Design a site like this with WordPress.com
Get started

ಇಂದಿನ ಔಷಧೀಯ ಸಸ್ಯ ಪರಿಚಯ: ಬೋರೆ ,ಬುಗರಿ ಹಣ್ಣಿನ ಮರ

ಬದರೀ ಕೊಲ,ಬೇರ್, ಇಲ್ಲಂದೈ,ಗಂಗರೇಣುಬಾದರಂ,ಬೋರೆ,ಎಲಚಿ,,ಇಲಂಜಿ,ಕುರ್ಕುoದ,ಪರಿಕಕಾಯಿ,ರೇಗಿ ಪೊಂಡಲು,ಕುವರಿ,ಅಜಪ್ರಿಯ,ಗುಡಫಲ,ಸೌಬೀರ,ಬಾಲಿಷ್ಠ ಎಂಬ ಹೆಸರುಗಳಿಂದ ಕರೆಯುತ್ತಾರೆಬೋರೆ ವೃಕ್ಷಗಳು ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ರಸ್ತೆಗಳ ಪಕ್ಕ ನೈಸರ್ಗಿಕವಾಗಿ ಬೆಳೆಯುತ್ತವೆ.ಇದರ ಹಣ್ಣಿಗಾಗಿ ಅನೇಕ ಕಡೆ ತೋಟ,ಹೊಲಗಳಲ್ಲಿಯೂ ಸಹ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.ಈ ವೃಕ್ಷ ಸುಮಾರು 25 ರಿಂದ 45 ಅಡಿಗಳ ಎತ್ತರ ಬೆಳೆಯುತ್ತದೆ.ಇದು ಬಹು ಉಪಯೋಗಿ ಹಾಗೂ ಗಟ್ಟಿಯಾದ ವೃಕ್ಷವಾಗಿದ್ದು,ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾಗಿರುವ ನಾನಾ ವಿಧವಾದ ಉಪಕರಣಗಳನ್ನು ಇದರಲ್ಲಿ ತಯಾರಿಸಿಕೊಳ್ಳುತ್ತಾರೆ.ಬೋರೆ ಗಿಡದಲ್ಲಿ ಅನೇಕ ಪ್ರಭೇದಗಳಿದ್ದು,ಕೃಷಿ ಇಲಾಖೆಯವರು,ಇದರಲ್ಲಿ ಹೆಚ್ಚು ಸ್ವಾದಿಷ್ಟ ಹಾಗೂ ದೊಡ್ಡContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಬೋರೆ ,ಬುಗರಿ ಹಣ್ಣಿನ ಮರ”

ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ

ಮಂಜಿಷ್ಠಾ ಮಂಜಿಸ್ಟ್,ಇಷ್ಟ ಮಧುಕ,ಮಂಜಿಷ್ಠಾ ಬಳ್ಳಿ,ಶಿರಗತ್ತಿ,ರಕ್ತಾoಗಿ, ರಕ್ತಯಷ್ಟಿ,ವಸ್ತ್ರರಂಜನಿ,ವಸ್ತ್ರ ಭೂಷಣ,ಜ್ವರಹಂತ್ರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹಿಮಾಲಯದ ತಪ್ಪಲಿನ ಕಾಡುಗಳಲ್ಲಿ ಮಾತ್ರ ಕಾಣುವ,ಬಳ್ಳಿಯಂತೆ ಹಬ್ಬುವ ಅಪರೂಪದ ಔಷಧೀಯ ಸಸ್ಯವಿದು.ಇದರ ಬೇರನ್ನು ಮಾತ್ರ ಔಷಧಿಗಾಗಿ ಹೆಚ್ಚಿಗೆ ಉಪಯೋಗಿಸುತ್ತಾರೆ. ಕರ್ನಾಟಕದ ಮಲೆನಾಡಿನ ಕಾಡುಗಳಲ್ಲಿ, ಅಲ್ಲಲ್ಲಿ ಅಪರೂಪವಾಗಿ ಕಾಣಿಸುತ್ತೆ. ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ.ಇದರಿಂದ ರಕ್ಷಿಸಿಕೊಳ್ಳಲು, 1.ಚಮಚ ಮಂಜಿಷ್ಠಾ ಬೇರಿನ ಚೂರ್ಣ 1 ಚಮಚ ಜೇನುತುಪ್ಪ ಕಲಸಿ ಪೇಸ್ಟ್ ಮಾಡಿಕೊಂಡು ಮಚ್ಚೆ,ಮೊಡವೆ,ಕಲೆಗಳ ಮೇಲೆ ಲೇಪನContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಮಂಜಿಷ್ಠ”

