
ಇದೇ ಬರುವ ಭಾನುವಾರ, ದಿನಾಂಕ 13-07-25 ರಂದು ಮುಂದಿನ ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ 8.00 ಗಂಟೆಗೆ ಕಲ್ಸಂಕ ಜಂಕ್ಷನ್ ನಿಂದ ಪುರ ಮೆರವಣಿಗೆಯ ಮೂಲಕ ಸಾಗಿಬಂದು 9.15 ಕ್ಕೆ ಸರಿಯಾಗಿ ಕಟ್ಟಿಗೆ ಮುಹೂರ್ತ ಹಾಗೂ 9.30 ಕ್ಕೆ ಪರ್ಯಾಯ ಸ್ವಾಗತಸಮಿತಿಯ ಕಚೇರಿಯ ಉದ್ಘಾಟನೆ ನಡೆಲಿದೆ. ನಂತರದಲ್ಲಿ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರಿಂದ ಮಾತ್ರಕ್ಷತೆ ಅನುಗ್ರಹ ನೀಡಲಿರುವರು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ.ಡಿ. ಶ್ರೀ ವೀರೇಂದ್ರ ಹೆಗ್ಗಡೆಯವರು ಭಾಗವಹಿಸಲಿರುವರು.