Design a site like this with WordPress.com
Get started

ಹೃದ್ರೋಗಗಳನ್ನು ದೂರಮಾಡುವ ಮೆಂತೆ ಮತ್ತು ಬೆಳ್ಳುಳ್ಳಿ

ಮೆಂತೆಕಾಳು ಬೆಳ್ಳುಳ್ಳಿಯನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು.

ಮೆಂತೆಕಾಳು ಮತ್ತು ಮೆಂತೆ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.

ಸೋಯಾ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಲಿಪಿಡ್ಸ್ ಅಂಶ ಕಡಿಮೆಯಾಗಿ ಕೆಟ್ಟ ಕೊಬ್ಬನ್ನು ನಿಯಂತ್ರಣ ಮಾಡುತ್ತದೆ.

ಸೇಬು, ಸ್ಟ್ರಾಬೆರಿ, ಮೂಸುಂಬಿ, ಪಪ್ಪಾಯ, ಕ್ಯಾರೆಟ್, ಮೂಲಂಗಿ, ಟೊಮೆಟೊ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ ಹೃದಯ ಸಂಬಂಧಿ ರೋಗದಿಂದ ದೂರವಿರಬಹುದು.

ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿಯುವ ಬದಲು ಒಂದು ಲೋಟ ಬಿಸಿನೀರನ್ನು ಕುಡಿಯುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ ಜೊತೆಗೆ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ.

ಜೂನ್ 14, 2020; ಭಾನುವಾರ : ಇಂದಿನ ಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಭಾನುವಾರ, ಉತ್ತರಭಾದ್ರ ನಕ್ಷತ್ರ

ರಾಹುಕಾಲ: ಸಂಜೆ 5:12 ರಿಂದ 6:49
ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:12
ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 2:00

ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಚಂಚಲ ಮನಸ್ಸು, ಹಣಕಾಸು ತೊಂದರೆ, ವೈಯಕ್ತಿಕ ಜೀವನದಲ್ಲಿ ಎಚ್ಚರ, ಮೋಸ ಹೋಗುವ ಸಾಧ್ಯತೆ, ವ್ಯವಹಾರದಲ್ಲಿ ಯೋಚಿಸಿ ನಿರ್ಧರಿಸಿ.

ವೃಷಭ: ಸ್ನೇಹಿತರೇ ಶತ್ರುಗಳಾಗಿ ಕಾಡುವರು, ವಿದ್ಯಾರ್ಥಿಗಳಿಗೆ ಅನುಕೂಲ, ತೀರ್ಥಯಾತ್ರೆ ದರ್ಶನ, ಆತುರ ಸ್ವಭಾವ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ಮಿಥುನ: ಭೂ ವ್ಯವಹಾರಗಳಲ್ಲಿ ಅಲ್ಪ ಲಾಭ, ಹಿತ ಶತ್ರುಗಳಿಂದ ತೊಂದರೆ, ಮಾನಸಿಕ ಅಶಾಂತಿ, ದುಶ್ಚಟಗಳಿಂದ ಹಣವ್ಯಯ, ಉದ್ಯೋಗದಲ್ಲಿ ಕಿರಿಕಿರಿ, ಬೆಲೆ ಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ, ಪ್ರಯಾಣದಲ್ಲಿ ಎಚ್ಚರಿಕೆ.

ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಧಾರ್ಮಿಕ ಆಚರಣೆಗಳಿಗೆ ಮನಸ್ಸು, ಉತ್ತಮ ಲಾಭ, ಈ ವಾರ ಶುಭ ಫಲ ಯೋಗ.

ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ಖರ್ಚು, ಸ್ವ ಸಾಮಥ್ರ್ಯದಿಂದ ಪ್ರಗತಿ, ಸಾಧಿಸುವ ಹಂಬಲ, ಬೆಲೆ ಬಾಳುವ ವಸ್ತುಗಳ ಖರೀದಿ, ದುಷ್ಟ ಜನರಿಂದ ತೊಂದರೆ.

ಕನ್ಯಾ: ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಆಕಸ್ಮಿಕ ಧನಲಾಭ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ ಪ್ರಾಪ್ತಿ, ಮಾತೃವಿನಿಂದ ಆಶೀರ್ವಾದ, ಮಾನಸಿಕ ನೆಮ್ಮದಿ.

