ಕಾಪು: ಮೋದೀಜಿ ಜನ್ಮದಿನದ ಅಂಗವಾಗಿ ಇಂದು ಕಾಪು ಬಿಜೆಪಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ನೆರವೇರಿಸಿದರು. ಬಳಿಕ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದೀಜಿ ಜನ್ಮದಿನದಿಂದ ಗಾಂಧಿ ಜಯಂತಿ ತನಕ ನಡೆಯುವ ಸೇವಾ ಪಾಕ್ಷಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಈ ಎಲ್ಲ ಸೇವಾ ಕಾರ್ಯಗಳ ಪುಣ್ಯದ ಫಲ ನಮ್ಮ ವಿಶ್ವನಾಯಕ ಮೋದೀಜಿಯವರಿಗೆContinue reading “ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕಾಪು ಬಿಜೆಪಿ ವತಿಯಿಂದ ರಕ್ತದಾನ ಶಿಬಿರ”
Monthly Archives: September 2023
ಪ್ರಧಾನಿ ಮೋದಿ ಜನ್ಮದಿನಾಚರಣೆ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ರಕ್ತದಾನ ಶಿಬಿರ
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ 73ನೇ ಜನ್ಮ ದಿನಾಚರಣೆ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಜಾ ಮತ್ತು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್(ರಿ.) ಉಡುಪಿ ಇದರ ಜಂಟಿ ಆಶ್ರಯದಲ್ಲಿ ರಕ್ತನಿಧಿ ವಿಭಾಗ ಕೆಎoಸಿ ಮಣಿಪಾಲ ಇದರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಸೆ.17ರಂದು ಮಣಿಪಾಲ ಕೆಎಂಸಿಯ ರಕ್ತನಿಧಿ ವಿಭಾಗದಲ್ಲಿ ನಡೆಯಿತು. ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ಶಾಸಕ ಯಶ್ಪಾಲ್ ಸುವರ್ಣContinue reading “ಪ್ರಧಾನಿ ಮೋದಿ ಜನ್ಮದಿನಾಚರಣೆ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ರಕ್ತದಾನ ಶಿಬಿರ”
ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ: ನಿಕಟಪೂರ್ವ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ. ರವಿ
ಉಡುಪಿ: ಮುಂಬರಲಿರುವ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ರಾಜ್ಯ ಸಂಚಾಲಕ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಿಜೆಪಿ ಉಡುಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರ ಚುನಾವಣೆಯ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಈContinue reading “ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ: ನಿಕಟಪೂರ್ವ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ. ರವಿ”
ಬಿಜೆಪಿ ರಾಜ್ಯ ತಂಡದಿಂದ ಉಡುಪಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ
ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ವಿ.ಸುನೀಲ್ ಕುಮಾರ್ ಮತ್ತು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ನೇತೃತ್ವದ ರಾಜ್ಯ ತಂಡದಿಂದ ಉಡುಪಿ ಜಿಲ್ಲಾ ಮಟ್ಟದ ಸಭೆಯು ಸೆ.14ರಂದು ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಜರಗಿತು. ಮತದಾರರ ಪಟ್ಟಿ ಪರಿಷ್ಕರಣೆ ಸಹಿತ ಬೂತ್ ಮಟ್ಟದಿಂದ ಜಿಲ್ಲಾ ಸ್ತರದ ವರೆಗಿನ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳನ್ನು ಈಗಿಂದೀಗಲೇ ಚುನಾವಣೆಗೆContinue reading “ಬಿಜೆಪಿ ರಾಜ್ಯ ತಂಡದಿಂದ ಉಡುಪಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ”
