ಉಡುಪಿ:ರೇಖಾ ಗುಪ್ತಾ ಅವರು ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಬಗ್ಗೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಅಧ್ಯಕ್ಷೆ ಸಂಧ್ಯಾ ರಮೇಶ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಪಟಾಕಿಯನ್ನು ಸಿಡಿಸಿ, ಸಿಹಿಯನ್ನು ಹಂಚುವ ಮೂಲಕ ಸಂಭ್ರಮಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಸುಧೀರ್ಘ 27 ವರ್ಷಗಳ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, ಮೊದಲ ಬಾರಿ ಸ್ಪರ್ಧಿಸಿ ಗೆಲುವುContinue reading “ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ”
Author Archives: ಜನತಾಲೋಕವಾಣಿ.com
ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ತನ್ನ ಶಾಸಕರಿಗೆ ಲಕ್ಷಾಂತರ ಹಣ ವ್ಯಯಿಸುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಜ್ವಲಂತ ಸಮಸ್ಯೆಗಳು ಕಾಣದಾಯಿತೇ : ರೇಷ್ಮಾ ಉದಯ ಶೆಟ್ಟಿ
ಉಡುಪಿ: ‘ಗಂಗೆಯಲ್ಲಿ ಮಿಂದರೆ ಬಡತನ ನೀಗುತ್ತದೆಯೇ’ ಎಂದು ಪ್ರಶ್ನಿಸಿ ಕೋಟ್ಯಾoತರ ಆಸ್ತಿಕ ಹಿಂದೂಗಳ ಭಾವನೆಗಳಿಗೆ ಘಾಸಿಯಂನ್ನುಟುಮಾಡಿದ್ದ ಎಐಸಿಸಿ ಅಧ್ಯಕ್ಷ ಖರ್ಗೆ ಉವಾಚದ ನಡುವೆಯೇ ಸದನದ ವಸತಿ ಸಮಿತಿ ಸದಸ್ಯರಿಗೆ, ಅದರಲ್ಲೂ ಗರಿಷ್ಠ ಸಂಖ್ಯೆಯ ಕಾಂಗ್ರೆಸ್ ಶಾಸಕರಿಗೆ ಕುಂಭಮೇಳ (ಉತ್ತರ ಭಾರತ) ಅಧ್ಯಯನ ಪ್ರವಾಸಕ್ಕೆ ರೂ.50 ಲಕ್ಷಕ್ಕೂ ಮಿಕ್ಕಿದ ಮೊತ್ತವನ್ನು ವ್ಯಯಿಸಲು ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕಳೆದ ಒಂದು ವಾರದಿಂದ ವಿವಿಧ ತುರ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯoತ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯುತ್ತಿರುವ ಗ್ರಾಮContinue reading “ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ತನ್ನ ಶಾಸಕರಿಗೆ ಲಕ್ಷಾಂತರ ಹಣ ವ್ಯಯಿಸುವ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳ ಜ್ವಲಂತ ಸಮಸ್ಯೆಗಳು ಕಾಣದಾಯಿತೇ : ರೇಷ್ಮಾ ಉದಯ ಶೆಟ್ಟಿ”
ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ ಎಲ್ಲರಿಗೂ ಪ್ರೇರಣಾದಾಯಕ : ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಭಾರತೀಯ ಜನತಾ ಪಾರ್ಟಿಗೆ ಬಹುದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾರೆ. ಸಂಘಟನೆಗೆ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಅವರ ಸೇವೆ ಅನನ್ಯ. ಪಂಡಿತ್ ಜೀ ಅವರ ಬಲಿದಾನ ದಿನದಂದು ಅವರ ಉದಾತ್ತ ತತ್ವ ಸಿದ್ಧಾಂತಗಳನ್ನು ನೆನಪಿಸಿಕೊಂಡು ಅವರನ್ನು ಸ್ಮರಿಸುವುದು ಪಕ್ಷದ ಕಾರ್ಯಕರ್ತರ ಆದ್ಯ ಕರ್ತವ್ಯ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನಾದರ್ಶ, ಜೀವನ ಸ್ಫೂರ್ತಿ ಎಲ್ಲರಿಗೂ ಪ್ರೇರಣಾದಾಯಕವಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿContinue reading “ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ ಎಲ್ಲರಿಗೂ ಪ್ರೇರಣಾದಾಯಕ : ಕಿಶೋರ್ ಕುಮಾರ್ ಕುಂದಾಪುರ”