ತುಲಾ: ಮಾಡುವ ಕೆಲಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಗುರು ಹಿರಿಯರಿಂದ ಸಲಹೆ, ಚಂಚಲ ಸ್ವಭಾವ, ಮುಂಗೋಪ ಹೆಚ್ಚಾಗುವುದು, ಮನಸ್ಸಿಗೆ ಅಶಾಂತಿ, ಮನೆಯಲ್ಲಿ ಅಶಾಂತಿ ವಾತಾವರಣ.

ವೃಶ್ಚಿಕ: ಅನಾವಶ್ಯಕ ಮಾತುಗಳಿಂದ ಕಲಹ, ಮಿತ್ರರಿಂದ ವಿರೋಧ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ಮನಸ್ಸಿನಲ್ಲಿ ಆತಂಕ, ಉದರ ಬಾಧೆ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ವಿರಸ.

ಧನಸ್ಸು: ಋಣ ಬಾಧೆ, ವ್ಯರ್ಥ ಧನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಇತರರ ಮಾತಿಗೆ ಮರುಳಾಗಬೇಡಿ, ಪರರ ಧನ ಪ್ರಾಪ್ತಿ.

ಮಕರ: ಮಾಡುವ ಕೆಲಸದಲ್ಲಿ ವಿಘ್ನ, ಪಾಪ ಕಾರ್ಯದಲ್ಲಿ ಆಸಕ್ತಿ, ವಿವಾಹಕ್ಕೆ ಅಡಚಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮೃತ್ಯು ಭಯ, ಮಾನಸಿಕ ಗೊಂದಲ.

ಕುಂಭ: ನೀವು ತೆಗೆದುಕೊಂಡ ನಿರ್ಧಾರದಿಂದ ನಷ್ಟ, ಸಾಧಕ-ಬಾಧಕಗಳ ಬಗ್ಗೆ ವಿಮರ್ಶೆ ಅಗತ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಗೊಂದಲ, ಅಹಿತಕರ ಸುದ್ದಿ ಕೇಳುವಿರಿ, ಆತ್ಮೀಯರೊಂದಿಗೆ ಪ್ರೀತಿ ವಾತ್ಸಲ್ಯ.

ಮೀನ: ಮಕ್ಕಳಿಂದ ಗೌರವ, ಹಿತೈಷಿಗಳಿಂದ ನೆರವು, ಅಧಿಕ ಧನವ್ಯಯ, ಕೆಲಸ ಕಾರ್ಯಗಳಲ್ಲಿ ಒತ್ತಡ, ಹಣಕಾಸು ಸಮಸ್ಯೆ, ಎಲ್ಲಿ ಹೋದರೂ ಅಶಾಂತಿ, ಅಕಾಲ ಭೋಜನ ಪ್ರಾಪ್ತಿ.

ಮುಖದ ಅಂದ ಮತ್ತು ಕಾಂತಿ ಹೆಚ್ಚಿಸುವ ಉಪ್ಪು

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಉಪ್ಪಿಲ್ಲದ ಅಡುಗೆ  ಇಲ್ಲ. ಅಡುಗೆ ಮನೆಯಲ್ಲಿ ಉಪ್ಪು ಇದ್ದೇ ಇರುತ್ತೆ. ಉಪ್ಪನ್ನು ಅಡುಗೆಗೆ ಬಳಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸೌಂದರ್ಯಕ್ಕೂ ಉಪ್ಪು ಉಪಯುಕ್ತ ಎನ್ನುವುದು ಅನೇಕರಿಗೆ ಮಾತ್ರ ತಿಳಿದಿದೆ.

ಉಪ್ಪು ಸೌಂದರ್ಯವರ್ಧಕ. ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವಂತ ಉಪ್ಪಿನಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ, ಅದರಲ್ಲಿ ಪಾದಗಳನ್ನಿಟ್ಟು ಕುಳಿತುಕೊಂಡರೆ ವಿಶ್ರಾಂತಿ ಸಿಗುವುದಲ್ಲದೇ, ಪಾದಗಳ ಉರಿಯನ್ನು ತಪ್ಪಿಸಬಹುದು. ಇದರ ಜೊತೆಗೆ ಉಪ್ಪು ಮುಖದ ಸೌಂದರ್ಯಕ್ಕೂ ಒಳ್ಳೆಯದು.

