ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 161 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾಗಿದೆ. ಇವತ್ತು ಕಂಡು ಬಂದ ಹೊಸ ಪ್ರಕರಣಗಳ ಪೈಕಿ 91 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದು 24 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಾಗಿರುತ್ತಾರೆ.
ರಾಜ್ಯದಲ್ಲಿ ಇಂದು 164 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 2605 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೋನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು ಒಟ್ಟು 66 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 3248 ಸಕ್ರಿಯ ಪ್ರಕರಣಗಳು ಇದ್ದು, 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 161 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಇವರಲ್ಲಿ 2605 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3248 ಆಗಿದೆ. ಅಲ್ಲದೇ ಇಂದು ಬೆಂಗಳೂರು ನಗರ ಮತ್ತು ಕಲಬುರ್ಗಿಯಲ್ಲಿ ಒಬ್ಬೊಬ್ಬರು ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ರಾಜ್ಯದಲ್ಲಿ ಇಂದು 161 ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಬೆಂಗಳೂರು ನಗರದಲ್ಲಿ ಪಿ.4316 ಸೋಂಕಿತ 65 ವರ್ಷದ ಮಹಿಳೆಯವರು ಜೂನ್ 3ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಮಧುಮೇಹ, ರಕ್ತದೊತ್ತಡ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಮಹಿಳೆ 08-06-2020ರಂದು ಸಾವನ್ನಪ್ಪಿದ್ದು, ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.
ಕೋವಿಡ್ – 19 ಮಹಾಮಾರಿಯ ಸಂದಿಗ್ಧತೆಯಿಂದ ಜನಸಾಮಾನ್ಯರು ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಿರುತ್ತಾರೆ. ಈ ಸಂದರ್ಭಗಳಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ, ಬೇರೆ ಊರಿಗೆ ತೆರಳಿರುವುದರಿಂದ ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿರುತ್ತದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶಿಕ್ಷಣವನ್ನು ಮುಂದುವರಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಸಲಹೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಇಂದು ದಿ. 09-06-2020 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತಂತೆ ಇಲಾಖಾ ಪ್ರಮುಖ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಗಣಿಸಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಹೆಚ್ಚುವರಿಯೆಂದು ಶಿಕ್ಷಕರನ್ನು ಗುರುತಿಸಿ ಹೆಚ್ಚುವರಿ ಸ್ಥಳಾಂತರ ಪ್ರಕ್ರಿಯೆ ಮಾಡಬಾರದಾಗಿ ತಿಳಿಸಿದ ಅವರು, ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವನ್ನು ಕ್ಲಪ್ತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸೂಕ್ತ ಬಸ್ಸಿನ ಸೌಕರ್ಯವನ್ನು ವ್ಯವಸ್ಥೆ ಗೊಳಿಸುವಂತೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಶಾಸಕರ ಮಾತಿಗೆ ಸಹಮತವನ್ನು ವ್ಯಕ್ತಪಡಿಸುತ್ತಾ ಇಲಾಖಾ ಮಟ್ಟದಲ್ಲಿ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಶಿಕ್ಷಣ ಸಚಿವರು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ದಕ್ಷಿಣ ಕನ್ನಡ, ಉತ್ತರ ಕನ್ನಡ,ಉಡುಪಿ ಜಿಲ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್ ವಿಷ್ಣುವರ್ಧನ್ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಣ ಅಧಿಕಾರಿಗಳು ಉಪಸ್ಥಿತರಿದ್ದರು.
ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ.
ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು. ಈ ಭೂಮಿ ಮೇಲೆ ಅತ್ಯಂತ ಮೌಲ್ಯ ಇರುವ ವಸ್ತುಗಳಲ್ಲಿ ಒಂದು ಇದು. ಒಂದು ಕೇಜಿಗೆ 8 ಸಾವಿರ ಪೌಂಡ್ ಸ್ಟರ್ಲಿಂಗ್ ಬೆಲೆ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 7.60 ಲಕ್ಷ ರುಪಾಯಿ.
ವಿಶ್ವದ 26 ದೇಶಗಳಲ್ಲಿ ಬೆಳೆಯುತ್ತದೆ
ಉಳಿದ ಮರಗಳಿಗೆ ಹೋಲಿಸಿದರೆ ಈ ಆಫ್ರಿಕನ್ ಬ್ಲ್ಯಾಕ್ ವುಡ್ ಅಂಥ ಎತ್ತರವೇನೂ ಬೆಳೆಯಲ್ಲ. 25ರಿಂದ 40 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ಬಗ್ಗೆ ಗೊತ್ತಿರುವವರು ಬಹಳ ಬೇಗ ಇವುಗಳನ್ನು ಕಂಡುಹಿಡಿಯುತ್ತಾರೆ. ವಿಶ್ವದ 26 ದೇಶಗಳಲ್ಲಿ ಈ ಮರಗಳನ್ನು ಕಾಣಬಹುದು.
