ಉಡುಪಿ: ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕೃತಿ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಯನ್ ಮಲ್ಪೆ ಅವರ ನಡೆ ರಾಜಕೀಯ ಪ್ರೇರಿತ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ. ಜಯನ್ ಮಲ್ಪೆ ಅವರು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾಗೆ ಏನೂ ತಿಳಿದಿಲ್ಲವೆಂಬಂತೆ ಹೇಳಿಕೆ ನೀಡಿರುವುದು ದುರದೃಷ್ಟಕರವಾಗಿದೆ. ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯವಾದಕ್ಕೆ ಗೌರವ, ಮನ್ನಣೆ ನೀಡುವ ತಂಡವಾಗಿದೆ.Continue reading “‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ವಿರೋಧ ರಾಜಕೀಯ ಪ್ರೇರಿತ ಹಾಗೂ ಹಾಸ್ಯಾಸ್ಪದ : ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು”
Author Archives: ಜನತಾಲೋಕವಾಣಿ.com
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಉಗ್ಗೇಲ್ ಬೆಟ್ಟು ನಿವಾಸಿ ಅಕ್ಷತಾ ಪೂಜಾರಿ ಅವರ ಮನೆಗೆ ಮುಂಜಾನೆ ಸುಮಾರು 4.00 ಗಂಟೆಗೆ 5 ಮಂದಿ ಆಕ್ರಮವಾಗಿ ಪ್ರವೇಶಿಸಿ ತಾವು ಪೊಲೀಸ್ ಎಂದು ಹೇಳಿಕೊಂಡು ದಾಂದಲೆ ನಡೆಸಿ, ಕುಮಾರಿ ಅಕ್ಷತಾ ಅವರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿContinue reading “ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳಾ ದೌರ್ಜನ್ಯದ ವಿರುದ್ಧ ತಕ್ಷಣ ಕ್ರಮ ಜರಗಿಸುವಂತೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ”
ಸ್ಪೀಕರ್ ಖಾದರ್ ಮೆಚ್ಚಿಸಲು ಶಾಸಕರ ವಿರುದ್ಧ ಪ್ರಸಾದ್ ಕಾಂಚನ್ ಹತಾಶ ಹೇಳಿಕೆ : ದಿನೇಶ್ ಅಮೀನ್
ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿ ಅಪ್ರಬುದ್ಧ ಹೇಳಿಕೆಯ ಮೂಲಕ ಪ್ರಸಾದ್ ಕಾಂಚನ್ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿದ್ದು, ಸದಾ ಶಾಸಕ ಯಶ್ಪಾಲ್ ಸುವರ್ಣರನ್ನು ಟೀಕಿಸುವ ಮೂಲಕ ಸ್ಪೀಕರ್ ಖಾದರ್ ರವರನ್ನು ಮೆಚ್ಚಿಸಲು ಪ್ರಯತ್ನ ಮಾಡುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಬಿಟ್ಟಿ ಉಪದೇಶ ನೀಡುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ. ಸದನದಲ್ಲಿ ಶಾಸಕರು ತನ್ನ ಕ್ಷೇತ್ರದ ಸಮಸ್ಯೆ ಬಗ್ಗೆ ಕೇವಲ 3 ನಿಮಿಷ ಮಾತ್ರ ಮಾತಾಡಿದ್ದು, 30 ಸೆಕೆಂಡ್ ಮಾತಾಡುವಾಗಲೇ ಸ್ಪೀಕರ್Continue reading “ಸ್ಪೀಕರ್ ಖಾದರ್ ಮೆಚ್ಚಿಸಲು ಶಾಸಕರ ವಿರುದ್ಧ ಪ್ರಸಾದ್ ಕಾಂಚನ್ ಹತಾಶ ಹೇಳಿಕೆ : ದಿನೇಶ್ ಅಮೀನ್”
‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಉಡುಪಿ: ಡಿ.23ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಭವನದಲ್ಲಿ ಹಮ್ಮಿಕೊಂಡಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸದ್ರಿ ನಾಟಕ ಪ್ರದರ್ಶನವನ್ನು ವಿರೋಧಿಸಿ ದಸಂಸ ಜಿಲ್ಲಾ ನಾಯಕ ಜಯನ್ ಮಲ್ಪೆ ಅವರು ಆಕ್ಷೇಪಣೆ ಸಲ್ಲಿಸಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಲಭ್ಯವಾಗಿದ್ದು, ಈ ಆಕ್ಷೇಪಣೆಗೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಸಂಪೂರ್ಣ ವಿರೋಧ ಇರುತ್ತದೆ. ಈ ನಾಟಕದಲ್ಲಿContinue reading “‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ಕೋರಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಕೆ”
ಇತಿಹಾಸ ಪ್ರಸಿದ್ಧ ಉಡುಪಿ ಪರ್ಯಾಯಕ್ಕೆ ಅನುದಾನದ ಬೇಡಿಕೆಗೆ ಸ್ಪೀಕರ್ ಖಾದರ್ ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ವರ್ತನೆ ಖಂಡನೀಯ : ಕುತ್ಯಾರು ನವೀನ್ ಶೆಟ್ಟಿ
ಉಡುಪಿ: ‘ನಾಡ ಹಬ್ಬ ಮೈಸೂರು ದಸರಾ’ದಂತೆಯೇ ‘ಕರಾವಳಿ ಕರ್ನಾಟಕದ ನಾಡ ಹಬ್ಬ’ ಎಂದೆನಿಸಿರುವ ‘ಉಡುಪಿ ಪರ್ಯಾಯ’ಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಅನುದಾನದ ಬೇಡಿಕೆ ಇಟ್ಟಿರುವ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಅವರ ಮಾತನ್ನು ಹಗುರವಾಗಿ ಪರಿಗಣಿಸಿ, ಹಿಂದೂ ಧರ್ಮದ ಅಸ್ಮಿತೆಯ ಭಾಗವಾದ ಹರಿಕಥೆಯನ್ನು ತಿರಸ್ಕಾರ ಭಾವದಿಂದ ಉಲ್ಲೇಖಸಿ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುoಟುಮಾಡಿರುವ ವಿಧಾನಸಭಾ ಸ್ಪೀಕರ್ ಅಬ್ದುಲ್ ಖಾದರ್ ಅವರ ರಾಜಕೀಯ ಪ್ರೇರಿತ ಕ್ಷುಲ್ಲಕ ವರ್ತನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್Continue reading “ಇತಿಹಾಸ ಪ್ರಸಿದ್ಧ ಉಡುಪಿ ಪರ್ಯಾಯಕ್ಕೆ ಅನುದಾನದ ಬೇಡಿಕೆಗೆ ಸ್ಪೀಕರ್ ಖಾದರ್ ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ವರ್ತನೆ ಖಂಡನೀಯ : ಕುತ್ಯಾರು ನವೀನ್ ಶೆಟ್ಟಿ”
ಗುಂಡು ಶೆಟ್ಟಿ ಕಪ್ಪೆಟ್ಟು ನಿಧನ
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು (88 ವರ್ಷ) ಅವರು ಡಿ.4ರಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಐದು ದಶಕಗಳಿಂದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಪ್ಪೆಟ್ಟು ಇದರ ಶೆಟ್ಟಿ ಬಾಲೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಗುಂಡು ಶೆಟ್ಟಿ ಕಪ್ಪೆಟ್ಟು ಅವರು ತನ್ನ ನೇರ ನಡೆ-ನುಡಿಗಳಿಂದ ಜನಾನುರಾಗಿಯಾಗಿದ್ದು, ದೈವಾರಾಧನೆ ಸಹಿತ ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರ ಸಹಿತ ಬಂಧುContinue reading “ಗುಂಡು ಶೆಟ್ಟಿ ಕಪ್ಪೆಟ್ಟು ನಿಧನ”
ನ.30 : ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’, ಜೋಡುಕಟ್ಟೆಯಿಂದ ‘ಕುಣಿತ ಭಜನೋತ್ಸವ’
ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ಗೀತಾ ಮಾಸೋತ್ಸವ’ದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಸಮಿತಿಯ ಸಹಯೋಗದೊಂದಿಗೆ ನ.30 ರವಿವಾರ ಬೆಳಿಗ್ಗೆ ಗಂಟೆ 9.30ರಿಂದ ಉಡುಪಿ ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’ ಹಾಗೂ ಮಧ್ಯಾಹ್ನ ಗಂಟೆ 2.30ರಿಂದ ಜೋಡುಕಟ್ಟೆಯಿಂದ ರಾಜಾoಗಣದ ವರೆಗೆ ‘ಕುಣಿತದ ಭಜನೋತ್ಸವ’ ನಡೆಯಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ. ನ.30ರ ಬೆಳಿಗ್ಗೆ ಗಂಟೆ 9.00ರಿಂದ ರಾಜಾoಗಣದಲ್ಲಿ ‘ಸಾಮೂಹಿಕ ಗೀತಾ ಪಾರಾಯಣ’ ನಡೆಯಲಿದೆ. ಬೆಳಿಗ್ಗೆ ಗಂಟೆ 10.00ಕ್ಕೆContinue reading “ನ.30 : ರಾಜಾoಗಣದಲ್ಲಿ ‘ಗೀತಾ ಭಜನೋತ್ಸವ’, ಜೋಡುಕಟ್ಟೆಯಿಂದ ‘ಕುಣಿತ ಭಜನೋತ್ಸವ’”
ನ.28ರ ‘ಲಕ್ಷ ಕಂಠ ಗೀತೋತ್ಸವ’ ಯಶಸ್ವಿಗೊಳಿಸಲು ನಾಗರಾಜ ಆಚಾರ್ಯ ಕರೆ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ವಿಶ್ವ ಗೀತಾ ಪರ್ಯಾಯ’ದ ವಿಶಿಷ್ಟ ಕಾರ್ಯಕ್ರಮವಾಗಿ ನ.28ರಂದು ಉಡುಪಿ ರಾಜಾoಗಣದ ಪಾರ್ಕಿಂಗ್ ಸ್ಥಳದ ಬಳಿ ನಡೆಯಲಿರುವ ‘ಲಕ್ಷ ಕಂಠ ಗೀತೋತ್ಸವ’ದ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯವನ್ನು ನೆರೆದ ಎಲ್ಲರೊಂದಿಗೆ ಸಾಮೂಹಿಕ ಪಠಣ ಮಾಡಲಿದ್ದಾರೆ. ಈ ಅಪೂರ್ವ ಕ್ಷಣಗಳಲ್ಲಿ ಶ್ರೀ ಕೃಷ್ಣ ಭಕ್ತರು, ಸಮಸ್ತ ಭಜನಾ ಮಂಡಳಿಗಳ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಿತ ಜಿಲ್ಲೆಯContinue reading “ನ.28ರ ‘ಲಕ್ಷ ಕಂಠ ಗೀತೋತ್ಸವ’ ಯಶಸ್ವಿಗೊಳಿಸಲು ನಾಗರಾಜ ಆಚಾರ್ಯ ಕರೆ”
ನ. 28 : ಉಡುಪಿ ಬನ್ನಂಜೆಯಿಂದ ಕಲ್ಸoಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’ : ಕುತ್ಯಾರು ನವೀನ್ ಶೆಟ್ಟಿ
ಉಡುಪಿ: ನ.28 ಶುಕ್ರವಾರ ಬೆಳಿಗ್ಗೆ ಗಂಟೆ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ‘ರೋಡ್ ಶೋ’ ಉಡುಪಿ-ಬನ್ನಂಜೆಯ ಡಾ! ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸoಕ ಜಂಕ್ಷನ್ ವರೆಗೆ ಸಾಗಲಿದೆ. ಕಲ್ಸoಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ ಗಂಟೆ 12.00ಕ್ಕೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರುContinue reading “ನ. 28 : ಉಡುಪಿ ಬನ್ನಂಜೆಯಿಂದ ಕಲ್ಸoಕ ಜಂಕ್ಷನ್ ವರೆಗೆ ಪ್ರಧಾನಿ ಮೋದಿ ‘ರೋಡ್ ಶೋ’ : ಕುತ್ಯಾರು ನವೀನ್ ಶೆಟ್ಟಿ”
ನ.14ರಂದು ಉಡುಪಿ ತಾಲೂಕಿನ ಭಜನಾ ಮಂಡಳಿಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ
ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿಯಲ್ಲಿ ನ.28ರಂದು ನಡೆಯುವ ‘ಲಕ್ಷ ಕಂಠ ಗೀತಾ ಪಾರಾಯಣ’ ಮತ್ತು ನ.30ರಂದು ನಡೆಯುವ ‘ಸಂತ ಸಂಗಮ’ ಮತ್ತು ‘ಭಜನೋತ್ಸವ’ದ ಪೂರ್ವಭಾವಿಯಾಗಿ ಉಡುಪಿ ತಾಲೂಕು ವ್ಯಾಪ್ತಿಯ ಸಮಸ್ತ ಭಜನಾ ಮಂಡಳಿಗಳ ಪ್ರತಿನಿಧಿಗಳ ಸಭೆಯು ನ.14 ಶುಕ್ರವಾರ ಸಂಜೆ ಗಂಟೆ 4.00ಕ್ಕೆ ಉಡುಪಿ ಶ್ರೀ ಕೃಷ್ಣ ಮಠದ ‘ಕನಕ ಮಂಟಪ’ದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷContinue reading “ನ.14ರಂದು ಉಡುಪಿ ತಾಲೂಕಿನ ಭಜನಾ ಮಂಡಳಿಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ”