
ಉಡುಪಿ:ನಿನ್ನೆಯಷ್ಟೇ ಕಾಂಗ್ರೆಸ್ ಪುಢಾರಿಗಳ ಒಕ್ಕೂಟ ಇಂದ್ರಾಳಿ ಸೇತುವೆ ಬಗ್ಗೆ ಪ್ರತಿಭಟನಾ ದೊಂಬರಾಟ ನಡೆಸಿದ್ದನ್ನು ಕಂಡಿದ್ದೇವೆ. ನಿನ್ನೆಯ ದಿನದ ಮಂಗಳವಾರ, ನಮ್ಮಲ್ಲಿರುವ ಪಧ್ಧತಿ, ನಂಬಿಕೆಯಂತೆ ಯಂತೆ ಕೂದಲು ಕತ್ತರಿಸುವುದು ನಿಷಿಧ್ಧ ಮತ್ತು ಅಶುಭ. ಅದರಲ್ಲೂ ತಲೆಯನ್ನೇ ಬೋಳಿಸಿ ಭಂಡತನ ಮೆರೆದ ಇವರಿಗೆ ಏನು ಹೇಳಬೇಕೋ ತಿಳಿಯದು. ಅದಿರಲಿ ಅಲ್ಲಿ ಸೇತುವೆ ಶೀಘ್ರದಲ್ಲಿ ಆಗಬೇಕು, ವಿಳಂಬವಾದುದಕ್ಕೆ ಪ್ರತಿಯೊಬ್ಬರೂ ಅಸಮಧಾನ ವ್ಯಕ್ತಪಡಿಸೋದು ಸಹಜ. ಇದರ ಬಗ್ಗೆ ಎರಡು ಮಾತಿಲ್ಲ.ಇನ್ನು ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ ಪ್ರತಿಭಟನೆ ಎನ್ನುವುದೂ ಸಹಜ ಪ್ರಕ್ರಿಯೆ. ಆದರೆ ಇವರು ನಿಜವಾಗಿ ಪ್ರತಿಭಟಿಸಬೇಕಾದುದು ಯಾರ ವಿರುಧ್ಧ? ಸಂಸದರ ವಿರುಧ್ಧವೋ ಅಥವಾ ಇವರದ್ದೇ ಆಡಳಿತದ ಜಿಲ್ಲಾಡಳಿತದ ವಿರುಧ್ಧವೋ? ಯಾವುದಾದರೂ ಕಾಮಗಾರಿಗಳು, ಜನೋಪಯೋಗಿ ಕೆಲಸಗಳಿಗೆ ಬೇಕಾಗುವ ಸಂಪನ್ಮೂಲದ ವ್ವವಸ್ಥೆ ಹಾಗೂ ಅದಕ್ಕಿರುವ ಅಡೆತಡೆಗಳನ್ನು ನಿವಾರಿಸುವ ಕೆಲಸ ಜನಪ್ರತಿನಿಧಿಯದ್ದು. ಅದನ್ನು ನಮ್ಮ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯನವರು ಪ್ರಾಮಾಣಿಕವಾಗಿ ಮಾಡಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಎಲ್ಲ ವ್ವವಸ್ಥೆಗಳಾದ ಮೇಲೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ಯಾರದ್ದು? ಅದಕ್ಕೆ ಅಂತಲೇ ಕಾರ್ಯಾಂಗ ವ್ಯವಸ್ಥೆ ಇರುವುದಲ್ಲವೇ? ಅನುಷ್ಠಾನವನ್ನೂ ಜನಪ್ರತಿನಿಧಿಗಳೇ ಮಾಡಬೇಕಾದರೆ ಕಾರ್ಯಾಂಗ ವ್ಯವಸ್ಥೆ ಇರುವುದು ಯಾಕೆ? ಇಂತಹ ಒಂದು ಸಣ್ಣ ಪ್ರಶ್ನೆಯೂ ಪ್ರತಿಭಟನಾಕಾರರಿಗೆ ಅರ್ಥವಾಗುವುದಿಲ್ಲವೆಂದಾರೆ ಅವರು ಏಪ್ರಿಲ್ ಫುಲ್ ದಿನಾಚರಣೆ ಮಾಡುವ ಮೂರ್ಖರೇ ಎನ್ನಬಹುದಲ್ಲವೇ? ಸಾಧ್ಯವಾದರೆ ನಿಮ್ಮ ಅಪರೂಪದ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಬ್ಬಾಳ್ಕರ್ ರವರನ್ನು ನಿನ್ನೆ ತಂದ ಡೋಳ್ಳು, ನಾಸಿಕ್ ಬ್ಯಾಂಡ್ ಇತ್ಯಾದಿಗಳನ್ನು ಬಾರಿಸಿ ಸ್ವಾಗತಿಸಿ ಕುಳ್ಳಿರಿಸಿ ಅವರ ಮೇಲೆ ಒತ್ತಡ ಹೇರಿ. ಆ ಮೂಲಕ ಸರಸತ್ತಂತಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ. ಸೇತುವೆ ಆಗಿದ್ದರೆ ಜಿಲ್ಲಾಧಿಕಾರಿಗಳನ್ನು ನೇರ ಹೊಣೆ ಮಾಡಿ. ಅದಕ್ಕೆ ಏನಾದರೂ ಅಡೆ ತಡೆ ಅಥವಾ ಹಣದ ಕೊರತೆ ಇದ್ದರೆ ಬಹಿರಂಗವಾಗಿ ಜಿಲ್ಲಾಧಿಕಾರಿಗಳಿಂದಲೇ ಹೇಳಿಕೆ ನೀಡಿಸಿ. ಹಾಗೇನಾದರೂ ಇದ್ದರೆ ಅದನ್ನು ನಿವಾರಿಸುವ ಕೆಲಸವನ್ನು ಖಂಡಿತಾ ನಮ್ಮ ಸಂಸದರು ಮಾಡುವರು. ಅದು ಬಿಟ್ಟು ಜನರನ್ನು ಮರುಳು ಮಾಡಲು ಈ ರೀತಿಯ ನಾಟಕವಾಡಿದರೆ ನೀವು ನಿಮ್ಮನ್ನು ಬುದ್ಧಿವಂತರೆಂದು ಕೊಂಡರೂ ಜನ ಅಸಹ್ಯಪಡುವರು. ನಿಮ್ಮದೇ ಪಕ್ಷದ ಆಡಳಿತದ ಸರಕಾರ ಇಂದು ಎಲ್ಲದಕ್ಕೂ ದರ ಏರಿಸಿ ಬಡವರ ರಕ್ತ ಹೀರಿ ಉಸಿರಾಡುತ್ತಿದೆ. ಹಾಲಿನ ದರ ಏರಿ ನಾಲ್ಕು ದಿನ ಆಗಿಲ್ಲ ನಿನ್ನೆಯಷ್ಟೇ ಪುನಃ ಡೀಸೆಲ್ ದರ ಹೆಚ್ಚಿಸಿದೆ. ದಿನ ಬೆಳಗ್ಗೆದ್ದು ಮೊದಲು ಪತ್ರಿಕೆ ನೋಡಿ ಯಾವದಕ್ಕೆ ದರ ಹೆಚ್ಚಿಸಿದ್ದಾರೆ ಅಂತ ದುಗುಡದಿಂದ ಪತ್ರಿಕೆ ಬಿಡಿಸುವ ಭಯಾನಕ ಪರಿಸ್ಥಿತಿ ಇದೆ. ಅದರ ಬಗ್ಗೆ ಸಾಧ್ಯವಾದರೆ ಮಾತನಾಡಿ. ಭಾಗ್ಯಗಳನ್ನುಕೊಟ್ಟ ಕೂಡಲೇ ನೀವು ಏನು ಮಾಡಿದರೂ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದರೆ ಜನ ಪಾಠ ಕಲಿಸುವ ತನಕ ಹಾಗೇ ಇರಿ ಎಂದು ಬಿಜೆಪಿ ಉಡುಪಿ ಜಿಲ್ಲಾ ಕಾರ್ಯದರ್ಶಿ, ಕಾಪು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.