ಎಣ್ಣೆಯುಕ್ತ ಚರ್ಮಕ್ಕೆ ಉಪ್ಪು ಬಹಳ ಉತ್ತಮ. ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಹಾಕಿ, ಮುಖದ ಮೇಲೆ ಚಿಮುಕಿಸಿ. ನಂತರ ಹತ್ತಿಯಿಂದ ಒರೆಸಿಕೊಂಡು, ಮುಖವನ್ನು ತೊಳೆದುಕೊಳ್ಳಿ.

ಬೆಚ್ಚಗಿನ ನೀರಿಗೆ ಉಪ್ಪು ಹಾಕಿ, ಅದರ ಆವಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದಲೂ ಎಣ್ಣೆಯುಕ್ತ ಚರ್ಮದವರು ಕಾಂತಿಯುತ ತ್ವಜೆ ಪಡೆಯಬಹುದು.

ಕಣ್ಣಿನ ಉರಿಯೂತ ತಡೆಯಲು ಇದು ಸಹಕಾರಿ. ಆಯಾಸದ ಕಾರಣ ಹಾಗೂ ಸರಿಯಾಗಿ ನಿದ್ದೆ ಬರದಿದ್ದಲ್ಲಿ ಕಣ್ಣು ಊದಿಕೊಳ್ಳುತ್ತದೆ. ಉಪ್ಪನ್ನು ಬೆರೆಸಿರುವ ಬೆಚ್ಚಗಿನ ನೀರಿನಿಂದ ಉಬ್ಬಿದ ಜಾಗಕ್ಕೆ ಮಸಾಜ್ ಮಾಡಿದರೆ, ಊತ ಕಡಿಮೆಯಾಗುತ್ತದೆ.

ಉಪ್ಪೊಂದು ಉತ್ತಮ ಸ್ಕ್ರಬ್ಬರ್ ಆಗಿದೆ. ಕೈನಲ್ಲಿ ಸ್ವಲ್ಪ ಉಪ್ಪು ತೆಗೆದುಕೊಳ್ಳಿ. ಅದಕ್ಕೆ ನೀರು ಸೇರಿಸಿ. ಇದನ್ನು ಮುಖದ ಮೇಲೆ ಹಾಕಿಕೊಂಡು ಬರಿಗೈನಿಂದ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕಿನ್ ಹೋಗುವುದಲ್ಲದೆ, ಚರ್ಮ ಮೃದುವಾಗಿ, ಹೊಳೆಯುತ್ತದೆ.

ಹಲ್ಲಿಗೆ ಕೂಡ ಇದು ಉಪಯೋಗಕಾರಿ. ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾವನ್ನು ಬಳಸಿ ಹಲ್ಲುಜ್ಜಿದರೆ, ಹಲ್ಲುಗಳು ಹೊಳೆಯುತ್ತವೆ.

ಸಾಮಾನ್ಯ ಉಪ್ಪನ್ನು ಬಳಸುವ ಬದಲು ಸಮುದ್ರದ ಉಪ್ಪನ್ನು ಬಳಸುವುದು ಒಳ್ಳೆಯದು. ಇದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.

ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬ್ಯಾಂಕ್ ವ್ಯವಹಾರಕ್ಕಿದ್ದ ರಿಯಾಯಿತಿ ಮುಕ್ತಾಯ

ಕರೋನಾ ಅವಧಿಯಲ್ಲಿ, ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನೇಕ ಪರಿಹಾರಗಳನ್ನು ನೀಡಿದೆ, ಜೂನ್ 30 ರಿಂದ, ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರದ ಅವಧಿ ಕೊನೆಗೊಳ್ಳುತ್ತಿದೆ. ಹೌದು, ಕೆಲ ದಿವಸಗಳ ಹಿಂದೆ ಇತರ ಬ್ಯಾಂಕ್ ಗಳ ಎಟಿಎಂ ನಿಂದ ನಗದು ಹಿಂಪಡೆಯುವಿಕೆಯ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾರ್ಚ್‌ ತಿಂಗಳಿನಲ್ಲಿ ತಿಳಿಸಿದ್ದರು, ಅವರು ಆಗ ಹೇಳಿದ್ದಂತೆ, ಮೂರು ತಿಂಗಳವರೆಗೂ ಯಾವುದೇ ಬ್ಯಾಂಕ್, ಯಾವುದೇ ಎಟಿಎಂನಲ್ಲಿ ನಗದು ಹಣವನ್ನು ಹಿಂಪಡೆಯಬಹುದು ಎಂದು ಅವರು ಹೇಳಿದ್ದ ಮಾತು ಕೊನೆಯಾಗುತ್ತಿದೆ. 

ಅವರು ಹೇಳಿದಂತೆ ಏಪ್ರಿಲ್ ನಿಂದ ಜೂನ್ ವರೆಗೆ ಆದೇಶವಿತ್ತು. ಅದರಂತೆ, ಅವರು ಹೇಳಿದಂತೆ, ಎಟಿಎಂ ವಹಿವಾಟು ಬಗ್ಗೆ ನೀಡಿದ್ದ ನಿರ್ಧಾರದ ಅವಧಿ ಜೂನ್ 30 ಕ್ಕೆ ಕೊನೆಗೊಳ್ಳಲಿದೆ ಮತ್ತು ಅದರ ನೇರ ಪರಿಣಾಮವು ನಿಮ್ಮ ಮೇಲೆ ಬೀಳುತ್ತದೆ. ಸುಲಭವಾಗಿ ಹೇಳಬೇಕಾದ್ರೆ, ನಿಮ್ಮ ಉಳಿತಾಯ ಖಾತೆಯಲ್ಲಿ ವಿಭಿನ್ನ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಅನ್ನು ಜೂಲೈ 31 ರಿಂದ ಹೊಂದಬೇಕಾಗಿದ್ದು, ಮೊತ್ತವು ಅದಕ್ಕಿಂತ ಕಡಿಮೆಯಿದ್ದರೆ ಗ್ರಾಹಕರು ದಂಡ ಪಾವತಿಸಬೇಕಾಗುತ್ತದೆ.null

ಸರಾಸರಿ ಕನಿಷ್ಠ ಬಾಕಿ ಜೊತೆಗೆ, ಕೇಂದ್ರ ಸರ್ಕಾರವು ಎಟಿಎಂ ಹಿಂತೆಗೆದುಕೊಳ್ಳುವ ಶುಲ್ಕದ ಮೇಲಿನ ಶುಲ್ಕದಿಂದ ಪರಿಹಾರವನ್ನು ನೀಡಿತು. ಡೆಬಿಟ್ ಕಾರ್ಡ್ ಹೊಂದಿರುವವರು ಯಾವುದೇ ಬ್ಯಾಂಕಿನ ಎಟಿಎಂನಿಂದ ಮೂರು ತಿಂಗಳವರೆಗೆ ಹಣವನ್ನು ಹಿಂಪಡೆಯಬಹುದು ಎಂದು ಹಣಕಾಸು ಸಚಿವರು ಹೇಳಿದರು. ಇದಕ್ಕಾಗಿ ಅವರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಹೇಳಿತ್ತು. ಅದು ಕೂಡ ಜೂನ್ 30‌ ಕ್ಕೆ ಕೊನೆಯಾಗುತ್ತಿದೆ.  ಜೂಲೈ 1ರಿಂದ ಮತ್ತೆ ಎಂದಿನಂತೆ ಶುಲ್ಕಗಳು ಹಾಕಲಾಗುವುದು.

ಎಸ್‌ಬಿಐ ಕನಿಷ್ಠ ಬ್ಯಾಲೆನ್ಸ್ ಶುಲ್ಕ ವಿಧಿಸುವುದಿಲ್ಲ
ಕೇಂದ್ರ ಸರ್ಕಾರದ ಘೋಷಣೆಗೆ ಮುಂಚೆಯೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿನ ಸರಾಸರಿ ಕನಿಷ್ಠ ಹಣ ಉಳಿಸಿಕೊಳ್ಳುವ ಬಗ್ಗೆ ಹಿಂದೆ ಸರಿದಿತ್ತು. ಎಸ್‌ಬಿಐನ ಎಲ್ಲಾ 44.51 ಕೋಟಿ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಸರಾಸರಿ ಕನಿಷ್ಠ ಬಾಕಿ ಉಳಿಸಿಕೊಂಡಿರಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.” ಈ ಮೊದಲು ಮೆಟ್ರೊ ನಗರಗಳಲ್ಲಿ ಕನಿಷ್ಠ 3,000 ರೂಗಳನ್ನು ಎಸ್‌ಬಿಐ ಉಳಿತಾಯ ಖಾತೆಯಲ್ಲಿ ಹಣ ಇರೋದು ನಿಕ್ಕಿಯಾಗಿತ್ತು.

ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಇದರಲ್ಲಿನ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಫಾಸ್ಫರಸ್, ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಮ್ಯಾಜಿಕ್ ಮಾಡುತ್ತದೆ.

ಉರಿಯೂತ, ಗಂಟಲಿನ ಕಿರಿಕಿರಿ, ಜ್ವರ ಮತ್ತು ಪಿತ್ತ ದೋಷಗಳಂಥ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಇದು ಬಳಕೆ ಆಗುತ್ತಿದೆ. ಮೂಲಂಗಿ ರಸದಲ್ಲಿ ಇರುವ ಐಸೋ ಥೈನೋಸೈಡ್ ಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಮಲಬದ್ಧತೆ ತಡೆಯುತ್ತದೆ.

ಮೂಲಂಗಿಯಲ್ಲಿ ನಾರಿನಾಂಶ ಹೇರಳವಾಗಿದ್ದು, ದೇಹದ ತೂಕವನ್ನು ಇಳಿಸಿಕೊಳ್ಳುವುದು ಸುಲಭ ಆಗುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೂಲಂಗಿಯಲ್ಲಿ ಇರುವ ವಿಟಮಿನ್ ಗಳು ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿದೆ.

ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ

ಪಂಚಾಂಗ

ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35

ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ.

ವೃಷಭ: ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭ ಕಾರ್ಯ ಸಿದ್ಧಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ,ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಪ್ರೀತಿ.

ಮಿಥುನ: ಸ್ವಂತ ಉದ್ಯಮದಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಜಯ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ವಿಚಾರದಲ್ಲಿ ವೈಮನಸ್ಸು, ಮನೆಯಲ್ಲಿ ಮಾಟ-ಮಂತ್ರದ ಭೀತಿ, ಉದ್ಯೋಗ ಕಳೆದುಕೊಳ್ಳುವ ಆತಂಕ.

ಕಟಕ: ದೂರ ಪ್ರಯಾಣ, ವಿಪರೀತ ರಾಜಯೋಗ, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಯಾಸ, ಬಂಧುಗಳಿಂದ ಸಾಲಕ್ಕಾಗಿ ಬೇಡಿಕೆ, ಕೆಲಸಗಾರರು-ಸೇವಕರಿಂದ ನಷ್ಟ, ಅನಗತ್ಯ ತಿರುಗಾಟ, ಅಧಿಕ ಖರ್ಚು.

ಸಿಂಹ: ಮಕ್ಕಳ ಭವಿಷ್ಯದಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ, ಇಚ್ಛೆಗಳು ಈಡೇರುವುದು, ಧರ್ಮ ಕಾರ್ಯಗಳನ್ನು ಮರೆಯುವಿರಿ, ಗೌರವಕ್ಕೆ ಧಕ್ಕೆ, ಅಪಕೀರ್ತಿ, ಮಾನಸಿಕ ವ್ಯಥೆ,ಉಷ್ಣ ಬಾಧೆ. ಅಮೂಲ್ಯ ವಸ್ತು ಕಳೆದುಕೊಳ್ಳುವ ಆತಂಕ.

ಕನ್ಯಾ: ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಉದ್ಯೋಗ ಬದಲಾವಣೆಯಿಂದ ಯಶಸ್ಸು, ಇಲ್ಲ ಸಲ್ಲದ ಮಾತಿನಿಂದ ತೊಂದರೆ, ಭುಜ, ಕೈಕಾಲು ನೋವು, ನೆರೆಹೊರೆಯವರಿಂದ ಸಮಸ್ಯೆ, ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿಯಿಂದ ಅನುಕೂಲ.

ತುಲಾ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಕುಟುಂಬ ನಿರ್ವಹಣೆಗೆ ಅಧಿಕ ಖರ್ಚು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಜೀರ್ಣ ಸಮಸ್ಯೆ, ಮೈಕೈ ನೋವು, ಪತ್ರ ವ್ಯವಹಾರಗಳಲ್ಲಿ ಖರ್ಚು, ಬಂಧುಗಳಿಗಾಗಿ ಹಣವ್ಯಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕ: ಆಕಸ್ಮಿಕ ಧನ ಯೋಗ, ಸೋಲು, ನಷ್ಟ, ನಿರಾಸೆ, ಅಪಕೀರ್ತಿ, ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಧಿಕ ಉಷ್ಣ ಬಾಧೆ, ತಲೆ ನೋವು, ಮೃತ್ಯು ಭಯ, ಹಾರ್ಮೋನ್ಸ್ ವ್ಯತ್ಯಾಸ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ.