ಚೆನ್ನಾಗಿ ಬೆಳೆಯಲು 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ
ಈ ಮರವನ್ನು ಯಾವುದಾದರೂ ವಸ್ತು ಮಾಡುವುದಕ್ಕೆ ಬಳಸುವಷ್ಟು ಬೆಳೆಯುವುದಕ್ಕೆ 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ. ಆದರೆ ಕೀನ್ಯಾ, ತಾಂಜೇನಿಯಾದಲ್ಲಿ ಇವುಗಳನ್ನು ಕಾನೂನುಬಾಹಿರವಾಗಿ ಸಾಗಣೆ ಮಾಡುವುದಕ್ಕೆ ಬಹಳ ಮುಂಚಿತವಾಗಿಯೇ ಕತ್ತರಿಸಿಬಿಡುತ್ತಾರೆ. ಆ ಕಾರಣಕ್ಕೆ ಇವುಗಳ ಸಂಖ್ಯೆ ಬಹಳ ಕಡಿಮೆಯಾಗಿ, ಕಪ್ಪು ಮರವೇ ವಿರಳವಾಗಿದೆ.
ಪಾಲಿಶ್ ಮಾಡಿದ ಮೇಲೆ ಚೆಲುವೋ ಚೆಲುವು
ಈ ಮರಗಳ ಹೆಸರೇ ಹೇಳುವಂತೆ ಕಡುಕಪ್ಪು. ಜತೆಗೆ ಕಣ್ಣು ಕಂಡೂ ಕಾಣದಂತೆ ಗೆರೆಗಳು ಇರುತ್ತದೆ. ಬಹಳ ಗಟ್ಟಿ, ನೇರ ಹಾಗೂ ದೃಢವಾದ ಮರ ಇದು. ಇವುಗಳಲ್ಲಿ ಪೀಠೋಪಕರಣವೋ ಮತ್ತೊಂದೋ ಮಾಡುವುದು ಸಹ ಸಲೀಸಲ್ಲ. ಈ ಕಪ್ಪು ಮರದಿಂದ ಮಾಡಿದ ವಸ್ತುಗಳನ್ನು ಒಮ್ಮೆ ಪಾಲಿಶ್ ಮಾಡಿದ ಮೇಲೆ ಅದರ ಚೆಲುವೇ ವರ್ಣಿಸಲು ಅಸಾಧ್ಯ.
ಸಂಗೀತ ವಾದ್ಯಗಳ ತಯಾರಿಗೆ ಬಳಕೆ
ಕ್ಲಾರಿನೆಟ್, ಕೊಳಲು ಹಾಗೂ ಗಿಟಾರ್ ನಂತಹ ಸಂಗೀತ ವಾದ್ಯಗಳನ್ನು ಮಾಡಲು ಈ ಆಫ್ರಿಕನ್ ಕಪ್ಪು ಮರವನ್ನು ಬಳಸಲಾಗುತ್ತದೆ. ಇದನ್ನು ಹೊರತುಪಡಿಸಿ, ದೀರ್ಘಕಾಲ ಬಾಳಿಕೆ ಬರುವಂಥ ಪೀಠೋಪಕರಣಗಳನ್ನು ಮಾಡಲಾಗುತ್ತದೆ. ಆದರೆ ಮೊದಲೇ ಹೇಳಿದಂತೆ, ಇವುಗಳು ಸಿಕ್ಕಾಪಟ್ಟೆ ದುಬಾರಿ.
ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ.
ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು. ಈ ಭೂಮಿ ಮೇಲೆ ಅತ್ಯಂತ ಮೌಲ್ಯ ಇರುವ ವಸ್ತುಗಳಲ್ಲಿ ಒಂದು ಇದು. ಒಂದು ಕೇಜಿಗೆ 8 ಸಾವಿರ ಪೌಂಡ್ ಸ್ಟರ್ಲಿಂಗ್ ಬೆಲೆ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 7.60 ಲಕ್ಷ ರುಪಾಯಿ.
ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ.
ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು. ಈ ಭೂಮಿ ಮೇಲೆ ಅತ್ಯಂತ ಮೌಲ್ಯ ಇರುವ ವಸ್ತುಗಳಲ್ಲಿ ಒಂದು ಇದು. ಒಂದು ಕೇಜಿಗೆ 8 ಸಾವಿರ ಪೌಂಡ್ ಸ್ಟರ್ಲಿಂಗ್ ಬೆಲೆ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 7.60 ಲಕ್ಷ ರುಪಾಯಿ.
ವಿಶ್ವದ 26 ದೇಶಗಳಲ್ಲಿ ಬೆಳೆಯುತ್ತದೆ
ಉಳಿದ ಮರಗಳಿಗೆ ಹೋಲಿಸಿದರೆ ಈ ಆಫ್ರಿಕನ್ ಬ್ಲ್ಯಾಕ್ ವುಡ್ ಅಂಥ ಎತ್ತರವೇನೂ ಬೆಳೆಯಲ್ಲ. 25ರಿಂದ 40 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ಬಗ್ಗೆ ಗೊತ್ತಿರುವವರು ಬಹಳ ಬೇಗ ಇವುಗಳನ್ನು ಕಂಡುಹಿಡಿಯುತ್ತಾರೆ. ವಿಶ್ವದ 26 ದೇಶಗಳಲ್ಲಿ ಈ ಮರಗಳನ್ನು ಕಾಣಬಹುದು.
