ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬ್ಯಾಂಕ್ ವ್ಯವಹಾರಕ್ಕಿದ್ದ ರಿಯಾಯಿತಿ ಮುಕ್ತಾಯ

ಕರೋನಾ ಅವಧಿಯಲ್ಲಿ, ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಅನೇಕ ಪರಿಹಾರಗಳನ್ನು ನೀಡಿದೆ, ಜೂನ್ 30 ರಿಂದ, ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರದ ಅವಧಿ ಕೊನೆಗೊಳ್ಳುತ್ತಿದೆ. ಹೌದು, ಕೆಲ ದಿವಸಗಳ ಹಿಂದೆ ಇತರ ಬ್ಯಾಂಕ್ ಗಳ ಎಟಿಎಂ ನಿಂದ ನಗದು ಹಿಂಪಡೆಯುವಿಕೆಯ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾರ್ಚ್‌ ತಿಂಗಳಿನಲ್ಲಿ ತಿಳಿಸಿದ್ದರು, ಅವರು ಆಗ ಹೇಳಿದ್ದಂತೆ, ಮೂರು ತಿಂಗಳವರೆಗೂ ಯಾವುದೇ ಬ್ಯಾಂಕ್, ಯಾವುದೇ ಎಟಿಎಂನಲ್ಲಿContinue reading “ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದ ಬ್ಯಾಂಕ್ ವ್ಯವಹಾರಕ್ಕಿದ್ದ ರಿಯಾಯಿತಿ ಮುಕ್ತಾಯ”

ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ ನೀಡುತ್ತದೆ. ಇದರಲ್ಲಿನ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಫಾಸ್ಫರಸ್, ಪ್ರೋಟಿನ್ ಮತ್ತು ನಾರಿನ ಅಂಶವು ಚರ್ಮಕ್ಕೆ ಹಾಗೂ ಕೂದಲಿಗೆ ಮ್ಯಾಜಿಕ್ ಮಾಡುತ್ತದೆ. ಉರಿಯೂತ, ಗಂಟಲಿನ ಕಿರಿಕಿರಿ, ಜ್ವರ ಮತ್ತು ಪಿತ್ತ ದೋಷಗಳಂಥ ಹಲವಾರು ಸಮಸ್ಯೆಗಳ ಚಿಕಿತ್ಸೆಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧಿ ಪದ್ಧತಿಯಲ್ಲಿ ಇದು ಬಳಕೆ ಆಗುತ್ತಿದೆ. ಮೂಲಂಗಿContinue reading “ಮೂಲಂಗಿ ಸೇವನೆಯ ಲಾಭ ತಿಳಿದರೆ ಬೆರಗಾಗ್ತೀರ!!!”

ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ

ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ಅಷ್ಟಮಿ ತಿಥಿ,ಶನಿವಾರ, ಪೂರ್ವಭಾದ್ರಪದ ನಕ್ಷತ್ರ ರಾಹುಕಾಲ: ಬೆಳಗ್ಗೆ 9:11 ರಿಂದ 10:47ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35 ಮೇಷ: ಸ್ನೇಹಿತರಿಂದ ಧನಾಗಮನ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ ತಗಾದೆ ಕೋರ್ಟ್‍ಗೆ ಅಲೆದಾಟ, ಸಾಲ ಮಾಡುವ ಪರಿಸ್ಥಿತಿ, ದುರ್ಘಟನೆಗಳಿಂದ ಪ್ರಯಾಣ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಕೆಲಸಗಾರರಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ. ವೃಷಭ: ಮಕ್ಕಳ ಭವಿಷ್ಯದಲ್ಲಿ ಅಭಿವೃದ್ಧಿ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಶುಭContinue reading “ಜೂನ್ 13, 2020: ಶನಿವಾರ ಇಂದಿನ ರಾಶಿ ಫಲ”

ಕೊರೊನಾ: ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ

ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಭಾರತ ಇದೀಗ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದೆ. ಗುರುವಾರ ಒಂದೇ ದಿನ 10,956 ಜನರಿಗೆ ಕೊರೊನಾ ವೈರಸ್ ತಗುಲಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿಯೇ ಹತ್ತು ಸಾವಿರ ಸೋಂಕು ವರದಿಯಾಗಿದೆ. ಈ ಮೂಲಕ ಬ್ರಿಟನ್ ದೇಶವನ್ನು ಭಾರತ ಹಿಂದಿಕ್ಕಿಂತಾಗಿದ್ದು, ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ದೇಶಗಳು ಮಾತ್ರ ಇದೀಗ ಭಾರತಕ್ಕಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದೆ. ರಷ್ಯಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.93Continue reading “ಕೊರೊನಾ: ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ”

ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ

ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.  ರಾಜ್ಯದಲ್ಲಿರುವ ಎಲ್ಲ ಡಿಸಿಸಿ ಬ್ಯಾಂಕ್ ಗಳ ಮೂಲಕ ಬಡವರ ಬಂಧು ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲಸೌಲಭ್ಯ ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಜಿಲ್ಲೆಯ ಶ್ರಮಿಕ ಅತಿ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿContinue reading “ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ”

ದಿನ ಭವಿಷ್ಯ: 12-06-2020,ಶುಕ್ರವಾರ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜ್ಯೇಷ್ಠ ಮಾಸ,ಕೃಷ್ಣ ಪಕ್ಷ, ಸಪ್ತಮಿ ತಿಥಿ,ಶುಕ್ರವಾರ, ಶತಭಿಷ ನಕ್ಷತ್ರ ರಾಹುಕಾಲ: ಬೆಳಗ್ಗೆ 10:47 ರಿಂದ 12:23ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11 ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದೈವ ಕಾರ್ಯ-ಪ್ರಯಾಣಕ್ಕೆ ಅಡೆತಡೆ, ದಾನ ಧರ್ಮ ಕಾರ್ಯಕ್ಕೆ ಖರ್ಚು. ವೃಷಭ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ವಿಪರೀತ ಧೈರ್ಯ, ಸಾಹಸ-ಆತುರದ ಮನಸ್ಥಿತಿ, ಉದ್ಯೋಗ ಬದಲಾವಣೆಯ ಆಲೋಚನೆ, ಸ್ನೇಹಿತರಿಂದ ಅನುಕೂಲ, ಶುಭContinue reading “ದಿನ ಭವಿಷ್ಯ: 12-06-2020,ಶುಕ್ರವಾರ”

ಸೌಂದರ್ಯವರ್ಧಕ ಸೋರೆಕಾಯಿ…!

ಸೋರೆಕಾಯಿ ರಸ ದೇಹಕ್ಕೆ ಮಾತ್ರವಲ್ಲ ಕೂದಲಿಗೂ ಒಳ್ಳೆಯದು. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೇಹತೂಕ ಇಳಿಯುತ್ತದೆ. ಚರ್ಮದ ಮೇಲೆ ಮೂಡುವ ಸುಕ್ಕು, ನೆರಿಗೆಗಳು ದೂರವಾಗುತ್ತವೆ. ಇದರಲ್ಲಿ ಸತು ಮತ್ತು ವಿಟಮಿನ್ ಸಿ ಇದ್ದು ಇದು ಅಕಾಲಿಕ ವಯಸ್ಸಿನ ಸಮಸ್ಯೆಗಳನ್ನು ತಡೆಯುತ್ತದೆ. ಇದರ ರಸವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು. ಬೆಳಿಗ್ಗೆ ಎದ್ದಾಕ್ಷಣ ಕಣ್ಣು ಉಬ್ಬಿರುವವರು ಇದರ ರಸವನ್ನು ಪ್ರಯತ್ನಿಸಿ. ಇದು ಊತವನ್ನು ನಿವಾರಿಸುತ್ತದೆ. ತಾಜಾ ಸೋರೆಕಾಯಿಯ ಎರಡು ಹೋಳುಗಳನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು 15 ನಿಮಿಷContinue reading “ಸೌಂದರ್ಯವರ್ಧಕ ಸೋರೆಕಾಯಿ…!”

ರಾಜ್ಯದಲ್ಲಿ ಇಂದು ಕಿಲ್ಲರ್ ಕೊರೋನಾಗೆ ಮೂವರು ಬಲಿ : ಸಾವಿನ ಸಂಖ್ಯೆ 72ಕ್ಕೆ ಏರಿಕೆ

 ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 204 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇವರಲ್ಲಿ 2976 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3195 ಆಗಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಇಬ್ಬರು, ರಾಯಚೂರಿನಲ್ಲಿ ಒಬ್ಬರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಈ ಕುರಿತಂತೆContinue reading “ರಾಜ್ಯದಲ್ಲಿ ಇಂದು ಕಿಲ್ಲರ್ ಕೊರೋನಾಗೆ ಮೂವರು ಬಲಿ : ಸಾವಿನ ಸಂಖ್ಯೆ 72ಕ್ಕೆ ಏರಿಕೆ”

ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ ಜೂನ್ 11 : ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್ ಗಳಲ್ಲಿ ನಿಗಧಿತ ಸಾಮಾಜಿಕ ಅಂತರ ಪಾಲನೆಯಾಗದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ ಗಳ ವಿರುದ್ದ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ. ಅವರು ಗುರುವಾರ , ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರೋನಾ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಬಸ್ ಗಳಲ್ಲಿContinue reading “ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಜಿ ಜಗದೀಶ್”

ಆನ್ ಲೈನ್ ಶಿಕ್ಷಣ ರದ್ದುಗೊಳಿಸಲು ಆದೇಶ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು: 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡುವುದನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಲೇ ನಿಲ್ಲಿಸಬೇಕೆಂದು ಆದೇಶ ನೀಡಿದ್ದಾರೆ. ಚಿಕ್ಕಮಕ್ಕಳಿಗೆ ಆನ್ ಲೈನ್ ಶಿಕ್ಷಣ ಮಾನಸಿಕ ಒತ್ತಡ ಹೇರುತ್ತದೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಹಲವು ತಜ್ಞರೇ ವರದಿ ನೀಡಿದ್ದರು. ಪೋಷಕರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು ಈ ಹಿನ್ನಲೆಯಲ್ಲಿ ಸುರೇಶ್ ಕುಮಾರ್ ಇಂದಿನಿಂದಲೇ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ರದ್ದುಗೊಳಿಸಿ ಆದೇಶContinue reading “ಆನ್ ಲೈನ್ ಶಿಕ್ಷಣ ರದ್ದುಗೊಳಿಸಲು ಆದೇಶ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್”

Design a site like this with WordPress.com
Get started