ಧನಸ್ಸು: ದೈವ ಶಾಪದ ಕಾಟ, ಕುಲದೇವರ ನಿಂದನೆ, ಮಕ್ಕಳ ವೈವಾಹಿಕ ಜೀವನದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳ ಬದಲಾವಣೆಯ ಕನಸು, ವಿವಾದದಲ್ಲಿ ಸಿಲುಕುವ ಸಂಭವ, ಹಿರಿಯರ ಗೌರವಕ್ಕೆ ಧಕ್ಕೆ, ಪ್ರವಾಸ ಕೈಗೊಳ್ಳುವ ಆಲೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಸಾಲ ಬಾಧೆಯಿಂದ ಮುಕ್ತಿ, ಲಾಭದ ಪ್ರಮಾಣ ಅಧಿಕ, ವ್ಯಾಪಾರ-ಉದ್ಯಮ ಆರಂಭಕ್ಕೆ ಚಿಂತನೆ, ಕುತ್ತಿಗೆ ನೋವು, ನರ ದೌರ್ಬಲ್ಯ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ ಸಾಧ್ಯತೆ.

ಕುಂಭ: ಉದ್ಯೋಗ ಸ್ಥಳದಲ್ಲಿ ಧನಾಗಮನ, ಮಕ್ಕಳಿಗೆ ಅದೃಷ್ಟ ಒಲಿಯುವುದು, ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಚಿಂತನೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಆಧ್ಯಾತ್ಮಿಕ ಚಿಂತನೆ, ಜೂಜು-ರೇಸು, ಲಾಟರಿಯಿಂದ ತೊಂದರೆ, ಲಾಭ ಪ್ರಮಾಣ ಅಧಿಕ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ, ತಂದೆ ಮಾಡಿದ ತಪ್ಪುಗಳು ಕಾಡುವುದು, ಸ್ಥಿರಾಸ್ತಿ-ವಾಹನ ಯೋಗ, ಮಕ್ಕಳ ಕೌಟುಂಬಿಕ ಜೀವನದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಂದರ್ಭ, ಮಾಡುವ ಕೆಲಸದಲ್ಲಿ ಸಂತೃಪ್ತಿ.

ಕೊರೊನಾ: ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ

ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಭಾರತ ಇದೀಗ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 10,956 ಜನರಿಗೆ ಕೊರೊನಾ ವೈರಸ್ ತಗುಲಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿಯೇ ಹತ್ತು ಸಾವಿರ ಸೋಂಕು ವರದಿಯಾಗಿದೆ.

ಈ ಮೂಲಕ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿಂತಾಗಿದ್ದು, ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ದೇಶಗಳು ಮಾತ್ರ ಇದೀಗ ಭಾರತಕ್ಕಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದೆ.

ರಷ್ಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.93 ಲಕ್ಷ ಆಗಿದ್ದರೆ ಬ್ರೆಝಿಲ್‌ನಲ್ಲಿ 7.72 ಲಕ್ಷ ಹಾಗೂ ಅಮೆರಿಕದಲ್ಲಿ 20 ಲಕ್ಷ ಮಂದಿಗೆ ಸೋಂಕು ತಗುಲಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 396 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ದೇಶದಲ್ಲಿ 8498 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇ 24ರಂದು ಭಾರತ ವಿಶ್ವದಲ್ಲಿ ಗರಿಷ್ಠ ಸೋಂಕಿತರನ್ನು ಹೊಂದಿದ ಅಗ್ರ 10 ರಾಷ್ಟ್ರಗಳ ಪೈಕಿ ಸ್ಥಾನ ಪಡೆದ ಬಳಿಕ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚುತ್ತಿದೆ. ಕೇವಲ 18 ದಿನಗಳಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ.

ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ

ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

ರಾಜ್ಯದಲ್ಲಿರುವ ಎಲ್ಲ ಡಿಸಿಸಿ ಬ್ಯಾಂಕ್ ಗಳ ಮೂಲಕ ಬಡವರ ಬಂಧು ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. 
ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜಿಲ್ಲೆಯ ಶ್ರಮಿಕ ಅತಿ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
 
ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿ ಸಾಲ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಖಾಸಗಿ ಅವರಿಂದ ಸಾಲ ಪಡೆದು ಹೆಚ್ಚು ಬಡ್ಡಿಯನ್ನು ಕಟ್ಟುವುದನ್ನು ತಪ್ಪಿಸಲು ಬಡವರ ಬಂಧು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಸಾಲ ಮರು ಪಾವತಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ದಿನ ಭವಿಷ್ಯ: 12-06-2020,ಶುಕ್ರವಾರ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಶತಭಿಷ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11

ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದೈವ ಕಾರ್ಯ-ಪ್ರಯಾಣಕ್ಕೆ ಅಡೆತಡೆ, ದಾನ ಧರ್ಮ ಕಾರ್ಯಕ್ಕೆ ಖರ್ಚು.