ಕೇಜ್ರಿವಾಲ್ ಭ್ರಷ್ಟ ಆಡಳಿತಕ್ಕೆ ತಿಲಾಂಜಲಿ, ಬಿಜೆಪಿಗೆ ದೆಹಲಿ ಗದ್ದುಗೆ ನೀಡಿದ ಮತದಾರರು ಅಭಿನಂದನಾರ್ಹರು: ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭರ್ಜರಿ ಗೆಲುವು ಸಾಧಿಸಿ, 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣೀಭೂತರಾದ ದೆಹಲಿ ಮತದಾರರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ. ನಡ್ದಾ ಅಭಿನಂದನಾರ್ಹರು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಭ್ರಷ್ಟಚಾರ ವಿರುದ್ಧದ ಹೋರಾಟದ ಮೂಲಕ ರಾಜಕೀಯContinue reading “ಕೇಜ್ರಿವಾಲ್ ಭ್ರಷ್ಟ ಆಡಳಿತಕ್ಕೆ ತಿಲಾಂಜಲಿ, ಬಿಜೆಪಿಗೆ ದೆಹಲಿ ಗದ್ದುಗೆ ನೀಡಿದ ಮತದಾರರು ಅಭಿನಂದನಾರ್ಹರು: ಕಿಶೋರ್ ಕುಮಾರ್ ಕುಂದಾಪುರ”
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು : ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ.ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು : ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ.*
ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರಣಂಕಿಲ ಶ್ರೀಶ ನಾಯಕ್, ಉಡುಪಿContinue reading “ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು : ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ.ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು : ಜಿಲ್ಲಾ ಬಿಜೆಪಿ ಸಂಭ್ರಮಾಚರಣೆ.*”
ಉಡುಪಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸ್ವಾಗತಾರ್ಹ : ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ಪ್ರತಿಷ್ಠಿತ ಉಡುಪಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ. ಉಡುಪಿ ನಗರಸಭೆ ಮಹಾ ನಗರಪಾಲಿಕೆಯಾಗಿ ಪರಿವರ್ತಿತವಾದಲ್ಲಿ ಉಡುಪಿ ನಗರದ ಸಹಿತ ನಗರಕ್ಕೆ ಹೊಂದಿಕೊಂಡಿರುವ ಹಲವಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಮೂಲಭೂತ ಸೌಕರ್ಯ ವೃದ್ಧಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಮೂಲತ: ಸಿಟಿ ಮುನ್ಸಿಪಲ್ ಕೌನ್ಸಿಲ್, ಪುರಸಭೆಯಾಗಿದ್ದ ಉಡುಪಿ ನಗರಸಭೆ 1996ರಲ್ಲಿ ಮಲ್ಪೆ (ಕೊಡವೂರು), ಪುತ್ತೂರು, ಶಿವಳ್ಳಿ,Continue reading “ಉಡುಪಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸ್ವಾಗತಾರ್ಹ : ಕಿಶೋರ್ ಕುಮಾರ್ ಕುಂದಾಪುರ”
ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ : ಬ್ರಹ್ಮಕಲಶೋತ್ಸವ, 65ನೇ ಭಜನಾ ಮಂಗಲೋತ್ಸವ ಸಂಪನ್ನ
ಉಡುಪಿ: ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ನಡೆದ 65ನೇ ಭಜನಾ ಮಂಗಲೋತ್ಸವಕ್ಕೆ ಅಂಬಲಪಾಡಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವವು ದಯಾಕರ ಶಾಂತಿ ಬನ್ನಂಜೆ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಸಂಘದ ಅಧ್ಯಕ್ಷ ಎ.ಶಿವಕುಮಾರ್ ಅಂಬಲಪಾಡಿ, ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾContinue reading “ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ : ಬ್ರಹ್ಮಕಲಶೋತ್ಸವ, 65ನೇ ಭಜನಾ ಮಂಗಲೋತ್ಸವ ಸಂಪನ್ನ”
ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ : ಜ.28ರಿಂದ ‘ಭಜನಾ ಸಪ್ತಾಹ’, ಫೆ.4ರಂದು ‘ಬ್ರಹ್ಮಕಲಶೋತ್ಸವ’ ಮತ್ತು ’65ನೇ ಭಜನಾ ಮಂಗಲೋತ್ಸವ’
ಉಡುಪಿ:ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಜ.28ರಿಂದ ಫೆ.2ರ ವರೆಗೆ ‘ಭಜನಾ ಸಪ್ತಾಹ’, ಫೆ.3ರಂದು ‘ಬ್ರಹ್ಮಕಲಶ ಪೂಜೆ’ ಮತ್ತು ಧಾರ್ಮಿಕ ವಿಧಿ ವಿಧಾನಗಳು ಹಾಗೂ ಫೆ.4ರಂದು ‘ಬ್ರಹ್ಮಕಲಶೋತ್ಸವ’ ಮತ್ತು ’65ನೇ ಭಜನಾ ಮಂಗಲೋತ್ಸವ’ ಜರಗಲಿದೆ ಎಂದು ಸಂಘದ ಆಡಳಿತ ಸಮಿತಿಯ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ. ’65ನೇ ಭಜನಾ ಮಂಗಲೋತ್ಸವ’ದ ಪ್ರಯುಕ್ತ ಜ.25ರಂದು ಸಂಘದ ‘ಶ್ರೀ ನಾರಾಯಣ ಗುರು ಸಮುದಾಯ ಭವನ’ದ ‘ಮಂಜುಶ್ರೀ ಭೋಜನ ಶಾಲೆ’ಗೆ ಸಂಘದ ಸದಸ್ಯರು ಮತ್ತು ದಾನಿಗಳ ನೆರವಿನಿಂದContinue reading “ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ : ಜ.28ರಿಂದ ‘ಭಜನಾ ಸಪ್ತಾಹ’, ಫೆ.4ರಂದು ‘ಬ್ರಹ್ಮಕಲಶೋತ್ಸವ’ ಮತ್ತು ’65ನೇ ಭಜನಾ ಮಂಗಲೋತ್ಸವ’”
ಕಟಪಾಡಿ ಸೊಸೈಟಿ ಎದುರು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಚುನಾವಣಾ ಗಿಮಿಕ್: ಆಡಳಿತ ಮಂಡಳಿಯ ಸ್ಪಷ್ಠನೆ
ಕಾಪು: ಕಾಂಗ್ರೆಸ್ ಪಕ್ಷದವರು ಆರೋಪಿಸಿದಂತೆ ನಮ್ಮ ಸಂಘದಲ್ಲಿ ಯಾವುದೇ ಅವ್ಯವಹಾರ ಆಗಿರುವುದಿಲ್ಲ. ಇತ್ತೀಚೆಗೆ ನಡೆದ ನಕಲಿ ದಾಖಲೆಗಳನ್ನು ನೀಡಿ ಪಡೆದ ಸಾಲದ ಬಗ್ಗೆ ನಾವು ಈಗಾಗಲೇ ಇಲಾಖಾ ಮುಖ್ಯಸ್ಥರಿಗೂ ದೂರನ್ನು ನೀಡಿದ್ದು.ಮಾತ್ರವಲ್ಲ ಕಾಪು ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರನ್ನು ದಾಖಲಿಸಿ, ತನಿಖೆಯೂ ನಡೆಯುತ್ತಿದ್ದು. ಇಷ್ಟೆಲ್ಲ ಆದಮೇಲೂ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಪ್ರತಿಭಟನೆಯಲ್ಲಿ ಸಂಘದ ವ್ಯಾಪ್ತಿಗೆ ಬಾರದವರು ಸಂಘದಲ್ಲಿ ಸಾಲಬಾಕಿ ಇಟ್ಟವರೂ ಕೂಡ ಭಾಗವಹಿಸಿದ್ದು ಇವರ ಉದ್ದೇಶ ಸಂಘದ ಅಭಿವೃದ್ದಿಯೋ ಅಥವಾ ಸಂಘವನ್ನುContinue reading “ಕಟಪಾಡಿ ಸೊಸೈಟಿ ಎದುರು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಚುನಾವಣಾ ಗಿಮಿಕ್: ಆಡಳಿತ ಮಂಡಳಿಯ ಸ್ಪಷ್ಠನೆ”
ಜ.29 : ‘ಪುರಂದರ ದಾಸರ ಆರಾಧನೆ’ಯ ಪ್ರಯುಕ್ತ ರಾಜಾಂಗಣದಲ್ಲಿ ‘ಸಹಸ್ರ ಕಂಠ ಗಾಯನ’ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆಯು ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ಉಡುಪಿಯ ಶ್ರೀ ಪುತ್ತಿಗೆ ಮಠದಲ್ಲಿ ನಡೆಯಿತು. ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಅವರು ಮಾತನಾಡಿ ಭಜನಾ ಪರಿಷತ್ ಕೇಂದ್ರ ಸಮಿತಿಯ ಮಾರ್ಗದರ್ಶನದಂತೆ ಪರಿಷತ್ ವತಿಯಿಂದ ನಡೆಸುವ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಭಜನಾ ತರಬೇತುದಾರೆ ವಿದುಷಿ ಶ್ರೀಮತಿContinue reading “ಜ.29 : ‘ಪುರಂದರ ದಾಸರ ಆರಾಧನೆ’ಯ ಪ್ರಯುಕ್ತ ರಾಜಾಂಗಣದಲ್ಲಿ ‘ಸಹಸ್ರ ಕಂಠ ಗಾಯನ’ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆ”