಕುರುಂಜಾಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ,ಕೆರೆಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ಬೀಳು ಭೂಮಿ, ಹೊಲಗಳ ಬೇಲಿಗಳ ಮೇಲೆ ಗಿಡ ಮರಗಳಿಗೆ ಬಳ್ಳಿಯಂತೆ ಹಬ್ಬಿ ಬೆಳೆಯುತ್ತೆ. ಮಧುನಾಶಿನಿ ಗಿಡದ ಎಲೆ, ಹೂವು,ಕಾಯಿ, ಕಾಂಡ, ಬೇರು ಸಹಿತ ಎಲ್ಲವು ಔಷಧೀಯ ಗುಣಗಳಿಂದ ಕೂಡಿದೆ.ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಈ ಗಿಡವನ್ನು ಔಷಧೀಯವಾಗಿ ಬಳಸುತ್ತಾ ಬಂದಿದ್ದಾರೆ.ಇದು ಮಧುಮೇಹ ಅತೋಟಿಗೆ ತರಲು ರಾಮಬಾಣದಂತೆ ಕೆಲಸ ಮಾಡುತ್ತೆ. ಮಧುನಾಶಿನಿಯ ಎರಡು ಮೂರುContinue reading “ಇಂದಿನ ಔಷಧೀಯ ಸಸ್ಯದ ಪರಿಚಯ: ಮಧುನಾಶಿನಿ”

ಇಂದಿನ ಔಷಧೀಯ ಸಸ್ಯದ ಪರಿಚಯ :ಜಂಬೂ ನೇರಳೆ

ಜಂಬೂ ನೇರಳೆ,ನಾಯಿ ನೇರಳೆ, ಅಲ್ಲ ನೇರಡು,ಕಾಕಿನೇರಡು,ನಾವಲ್ಫಳಂ,ಜಂಬುಲ್,ಜಂಬುಲೊನ್,ಜಂಬೂ,ಬ್ಲಾಕ್ ಪ್ಲಮ್,ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ,ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ನಾಯಿ ನೇರಳೆ ವೃಕ್ಷಗಳನ್ನು ರಸ್ತೆ ಪಕ್ಕಾ ಸಾಲು ಮಾರಗಳಂತೆ ಬೆಳೆಸಿರುತ್ತಾರೆ.ಹೊಲ ಗದ್ದೆಗಳ ಬದಿಗಳ ಮೇಲೆರೈತರು ಬಹು ಉಪಯೋಗಿ ನೇರಳೆ ವೃಕ್ಷಗಳನ್ನುಬೆಳೆಸಿರುತ್ತಾರೆ.ಸುಮಾರು 20 ರಿಂದ 40 ಅಡಿವರಿಗೂ ನಾಯಿ ನೇರಳೆ ವೃಕ್ಷಗಳು ಬೆಳೆಯುತ್ತವೆ.ಇದರ ಎಲೆ ಹೂ ತೊಗಟೆ ಕಾಯಿ ಹಣ್ಣು,ಎಲ್ಲವೂ ಔಷಧಿಯಾಗಿ ಸಾವಿರಾರು ವರ್ಷಗಳಿಂದಲೂ ಪೂರ್ವಿಕರು ಆಯುರ್ವೇದ, ಹಿಂದೂ ಯುನಾನಿ,ಪಾರಂಪರಿಕ ವೈದ್ಯ ಪದ್ದತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.ನೇರಳೆಯಲ್ಲಿ ಅನೇಕ ಪ್ರಭೇದಗಳಿದ್ದು,ಜಂಬೂ ನೇರಳೆ ಹಾಗೂ ನಾಯಿContinue reading “ಇಂದಿನ ಔಷಧೀಯ ಸಸ್ಯದ ಪರಿಚಯ :ಜಂಬೂ ನೇರಳೆ”

ಇಂದಿನ ಔಷಧೀಯ ಸಸ್ಯದ ಪರಿಚಯ : ಸರ್ಪಗಂಧಿ

ಸರ್ಪಗಂಧಿಚಂದ್ರಿಕಾ ಸರ್ಪಾಕ್ಷಿ ಪಾತಾಳಗರುಡ ಚಂದ್ರಭಾಗ ಚೋಟಾಚಂದ್ ಸರ್ಪಗಂಧ್ ಸರ್ಪಗಂಧ ಶಿವನನಾಭಿ ಗಿಡ ಸೂತ್ರನವಿ ಪಾತಾಳಗಂಧಿ ಚುರನ್ನ ವಿಲ್ಪೋರಿ ಚವನ್ ಪೋಡಿ ಪಾತಾಳಗುಣಿ ಪಾತಾಳ ಗರುಡಿ ಹರ್ಕಾಯ ಹರ್ಕಿ ಎಂಬ ಹೆಸರುಗಳಿಂದ ಕರೆಯುತ್ತಾರೆಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳದು,ವಿಪುಲವಾಗಿ ದೊರೆಯುತ್ತಿದ್ದ ಔಷಧೀಯ ಸಸ್ಯ ಸರ್ಪಗಂಧಿ.ಬಿಹಾರ ಅಸ್ಸಾo ಶ್ರೀಲಂಕಾ ಇನ್ನು ಮುಂತಾದ ದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದು, ವಿಪುಲವಾಗಿ ದೊರೆಯುತ್ತಿದ್ದ ಈ ಸಸ್ಯ ಬೇಡಿಕೆ ಹೆಚ್ಚಾದಂತೆ ಅವನತಿ ಅಂಚಿಗೆ ಬಂದು ನಿಂತಿದೆ.ಆಯುರ್ವೇದ ಯುನಾನಿ ಔಷಧಿ ತಯಾರಿಕಾ ಘಟಕಗಳಿಂದ ಹೆಚ್ಚಿನ ಬೇಡಿಕೆ ಇರುವುದರಿಂದ,ಇದನ್ನುContinue reading “ಇಂದಿನ ಔಷಧೀಯ ಸಸ್ಯದ ಪರಿಚಯ : ಸರ್ಪಗಂಧಿ”