ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧ, ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಸಾಬೀತುಪಡಿಸಿದೆ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ: ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ಕೇವಲ ಧರ್ಮ ಕೇಳಿ ರಕ್ತದೋಕುಳಿ ಹರಿಸಿರುವುದು ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಉಗ್ರರ ನಿರ್ಲಜ್ಜ, ಹೇಡಿತನದ ಪೈಶಾಚಿಕ ಕೃತ್ಯ ಸರ್ವತೃ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಪಾಕ್ ಬೆಂಬಲಿತ ಟಿಆರ್ಎಫ್ ಉಗ್ರರ ದಾಳಿಯಲ್ಲಿ ಮೃತರಾಗಿರುವ ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಸಹಿತ 28 ಅಮಾಯಕ ಪ್ರವಾಸಿಗರ ಕಗ್ಗೊಲೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರContinue reading “ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧ, ಭಯೋತ್ಪಾದನೆ ಧರ್ಮಾಧಾರಿತ ಎಂಬುದನ್ನು ಸಾಬೀತುಪಡಿಸಿದೆ : ಕಿಶೋರ್ ಕುಮಾರ್ ಕುಂದಾಪುರ”

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಆಡಳಿತಾವಧಿಯ ಹಲವಾರು ವಿದ್ಯಮಾನಗಳು   ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಜೆಟ್ ನಲ್ಲಿ ಒಂದೇ ಕೋಮಿನ ಅತಿಯಾದ ಓಲೈಕೆಗೆ ನೀಡಿರುವ ಪ್ರಾಶಸ್ತ್ಯ, ಜಾತಿ ಗಣತಿಯ ಗುಮ್ಮ, ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಕತ್ತರಿ ಪ್ರಯೋಗ ಸಹಿತ ಅಲ್ಲಲ್ಲಿ ನಡೆಯುತ್ತಿರುವ ವಿಛಿದ್ರಕಾರಿ ಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಆಡಳಿತ ವೈಫಲ್ಯಗಳನ್ನುContinue reading “ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ : ಕಿಶೋರ್ ಕುಮಾರ್ ಕುಂದಾಪುರ”

2 ಕೋಟಿ 17 ಲಕ್ಷ ಅನುದಾನದಲ್ಲಿ ಹರಿಖಂಡಿಕೆ – ಎಳ್ಳಾರೆ – ಚಟ್ಕಲ್ ಪಾದೆ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಹರಿಖಂಡಿಕೆ – ಎಳ್ಳಾರೆ – ಚಟ್ಕಲ್ ಪಾದೆ (ಪೆರ್ಡೂರು ನಿಂದ ಕುಂಟಾಲ್ ಕಟ್ಟೆ ರಸ್ತೆ) ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ 17 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 15-04-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.* *ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಜಿಯಾನಂದ ಹೆಗಡೆ, ಸುಚೇತ ರಾವ್,Continue reading “2 ಕೋಟಿ 17 ಲಕ್ಷ ಅನುದಾನದಲ್ಲಿ ಹರಿಖಂಡಿಕೆ – ಎಳ್ಳಾರೆ – ಚಟ್ಕಲ್ ಪಾದೆ ರಸ್ತೆ ಅಭಿವೃದ್ಧಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ”

ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ: ಬಿಜೆಪಿ ಮುಖಂಡ ಸಲೀಂ ಅಂಬಾಗಿಲು

ಉಡುಪಿ:ಈಗಾಗಲೇ ರಾಷ್ಟ್ರ ವ್ಯಾಪಿ ಕುತೂಹಲಕ್ಕೆ ಒಳಗಾಗಿ, ಚರ್ಚೆಯಾಗಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ನೂತನ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಹಜ್ಜ್ ಸಮಿತಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಎಂ.ಸಲೀಂ ಅಂಬಾಗಿಲು ತಿಳಿಸಿದ್ದಾರೆ. ಈ ಹಿಂದೆಯೇ ನಮ್ಮ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ಸಂಧರ್ಭದಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದContinue reading “ನೂತನ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ರಾಜಕೀಯ ಅಪಪ್ರಚಾರಗಳಿಗೆ ಕಿವಿಗೊಟ್ಟು ಮುಸ್ಲಿಂ ಸಮುದಾಯ ಭಯಪಡುವ ಅವಶ್ಯಕತೆ ಇಲ್ಲ: ಬಿಜೆಪಿ ಮುಖಂಡ ಸಲೀಂ ಅಂಬಾಗಿಲು”

ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ ನಡೆಸುವ ಯಾವುದೇ ನೈತಿಕತೆ ಇಲ್ಲ : ಕಿಶೋರ್ ಕುಮಾರ್ ಕುಂದಾಪುರ

