ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರ.ಕಾರ್ಯದರ್ಶಿContinue reading “ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ”
Category Archives: Uncategorized
ಹೆಣ್ಣಿಗೆ ನ್ಯಾಯ ಕೊಡಬೇಕು ಎನ್ನುವ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ?: ಕುಯಿಲಾಡಿ
ಉಡುಪಿ: ಹೆಣ್ಣಿಗೆ ನ್ಯಾಯ ಕೊಡಬೇಕು ಎಂದು ಹೋರಾಟಕ್ಕೆ ಇಳಿದಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ. ಸೌಜನ್ಯಾ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆ.29ರಂದು ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಹಿರಿಯ ಮುಖಂಡರ ಬಗ್ಗೆContinue reading “ಹೆಣ್ಣಿಗೆ ನ್ಯಾಯ ಕೊಡಬೇಕು ಎನ್ನುವ ತಿಮರೋಡಿಗೆ ಮಹಿಳೆಗೆ ಗೌರವ ಕೊಡುವ ಕನಿಷ್ಠ ಪರಿಜ್ಞಾನ ಇಲ್ಲವೆ?: ಕುಯಿಲಾಡಿ”
ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಶೋಕ್ ರಾವ್ ಹಾಗೂ ಪಂಚಾಯತ್ ಸದಸ್ಯರಾದ ಈಶ್ವರ್ ಕಟಪಾಡಿ ಬಿಜೆಪಿ ಸೇರ್ಪಡೆ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು, ಕಟಪಾಡಿ ಸಿಎ ಬ್ಯಾಂಕ್ ನಿರ್ದೇಶಕರು, ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಇದರ ಅಧ್ಯಕ್ಷರೂ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆದ ಅಶೋಕ್ ರಾವ್ ಹಾಗೂ ಕಟಪಾಡಿ ಗ್ರಾಮಪಂಚಾಯತ್ ಸದಸ್ಯರಾದ ಈಶ್ವರ ಕಟಪಾಡಿ ಇಂದು ಕಾಪು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಾಲು ಹೊದಿಸಿ ಪಕ್ಷದ ಧ್ವಜ ಕೊಟ್ಟುContinue reading “ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಶೋಕ್ ರಾವ್ ಹಾಗೂ ಪಂಚಾಯತ್ ಸದಸ್ಯರಾದ ಈಶ್ವರ್ ಕಟಪಾಡಿ ಬಿಜೆಪಿ ಸೇರ್ಪಡೆ”
ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ: ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಮಹಿಳಾ ಘಟಕದ ವತಿಯಿಂದ ಪಂಚಮ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ದಯಾಕರ ಶಾಂತಿ ಬನ್ನಂಜೆ ಇವರ ಪೌರೋಹಿತ್ಯದಲ್ಲಿ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನೆರವೇರಿತು. ಭಜನೆ, ಸಾಮೂಹಿಕ ಅಷ್ಟೋತ್ತರ, ಕುಂಕುಮಾರ್ಚನೆ, ಮಹಾ ಪೂಜೆ ಹಾಗೂ ಅನ್ನ ಪ್ರಸಾದ ವಿತರಣೆ ನಡೆಯಿತು. ಸುಮಾರು 350ಕ್ಕೂ ಮಿಕ್ಕಿ ಭಕ್ತಾಭಿಮಾನಿಗಳು ಶ್ರೀ ವರಮಹಾಲಕ್ಷ್ಮೀ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎ.ಶಿವಕುಮಾರ್ ಅಂಬಲಪಾಡಿ,Continue reading “ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ: ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ”
ಅಂಬಲಪಾಡಿ : ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ
ಉಡುಪಿ: ಬಿಲ್ಲವ ಸೇವಾ ಸಂಘ(ರಿ.) ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ, ಸಂಘದ ಮಹಿಳಾ ಘಟಕ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಇದರ ಆಶ್ರಯದಲ್ಲಿ ಸಂಘದ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಮಾಹಿತಿ ಕಾರ್ಯಕ್ರಮದಲ್ಲಿ ಅಂಬಲಪಾಡಿ ಪರಿಸರದ ಹಿರಿಯ ಕೃಷಿಕ ಮಹಿಳೆಯರಾದ ಸರೋಜಿನಿ ಪೂಜಾರ್ತಿ, ಜಾನಕಿ ಪೂಜಾರ್ತಿ ಆಚಾರಿಗುಂಡಿ-ಬಂಕೇರಕಟ್ಟ ಮತ್ತು ಗಿರಿಜ ಪೂಜಾರ್ತಿ ಜತ್ತರಬೆಟ್ಟು ಅಂಬಲಪಾಡಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷContinue reading “ಅಂಬಲಪಾಡಿ : ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ”
ಭಾರತದ ಅದ್ವಿತೀಯ ಸಾಧನೆಗೆ ವಿಶ್ವವೇ ಬೆರಗು: ಕುಯಿಲಾಡಿ ಸುರೇಶ್ ನಾಯಕ್ ಚಂದ್ರಯಾನ-3 ಅದ್ಬುತ ಯಶಸ್ಸು : ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ
ಉಡುಪಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತ ಚಂದ್ರನ ದಕ್ಷಿಣ ದ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆ ತಂದಿದೆ. ಈ ಐತಿಹಾಸಿಕ ಸಾಧನೆಗೈದಿರುವ ಇಸ್ರೋ ವಿಜ್ಞಾನಿಗಳ ಇಡೀ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಭಾರತ ಇಂತಹ ವಿಶ್ವ ದಾಖಲೆಯ ಸಾಧನೆಯ ಹೊಸ ಮೈಲಿಗಲ್ಲು ತಲುಪಿರುವುದು ಶ್ಲಾಘನೀಯ. ಈ ಅದ್ವಿತೀಯ ಸಾಧನೆಯ ಮೂಲಕ ವಿಶ್ವವೇ ಬೆರಗಾಗಿ ಭಾರತದತ್ತ ತಿರುಗಿ ನೋಡುವಂತೆContinue reading “ಭಾರತದ ಅದ್ವಿತೀಯ ಸಾಧನೆಗೆ ವಿಶ್ವವೇ ಬೆರಗು: ಕುಯಿಲಾಡಿ ಸುರೇಶ್ ನಾಯಕ್ ಚಂದ್ರಯಾನ-3 ಅದ್ಬುತ ಯಶಸ್ಸು : ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ”
ಕಟಪಾಡಿ ಪಂಚಾಯತ್ ಬಿಜೆಪಿ ವಶ
ಕಾಪು: ಕಟಪಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಶೋಕ್ ರಾವ್ ರವರು ಆಯ್ಕೆಯಾಗಿದ್ದಾರೆ. 26 ಜನ ಸದಸ್ಯರಲ್ಲಿ 10 ಬಿಜೆಪಿ ಹಾಗೂ 16 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಕೊನೆಯ ಕ್ಷಣದಲ್ಲಿ ಅಶೋಕ್ ರಾವ್ ಹಾಗೂ ಹಲವರು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಜಿದ್ದಾ ಜಿದ್ದು ಹೋರಾಟದಲ್ಲಿ ಕೊನೆಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ್ ರಾವ್ ಜಯಗಳಿಸಿರುವರು. ಇತಿಹಾಸದಲ್ಲಿ ಮೊದಲ ಬಾರಿಗೆ ಕಟಪಾಡಿ ಪಂಚಾಯತ್ ಬಿಜೆಪಿ ವಶವಾಗಿದೆ.
ಅಂಬಲಪಾಡಿ ಬಿಲ್ಲವ ಸೇವಾ ಸಂಘ, ಮಹಿಳಾ ಘಟಕ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ: ಆಟಿಡೊಂಜಿ ಕೂಟ, ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ, ಕೃಷಿ ಮತ್ತು ತೋಟಗಾರಿಕೆ ಕುರಿತು ಮಾಹಿತಿ ಕಾರ್ಯಕ್ರಮ
ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ ಬಿಲ್ಲವ ಮಹಿಳಾ ಘಟಕ ಅಂಬಲಪಾಡಿ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ ಅಂಬಲಪಾಡಿ ಇದರ ಜಂಟಿ ಸಹಯೋಗದೊಂದಿಗೆ ಆಟಿಡೊಂಜಿ ಕೂಟ, ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಕುರಿತು ಮಾಹಿತಿ ಕಾರ್ಯಕ್ರಮವು ಸಂಘದ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಿತು. ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎ.ಶಿವಕುಮಾರ್ ಅಂಬಲಪಾಡಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಹಿರಿಯContinue reading “ಅಂಬಲಪಾಡಿ ಬಿಲ್ಲವ ಸೇವಾ ಸಂಘ, ಮಹಿಳಾ ಘಟಕ ಮತ್ತು ಉಜ್ವಲ ಸಂಜೀವಿನಿ ಒಕ್ಕೂಟ: ಆಟಿಡೊಂಜಿ ಕೂಟ, ಹಿರಿಯ ಕೃಷಿಕ ಮಹಿಳೆಯರಿಗೆ ಸನ್ಮಾನ, ಕೃಷಿ ಮತ್ತು ತೋಟಗಾರಿಕೆ ಕುರಿತು ಮಾಹಿತಿ ಕಾರ್ಯಕ್ರಮ”
ಆರೋಗ್ಯವಂತ ಜೀವನಕ್ಕಾಗಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ : ಶಿವರಾಯ ಪ್ರಭು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯವಂತ ಜೀವನ ರೂಪಿಸಿಕೊಳ್ಳಲು ನಾಂದಿ ಹಾಡಿದೆ. ವಿದ್ಯಾರ್ಥಿಗಳು ಪಡೆದ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಇದರ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಕರೆContinue reading “ಆರೋಗ್ಯವಂತ ಜೀವನಕ್ಕಾಗಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ : ಶಿವರಾಯ ಪ್ರಭು”
ಬೊಮ್ಮಾರಬೆಟ್ಟು ಗ್ರಾ.ಪಂ. ಸದಸ್ಯ ಹರೀಶ್ ಸಾಲ್ಯಾನ್ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ
ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸಾಲ್ಯಾನ್ ರವರನ್ನು ಶಿಸ್ತು ಮೀರಿದ ವರ್ತನೆಯ ಕಾರಣಕ್ಕಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.