ಸೆ.17ರಿಂದ ಅ.2 : ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಸೇವಾ ಪಾಕ್ಷಿಕ ಅಭಿಯಾನ’
ಉಡುಪಿ: ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯಿಂದ ಮೊದಲ್ಗೊಂಡು ಅ.2 ಗಾಂಧಿ ಜಯಂತಿ ಆಚರಣೆಯ ವರೆಗೆ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಸೇವಾ ಪಾಕ್ಷಿಕ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ನಿಟ್ಟಿನಲ್ಲಿ ನಡೆಯುವ ನಡೆಯುವ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿContinue reading “ಸೆ.17ರಿಂದ ಅ.2 : ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಸೇವಾ ಪಾಕ್ಷಿಕ ಅಭಿಯಾನ’”
ಸನಾತನ ಧರ್ಮದ ಬಗ್ಗೆ ಕೀಳಾಗಿ ವರ್ತಿಸುವ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ: ಕುಯಿಲಾಡಿ ಆಕ್ರೋಶ
ಉಡುಪಿ: ‘ಸನಾತನ ಧರ್ಮ ನಿರ್ಮೂಲನೆಗಾಗಿಯೇ ಐಎನ್ಡಿಐಎ ಮೈತ್ರಿಕೂಟ’ ಎಂದಿರುವ ತಮಿಳುನಾಡು ಸಚಿವ ಪೊನ್ಮುಡಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ದಿನಕ್ಕೊಂದು ರೀತಿಯ ವಿಲಕ್ಷಣಕಾರಿ ಹೇಳಿಕೆಗಳನ್ನು ನೀಡುತ್ತಿರುವ ವಿಪಕ್ಷಗಳ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ. ಕಾಂಗ್ರೆಸ್ ಸಹಿತ ಐಎನ್ಡಿಐಎ ಮೈತ್ರಿಕೂಟಕ್ಕೆ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ನಿರ್ದಿಷ್ಟ ದೂರದರ್ಶಿತ್ವದ ಚಿಂತನೆಗಳಿಲ್ಲದೆ, ಕೇವಲ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು 26 ವಿಪಕ್ಷಗಳು ರಚಿಸಿರುವ ಐಎನ್ಡಿಐಎ ಮೈತ್ರಿಕೂಟ, ಪ್ರಧಾನಿ ನರೇಂದ್ರContinue reading “ಸನಾತನ ಧರ್ಮದ ಬಗ್ಗೆ ಕೀಳಾಗಿ ವರ್ತಿಸುವ ಐಎನ್ಡಿಐಎ ಮೈತ್ರಿಕೂಟ ಹುಚ್ಚರ ಸಂತೆಯಂತಾಗಿದೆ: ಕುಯಿಲಾಡಿ ಆಕ್ರೋಶ”
ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಿಂದ ಬಿಜೆಪಿ ಮುಖಂಡನ ಮೇಲೆ ಸುಳ್ಳು ದೂರು ದಾಖಲು, ಬ್ಲಾಕ್ಮೇಲ್ ತಂತ್ರ: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ
ಉಡುಪಿ: ಇತ್ತೀಚೆಗೆ ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ನಕಲಿ ಚಿನ್ನ ಅಡಮಾನ ಸಾಲದ ಪ್ರಕರಣದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದು ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಬ್ಲಾಕ್ಮೇಲ್ ತಂತ್ರ ಅನುಸರಿಸಿರುವ ಕೃತ್ಯ ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ. ಪ್ರಕರಣ ನಡೆದ ಸಂದರ್ಭ ಸೆ.5ರಂದು ದಾವೂದ್ ಅಬೂಬಕರ್ ಉಡುಪಿಯಲ್ಲಿ ಇಲ್ಲದೇ ಇದ್ದರೂ ಅವರ ಹೆಸರನ್ನು ದುರುದ್ದೇಶದಿಂದ ಪೊಲೀಸ್ ದೂರಿನಲ್ಲಿ ಸೇರಿಸಲಾಗಿದೆ ಎಂದು ತಿಳಿದುContinue reading “ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಿಂದ ಬಿಜೆಪಿ ಮುಖಂಡನ ಮೇಲೆ ಸುಳ್ಳು ದೂರು ದಾಖಲು, ಬ್ಲಾಕ್ಮೇಲ್ ತಂತ್ರ: ಉಡುಪಿ ಜಿಲ್ಲಾ ಬಿಜೆಪಿ ಖಂಡನೆ”
ವ್ಯವಸ್ಥಿತ ಕಾರ್ಯಾಲಯದ ಮೂಲಕ ಸದೃಢ ಪಕ್ಷ ಸಂಘಟನೆಗೆ ಒತ್ತು : ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಬಿಜೆಪಿ ಕೊಡಗು ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ
ಉಡುಪಿ: ಬಿಜೆಪಿ ಕೇಂದ್ರ ಸಮಿತಿಯ ನಿರ್ಣಯದಂತೆ, ರಾಜ್ಯಾದ್ಯಂತ ವ್ಯವಸ್ಥಿತ ಕಾರ್ಯಾಲಯವನ್ನು ಸಜ್ಜುಗೊಳಿಸಿ, ವ್ಯಾಪಕ ಜನಸಂಪರ್ಕದೊಂದಿಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡುವ ಕಾರ್ಯ ಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಬಿಜೆಪಿ ಕಾರ್ಯಾಲಯ ನಿರ್ವಹಣಾ ರಾಜ್ಯ ಸಮಿತಿ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು. ಅವರು ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯ ನೇತೃತ್ವ ವಹಿಸಿContinue reading “ವ್ಯವಸ್ಥಿತ ಕಾರ್ಯಾಲಯದ ಮೂಲಕ ಸದೃಢ ಪಕ್ಷ ಸಂಘಟನೆಗೆ ಒತ್ತು : ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿಬಿಜೆಪಿ ಕೊಡಗು ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ”
ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಿದ್ದಿದೆ; ಸಿದ್ದು ಜನ್ಮ ಜಾತಕ ಜಾಲಾಡಿಸಿದ ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ : ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ‘ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆಯೊಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ಮಾರ್ಮಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ಜಾತಕ ಜಾಲಾಡಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರವರಿಗೆ ಧನ್ಯವಾದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಸಿದ್ದರಾಮಯ್ಯ, ‘ಅಧಿಕಾರ ಸಿಕ್ಕಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಅಡ್ವಾಣಿಯವರನ್ನು ಬೇಟಿ ಮಾಡಿ ಬಿಜೆಪಿ ಸೇರಲು ಹೋಗಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಬಿಜೆಪಿ ಮುಖಂಡContinue reading “ಕೊನೆಗೂ ಕಾಂಗ್ರೆಸಿಗರ ಬಾಯಿಯಿಂದ ಸತ್ಯ ಹೊರ ಬಿದ್ದಿದೆ; ಸಿದ್ದು ಜನ್ಮ ಜಾತಕ ಜಾಲಾಡಿಸಿದ ಬಿ.ಕೆ. ಹರಿಪ್ರಸಾದ್ ಗೆ ಧನ್ಯವಾದ : ಕುಯಿಲಾಡಿ ಸುರೇಶ್ ನಾಯಕ್”
ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ; ರಾಜ್ಯ ತಂಡದಿಂದ ಪರಿಶೀಲನೆ
ಉಡುಪಿ: ವ್ಯವಸ್ಥಿತ ಕಾರ್ಯಾಲಯದ ಮೂಲಕ ಕಾರ್ಯ ವಿಸ್ತಾರ ಮಾಡುವ ಬಿಜೆಪಿ ಕೇಂದ್ರ ಸಮಿತಿಯ ನಿರ್ಣಯದಂತೆ, ಉಡುಪಿ ಜಿಲ್ಲಾ ಬಿಜೆಪಿ ಸ್ಥಿರಾಸ್ತಿಯನ್ನು ಖರೀದಿಸಿದ್ದು, ನೂತನ ಕಟ್ಟಡ ನಿರ್ಮಾಣದೊಂದಿಗೆ ಸುಸಜ್ಜಿತ ಕಾರ್ಯಾಲಯವನ್ನು ಹೊಂದಲಿದೆ. ಈ ನೆಲೆಯಲ್ಲಿ ಜಿಲ್ಲಾ ಕಾರ್ಯಾಲಯದ ಸುವ್ಯವಸ್ಥೆಗಳ ಅವಲೋಕನ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ತಂಡದ ಜೊತೆಗೆ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಕಾರ್ಯಾಲಯ ನಿರ್ವಹಣೆ ರಾಜ್ಯ ತಂಡದ ಸದಸ್ಯ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು. ಅವರುContinue reading “ಬಿಜೆಪಿ ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಸಮಿತಿ ಸಭೆ; ರಾಜ್ಯ ತಂಡದಿಂದ ಪರಿಶೀಲನೆ”