ಚೆನ್ನಾಗಿ ಬೆಳೆಯಲು 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ
ಈ ಮರವನ್ನು ಯಾವುದಾದರೂ ವಸ್ತು ಮಾಡುವುದಕ್ಕೆ ಬಳಸುವಷ್ಟು ಬೆಳೆಯುವುದಕ್ಕೆ 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ. ಆದರೆ ಕೀನ್ಯಾ, ತಾಂಜೇನಿಯಾದಲ್ಲಿ ಇವುಗಳನ್ನು ಕಾನೂನುಬಾಹಿರವಾಗಿ ಸಾಗಣೆ ಮಾಡುವುದಕ್ಕೆ ಬಹಳ ಮುಂಚಿತವಾಗಿಯೇ ಕತ್ತರಿಸಿಬಿಡುತ್ತಾರೆ. ಆ ಕಾರಣಕ್ಕೆ ಇವುಗಳ ಸಂಖ್ಯೆ ಬಹಳ ಕಡಿಮೆಯಾಗಿ, ಕಪ್ಪು ಮರವೇ ವಿರಳವಾಗಿದೆ.
ಪಾಲಿಶ್ ಮಾಡಿದ ಮೇಲೆ ಚೆಲುವೋ ಚೆಲುವು
ಈ ಮರಗಳ ಹೆಸರೇ ಹೇಳುವಂತೆ ಕಡುಕಪ್ಪು. ಜತೆಗೆ ಕಣ್ಣು ಕಂಡೂ ಕಾಣದಂತೆ ಗೆರೆಗಳು ಇರುತ್ತದೆ. ಬಹಳ ಗಟ್ಟಿ, ನೇರ ಹಾಗೂ ದೃಢವಾದ ಮರ ಇದು. ಇವುಗಳಲ್ಲಿ ಪೀಠೋಪಕರಣವೋ ಮತ್ತೊಂದೋ ಮಾಡುವುದು ಸಹ ಸಲೀಸಲ್ಲ. ಈ ಕಪ್ಪು ಮರದಿಂದ ಮಾಡಿದ ವಸ್ತುಗಳನ್ನು ಒಮ್ಮೆ ಪಾಲಿಶ್ ಮಾಡಿದ ಮೇಲೆ ಅದರ ಚೆಲುವೇ ವರ್ಣಿಸಲು ಅಸಾಧ್ಯ.
ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರು ಉಡುಪಿ ಪ್ರವಾಸ ಕೈಗೊಂಡಿದ್ದು ಕೊವಿಡ್19 ವಿಚಾರವಾಗಿ ಸಭೆ ನಡೆಸಿದರು. ಉಡುಪಿ ಜಿಲ್ಲೆ ಘೋಷಣೆಯಾಗಿ 23 ವರ್ಷ ಕಳೆದರೂ ಜಿಲ್ಲಾ ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯ ನೇಮಕ ಆಗಿರುವುದಿಲ್ಲ. ಕೋವಿಡ್-19 ಈ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಯ ಅವಶ್ಯಕತೆ ಇರುವುದರಿಂದ ತಕ್ಷಣದಲ್ಲಿ ಜಿಲ್ಲಾ ಆಸ್ಪತ್ರೆಗೆ ಬೇಕಾದಷ್ಟು ಸಿಬ್ಬಂದಿ ನೇಮಕ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ದೇನೆ.
ಗ್ರಾಮೀಣ ಭಾಗಗಳಿಂದ ದಿನಕ್ಕೆ ಸಾವಿರಾರು ಮಂದಿ ರೋಗಿಗಳು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಅಲ್ಲದೆ ಕೊರೋನಾದ ಈ ಸಂದಿಗ್ಧ ಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯ ಅವಶ್ಯಕತೆ ಇರುವುದರಿಂದ ಸಿಬ್ಬಂದಿ ಕೊರತೆ ಯಿಂದ ಸಮಸ್ಯೆ ಉಂಟಾಗಿದೆ. ಆದ್ದರಿಂದ ತಕ್ಷಣದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗಳು ಸೇರಿದಂತೆ ಜಿಲ್ಲಾಸ್ಪತ್ರೆಗೆ ಬೇಕಾಗುವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಮನವಿ ಮಾಡಿದರು.