ವೃಷಭ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ವಿಪರೀತ ಧೈರ್ಯ, ಸಾಹಸ-ಆತುರದ ಮನಸ್ಥಿತಿ, ಉದ್ಯೋಗ ಬದಲಾವಣೆಯ ಆಲೋಚನೆ, ಸ್ನೇಹಿತರಿಂದ ಅನುಕೂಲ, ಶುಭ ಕಾರ್ಯಗಳಲ್ಲಿ ಪ್ರಗತಿ, ಹಣಕಾಸು ವಿಚಾರವಾಗಿ ಕಲಹ.

ಮಿಥುನ: ನೀವಾಡುವ ಮಾತಿನಿಂದ ತೊಂದರೆ, ಕುಟುಂಬಸ್ಥರಿಂದಲೇ ನೋವು, ಆರ್ಥಿಕ ಸಂಕಷ್ಟಗಳು, ಸಾಲದ ಸಹಾಯ ಲಭಿಸುವುದು, ಪ್ರಯಾಣ ಯೋಗ, ಚಿನ್ನಾಭರಣ ಕಳವು ಸಾಧ್ಯತೆ, ಅಲರ್ಜಿ,ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕಟಕ: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಗ್ಯಾಸ್ಟ್ರಿಕ್,ದೃಷ್ಠಿ ದೋಷ, ದೈಹಿಕ ನೋವು, ಸಾಲ ಬಾಧೆ, ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ನಷ್ಟದ ಭೀತಿ.

ಸಿಂಹ: ಸ್ಥಿರಾಸ್ತಿ ವಾಹನಕ್ಕಾಗಿ ಅಧಿಕ ಖರ್ಚು, ಮಾತೃವಿನಿಂದ ಲಾಭ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ನಷ್ಟ, ನಿರಾಸೆಗಳಿಂದ ವ್ಯಥೆ, ಅತೀ ಒಳ್ಳೆಯತನದಿಂದ ತೊಂದರೆ, ಸಾಲ ಮರುಪಾವತಿಗೆ ಹಿನ್ನಡೆ.

ಕನ್ಯಾ: ವ್ಯಾಪಾರ-ಉದ್ಯೋಗಕ್ಕಾಗಿ ತಿರುಗಾಟ, ಸ್ಥಿರಾಸ್ತಿಯ ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಶುಭ ಕಾರ್ಯ ಯೋಗ, ಅದೃಷ್ಟ ಒಲಿಯುವುದು, ಸ್ನೇಹಿತರು-ನಂಬಿಕಸ್ಥರಿಂದ ಮೋಸ, ತೀರ್ಥಕ್ಷೇತ್ರ ದರ್ಶನ, ದಾಯಾದಿಗಳ ಕಲಹ, ಸಹೋದರಿಯಿಂದ ಸಮಸ್ಯೆ, ಇಲ್ಲ ಸಲ್ಲದ ಅಪವಾದ.

ತುಲಾ: ಉದ್ಯೋಗ ಬದಲಾಯಿಸುವ ಪರಿಸ್ಥಿತಿ, ಆರ್ಥಿಕ ಅನುಕೂಲ, ಸಾಲದ ಸಮಸ್ಯೆ ಬಗೆಹರಿಯುವುದು, ಬಂಧುಗಳ ಆಗಮನ, ನೆರೆಹೊರೆಯವರಿಂದ ಧನ ಸಹಾಯ, ನೀವಾಡುವ ಮಾತುಗಳಿಂದ ವೈಮನಸ್ಸು, ಶತ್ರುತ್ವ ಹೆಚ್ಚಾಗುವುದು, ಉದ್ಯೋಗ ಸ್ಥಳದಲ್ಲಿ ನಷ್ಟ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.

ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ನೋವು, ಭವಿಷ್ಯದ ಬಗ್ಗೆ ಚಿಂತನೆ, ಮಾನಸಿಕ ಗೊಂದಲ, ತಂದೆಯಿಂದ ಧನ ಸಹಾಯ, ಸ್ಥಿರಾಸ್ತಿ-ವಾಹನದ ಮೇಲೆ ಹೂಡಿಕೆ, ಅದೃಷ್ಟ ಕೈ ತಪ್ಪುವುದೆಂಬ ಆತಂಕ, ಪ್ರಶಾಂತವಾದ ಭಾವನೆಗಳು ಕೆರಳುವುದು.

ಧನಸ್ಸು: ಸ್ಥಿರಾಸ್ತಿಯಿಂದ ಯೋಗ, ಮಾತೃವಿನಿಂದ ಅದೃಷ್ಟ, ಸ್ಥಿರಾಸ್ತಿ ಮಾರಾಟಕ್ಕೆ ಸೂಚನೆ, ವಾಹನಗಳಿಂದ ಅಧಿಕ ಖರ್ಚು, ದಾಂಪತ್ಯದಲ್ಲಿ ವೈರತ್ವ ಹೆಚ್ಚಾಗುವುದು, ಕೌಟುಂಬಿಕ ಕಲಹಗಳಿಂದ ನಿದ್ರಾಭಂಗ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಅಧಿಕವಾದ ಚಿಂತೆ ಶುರುವಾಗುವುದು.

ಮಕರ: ಸಂಗಾತಿಯಿಂದ ಧನಾಗಮನ ನಿರೀಕ್ಷೆ, ನೆರೆಹೊರೆ-ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಸಾಲ ತೀರಿಸುವ ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಜನ್ಮ ಸ್ಥಳದಿಂದ ದೂರ ಉಳಿಯುವ ಆಲೋಚನೆ.

ಕುಂಭ: ಸಾಲ ದೊರೆಯುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ನೀರಿನ ಪ್ರದೇಶಗಳಲ್ಲಿ ಎಚ್ಚರ, ಬಡ್ತಿ ವಿಚಾರದಲ್ಲಿ ಪ್ರಗತಿ, ಶುಭ ಹಾರೈಕೆ, ಪ್ರಶಂಸೆ ಲಭಿಸುವುದು.

ಮೀನ: ಮಕ್ಕಳ ಜೀವನದಲ್ಲಿ ಪ್ರಗತಿ, ಅಹಂಭಾವ ಹೆಚ್ಚಾಗುವುದು, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ದೇವರು-ಗುರುಗಳ ಅನುಗ್ರಹದಿಂದ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಅದೃಷ್ಟದ ಯೋಗ, ಆರ್ಥಿಕ ಸಮಸ್ಯೆ ಬಗೆಹರಿಯವುದು.

ಸೌಂದರ್ಯವರ್ಧಕ ಸೋರೆಕಾಯಿ…!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು ವಿಟಮಿನ್ ಸಿ ಇದ್ದು ಇದು ಅಕಾಲಿಕ ವಯಸ್ಸಿನ ಸಮಸ್ಯೆಗಳನ್ನು ತಡೆಯುತ್ತದೆ. ಇದರ ರಸವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು.

ಬೆಳಿಗ್ಗೆ ಎದ್ದಾಕ್ಷಣ ಕಣ್ಣು ಉಬ್ಬಿರುವವರು ಇದರ ರಸವನ್ನು ಪ್ರಯತ್ನಿಸಿ. ಇದು ಊತವನ್ನು ನಿವಾರಿಸುತ್ತದೆ. ತಾಜಾ ಸೋರೆಕಾಯಿಯ ಎರಡು ಹೋಳುಗಳನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 15 ನಿಮಿಷ ಬಳಿಕ ಕಣ್ಣು ತೊಳೆದರೆ ಈ ಬಾವು ಕಡಿಮೆಯಾಗುತ್ತದೆ.

ಈ ತರಕಾರಿಯಲ್ಲಿರುವ ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಸಾಂದ್ರತೆಯಿಂದ ಮುಖದ ಮೇಲೆ ಹೊಳಪು ಮರಳುತ್ತದೆ. ನಿತ್ಯ ಈ ರಸ ಸೇವಿಸುವುದರಿಂದ ದೇಹದ ಕಾರ್ಯಗಳು ನಿಯಂತ್ರಣಗೊಳ್ಳುತ್ತದೆ ಮತ್ತು ಚರ್ಮ ಹೊಳಪು ಪಡೆಯುತ್ತದೆ.