ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಶೀರೂರು ಮಠದ ಕಟ್ಟಿಗೆ ಮುಹೂರ್ತದ ಆಹ್ವಾನ

ಇದೇ ಬರುವ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಕಟ್ಟಿಗೆ ಮುಹೂರ್ತಕ್ಕೆ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಿತಿಯ ಗೌರವಾಧ್ಯಕ್ಷರಾದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಶ್ರೀಮಠದಿಂದ ಆಹ್ವಾನ ಪತ್ರಿಕೆಯನ್ನು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ನೀಡಿ ಸ್ವಾಗತಿಸಿದರು. ಅವರೊಂದಿಗೆ ಮೋಹನ್ ಭಟ್, ಸಂದೀಪ್ ಮಂಜ ಮತ್ತು ನಂದನ್ ಜೈನ್ ಉಪಸ್ಥಿತರಿದ್ದರು.

ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ

ಇದೇ ಬರುವ ಭಾನುವಾರ, ದಿನಾಂಕ 13-07-25 ರಂದು ಮುಂದಿನ ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ‌ 8.00 ಗಂಟೆಗೆ ಕಲ್ಸಂಕ ಜಂಕ್ಷನ್ ನಿಂದ ಪುರ ಮೆರವಣಿಗೆಯ ಮೂಲಕ ಸಾಗಿಬಂದು 9.15 ಕ್ಕೆ ಸರಿಯಾಗಿ ಕಟ್ಟಿಗೆ ಮುಹೂರ್ತ ಹಾಗೂ 9.30 ಕ್ಕೆ ಪರ್ಯಾಯ ಸ್ವಾಗತ‌ಸಮಿತಿಯ ಕಚೇರಿಯ ಉದ್ಘಾಟನೆ ನಡೆಲಿದೆ. ನಂತರದಲ್ಲಿ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರಿಂದ ಮಾತ್ರಕ್ಷತೆ ಅನುಗ್ರಹ ನೀಡಲಿರುವರು.  ಈ ಕಾರ್ಯಕ್ರಮದಲ್ಲಿ ಶ್ರೀContinue reading “ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ”

Design a site like this with WordPress.com
Get started