ಉಡುಪಿಯ ಪ್ರಕರಣವನ್ನು ಮುಚ್ಚಿಹಾಕಲು ಜಿಲ್ಲಾ ಕಾಂಗ್ರೆಸ್ ಹುನ್ನಾರ : ಕುಯಿಲಾಡಿ

ಉಡುಪಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಖಾಸಗಿ ವೀಡಿಯೋ ಚಿತ್ರೀಕರಣದ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲು ಉಡುಪಿ ಜಿಲ್ಲಾ ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ನಡೆದ ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಾರೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಸಹಿತ ಕಾಂಗ್ರೆಸ್ ಮುಖಂಡರು ಮಾತ್ರ ಏನೂ ನಡೆದೇContinue reading “ಉಡುಪಿಯ ಪ್ರಕರಣವನ್ನು ಮುಚ್ಚಿಹಾಕಲು ಜಿಲ್ಲಾ ಕಾಂಗ್ರೆಸ್ ಹುನ್ನಾರ : ಕುಯಿಲಾಡಿ”

ಪಾದೆಬೆಟ್ಟು ಭಾಗದ ನೆರೆ ಬಾಧಿತ ಪ್ರದೇಶಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಕಾಪು: ನಿರಂತರವಾಗಿ ಸುರಿದ ಮಳೆಗೆ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆಬೆಟ್ಟು ಧೂಮಾವತಿ ಸ್ಥಾನದ ಬಳಿ ಮನೆಗಳಿಗೆ ನೀರು ನುಗ್ಗಿದ್ದು, ಇಂದು ದಿನಾಂಕ 28-07-2023 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರೆ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋದಾ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂದೇಶ್ ಶೆಟ್ಟಿ, ಅಶೋಕ್, ಶೋಭಾ ಶೆಟ್ಟಿ, ಗೀತಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿContinue reading “ಪಾದೆಬೆಟ್ಟು ಭಾಗದ ನೆರೆ ಬಾಧಿತ ಪ್ರದೇಶಗಳಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ”

ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ರೆಕಾರ್ಡಿಂಗ್ ಪ್ರಕರಣದ ಪ್ರತಿಭಟನಾ ಸಭೆಗೆ ಕಾಪುವಿನಿಂದ ಒಂದು ಸಾವಿರ ಜನ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ನೇತ್ರತ್ವದಲ್ಲಿ ನಾಳೆ ಜು.28 ರಂದು ಶುಕ್ರವಾರ ನಡೆಯುವ ಪ್ರತಿಭಟನಾ ಸಭೆಯಲ್ಲಿ ಕಾಪುವಿನಿಂದ ಕನಿಷ್ಠ ಒಂದು ಸಾವಿರ ಜನ‌ ಭಾಗವಹಿಸಲಿರುವರು ಎಂದು ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಉಡುಪಿಯ ಖಾಸಗಿ‌ ಕಾಲೇಜಿನಲ್ಲಿ ನಡೆದ ಈ ಘಟನೆ ಅತ್ಯಂತ ಕಳವಳಕಾರಿಯಾಗಿದ್ದು ಅವರ ಜೆಹಾದಿ ಮಾನಸಿಕತೆಯಿಂದ ಮುಂದೆ ಪ್ರತಿಯೊಬ್ಬ ಮನೆಯವರೂ ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆ ವಿಡಿಯೋ‌ ಡಿಲಿಟ್ ಮಾಡಲಾಗಿದೆ ಎನ್ನುವContinue reading “ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ರೆಕಾರ್ಡಿಂಗ್ ಪ್ರಕರಣದ ಪ್ರತಿಭಟನಾ ಸಭೆಗೆ ಕಾಪುವಿನಿಂದ ಒಂದು ಸಾವಿರ ಜನ”

ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆಯಲು ಉತ್ಸುಕವಾಗಿರುವ ಗೃಹ ಇಲಾಖೆ ಉಡುಪಿಯ ಗಂಭೀರ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಯಾಕೆ ಮಹತ್ವ ನೀಡುತ್ತಿಲ್ಲ: ನಯನಾ ಗಣೇಶ್

ಉಡುಪಿ: ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕೇಸ್ ಗಳನ್ನು ಹಿಂಪಡೆಯುವ ಪ್ರಸ್ತಾಪದ ಬಗ್ಗೆ ಉತ್ಸುಕತೆ ತೋರುವ ರಾಜ್ಯ ಗೃಹ ಇಲಾಖೆ ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ನಡೆದ ಹಿಂದೂ ವಿದ್ಯಾರ್ಥಿನಿಯ ಖಾಸಗಿ ವೀಡಿಯೋ ಚಿತ್ರೀಕರಣದ ಪ್ರಕರಣದ ತನಿಖೆಯ ಬಗ್ಗೆ ಯಾಕೆ ಮಹತ್ವ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪ್ರಶ್ನಿಸಿದ್ದಾರೆ. ಈ ಗಂಭೀರ ಪ್ರಕರಣವು ರಾಜ್ಯದೆಲ್ಲೆಡೆ ಕೋಲಾಹಲ ಸೃಷ್ಟಿಸಿದ್ದು, ಸದ್ರಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿContinue reading “ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆಯಲು ಉತ್ಸುಕವಾಗಿರುವ ಗೃಹ ಇಲಾಖೆ ಉಡುಪಿಯ ಗಂಭೀರ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಯಾಕೆ ಮಹತ್ವ ನೀಡುತ್ತಿಲ್ಲ: ನಯನಾ ಗಣೇಶ್”

