
ಉಡುಪಿ:ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿಧ್ಧರಾಮಯ್ಯರವರು ಹಿಂದಿನ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತಂತೆ ನೀಡಿದ ಆದೇಶ ಹಿಂಪಡೆಯುವ ಮಾತನ್ನಾಡಿ ತಮ್ಮ ಮುಸ್ಲಿಮರ ತುಷ್ಠೀಕರಣದ ಪರಮಾವಧಿ ತಲುಪುತ್ತಿದ್ದಾರೆ. ಸಿಧ್ಧರಾಮಯ್ಯರವರಿಗೆ ಹಿಂದೂಗಳೆಂದರೆ ಅಸಡ್ಡೆ. ಈ ಹಿಂದೆ ಮುಸಲ್ಮಾನರಿಗೆ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ, ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಇತ್ಯಾದಿ ಮಾತುಗಳಿಂದ ತನ್ನ ಮುಸ್ಲಿಂ ಪ್ರೀತಿಯನ್ನು ಬಹಿರಂಗವಾಗಿ ತೋರ್ಪಡಿಸಿದ್ದಾರೆ. ಅವರ ಉಪಮುಖ್ಯಮಂತ್ರಿಗಳಾದ ಡಿಕೆಶಿಯವರು ದೆ ಆರ್ ಆಲ್ ಮೈ ಬ್ರದರ್ಸ್, ಅವರ ಮೇಲಿನ ಕೋಮು ಗಲಭೆ ಕೇಸುಗಳನ್ನು ಹಿಂಪಡೆಯಿರಿ ಎಂದು ಪತ್ರ ಬರೆಯುತ್ತಾರೆ. ಅಲ್ಲದೆ ಹಿಂದೂಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದರೆ ಅವರ ಮಾಂಗಲ್ಯ, ಕಿವಿ ಓಲೆ, ಕಾಲ್ಗೆಜ್ಜೆ ಇತ್ಯಾದಿಗಳನ್ನು ಕಳಚಿದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಈ ಹಿಂದಿನ ಆಡಳಿತದಲ್ಲಿಯೂ ಟಿಪ್ಪು ಜಯಂತಿ, ಶಾದಿಭಾಗ್ಯ ಇತ್ಯಾದಿಗಳನ್ನು ನೀಡಿ ತಾವು ಯಾರ ಪರ ಎಂದು ತೋರಿಸಿದ್ದಾರೆ. ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತಂದ ಸಚಿವ ಜಮೀರ ಅಹಮ್ಮದ್ ಖಾನ್ ರನ್ನು ಸಮರ್ಥಿಸಿ ಸಂವಿಧಾನಕ್ಕೆ ಅಪಚಾರವಾದರೂ ತಮ್ಮ ಮುಸ್ಲಿಂ ಬಂಧುಗಳಿಗೆ ಮಾತ್ರ ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಯಾವತ್ತೂ ಬೆಲೆ ಕೊಡದ ಇವರು ತಮ್ಮ ತುಷ್ಠೀಕರಣದ ಪರಮಾವಧಿಯಿಂದ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಆಹಾರ ಬಟ್ಟೆ ಅವರವರಿಗೆ ಬಿಟ್ಟದ್ದು ಎಂದರೇನರ್ಥ. ಇಂತಹ ಮೂರ್ಖತನದ ಹೇಳಿಕೆಗಳನ್ನು ಮುಖ್ಯಮಂತ್ರಿಯಾದವರು, ಸರ್ವರನ್ನೂ ಸಮಾನವಾಗಿ ಕಾಣಬೇಕಾದವರು ಶಾಲಾ ಕಾಲೇಜುಗಳಲ್ಲಿ ಸರ್ವರೂ ಸಮಾನವಾಗಿರಬೇಕೆಂದು ಹಿಂದಿನವರು ಮಾಡಿದಂತಹ ಸಮವಸ್ತ್ರಕ್ಕೆ ಇವರು ಒಪ್ಪದೇ ಶಾಲೆಗಳಲ್ಲಿಯೂ ತನ್ನ ಹೇಸಿಗೆ ರಾಜಕಾರಣದ ಹಸ್ತ ಚಾಚುತ್ತಿದ್ದಾರೆ. ಇವರ ಹೇಳಿಕೆ ಗಮನಿಸಿದರೆ ಸಮವಸ್ತ್ರ ಅಗತ್ಯವೇ ಇಲ್ಲ ಇನ್ನು ಮುಂದೆ. ಅದು ಅವರವರ ಇಷ್ಟ. ನಾಳೆ ಹಿಂದೂಗಳು ಕೇಸರಿ ಪಂಚೆ ಶಾಲು ಇತ್ಯಾದಿ ಧರಿಸಿ ಬಂದರೂ ಕೇಳಲಿಕ್ಕಿಲ್ಲ. ಸಮಾಜದಲ್ಲಿ ಸದಾ ಅರಾಜಕತೆ ಬಯಸುವ ನಿಮ್ಮಂಥಹವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ವಿನಾಶಕಾಲೇ ವಿಪರೀತ ಬುಧ್ಧಿ ಎನ್ನುವಂತೆ ಇವರ ಸರಕಾರದ ಪತನದ ದಿನಗಳು ನಿನ್ನೆಯಿಂದಲೇ ಎಣಿಕೆಗೆ ಪ್ರಾರಂಭವಾಗಿದೆ. ಬಿಟ್ಟಿ ಭಾಗ್ಯ ಘೋಷಿಸಿ ಜನರನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದು ಇದೀಗ ಯಾವುದೇ ಅಭಿವ್ರಧ್ಧಿ ಕೆಲಸಗಳಿಗೆ ಅನುದಾನಗಳಿಲ್ಲದೆ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಮೂರ್ಖತನದ ಆದೇಶ ಮಾಡಿದರೆ ಜನ ನಿಮಗೆ ಮುಂದಿನ ಚುನಾವಣೆಗಳಲ್ಲಿ ಬುಧ್ಧಿ ಕಲಿಸದೇ ಇರರು. ಕೂಡಲೇ ನಿಮ್ಮ ಮಾತನ್ನು ಹಿಂಪಡೆಯಿರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಮಕ್ಕಳು ಶಾಂತಿ ಸೌಹಾರ್ದತೆಯಿಂದ ಧರ್ಮಾತೀತವಾಗಿ ಬೆಳೆಯಲು ಅವಕಾಶ ನೀಡಿ. ಇಲ್ಲದಿದ್ದಲ್ಲಿ ಪರಿಣಾಮ ವಿಪರೀತವಾದರೆ ನೀವೇ ಹೊಣೆಗಾರರಾಗುವಿರಿ ಎಂದು ಎಚ್ಚರಿಸುತ್ತಿದ್ದೇವೆ.