ಮನವಿ ಗೆ ಸ್ಪಂದಿಸಿದ ಸಚಿವರು ಸಂಬಂದಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ತಕ್ಷಣದಲ್ಲಿ ಬೇಕಾದ ಸಿಬ್ಬಂದಿಯ ನೇಮಕ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರತಾಪ್ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಲ್ಹೋಟ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಜಿಲ್ಲಾ ವೈದ್ಯಾಧಿಕಾರಿಗಳಾದ ಸುಧೀರ್ ಸೂಡ, ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಕಸ್ತೂರಿಯ ವೈಜ್ಞಾನಿಕ ಹೆಸರು Ocimum basilicum.ಸಾಮಾನ್ಯವಾಗಿ Basil ಎಂದು ಇಂಗ್ಲಿಷ್ ನಲ್ಲಿ ಹೇಳುವರು.ಹಿಂದಿಯಲ್ಲಿ ಸಬ್ಜಾ,ತುಕ್ ಮಾರಿಯಾ.. ಸಂಸ್ಕೃತದಲ್ಲಿ ಕಠಿಂಜರ.ಕನ್ನಡದಲ್ಲಿ ಕಾಮಕಸ್ತೂರಿ, ಸಿಹಿ ತುಳಸಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಗಿಡವು ವಾತಾವರಣವನ್ನು ಶುದ್ಧೀಕರಿಸುತ್ತದೆ.ಕಾಮಕಸ್ತೂರಿ ಗಿಡವು ಮನೆಯ ಸುತ್ತಮುತ್ತ ಇದ್ದರೆ ಸೊಳ್ಳೆ, ನೊಣಗಳ ಬಾಧೆ ಕಡಿಮೆಯಾಗುತ್ತದೆ.ಎರಡುದಳಗಳನ್ನು ಕೊಯ್ದು ಕೈಯಲ್ಲಿ ಹಿಡಿದು ನಾಸಿಕಕ್ಕೆ ಆಗಾಗ ಕೊಂಡೊಯ್ದರೆ ಸುಗಂಧಿತ ಗಾಳಿಯಿಂದ ಆಲಸಿತ ಮನವು ಉಲ್ಲಸಿತವಾಗುವುದು;
ನರನಾಡಿಯಲ್ಲಿ ಹೊಸ ಚೈತನ್ಯ ಉಕ್ಕುವುದು.
ಇದರಲ್ಲಿ ಹೂ ಬಿಡುತ್ತದೆ.ನೇರಳೆಬಣ್ಣದ ಗುಚ್ಛದಲ್ಲಿ ತುಸು ನೇರಳೆ ಮಿಶ್ರಿತ ಬಿಳಿ ಬಣ್ಣದ ಸಣ್ಣ ಹೂಗಳನ್ನು ಕಾಣಬಹುದು.ಅವುಗಳನ್ನು ಕೀಳದೆ ಹಾಗೆಯೇ ನಾವು ಬೆಳೆಯಲು ಬಿಡುತ್ತಿದ್ದೇವೆ.ಪೂರ್ತಿ ಒಣಗಿದ ನಂತರ ಕೊಯ್ದು ಅದರಿಂದ ಬೀಜಗಳನ್ನು ಸಂಗ್ರಹಿಸಿಡುತ್ತೇವೆ.
ಕಾಮಕಸ್ತೂರಿ ಬೀಜದಲ್ಲಿ ಫೋಲಿಕ್ ಆ್ಯಸಿಡ್, ವಿಟಮಿನ್ , ಫೈಬರ್ ಗಳು ಹೇರಳವಾಗಿವೆ.ಫ್ಲೇವನಾಯ್ಡ್ ಅಂಶಗಳೂ ಇವೆಯಂತೆ.ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ದಳಗಳನ್ನು ಕುದಿಸಿ ತಯಾರಿಸಿದ ಕಷಾಯವನ್ನು ಸೇವಿಸಿದರೆ ಶೀತ ,ಕೆಮ್ಮು, ಕಫ, ಜ್ವರ ಶಮನವಾಗುತ್ತದೆ.ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಗಂಟಲು ನೋವು, ಕಿರಿಕಿರಿ,ಕೆರೆತ ಎಲ್ಲ ಮಾಯ.
ಉಪಯೋಗಗಳು:-
*ಟೈಪ್-2 ಮಧುಮೇಹಿಗಳಿಗೆ ಇದರ ಬೀಜದ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಬಹುದು.ಇದು ಪಚನಕ್ರಿಯೆ ಯನ್ನು ಉತ್ತೇಜಿಸುತ್ತದೆ.ಒಂದರಿಂದ ಎರಡು ಚಮಚದಷ್ಟು ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕುಡಿಯುವುದು.ಬೀಜ ನೆನೆದು ಲೋಳೆಯಂತೆ ಆಗಿರುತ್ತದೆ.ಬೆಳಗಿನ ಉಪಾಹಾರಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸೇವಿಸಬೇಕು.
*ಇದಕ್ಕೆ ಎರಡು ಚಮಚ ನಿಂಬೆರಸ ಸೇರಿಸಿ ಸೇವಿಸುವುದರಿಂದ ಹೊಟ್ಟೆಯ ಸುತ್ತ ಇರುವ ಬೊಜ್ಜು ಕರಗುತ್ತದಂತೆ.
*ನೆನೆಸಿದ ಮಿಶ್ರಣಕ್ಕೆ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಬೇಸಿಗೆಯಲ್ಲಿ ಶರೀರ ತಂಪಾಗಿಡಲು ಸಹಕಾರಿ.
*ಎರಡು ಲೋಟ ನೀರನ್ನು ಕುದಿಸಿ ಉರಿ ನಂದಿಸಿ.ಅದಕ್ಕೆ ಕಾಮಕಸ್ತೂರಿಯ ಎಲೆಗಳನ್ನು ಹಾಕಿ..ಕಾಲುಗಂಟೆಯ ನಂತರ ಸೋಸಿ ಕಾಳುಮೆಣಸಿನ ಪುಡಿ, ನಿಂಬೆರಸ ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆ/ಬೆಲ್ಲದಿಂದ ಪಾನಕ ತಯಾರಿಸಿ ಕುಡಿಯಬಹುದು.. ಅಥವಾ ಸೋಸಿದ್ದನ್ನು ಜ್ಯೂಸ್ ಮಾಡಿ ಐಸ್ ನೊಂದಿಗೆ ಕೂಡಾ ಕುಡಿಯಬಹುದು.
*ಐಸ್ಕ್ರೀಂ ತಯಾರಿಸುವಾಗ ಬೀಜಗಳನ್ನು ಬಳಸಬಹುದು.
*ಕೊಲೆಸ್ಟ್ರಾಲ್ ನ್ನು ಕರಗಿಸುವ ಗುಣವನ್ನು ಹೊಂದಿದ್ದು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ.
*ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಣಕ್ಕೆ ತರುವುದರಿಂದ ಥೈರಾಯ್ಡ್ ಗ್ರಂಥಿ ಸಮಸ್ಯೆಯಿದ್ದವರಿಗೆ ಉಪಯುಕ್ತ.
ಔಷಧೀಯ ಗುಣವುಳ್ಳ ಈ ಗಿಡಮೂಲಿಕೆ ಸುಲಭವಾಗಿ ಬೆಳೆಯಬಹುದು.ವಿಶೇಷವಾದ ಆರೈಕೆ ಏನೂ ಬೇಡ.ಹಾಗೆಯೇ ಅಂಗಡಿಗಳಲ್ಲೂ ಇದರ ಬೀಜಗಳು ದೊರೆಯುತ್ತವೆ.
ವೀಳ್ಯದೆಲೆ:-
ಶುಭ ಸಮಾರಂಭವು ಮನೆಯಲ್ಲಿ ಇದೆಯೆಂದಾದರೆ ಹಲವಾರು ವಸ್ತುಗಳನ್ನು ಸಂಗ್ರಹಿಸಬೇಕಾಗುತ್ತದೆ.ಅದರಲ್ಲಿ ವೀಳ್ಯದೆಲೆ ಅತೀ ಮುಖ್ಯವಾದುದು.ವೈದಿಕ ಕ್ರಿಯೆಗಳಿಗೆ ಇದು ಅನಿವಾರ್ಯ ಹಾಗೂ ತಾಂಬೂಲ ಮೆಲ್ಲಲಂತೂ ಬೇಕೇಬೇಕು.ಔಷಧೀಯ ಗುಣಗಳು ಅಪಾರ.
ವೀಳ್ಯದೆಲೆಯು Piperaceae ಕುಟುಂಬಕ್ಕೆ ಸೇರಿದ್ದು, ಸಸ್ಯಶಾಸ್ತ್ರೀಯ ಹೆಸರು Piper betle.ತುಳುವಿನಲ್ಲಿ ಬಚ್ಚಿರೆ.
ಬಳ್ಳಿಯ ಸಸ್ಯವಿದು.ಗಾಢಹಸಿರು ಬಣ್ಣದ ಹೃದಯದಾಕಾರದ ಎಲೆಗಳು ಆಕರ್ಷಕ.ನಾನಾ ತಳಿಗಳು ಇವೆ.ಪುಟ್ಟ ಕೈತೋಟದಲ್ಲು ಬೆಳೆಸಬಹುದು.ಬಳ್ಳಿ ಹಬ್ಬಲು ಕಂಬ/ಗಿಡ/ಮರದ ಅವಶ್ಯಕತೆ ಇದೆ.ಕೆಲವರು ನೆಲದಲ್ಲಿ ನೆಟ್ಟು ಅಲ್ಯುಮಿನಿಯಂ ಸರಿಗೆಯ ಸಹಾಯದಿಂದ ಮಾಳಿಗೆಗೆ ಹಬ್ಬಿಸುತ್ತಾರೆ.
ಇದನ್ನು ವಾಣಿಜ್ಯ ಉದ್ದೇಶಗಳಿಗೆ ಬೆಳೆಯುವವರು ಇದ್ದಾರೆ.ವೀಳ್ಯದೆಲೆಯನ್ನು ಕವಚಿ ಒಂದರ ಮೇಲೊಂದು ಇಟ್ಟರೆ ನೋಡಲು ಚಂದ. ಈ ಅಟ್ಟಿಗೂ ಒಂದು ಲೆಕ್ಕವಿದೆ,’ಸೂಡಿ’ ಎಂಬುದಾಗಿ. ಮೊದಲು…
25 ಎಲೆಗಳು=1 ಕವಳ
1 ಸೂಡಿ =4 ಕವಳಗಳು=100ಎಲೆಗಳು.
ಈಗ…
18 ಎಲೆಗಳು=1 ಕವಳ
1ಸೂಡಿ=3ಕವಳಗಳು =54 ಎಲೆಗಳು.
ಇದು ವೀಳ್ಯದೆಲೆ ಮಾರುವಾಗ, ಕೊಳ್ಳುವಾಗ ಬಳಸುವ ಲೆಕ್ಕಾಚಾರ ..ಪರಿಚಯಸ್ಥರಿಂದ ಕೇಳಿ ತಿಳಿದುಕೊಂಡಿರುವುದು.
ಕಾರ್ಯಕ್ರಮಗಳಲ್ಲಿ ಸ್ವಸ್ತಿಕ ಇಡಲು,ಫಲತಾಂಬೂಲ ಸಮರ್ಪಿಸಲು ನೋಟು, ತೆಂಗಿನಕಾಯಿ, ಅಡಿಕೆಯೊಂದಿಗೆ ವೀಳ್ಯದೆಲೆ ಅಗತ್ಯ.ನಮ್ಮಲ್ಲಿ ವಿವಾಹ ನಿಶ್ಚಿತಾರ್ಥದ ಸಂದರ್ಭದಲ್ಲಿ’ವೀಳ್ಯದೆಲೆ ಅಡಿಕೆ ಪರಸ್ಪರ ಬದಲಾವಣೆ’ಎಂಬ ಮುಖ್ಯ ಶಾಸ್ತ್ರ ಇದೆ .
ತಾಂಬೂಲ ಮೆಲ್ಲುವವರಿಗಂತೂ ವೀಳ್ಯದೆಲೆ,ಸುಣ್ಣ, ಅಡಿಕೆ ಜೊತೆಯಲ್ಲೇ ಬೇಕು.ಊಟದ ನಂತರ ತಾಂಬೂಲ ತಿಂದರೆ ಲಾಲಾರಸ ಉತ್ಪತ್ತಿಯಾಗಿ ಜೀರ್ಣಶಕ್ತಿ ಹೆಚ್ಚುವುದು.ಹಲ್ಲಿನ,ವಸಡಿನ, ಸಮಸ್ಯೆ,ಬಾಯಿಯ ದುರ್ವಾಸನೆ ದೂರವಾಗುವುದು.ಔಷಧೀಯವಾಗಿಯೂ ವೀಳ್ಯದೆಲೆ ಬಳಕೆಯಾಗುತ್ತದೆ.
ಉಪಯೋಗಗಳು:-
**ಗಂಟಲಿನ ಕಿರಿ ಕಿರಿ,ಶೀತವಿದ್ದವರು ಉಪ್ಪು, ವೀಳ್ಯದೆಲೆ, ಸಾಂಬ್ರಾಣಿ (ದೊಡ್ಡ ಪತ್ರೆ) ಎಲೆಗಳನ್ನು ಜೊತೆಯಲ್ಲಿ ಜಗಿದು ರಸ ನುಂಗುತ್ತಿದ್ದರೆ ಉಪಶಮನ.
**ತೀವ್ರತರ ಅಸ್ತಮಾ,ಕಫದ ಸಮಸ್ಯೆ ಇದ್ದರೆ ವೀಳ್ಯದೆಲೆ, ಸಾಂಬ್ರಾಣಿ, ಕಾಳುಮೆಣಸು, ಶುಂಠಿ, ತುಳಸಿ ಜೊತೆ ಮಡಚಿ ಬಾಯಲ್ಲಿರಿಸಿ ನಿಧಾನವಾಗಿ ರಸವನ್ನು ನುಂಗಬೇಕು.ದಿನಕ್ಕೆ ಒಂದೆರಡು ಬಾರಿ ಮಾಡಿದರೆ ಜೀರ್ಣಶಕ್ತಿ ಹೆಚ್ಚಿ ಕಫದ ಸಮಸ್ಯೆ ದೂರ.
**ವೀಳ್ಯದೆಲೆ ಕಷಾಯ ದಿಂದ ಕಣ್ಣುತೊಳೆದರೆ ಕಣ್ಣುರಿ, ತುರಿಕೆ ನಿವಾರಣೆ.
**ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆಗಳಿಗೆ ದಾಸವಾಳದ ಎಲೆಗಳ ಜೊತೆ ಪೇಸ್ಟ್ ಮಾಡಿ ಹಚ್ಚುವುದು.ಇದರಿಂದ ಕೇಶ ತೈಲ ಮಾಡಿ ಹಚ್ಚುವುದು.
ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದಾಗ ಎಲೆಯನ್ನು ಕೈಯಲ್ಲಿ ಜಜ್ಜಿ ಆ ಭಾಗಕ್ಕೆ ಇಟ್ಟರೆ ಬೇಗ ಗುಣವಾಗುತ್ತದೆ.