ಉಡುಪಿ: ಗ್ಯಾರಂಟಿಗಳ ಆಸೆ ತೋರಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಯದ್ವಾತದ್ವಾ ಏರಿಸಿ ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಗೆ ಅಂತಿಮ ಹಂತ ತಲುಪಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಅಣಕಿಸಿ ಏಪ್ರಿಲ್ ಫೂಲ್ ದಿನವನ್ನು ಆಚರಿಸುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕ್ರಿಯಾಶೀಲ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಸಹಿತ ಉಡುಪಿ ಜಿಲ್ಲೆಯಾದ್ಯoತ ನಡೆಯುತ್ತಿರುವContinue reading “ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ ನಡೆಸುವ ಯಾವುದೇ ನೈತಿಕತೆ ಇಲ್ಲ : ಕಿಶೋರ್ ಕುಮಾರ್ ಕುಂದಾಪುರ”

ಕಾಂಗ್ರೆಸ್ ಪ್ರತಿಭಟನೆ ಜನರನ್ನು ಏಪ್ರಿಲ್ ಫೂಲ್ ಮಾಡುವ ದೊಂಬರಾಟ – ಶ್ರೀಕಾಂತ ನಾಯಕ್

ಉಡುಪಿ:ನಿನ್ನೆಯಷ್ಟೇ ಕಾಂಗ್ರೆಸ್ ಪುಢಾರಿಗಳ ಒಕ್ಕೂಟ ಇಂದ್ರಾಳಿ ಸೇತುವೆ ಬಗ್ಗೆ ಪ್ರತಿಭಟನಾ ದೊಂಬರಾಟ ನಡೆಸಿದ್ದನ್ನು ಕಂಡಿದ್ದೇವೆ. ನಿನ್ನೆಯ ದಿನದ ಮಂಗಳವಾರ, ನಮ್ಮಲ್ಲಿರುವ ಪಧ್ಧತಿ, ನಂಬಿಕೆಯಂತೆ ಯಂತೆ ಕೂದಲು ಕತ್ತರಿಸುವುದು ನಿಷಿಧ್ಧ ಮತ್ತು ಅಶುಭ. ಅದರಲ್ಲೂ ತಲೆಯನ್ನೇ ಬೋಳಿಸಿ ಭಂಡತನ ಮೆರೆದ ಇವರಿಗೆ ಏನು ಹೇಳಬೇಕೋ ತಿಳಿಯದು. ಅದಿರಲಿ ಅಲ್ಲಿ ಸೇತುವೆ ಶೀಘ್ರದಲ್ಲಿ ಆಗಬೇಕು, ವಿಳಂಬವಾದುದಕ್ಕೆ ಪ್ರತಿಯೊಬ್ಬರೂ ಅಸಮಧಾನ ವ್ಯಕ್ತಪಡಿಸೋದು ಸಹಜ. ಇದರ ಬಗ್ಗೆ ಎರಡು ಮಾತಿಲ್ಲ.‌ಇನ್ನು ಪ್ರಜಾಪ್ರಭುತ್ವ ವ್ವವಸ್ಥೆಯಲ್ಲಿ ಪ್ರತಿಭಟನೆ ಎನ್ನುವುದೂ ಸಹಜ ಪ್ರಕ್ರಿಯೆ. ಆದರೆ ಇವರು ನಿಜವಾಗಿContinue reading “ಕಾಂಗ್ರೆಸ್ ಪ್ರತಿಭಟನೆ ಜನರನ್ನು ಏಪ್ರಿಲ್ ಫೂಲ್ ಮಾಡುವ ದೊಂಬರಾಟ – ಶ್ರೀಕಾಂತ ನಾಯಕ್”

ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ? : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ

ಉಡುಪಿ: ಇತ್ತೀಚಿಗೆ ನಡೆದ ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನದೇ ಧರ್ಮದ ಯುವತಿಯನ್ನು ಅಪಹರಿಸಿ ಬ್ಲಾಕ್ ಮೇಲ್ ಮಾಡಿ ಲವ್ ಜಿಹಾದ್ ಮಾಡಲು ಹೊರಟಿರುವ ಅಕ್ರಮ್ ಎಂಬ ರೌಡಿ ಶೀಟರ್ ನನ್ನು ಬಂಧಿಸಲು ಮೀನ ಮೇಷ ಎಣಿಸುತ್ತಾ ಕಾಲ ಹರಣ ಮಾಡುತ್ತಿರುವ ಉಡುಪಿ ನಗರ ಪೊಲೀಸ್Continue reading “ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ? : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ”

Design a site like this with WordPress.com
Get started