ಇಂದಿನ ಔಷಧೀಯ ವೃಕ್ಷ ಪರಿಚಯ: ಮತ್ತಿ ಮರ(ಅರ್ಜುನ ವೃಕ್ಷ)

ಅರ್ಜುನ ಕಕುಭ ನದೀ ಸರ್ಜ ಶರದ್ರುಮ ಮದ್ದಿ ಮತ್ತಿ ಕರಿಮತ್ತಿ ಬಿಳಿಮತ್ತಿ ತೊರೆಮತ್ತಿ ಅರ್ಜುನ್ ಯರ್ರಮಡ್ಡಿ ತೆಲ್ಲಮಡ್ಡಿ ಮರುದ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ದಟ್ಟ ಅರಣ್ಯಗಳಲ್ಲಿ,ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ರಸ್ತೆ ಪಕ್ಕದಲ್ಲಿ ಸಾಲು ಮರಗಳಾಗಿ,ಹೊಲದ ಬದಿಗಳ ಮೇಲೆ ಸಹಾ ಬೆಳೆಸುತ್ತಾರೆ. 60 ರಿಂದ 100 ಅಡಿಯವರಿಗೂ ಬೃಹದ್ಧಕಾರವಾಗಿ ಬೆಳೆಯುತ್ತವೆ.ಇದರ ತೊಗಟೆ ತುಂಬಾ ದಪ್ಪವಾಗಿರುತ್ತೆ.ಸಣ್ಣಸಣ್ಣ ಪುಷ್ಪ ಮಂಜರಿ ಜೋಡಿಸಲ್ಪಟ್ಟಿರುತ್ತವೆ. ಮತ್ತಿಯ ಅಂಶದಿಂದ ಕೂಡಿದ ಯಜ್ಞದ ಧೂಮವು ಸುತ್ತಲ ವಾತಾವರಣದಲ್ಲಿಯ ಮಲಿನತೆಯನ್ನು ದೂರ ಮಾಡಬಲ್ಲದು….! ಮುಗಿಲಿಗೇರುವ ಈ ಧೂಮವು ಮೋಡಗಳುContinue reading “ಇಂದಿನ ಔಷಧೀಯ ವೃಕ್ಷ ಪರಿಚಯ: ಮತ್ತಿ ಮರ(ಅರ್ಜುನ ವೃಕ್ಷ)”

ಇಂದಿನ ಔಷಧೀಯ ಸಸ್ಯ ಪರಿಚಯ: ಬೂದುಗುಂಬಳ

ಕುಷ್ಮಾಂಡ ಕರಕಾರಕ, ಪುಷ್ಪಫಲ, ಬಿಳಿಕುಂಬಳ, ಬೂದುಗುಂಬಳ, ಬೂದುಕುಂಬಳ, ವೆಳ್ ಪುಸನಿಕಾಯಿ, ಕಲ್ಯಾಣಿ ಪೂಸನಿ, ಬೂದಡಿ ಗುಮ್ಮಡಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ ಬೂದುಕುಂಬಳಕಾಯಿಯನ್ನು ಅನೇಕ ದೇಶಗಳಲ್ಲಿ ಬೆಳೆಯುತ್ತಾರೆ.ಅದರಲ್ಲೂ ನಮ್ಮ ದೇಶದಲ್ಲಿ ವಿಶೇಷವಾಗಿ ಹೊಲ ಗದ್ದೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಇದರ ಮತ್ತೊಂದು ವಿಶೇಷವೆಂದರೆ ಬೀಜ ಬಿದ್ದಕಡೆ ಮೊಳಕೆಯೊಡೆದು ಗಿಡವಾಗಿ ಕಾಯಿ ಬಿಡುತ್ತೆ.ನಮ್ಮ ಹಿಂದೂ ಸಂಪ್ರದಾಯದಲ್ಲಿ ಬೂದುಗುಂಬಳಕ್ಕೆ ಬಹಳ ಪೂಜನೀಯಸ್ಥಾನ ನೀಡಲಾಗಿದ್ದು, ಹೋಮ, ನೂತನ ಗೃಹಪ್ರವೇಶ, ಶಂಕುಸ್ಥಾಪನೆ, ಯಂತ್ರೋಪಕರಣ ಕಾರ್ಯಾರಂಭದಲ್ಲಿ ಇದು ಇರಲೇಬೇಕು.ಇದನ್ನು ಆಹಾರದಲ್ಲಿ ತರಕಾರಿಯಾಗಿ ಬಳಸುವುದಲ್ಲದೇ, ಇದರಲ್ಲಿ ಅತ್ಯದ್ಭುತವಾದ ಔಷಧೀಯContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಬೂದುಗುಂಬಳ”

ಇಂದಿನ ಔಷಧೀಯ ವೃಕ್ಷದ ಪರಿಚಯ: ಬೇಲದ ಹಣ್ಣಿನ ಮರ

ಬೆಳವಳ,ದಧಿಫಲ,ಬಿಳಿನ್,ವಿಳಾಫಲಂ,ವಿಳಾಮರಂ, ಕಪೌಷ್ಟಿಕ ಪಿತ್ಥಮು, ಬೇಲದ ಮರ,ವುಡ್ ಆಪೆಲ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಈ ವೃಕ್ಷವು ಅರಣ್ಯಗಳಲ್ಲಿ ನೈಸರ್ಗಿಕವಾಗಿ ಬೆಳೆದರೆ, ರೈತರು ಹೊಲ,ತೋಟ,ಗದ್ದೆಗಳ ಬದಿಗಳ ಮೇಲೆ ಬೆಳೆಸುತ್ತಾರೆ.ಹಳ್ಳಿಗಳಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಸಿರುತ್ತಾರೆ.ಇದನ್ನು ಅನೇಕ ಕಡೆ ಹಣ್ಣಿಗಾಗಿ ಸಹಾ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 50 ಅಡಿವರಿಗೂ ಬೆಳೆಯುತ್ತೆ.ಬೇಲದ ಹಣ್ಣು ಗಣಪತಿಗೆ ತುಂಬಾ ಪ್ರಿಯವಾದ ಹಣ್ಣು ಎಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.ಆನೆಗಳಂತೂ ತುಂಬಾ ಇಷ್ಟ ಪಟ್ಟು ಸೇವಿಸುತ್ತವೆ.ಈ ಹಣ್ಣಿನಲ್ಲಿ ಔಷಧಿಗಳ ಭಂಡಾರವೇ ಇದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.ಬೇಲದ ಹಣ್ಣಿನಲ್ಲಿContinue reading “ಇಂದಿನ ಔಷಧೀಯ ವೃಕ್ಷದ ಪರಿಚಯ: ಬೇಲದ ಹಣ್ಣಿನ ಮರ”

ಇಂದಿನ ಔಷಧೀಯ ಸಸ್ಯ ಪರಿಚಯ: ಸೊಗದೇಬೇರು

ಅನಂತಮೂಲ್(ಸುಗಂಧಿನಿ) ಅನಂತಮೂಲ ಸುಗಂಧಿಬೇರು(ಬಳ್ಳಿ) ಸೊಗದೇ ಬೇರು ನಾಮದಬೇರು ಸುಗಂಧಿಪಾಲ್ ನರುನೀಡಿ ನರುನಿಂಡಿ ಕೃಷ್ಣವಳ್ಳಿ ನನ್ನಾರಿ ನರ್ಕಲಮೂಲಂ ನೆರುನೆಟ್ಟಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅನಂತಮೂಲ ಎಂಬ ಹೆಸರಿನ ಬೇರು ಹೆಸರಿಗೆ ತಕ್ಕಂತೆ ಅಗಣಿತ ಔಷಧೀಯ ಗುಣಗಳನ್ನು ತನ್ನ ಒಡಲೆಲ್ಲ ತುಂಬಿಕೊಂಡಿದೆ.ಇದರ ಔಷಧೀಯ ಗುಣಗಳಿಂದಲೇ ಇದನ್ನು ತಮಿಳ್ ನಲ್ಲಿ”ಮೂಲಿಕೈ ಅರಸನ್” ಎಂದು ಕರೆಯುತ್ತಾರೆ. ಈ ಬೇರು ಔಷಧೀಯ ಗುಣಗಳಲ್ಲದೆ, ತುಂಬಾ ಸುವಾಸನೆಯಿಂದ ಕೂಡಿದ್ದು ಸುಗಂಧಿನಿ ಎಂತಲೂ ಕರೆಯುತ್ತಾರೆ.ಇದರಲ್ಲಿ ಎರಡು ಪ್ರಭೇದಗಳಿವೆ. ಸೊಗದೇ ಬೇರಿನ ಕಷಾಯ(ಷರಬತ್ತು) ಅನೇಕ ವ್ಯಾಧಿಗಳನ್ನು ಗುಣಪಡಿಸಲು ತುಂಬಾContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಸೊಗದೇಬೇರು”

ಇಂದಿನ ಔಷಧೀಯ ಸಸ್ಯ ಪರಿಚಯ: ಕಾಡುಬದನೆ

ದುಃಸ್ಫರ್ಶ (ಕಂಟಕಾರಿ) ಬಹುಕಂಟಿ,ಹಿರಣ್ಯಪುಷ್ಠಿ, ಲಘು ಪಂಚಮೂಲ,ನಿಧಿಗಧಿಕಾ, ಕ್ಷುದ್ರಕಂಟಿ,ಕಾಟೀರಿಂಗಣಿ, ಮುಳ್ಳುಸುಂಡೆ, ಕಾಡು ಬದನೆ,ಮುಲ್ಲು ವಂಕಾಯಿ, ಕಾಟು ಕತ್ತರಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ. ಹೊಲಗಳ ಬದಿಗಳ ಮೇಲೆ, ಪಾಳು ಭೂಮಿ, ರಸ್ತೆಗಳ ಪಕ್ಕ, ಬಯಲು ಪ್ರದೇಶಗಳಲ್ಲಿ, ಮುಳ್ಳುಕಂಟಿ ಕಾಡುಗಳಲ್ಲಿ, ಬೇಲಿಸಾಲುಗಳಲ್ಲಿ ಸ್ವಾಭಾವಿಕವಾಗಿ 3 ರಿಂದ 6 ಅಡಿ ಎತ್ತರ, ಪೊದೆಯಂತೆ ಬೆಳೆಯುವ ಕಂಟಕಾರಿ, ಗಿಡಪೂರ್ತಿ ಮುಳ್ಳುಗಳಿಂದ ಕೂಡಿದ್ದು, ಬದನೆ ಹೂಗಳನ್ನು ಹೋಲುವ ಐದು ದಳಗಳ ತಿಳಿ ನೇರಳೆ ಬಣ್ಣದ ಹೂವುಗಳು, ಹಳದಿ, ಕೇಸರಿ ಬಣ್ಣದ ಗೊಂಚಲು ಗೊಂಚಲು ಹಣ್ಣುಗಳಿಂದContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಕಾಡುಬದನೆ”

ಆಯುರ್ವೇದ ಪಂಚಕರ್ಮ ಚಿಕಿತ್ಸೆ

ಆಯುರ್ವೇದದ ಪಂಚಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಪಂಚಕರ್ಮ : 1 ಪುರಾಣ ವೇದಗಳಲ್ಲಿ ಆರೋಗ್ಯ ಚಿಕಿತ್ಸೆಯ ಕುರಿತಾದ ಒಂದು ಅಧ್ಯಾಯನ ಭಾಗವೇ ಆಯುರ್ವೇದ . ಇದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಚಿಕಿತ್ಸಾ ಪದ್ದತಿಯಾಗಿದೆ. ದೇಹ, ಮತ್ತು ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಮತ್ತು ಕಾಯಿಲೆಗಳಿಂದ ದೂರವಿಡಲು ಆಯುರ್ವೇದ ಚಿಕಿತ್ಸೆ ನೆರವಾಗುತ್ತದೆ.ಆಯುರ್ವೇದದ ಪ್ರಕಾರ ಮನುಷ್ಯನ ಮನಸ್ಸೇ ಅನಾರೋಗ್ಯದ ಕೇಂದ್ರ ಬಿಂದುವಾಗಿದ್ದು, ಮನಸ್ಸಿನ ಅರೋಗ್ಯ ಎಷ್ಟು ಹದಗೆಡುವುದೋ ಅಷ್ಟೇ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಉತ್ತಮವಾದಲ್ಲಿContinue reading “ಆಯುರ್ವೇದ ಪಂಚಕರ್ಮ ಚಿಕಿತ್ಸೆ”

ಇಂದಿನ ಔಷಧೀಯ ಸಸ್ಯದ ಪರಿಚಯ: ನಂದಿಬಟ್ಟಲು

ತಗರ (ನಂದಿ ಬಟ್ಲು) ನಂದಿ ವರ್ಧನ, ನಂದಿವಾಳ, ನಂದಿಯ ವಟೈ, ನಂದಿಯ ವಟ್ಟಂ ನಂದಿಯ ಪೂ ಎಂಬ ಹೆಸರುಗಳಿಂದ ಕರೆಯುತ್ತಾರೆ. ನಂದಿ ಬಟ್ಲು ಗಿಡವನ್ನು ಹಳ್ಳಿಗಳಲ್ಲಿ ಮನೆಯ ಹಿತ್ತಲಲ್ಲಿ, ತೋಟಗಳಲ್ಲಿ, ದೇವಾಲಯಗಳಲ್ಲಿ, ಉದ್ಯಾನ ವನಗಳಲ್ಲಿ ಅಂದಕ್ಕಾಗಿ ಬೆಳೆಸಿರುತ್ತಾರೆ. ಸುಮಾರು 6 ರಿಂದ 10 ಅಡಿ ಎತ್ತರ ಬೆಳೆದು,ಸುವಾಸನೆಭರಿತವಾದ ಗೊಂಚಲು ಗೊಂಚಲು ಬಿಳಿಯ ಹೂವುಗಳನ್ನು ಬಿಡುತ್ತದೆ.ಶಿವನ ಆರಾಧನೆಗೆ ನಂದಿವಾಳ ಹೂವುಗಳು ಬಹಳ ಶ್ರೇಷ್ಠವೆಂದು ಹಿಂದೂಗಳು ಭಾವಿಸುತ್ತಾರೆ.ಈ ಹೂವುಗಳನ್ನು ಸೋಮವಾರ ಅಥವಾ ಕಾರ್ತಿಕ ಸೋಮವಾರದಂದು, ಮನೆಯಲ್ಲಿ ಶಿವನ ಪೋಟೋಗೆ ಅಥವಾContinue reading “ಇಂದಿನ ಔಷಧೀಯ ಸಸ್ಯದ ಪರಿಚಯ: ನಂದಿಬಟ್ಟಲು”

ಔಷಧೀಯ ಸಸ್ಯ ಪರಿಚಯ : ಅಮೃತಬಳ್ಳಿ

ಅಮೃತ ಬಳ್ಳಿ : ಇದನ್ನು ಸಂಸ್ಕೃತದಲ್ಲಿ ಗುಡುಚಿ ಎನ್ನಲಾಗುತ್ತದೆ. ಅಮೃತ ಬಳ್ಳಿ ಇದರ ವೈಜ್ಞಾನಿಕ ಹೆಸರು ಟಿನೋಸ್ಪೊರಾ ಕಾರ್ಡಿಫೋಲಿಯಾ. ಇದನ್ನು ಇಂಡಿಯನ್ ಕ್ವಿನೈನ್ ಎಂದು ಕರೆಯುತ್ತಾರೆ. ಇದು ಮೆನಿಸ್ಪೆರ್ಮೇಸಿಯಾ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ . .ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.ಅಮೃತಬಳ್ಳಿ:ಭಾರತ ಮತ್ತು ಶ್ರೀಲಂಕಾದ ಉಷ್ಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಕಂಡು ಬರುತ್ತದೆ.ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿContinue reading “ಔಷಧೀಯ ಸಸ್ಯ ಪರಿಚಯ : ಅಮೃತಬಳ್ಳಿ”