**ಇತ್ತೀಚೆಗೆ ವಿಳ್ಯದೆಲೆ ತಂಬುಳಿ,ಪತ್ರೊಡೆಯನ್ನು ಕೂಡಾ ಮಾಡಿ ಅದಕ್ಕೂ ಬಳಸಬಹುದು ಎನ್ನುತ್ತಿದ್ದಾರೆ ಹಲವರು.
ಹೀಗೆ ವೀಳ್ಯದೆಲೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಮನೆಯಂಗಳದಲ್ಲಿ ಇದ್ದರೆ ಲಕ್ಷ್ಮೀ ಕಟಾಕ್ಷ ಇದ್ದಂತೆ ಎಂಬ ನಂಬಿಕೆಯಿದೆ.ಮನೆಯ ಹಿತ್ತಲಲ್ಲಿ ಒಂದು ವೀಳ್ಯದೆಲೆ ಬಳ್ಳಿ ಇದ್ದರೆ ಚೆನ್ನ..
ನಮ್ಮ ಹಿತ್ತಲಿನಲ್ಲಿ ಬೆಳೆಯುವ ಸಸ್ಯಗಳು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅವುಗಳ ವಿವರವನ್ನು ತಿಳಿದುಕೊಂಡು ಉಪಯೋಗಿಸಿಕೊಳ್ಳುವುದು ಜಾಣತನ.
ತೆರಿಗೆ ಹೊಣೆಗಾರಿಕೆಯಿಲ್ಲದ ವ್ಯವಹಾರಗಳಿಗೆ ಪಠ್ಯ ಸಂದೇಶದ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಸೋಮವಾರ ಅವಕಾಶ ನೀಡಿದೆ. ಹೌದು, ಕೇಂದ್ರ ಸರ್ಕಾರವು ಸರ್ಕಾರವು ಸೋಮವಾರ 2.2 ಮಿಲಿಯನ್ ನೋಂದಾಯಿತ ವ್ಯವಹಾರಗಳಿಗೆ ಕಿರು ಸಂದೇಶ ಸೇವೆ (ಎಸ್‌ಎಂಎಸ್) ಮೂಲಕ ಸುಲಭ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ ಫೈಲಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಒಂದು ಹೇಳಿಕೆಯ ಪ್ರಕಾರ, ಎಸ್‌ಎಂಎಸ್ ಮೂಲಕ ನಿಲ್ ಫಾರ್ಮ್ ಜಿಎಸ್‌ಟಿಆರ್ -3 ಬಿ ಸಲ್ಲಿಸುವ ಕಾರ್ಯವನ್ನು ಜಿಎಸ್‌ಟಿಎನ್ ಪೋರ್ಟಲ್‌ನಲ್ಲಿ ತಕ್ಷಣದಿಂದ ಜಾರಿಗೆ ತರಲಾಗಿದೆ
ಈ ಸೌಲಭ್ಯವು 22 ಲಕ್ಷಕ್ಕೂ ಹೆಚ್ಚು ನೋಂದಾಯಿತ ತೆರಿಗೆದಾರರಿಗೆ ಜಿಎಸ್ಟಿ ಅನುಸರಣೆಯ ಸುಲಭತೆಯನ್ನು ಗಣನೀಯವಾಗಿ ಸುಧಾರಿಸುತ್ತದೆ. ಈ ಮೊದಲು ಅವರು ಸಾಮಾನ್ಯ ಪೋರ್ಟಲ್ನಲ್ಲಿ ತಮ್ಮ ಖಾತೆಗೆ ಲಾಗ್ ಇನ್ ಮಾಡಬೇಕಾಗಿತ್ತು ಮತ್ತು ನಂತರ ಪ್ರತಿ ತಿಂಗಳು ತಮ್ಮ ಆದಾಯವನ್ನು ಸಲ್ಲಿಸಬೇಕಾಗಿತ್ತು.null
SMS ಕಳುಹಿಸುವ ಸ್ವರೂಪ ಹೀಗಿದೆ : “NIL 3B GSTIN ತೆರಿಗೆ ಅವಧಿ” ಎಂದು. ಜಿಎಸ್ಟಿಐಎನ್ ನೋಂದಾಯಿತ ತೆರಿಗೆದಾರರ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆಯನ್ನು 14409 ನಂಬರ್‌ಗೆ ಕಳುಹಿಸಿಕೊಡಬೇಕು. ಹೀಗೆ ಸಲ್ಲಿಸಿದ ಬಳಿಕ ರಿಟರ್ನ್‌ಗಳ ಸ್ಥಿತಿಯನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ಮತ್ತು ರಿಟರ್ನ್ ಸ್ಥಿತಿಯನ್ನು ಪತ್ತೆಹಚ್ಚಲು ನ್ಯಾವಿಗೇಟ್ ಮಾಡುವ ಮೂಲಕ ಟ್ರ್ಯಾಕ್ ಮಾಡಬಹುದು.
ಮಳೆಗಾಲ ಆರಂಭಗೊಂಡಿದೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಹಾವಳಿ ಈ ಸಮಯದಲ್ಲಿ ಹೆಚ್ಚು ಕಾಡುತ್ತದೆ. ಸಾಂಕ್ರಾಮಿಕ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದರಿಂದ ಈ ರೋಗದ ಹಾವಳಿ ತಡೆಯಬಹುದು.ಜೂನ್ನಿಂದ ನವೆಂಬರ್ವರೆಗೆ ಮಲೇರಿಯಾ, ಡೆಂಗ್ಯೂ ಅತಿ ಹೆಚ್ಚು ಬಾಧಿ ಸುವ ಸಮಯವಾಗಿದೆ.