ಜುಲೈ 28 : ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜಿಹಾದಿ ಮನಸ್ಥಿತಿಯ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ‘ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ’: ಕುಯಿಲಾಡಿ

ಉಡುಪಿ: ಉಡುಪಿಯ ನಗರದ ಖಾಸಗಿ ಕಾಲೇಜಿನಲ್ಲಿ ಜಿಹಾದಿ ಮನಸ್ಥಿತಿಯ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ಜುಲೈ 28, ಶುಕ್ರವಾರ ಬೆಳಿಗ್ಗೆ ಗಂಟೆ 10.30ಕ್ಕೆ ‘ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ’ ನಡೆಯಲಿದೆ. ಜುಲೈ 28, ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯ ಬಳಿಯಿಂದ ಹೊರಡಲಿರುವ ‘ಬೃಹತ್ ಪ್ರತಿಭಟನಾ ಮೆರವಣಿಗೆ’ಯು ಉಡುಪಿ ಸಿಟಿ ಬಸ್ ನಿಲ್ದಾಣದ ಮೂಲಕ ಬನ್ನಂಜೆ ಎಸ್.ಪಿ. ಕಚೇರಿಯContinue reading “ಜುಲೈ 28 : ಉಡುಪಿಯ ಖಾಸಗಿ ಕಾಲೇಜಿನಲ್ಲಿ ಜಿಹಾದಿ ಮನಸ್ಥಿತಿಯ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ‘ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ’: ಕುಯಿಲಾಡಿ”

ಜುಲೈ 27ರಂದು ಬೆಳಿಗ್ಗೆ 11.00 ಗಂಟೆಗೆ ಕಾಪು ಪೇಟೆಯಲ್ಲಿ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಬೃಹತ್ ಪ್ರತಿಭಟನೆ

ಉಡುಪಿ: ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಿಸಿರುವ ಘಟನೆಯನ್ನು ಖಂಡಿಸಿ, ಪೊಲೀಸ್ ಇಲಾಖೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನಾಳೆ ಜುಲೈ 27, ಗುರುವಾರ ಬೆಳಿಗ್ಗೆ 11.00 ಗಂಟೆಗೆ ಕಾಪು ಪೇಟೆಯ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತಿಳಿಸಿದ್ದಾರೆ.Continue reading “ಜುಲೈ 27ರಂದು ಬೆಳಿಗ್ಗೆ 11.00 ಗಂಟೆಗೆ ಕಾಪು ಪೇಟೆಯಲ್ಲಿ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಬೃಹತ್ ಪ್ರತಿಭಟನೆ”

‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಬಿಡೆವು; ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಕರಣದ ಸಮಗ್ರ ತನಿಖೆಗೆ ಕುಯಿಲಾಡಿ ಆಗ್ರಹ

ಉಡುಪಿ: ಜಿಹಾದಿ ಮಾನಸಿಕತೆಯ ಕೆಲವು ವಿದ್ಯಾರ್ಥಿನಿಯರು ಉಡುಪಿ‌ಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಒಂದು ವರ್ಷದಿಂದ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ನಗರಿ ಉಡುಪಿಯ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನದ ಮೂಲಕ ‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಎಂದಿಗೂ ಅವಕಾಶ ನೀಡಲಾರೆವು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಈಗಾಗಲೇContinue reading “‘ಕೇರಳ ಸ್ಟೋರಿ’ಯಂತೆ ಉಡುಪಿ ಸಹಿತ ‘ಕರ್ನಾಟಕ ಸ್ಟೋರಿ’ಗೆ ಸ್ಕೆಚ್ ಹಾಕಲು ಬಿಡೆವು; ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಕರಣದ ಸಮಗ್ರ ತನಿಖೆಗೆ ಕುಯಿಲಾಡಿ ಆಗ್ರಹ”

ಶೇಡಿಮನೆ : ತುಂಬಿ ಹರಿಯುತ್ತಿದ್ದ ನದಿಯ ಪ್ರವಾಹಕ್ಕೆ ಬಿದ್ದು ಮೃತಪಟ್ಟ ಬಾಲಕಿಯ ಮನೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬೇಟಿ, ಸಾಂತ್ವಾನ

ಶೇಡಿಮನೆ: ಜು.23ರಂದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇಡಿಮನೆ ಗ್ರಾಮದ ಗಂಗಾಡ ಬೈಲು ಪ್ರದೇಶದ ಬಡ ಕುಟುಂಬದ ಬಾಲಕಿ ರಚನಾ ಶೆಟ್ಟಿ (12 ವರ್ಷ) ತುಂಬಿ ಹರಿಯುತ್ತಿರುವ ನದಿಯ ಪ್ರವಾಹಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಜು.24ರಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿ ವರ್ಗದೊಂದಿಗೆ ಮೃತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ರೂ.5.00 ಲಕ್ಷಗಳ ಮೊತ್ತದ ಚೆಕ್ಕನ್ನು ಬಾಲಕಿಯ ತಾಯಿ ವಿಮಲ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈContinue reading “ಶೇಡಿಮನೆ : ತುಂಬಿ ಹರಿಯುತ್ತಿದ್ದ ನದಿಯ ಪ್ರವಾಹಕ್ಕೆ ಬಿದ್ದು ಮೃತಪಟ್ಟ ಬಾಲಕಿಯ ಮನೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಬೇಟಿ, ಸಾಂತ್ವಾನ”

ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ : ‘ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾ ಕೂಟ

ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ ಇದರ ನೇತೃತ್ವದಲ್ಲಿ ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಉಜ್ವಲ ಸಂಜೀವಿನಿ ಒಕ್ಕೂಟ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಆಟಿ ತಿಂಗಳ ಗ್ರಾಮೀಣ ಕ್ರೀಡಾ ಕೂಟ ‘ಕೆಸರ್ದ ಗೊಬ್ಬು-2023’ ಅಂಬಲಪಾಡಿಯ ಬಂಕೇರಕಟ್ಟ ಆಚಾರಿಗುಂಡಿ ದ್ವಾಲಮಾರ್ ಗದ್ದೆಯಲ್ಲಿ ಸಂಪನ್ನಗೊಂಡಿತು. ಕೆಸರು ಗದ್ದೆ ಕ್ರೀಡಾ ಕೂಟ ಕೆಸರ್ದ ಗೊಬ್ಬು-2023ನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ತೆಂಗಿನ ತೆನೆ ಅರಳಿಸಿ, ಗದ್ದೆಗೆ ಹಾಲೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ,Continue reading “ಸ್ವಾಮಿ ಫ್ರೆಂಡ್ಸ್ ಅಂಬಲಪಾಡಿ : ‘ಕೆಸರ್ದ ಗೊಬ್ಬು’ ಗ್ರಾಮೀಣ ಕ್ರೀಡಾ ಕೂಟ”

ರಾಜ್ಯದಲ್ಲಿ ಹಿಟ್ಲರ್ ಮಾದರಿಯ ನಿರಂಕುಶ ಆಡಳಿತದಿಂದ ಕರಾಳ ಭವಿಷ್ಯ ನಿಶ್ಚಿತ; ಬಂಧಿತ ಭಯೋತ್ಪಾದಕರ ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸಿ: ಕುಯಿಲಾಡಿ ಸುರೇಶ್ ನಾಯಕ್

ರಾಜ್ಯ ಸರಕಾರದ ಸಂವಿಧಾನ ವಿರೋಧಿ, ಜನ ವಿರೋಧಿ, ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ಉಡುಪಿ: ಜನತೆಗೆ ಆಮಿಷವನ್ನು ಒಡ್ಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಗ್ಯಾರಂಟಿಗಳನ್ನು ಮರೆತು ಜನರ ಗಮನವನ್ನು ಬೇರೆಡೆಗೆ ಒಯ್ಯಲು ವಿವಿಧ ಜನ ವಿರೋಧಿ, ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ತೊಡಗಿದೆ. ಇದರ ಭಾಗವಾಗಿ ವಿಧಾನಸಭೆಯಲ್ಲಿ ಉಪ ಸಭಾಪತಿಯವರ ಎದುರು ಪೇಪರ್ ಹರಿದು ಎಸೆದ ಕಾರಣಕ್ಕೆ ಸ್ಪೀಕರ್ ರವರು ಸರ್ವಾಧಿಕಾರಿ ಧೋರಣೆ ತಳೆದು ಬಿಜೆಪಿಯ 10 ಮಂದಿ ಶಾಸಕರನ್ನು ಅಸಾಂವಿಧಾನಿಕ ರೀತಿಯಲ್ಲಿ ಸದನದಿಂದ ಅಮಾನತುಗೊಳಿಸಿರುವುದುContinue reading “ರಾಜ್ಯದಲ್ಲಿ ಹಿಟ್ಲರ್ ಮಾದರಿಯ ನಿರಂಕುಶ ಆಡಳಿತದಿಂದ ಕರಾಳ ಭವಿಷ್ಯ ನಿಶ್ಚಿತ; ಬಂಧಿತ ಭಯೋತ್ಪಾದಕರ ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸಿ: ಕುಯಿಲಾಡಿ ಸುರೇಶ್ ನಾಯಕ್”

Design a site like this with WordPress.com
Get started