
ಉಡುಪಿ ಬಿಜೆಪಿ ಗ್ರಾಮಂತರ ಮಂಡಲದಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ರವರ ಪುಣ್ಯತಿಥಿ ಸಂಸ್ಮರಣಾ ದಿನಾಚರಣೆ ಗ್ರಾಮಾಂತರ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಕಿಶೋರ್ ಕುಂದಾಪುರ ರವರು ಪುಷ್ಪಾರ್ಚನೆ ಮಾಡಿ ಪಕ್ಷದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನದ ಬಗ್ಗೆ ವಿವರಿಸಿ ಅವರು ಹಾಕಿಕೊಟ್ಟ ಆದರ್ಶದಲ್ಲಿಯೇ ನಾವೆಲ್ಲ ಇರಬೇಕೆಂದು ಕರೆ ನೀಡಿದರು.
ನಂತರದಲ್ಲಿ ಪಕ್ಷದ ಕೊಟ್ಟ ಹಲವಾರು ಕಾರ್ಯಕ್ರಮಗಳ ಬಗ್ಗೆ ಎರಡು ಕಾರ್ಯಕ್ರಮಗಳ ಸಂಚಾಲಕರಾದ ಶ್ರೀಕಾಂತ ನಾಯಕ್ ಮಾಹಿತಿ ನೀಡಿ, ಇಂದಿನ ಪುಣ್ಯತಿಥಿಯಿಂದ ಅವರ ಜನ್ಮದಿನಾಂಕ ಜುಲೈ ,6 ನೇ ತಾರೀಕಿನವರೆಗೆ ಪ್ರತೀ ಬೂತ್ ನಲ್ಲಿಯೂ *ಏಕ್ ಪೇಡ್ ಮಾಕೆ ನಾಮ್* ಎನ್ನುವ ಕಾರ್ಯಕ್ರಮ ಮಾಡಬೇಕು. ಪ್ರತೀ ಬೂತ್ ನಲ್ಲಿ ಕನಿಷ್ಠ ಹತ್ತು ಗಿಡಗಳನ್ನಾದರೂ ಮನೆಗಳಲ್ಲಿ ತಾಯಿಯೊಂದಿಗೆ ನಿಂತು ನೆಟ್ಟು ವರದಿ ನೀಡಬೇಕು. ಅದರೊಂದಿಗೇ ಜೂನ್ 25 ರಂದು ತುರ್ತ ಪರಿಸ್ಥಿತಿ ಯ ಕರಾಳ ದಿನದ ಕಾರ್ಯಕ್ರಮ, ವಾಲ್ಮೀಕಿ ನಿಮಗದ ಹಗರಣ ಕುರಿತಂತೆ ಡಿಸಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ, ಮನ್ ಕಿ ಬಾತ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಲ್ಲ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮಂಡಲದಿಂದ ಬೂತ್ ಮಟ್ಟದವರೆಗಿನ ಪದಾಧಿಕಾರಿಗಳು ನಡೆಸಿ ವರದಿ ನೀಡಬೇಕೆಂದು ಹೇಳಲಾಯಿತು. ನಂತರ ಮಂಡಲ ಅಧ್ಯಕ್ಷರಾದ ರಾಜೀವ್ ಕುಲಾಲ್ ರವರು ಮಾತನಾಡಿ ಎಲ್ಲ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಅನಿತಾ ಶ್ರೀಧರ್, ರೈತ ಮೋರ್ಚ ಜಿಲ್ಲಾಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮಗಳ ಸಂಚಾಲಕರಾದ ಅರುಣ್ ಭಂಡಾರಿ, ಮಮತಾ ಶೆಟ್ಟಿ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ವೀಣಾ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾಕಾರ್ಯದರ್ಶಿ ಸಚಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಕೇತಿಕವಾಗಿ ಗಿಡಗಳ ವಿತರಣೆ ಮಾಡಲಾಯಿತು.