ಮುಂಜಾಗ್ರತೆ ಅಗತ್ಯ ಮಳೆಗಾಲದಲ್ಲಿ ಹರಡುವ ಇತರ ಸಾಂಕ್ರಾಮಿಕ ರೋಗಗಳು ತಗಲದಂತೆ ಮುನ್ನೆಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ಅನುಸರಿಸುವುದು ಅತ್ಯಗತ್ಯ.
ಪರಿಸರ ಸ್ವಚ್ಛವಾಗಿಟ್ಟು ಕೊಳ್ಳಿ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಲಿ, ಮುಚ್ಚಳವಿಲ್ಲದ ಒವರ್ಹೆಡ್, ಸಿಮೆಂಟ್ ಟ್ಯಾಂಕ್ಗಳು, ತೆಂಗಿನ ಚಿಪ್ಪು, ಕುಡಿದು ಬಿಸಾಡಿದ ಎಳನೀರು ಚಿಪ್ಪು, ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್, ಟಯರ್ ಸಹಿತ ನೀರುನಿಲ್ಲುವ ಅವಕಾಶವಿರುವ ಎಲ್ಲ ಪರಿಕರ ಗಳು ಸೊಳ್ಳೆಗಳ ಉತ್ಪತ್ತಿ ತಾಣಗಳು. ಮನೆ, ಪರಿಸರದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ಎಚ್ಚರ ವಹಿಸುವುದು ಅಗತ್ಯ.
ವೈದ್ಯರ ಸಲಹೆ ಪಡೆಯಿರಿ ಜ್ವರ ಯಾವುದೇ ಇರಲಿ. ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಖಾತ್ರಿ ಪಡಿಸಿಕೊಳ್ಳುವುದು ಒಳ್ಳೆಯದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳಲ್ಲಿ ರಕ್ತ ತಪಾಸಣೆಯನ್ನು ಮಾಡಿಸಿಕೊಳ್ಳಬಹುದು.
ಸೊಳ್ಳೆಗಳಿಂದ ರಕ್ಷಣೆ ಹೇಗೆ? ಡೆಂಗ್ಯೂ ಹರಡುವ ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಅನಾಫೆಲಿಸ್ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತದೆ. ಹೀಗಾಗಿ ಸೊಳ್ಳೆಗ ಳಿಂದ ನಮ್ಮನ್ನು ರಕ್ಷಿಸಿ ಕೊಳ್ಳಲು ಕೆಲವು ಕ್ರಮ ಪಾಲಿಸು ವುದು ಅಗತ್ಯ. ಸಂಜೆ ಹೊತ್ತು ಕಿಟಿಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿಗಳನ್ನು ಅಳವಡಿಸುವುದು, ಔಷಧ ಲೇಪನ ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಮನೆಯ ಸುತ್ತ ಫಾಗಿಂಗ್ ಮಾಡಿಸುವುದು, ಸೊಳ್ಳೆ ನಿರೋಧಕ ಔಷಧ ಸಿಂಪಡಣೆ, ಸೊಳ್ಳೆ ಪರದೆಗಳ ಬಳಕೆ ಮಾಡುವುದು ಒಳಿತು.
ಇದನ್ನೆಲ್ಲ ಈಗಲೇ ಮಾಡಿ ಓವರ್ಹೆಡ್ ಟ್ಯಾಂಕ್, ಸಿಮೆಂಟ್ ಟ್ಯಾಂಕ್ಗಳನ್ನು ಭದ್ರವಾಗಿ ಮುಚ್ಚಿಡಿ. ಮನೆ ಸುತ್ತ ಎಸೆದ ಪ್ಲಾಸ್ಟಿಕ್, ಟಯರ್, ತೆಂಗಿನ ಚಿಪ್ಪು ಗಳನ್ನು ತತ್ಕ್ಷಣ ವಿಲೇವಾರಿ ಮಾಡಿ, ಪಾತ್ರೆಗಳನ್ನು ಕವುಚಿ ಹಾಕಬೇಕು.ಮನೆ ಒಳಗೆ, ಹೊರಗೆ ಇರುವ ಹೂವಿನ ಕುಂಡ, ಮನಿಪ್ಲಾಂಟ್ ಚಟ್ಟಿಗಳು, ಏರ್ಕೂಲರ್ಗಳಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ಇವುಗಳ ನೀರನ್ನು ಪ್ರತಿ ವಾರ ಖಾಲಿ ಮಾಡುತ್ತಿರಬೇಕು.
ಮನೆ ಮನೆಗೆ ತೆರಳಿ ಜಾಗೃತಿ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗಗಳ ಬಗ್ಗೆ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ಉಚಿತ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. – ಡಾ| ಪ್ರಶಾಂತ್, ಜಿಲ್ಲಾ ಮಲೇರಿಯಾ ಅಧಿಕಾರಿ