ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಉಡುಪಿ ಜಿಲ್ಲೆಯ 868 ಅಸಹಾಯಕರಿಗೆ ಮಾಸಾಶನದ ನೆರವು ಹಾಗೂ 779 ವಿಶೇಷ ಚೇತನರಿಗೆ ಉಚಿತ ಸಲಕರಣೆಗಳ ವಿತರಣೆ ಮಾಡಲಾಗಿದೆ. ಹಲವಾರು ಕಾರಣಗಳಿಗೆ ತಮ್ಮ ವೃದ್ಧಾಪ್ಯದ ಜೀವನದಲ್ಲಿ ಆರೈಕೆ ಮಾಡುವವರು ಯಾರೂ ಇಲ್ಲದೆ ಅನಾಥರಾಗಿರುವ ಅದೆಷ್ಟೋ ಹಿರಿ ಜೀವಗಳನ್ನು ಗಮನಿಸಬಹುದು. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು, ದುಡಿಯಲು ಸಾಧ್ಯವಾಗದೇ, ಜೀವನ ನಿರ್ವಹಣೆ ಹಾಗೂ ಒಪ್ಪತ್ತಿನ ಊಟಕ್ಕೂ ಪರದಾಡುವವರನ್ನು ಕಾಣುತ್ತೇವೆ. ದೈನಂದಿನ ಜೀವನ ನಿರ್ವಹಣೆ ಸಮಸ್ಯೆಯೊಂದಿಗೆ ವಯೋ ಸಹಜವಾದ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನುContinue reading “ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಅಸಹಾಯಕರಿಗೆ ಮಾಸಾಶನದ ನೆರವು”
Monthly Archives: July 2025
ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ
ಉಡುಪಿ: ಜಿಲ್ಲೆಯಾದ್ಯಂತ 9/11 ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಸರಕಾರದ ವಿಳಂಬ ಧೋರಣೆಯಿಂದ ಜನಸಾಮಾನ್ಯರು ಅತೀವ ತೊಂದರೆಗೀಡಾಗಿದ್ದು, ಈ ಜ್ವಲoತ ಸಮಸ್ಯೆಯ ಪರಿಹಾರಕ್ಕೆ ಅಗ್ರಹಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಎಲ್ಲಾ ಮೋರ್ಚಾಗಳು ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಜು.28ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನುContinue reading “ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ”
ಹತಾಶ ಮನಸ್ಥಿತಿಯ ಪ್ರಸಾದ್ ಕಾಂಚನ್ ಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ
ಉಡುಪಿ: ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಾ ಶಾಸಕರ ಮನೆಗೆ, ಕಛೇರಿಗೆ ಮುತ್ತಿಗೆ ಹಾಕುತ್ತೇನೆ ಎಂಬ ಬಾಲಿಶ ಹೇಳಿಕೆ ನೀಡುತ್ತಿರುವ, ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೊಲೆಗುಂಪಾಗಿರುವ ಪ್ರಸಾದ್ ಕಾಂಚನ್ ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ಕಾಂಚನ್ ರನ್ನು ಉಡುಪಿಯ ಜನತೆContinue reading “ಹತಾಶ ಮನಸ್ಥಿತಿಯ ಪ್ರಸಾದ್ ಕಾಂಚನ್ ಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ”
ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್
ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಶಾಸಕ ವಿ.ಸುನಿಲ್ ಕುಮಾರ್ ಅವರ ಕನಸಿನ ಕೂಸು ಪರಶುರಾಮ ಥೀಮ್ ಪಾರ್ಕ್ ಯೋಜನೆಯ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವ ಕಾರ್ಕಳ ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ತನಿಖೆಯ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ನ ಅಪಪ್ರಚಾರವೆಲ್ಲವೂ ಸುಳ್ಳಾಗಿದೆ. ಫೈಬರ್ ಫೈಬರ್ ಎಂದು ಗೋಗರೆಯುತ್ತಾ ಕಳೆದ ಎರಡೂವರೆ ವರ್ಷದಿಂದ ಪ್ರವಾಸೋದ್ಯಮವನ್ನು ಹಾಳುಗೆಡಹಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕುContinue reading “ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್”
ಬಿಜೆಪಿ ನಗರ ಯುವ ಮೋರ್ಚಾ: ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ
ಉಡುಪಿ: ಶ್ರೀ ಗುರು ಪೂರ್ಣಿಮಾ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಯಕ್ಷ ಗುರು, ಉಡುಪಿಯ ‘ಯಕ್ಷ ಸಂಜೀವ ಯಕ್ಷಗಾನ ಕೇಂದ್ರ’ದ ಮುಖ್ಯಸ್ಥರಾದ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಅವರ ನಿವಾಸದಲ್ಲಿ ಗೌರವಿಸಿ ಗುರು ವಂದನೆ ಸಲ್ಲಿಸಲಾಯಿತು. ಸಂಜೀವ ಸುವರ್ಣ ಅವರು ಯಕ್ಷಗಾನದ ಹಲವಾರು ಪ್ರಕಾರಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದು ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿಯನ್ನು ನೀಡಿರುತ್ತಾರೆ. ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ 30ಕ್ಕೂ ಹೆಚ್ಚು ದೇಶಗಳಲ್ಲಿContinue reading “ಬಿಜೆಪಿ ನಗರ ಯುವ ಮೋರ್ಚಾ: ‘ಯಕ್ಷ ಗುರು’ ಬನ್ನಂಜೆ ಸಂಜೀವ ಸುವರ್ಣರಿಗೆ ಗೌರವಾರ್ಪಣೆ”
ಸೊರಕೆಯವರೇ ಪ್ರತಿಭಟನೆಯ ನಾಟಕ ಬಿಡಿ. ಬಡವರ ಪಿಂಚಣಿ ರದ್ದುಗೊಳಿಸುವ ಹೀನಾಯ ಪರಿಸ್ಥಿತಿಯ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯ ಬಗ್ಗೆ ಗಮನ ಕೊಡಿ
ಕರ್ನಾಟಕ ರಾಜ್ಯ ಸರಕಾರ ಹೀನಾಯ ಪರಿಸ್ಥಿತಿಗೆ ತಲುಪಿದೆ. ಎಲ್ಲದರ ಮೇಲೂ ದರ ಏರಿಕೆಯ ಸವಾರಿ ಮಾಡಿ ಇದೀಗ ಬಡವರ ಪಿಂಚಣಿ ಮೇಲೆ ಕಣ್ಣು ಹಾಕಿ ಇನ್ನು ಬಡವರು ಪಿಂಚಣಿ ಯೋಜನೆಗೆ ಅರ್ಜಿ ಹಾಕದಂತೆ ಯೋಜನೆ ರೂಪಿಸಿರುವರು. ವಯೋವ್ರಧ್ಧರು ದುಡಿಯಲು ಅಸಾಧ್ಯವಾದಾಗ ಅವರಿಗೂ ಗೌರವಯುತ ಜೀವನ ನಡೆಸಲು ಕಿಂಚಿತ್ ರೂಪದ ಸಹಾಯಧನ ನೀಡಲು ಪಿಂಚಣಿ ಯೋಜನೆ ಪ್ರಾರಂಭಗೊಂಡಿತ್ತು. ಅದರಲ್ಲೂ ಯಡಿಯೂರಪ್ಪರವರ ಸರಕಾರ ಇದ್ದಾಗ ಸಂಧ್ಯಾಸುರಕ್ಷಾ ಎನ್ನುವ ಹೊಸ ಯೋಜನೆಯನ್ನೇ ಘೋಷಿಸಿ ಅದೆಷ್ಟೋ ಬಡ ಕುಟುಂಬಗಳಿಗೆ ಗೌರವಯುತ ಜೀವನ ನೀಡಿದುದನ್ನುContinue reading “ಸೊರಕೆಯವರೇ ಪ್ರತಿಭಟನೆಯ ನಾಟಕ ಬಿಡಿ. ಬಡವರ ಪಿಂಚಣಿ ರದ್ದುಗೊಳಿಸುವ ಹೀನಾಯ ಪರಿಸ್ಥಿತಿಯ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯ ಬಗ್ಗೆ ಗಮನ ಕೊಡಿ”
ಮಲ್ಪೆಯಿಂದ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಯ ಬಗ್ಗೆ ಸ್ಪಷ್ಟನೆ
ಉಡುಪಿ: ಆದಿಉಡುಪಿ ಭಾಗದಲ್ಲಿ ಸುಮಾರು ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು 135 ಭೂ ಮಾಲೀಕರಿಗೆ ಸುಮಾರು 24.86 ಕೋಟಿ ರೂಪಾಯಿ ಪರಿಹಾರದ ಹಣ ಪಾವತಿಯಾಗಿದೆ. ತಕರಾರು ಇರುವಲ್ಲಿ ನಾನೇ ಅಧಿಕಾರಿಗಳೊಂದಿಗೆ ಕರಾವಳಿ ಜಂಕ್ಷನ್ ನಿಂದ ಮಲ್ಪೆಯವರೆಗೆ ವಿವಿಧ ಸ್ಥಳಗಳಿಗೆ ಹಲವು ಬಾರಿ ಭೇಟಿಕೊಟ್ಟು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಿದ್ದೆ. ಸುಮಾರು 90ರಷ್ಟು ಸಣ್ಣ ಸಣ್ಣ ಭೂಭಾಗಗಳ ಸರ್ವೆ ಮುಗಿಸಿ ಹಣ ಪಾವತಿಸಲು ವಿವಿಧ ಅಧಿಕಾರಿಗಳ ಸಭೆ ಕರೆದು ಪ್ರಗತಿ ಗಮನಿಸಿದ್ದೆ ಮತ್ತು ಸರ್ವೆ ಅಧಿಕಾರಿಗಳ ಮೂಲಕ ಈContinue reading “ಮಲ್ಪೆಯಿಂದ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿಯ ಬಗ್ಗೆ ಸ್ಪಷ್ಟನೆ”
ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಿಗೆ ಶೀರೂರು ಮಠದ ಕಟ್ಟಿಗೆ ಮುಹೂರ್ತದ ಆಹ್ವಾನ
ಇದೇ ಬರುವ ಶೀರೂರು ಪರ್ಯಾಯದ ಪ್ರಯುಕ್ತ ನಡೆಯುವ ಕಟ್ಟಿಗೆ ಮುಹೂರ್ತಕ್ಕೆ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಮಿತಿಯ ಗೌರವಾಧ್ಯಕ್ಷರಾದ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು ಶ್ರೀಮಠದಿಂದ ಆಹ್ವಾನ ಪತ್ರಿಕೆಯನ್ನು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯರವರು ನೀಡಿ ಸ್ವಾಗತಿಸಿದರು. ಅವರೊಂದಿಗೆ ಮೋಹನ್ ಭಟ್, ಸಂದೀಪ್ ಮಂಜ ಮತ್ತು ನಂದನ್ ಜೈನ್ ಉಪಸ್ಥಿತರಿದ್ದರು.
ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ
ಇದೇ ಬರುವ ಭಾನುವಾರ, ದಿನಾಂಕ 13-07-25 ರಂದು ಮುಂದಿನ ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ ಜರಗಲಿದೆ. ಬೆಳಗ್ಗೆ 8.00 ಗಂಟೆಗೆ ಕಲ್ಸಂಕ ಜಂಕ್ಷನ್ ನಿಂದ ಪುರ ಮೆರವಣಿಗೆಯ ಮೂಲಕ ಸಾಗಿಬಂದು 9.15 ಕ್ಕೆ ಸರಿಯಾಗಿ ಕಟ್ಟಿಗೆ ಮುಹೂರ್ತ ಹಾಗೂ 9.30 ಕ್ಕೆ ಪರ್ಯಾಯ ಸ್ವಾಗತಸಮಿತಿಯ ಕಚೇರಿಯ ಉದ್ಘಾಟನೆ ನಡೆಲಿದೆ. ನಂತರದಲ್ಲಿ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರಿಂದ ಮಾತ್ರಕ್ಷತೆ ಅನುಗ್ರಹ ನೀಡಲಿರುವರು. ಈ ಕಾರ್ಯಕ್ರಮದಲ್ಲಿ ಶ್ರೀContinue reading “ಪರ್ಯಾಯ ಪೀಠವನ್ನೇರಲಿರುವ ಶೀರೂರು ಶ್ರೀ ಮಠದ “ಕಟ್ಟಿಗೆ ಮುಹೂರ್ತ” ಕಾರ್ಯಕ್ರಮ”
ಶಾಂತಿಯುತ ಕುಂಜಾಲು, ನೀಲಾವರ ಭಾಗದಲ್ಲಿ ಕಾಂಗ್ರೆಸ್ ನ ಹೊಸ ರಾಜಕೀಯ ಷಡ್ಯಂತ್ರ ಹಾಗೂ ತಂತ್ರದ ಬಗ್ಗೆ ಖಂಡನೆ
“ಸೌಹಾರ್ದ”ವೋ? ರಾಜಕೀಯ ಷಡ್ಯಂತ್ರವೋ? – ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್, ಸಹಬಾಳ್ವೆ, ಮಾನವ ಬಂಧುತ್ವ, ಮಹಿಳಾ ಬಂಧುತ್ವ, ಇತ್ಯಾದಿ ಸಂಘಟನೆಗಳ ಆಶ್ರಯದಲ್ಲಿ ಜುಲೈ 6ರಂದು ಕುಂಜಾಲು-ನೀಲಾವರ ಕ್ರಾಸ್ ಮಾರ್ಗದಲ್ಲಿ ನಡೆಯಲಿರುವ “ಸಾಮರಸ್ಯ ನಡಿಗೆ ಮತ್ತು ಸೌಹಾರ್ದ ಸಭೆ” ಎಂಬ ಕಾರ್ಯಕ್ರಮ ನಿಜಕ್ಕೂ ಒಳ್ಳೆಯ ಉದ್ದೇಶದಿಂದ ಆಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಇದೊಂದು ನಿಗೂಢ ರಾಜಕೀಯ ಪಿತೂರಿಯ ಭಾಗವಲ್ಲವೆ ಎಂಬ ಗಂಭೀರ ಅನುಮಾನಕ್ಕೂ ಕಾರಣವಾಗಿದೆ. ಉಡುಪಿ ಶಾಸಕರ ನೇತೃತ್ವದಲ್ಲಿ ನಡೆದ ಹೋರಾಟ ಹಾಗೂ ಪೋಲಿಸ್ ಇಲಾಖೆಯ ತ್ವರಿತ ಕ್ರಮದಿಂದಾಗಿ:ಕುಂಜಾಲು ಪ್ರದೇಶದಲ್ಲಿContinue reading “ಶಾಂತಿಯುತ ಕುಂಜಾಲು, ನೀಲಾವರ ಭಾಗದಲ್ಲಿ ಕಾಂಗ್ರೆಸ್ ನ ಹೊಸ ರಾಜಕೀಯ ಷಡ್ಯಂತ್ರ ಹಾಗೂ ತಂತ್ರದ ಬಗ್ಗೆ ಖಂಡನೆ”